Thursday 28th, March 2024
canara news

ಗಾಣಿಗರು ನಿಷ್ಠಾವಂತ ಕಲಾರಾಧಕರು ಮತ್ತು ಸಾಮರಸ್ಯದ ಪ್ರತೀಕರು

Published On : 12 Nov 2018   |  Reported By : Rons Bantwal


ಗಾಣಿಗ ಸಮಾಜ ಮುಂಬಯಿ ಸಂಸ್ಥೆಯ 21ನೇ ವಾರ್ಷಿಕೋತ್ಸ್ಸವದಲ್ಲಿ ಕುತ್ಪಾಡಿ ಗೋಪಾಲ್ 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ,: ಯಕ್ಷಗಾನ, ನಾಟಕ ಇತ್ಯಾದಿ ಕಲಾಕ್ಷೇತ್ರಗಳಲ್ಲಿ ಸಕ್ರೀಯರಾಗಿ ಕಲಾಪೆÇೀಷಣೆಯೊಂದಿಗೆ ಮೆರೆಯುತ್ತಿರುವ ಗಾಣಿಗರು ನಿಷ್ಠಾವಂತ ಕಲಾರಾಧಕರು ಮತ್ತು ಸಾಮರಸ್ಯದ ಪ್ರತೀಕರು. ಸುಶಿಕ್ಷಿತರಾಗಿ ಪ್ರತೀ ಸಮಾಜವನ್ನು ಗೌರವಿಸಿ ಮುನ್ನಡೆಯುತ್ತಿರುವ ಗಾಣಿಗ ಸಮಾಜ ಇತರೇ ಸಮಾಜಗಳಿಗೆ ಆದರ್ಶವಾಗಿದೆ. ಹಿರಿಯರ ದೂರದೃಷ್ಠಿತ್ವದ ಚಿಂತನೆ ಮತ್ತು ಮಾರ್ಗದರ್ಶನ ಇವೆಲ್ಲಕ್ಕೂ ಮಾಪನವಾಗಿದ್ದು, ಇಂತಹ ಆದರ್ಶಮಯ ಉದ್ದೇಶಗಳಿಂದ ಸಮಾಜವನ್ನು ಮುನ್ನಡೆಸಬೇಕು. ವೃತ್ತಿ, ಜನ್ಮಭೂಮಿ ಮತ್ತು ಸರ್ವ ಜನತೆಯನ್ನು ಪ್ರೀತಿಸಿ ಸಾಮರಸ್ಯದಿಂದ ಬಾಳಿದರೆ ಅದೇ ನೆಮ್ಮದಿಯ ಬದುಕು ಅನ್ನುವುದನ್ನು ಸಾರುವ ಗಾಣಿಗರು ಸಹೃದಯಿಗಳಾಗಿದ್ದು ಗಾಣಿಗರ ಸಮಾಜ ಮತ್ತು ಕಲಾ ಸೇವೆ ಅನನ್ಯವಾದುದು. ನಮ್ಮಲ್ಲಿನ ಇಂತಹ ಸದ್ಗುಣಗಳನ್ನು ಯುವ ಪೀಳಿಗೆಯಲ್ಲಿ ರೂಢಿಸಿ ಭವ್ಯ ಬದುಕಿಗೆ ಕಾರಣೀಕರ್ತರಾಗೋಣ ಎಂದು ಸೋಮಕ್ಷತ್ರೀಯ ಗಾಣಿಗ ಸಮಾಜ ಉಡುಪಿ ಜಿಲ್ಲೆ ಅಧ್ಯಕ್ಷ ಕುತ್ಪಾಡಿ ಗೋಪಾಲ್ ನುಡಿದರು.

ಇಂದಿಲ್ಲಿ ಭಾನುವಾರ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ಸಭಾಗೃಹದಲ್ಲಿ ಗಾಣಿಗ ಸಮಾಜ ಮುಂಬಯಿ ಸಂಸ್ಥೆ ತನ್ನ 21ನೇ ವಾರ್ಷಿಕೋತ್ಸÀ್ಸವ ಸಂಭ್ರಮಿಸಿದ್ದು ಕುತ್ಪಾಡಿ ಗೋಪಾಲ್ (ಪತ್ನಿ ವಸಂತಿ ಗೋಪಾಲ್ ಅವರನ್ನೊಳಗೊಂಡು) ದೀಪ ಬೆಳಗಿಸಿ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ ಅಧ್ಯಕ್ಷತೆಯಲ್ಲಿ ಜರುಗಿದ ವಾರ್ಷಿಕೋತ್ಸ ಸಮಾರಂಭದಲ್ಲಿ ವಿಶೇಷ ಅತಿಥಿüಯಾಗಿ ಚಲನಚಿತ್ರನಟ ಪ್ರದೀಪ್‍ಚಂದ್ರ ಕುತ್ಪಾಡಿ, ಗೌರವ ಅತಿಥಿüಗಳಾಗಿ ಶ್ರೀ ವೇಣುಗೋಪಾಲ ಕೃಷ್ಣ ಕ್ರೆಡಿಟ್ ಕೋ.ಅಪರೇಟಿವ್ ಸೊಸೈಟಿ ನಿಯಮಿತ ಬೆಂಗಳೂರು ಕಾರ್ಯಾಧ್ಯಕ್ಷ ಎಂ.ಗೋಪಾಲಕೃಷ್ಣ, ಗಾಣಿಗ ಸೇವಾ ಸಮಾಜ ಕುಂದಾಪುರ ಅಧ್ಯಕ್ಷ ಕೊಗ್ಗ ಗಾಣಿಗ, ಉದ್ಯಮಿ ಕೆ.ಎಂ ಶೇಖರ್ ಸೇರಿದಂತೆ ಸಂಸ್ಥೆಯ ಗೌರವಾಧ್ಯಕ್ಷ ಜಗನ್ನಾಥ ಎಂ. ಗಾಣಿಗ, ಉಪಾಧ್ಯಕ್ಷ ಭಾಸ್ಕರ ಎಂ.ಗಾಣಿಗ, ವಿದ್ಯೋದಯ ಸಮಿತಿ ಕಾರ್ಯಾಧಕ್ಷ ವಿಜಯೇಂದ್ರ ಗಾಣಿಗ, ಮಹಿಳಾ ವಿಭಾಗಧ್ಯಕ್ಷೆ ತಾರಾ ಎನ್.ಭಟ್ಕಳ್ ವೇದಿಕೆಯಲ್ಲಿ ಆಸೀನರಾಗಿದ್ದು ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಉಪ ಶಿಕ್ಷಣಾಧಿಕಾರಿ ಮಮತಾ ಡಿ.ರಾವ್ ಮತ್ತು ಯಕ್ಷಗಾನ ರಂಗದ ಸಾಧಕ, ಸಂಪರ್ಕ ಸುಧಾ ಮಾಸಿಕದ ಮಾಜಿ ಸಂಪಾದಕ ರಘುರಾಮ ಬೈಕಾಡಿ ಅವರನ್ನು ಮೈಸೂರುಪೇಟ ಧರಿಸಿ ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆ, ಸನ್ಮಾನಪತ್ರ ನೀಡಿ ಸನ್ಮಾನಿಸಿ ಅಭಿನಂದಿಸಿದರು. ಅಂತೆಯೇ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು ಹಾಗೂ ವಿದ್ಯೋದಯ ಸಮಿತಿ ವತಿಯಿಂದ ವಾರ್ಷಿಕವಾಗಿ ಪ್ರದಾನಿಸಲಾಗುವ ಶೈಕ್ಷಣಿಕ ಪುರಸ್ಕಾರ, ಪ್ರದಾನಿಸಿ ಗೌರವಿಸಿದರು.

ನಾನೋರ್ವ ಪುಟ್ಟ ಕಲಾವಿದನಷ್ಟೇ. ಸದ್ಯ ಕಲಾಸಾಧನೆಯ ಹೋರಾಟದಲ್ಲಿದ್ದೇನೆ. ತಾವೆಲ್ಲರೂ ಮುಂಬಯಿ ನಗರದಲ್ಲಿದ್ದು ತಮ್ಮೊಳಗಿನ ಪ್ರತಿಭೆಗಳನ್ನು ಅತ್ಯಾದ್ಭುತವಾಗಿ ಬೆಳೆಸಿರುವುದು ಆಭಿನಂದನೀಯ. ತವರೂರಲ್ಲೂ ತಮ್ಮ ಪ್ರತಿಭೆಗಳನ್ನು ಪ್ರಕಾಶಮಾನವಾಗಿಸಿ ನಮ್ಮೊಳಗಿನ ಬಹುಮುಖಿ ಪ್ರತಿಭೆಗಳನ್ನೂ ಅರಳಿಸಿರಿ ಎಂದು ಚಿತ್ರನಟ ಪ್ರದೀಪ್‍ಚಂದ್ರ ಸಲಹಿಸಿದರು.

ಇಂದು ರಾಷ್ಟ್ರೀಯ ಶೈಕ್ಷಣಿಕ ದಿನಾಚರಣಾ ಸುಸಂದರ್ಭದಲ್ಲಿ ಶೈಕ್ಷಣಿಕ ಸಮರ್ಪಣತ್ವ ಮತ್ತು ನನ್ನ ಸಾಧನೆ ಗುರುತಿಸಿ ಗೌರವಕ್ಕೆ ಪಾತ್ರವಾಗಿರುದು ಅತೀವ ಸಂತಸವೆಣಿಸುತ್ತಿದೆ. ಸ್ವಸಮುದಾಯದ ಈ ಸನ್ಮಾನ ನನ್ನನ್ನು ಸಮರ್ಥಳಾಗಿಸಿದೆ. ಈ ಸನ್ಮಾನ ಅಖಂಡ ಸಮಾಜಕ್ಕೆ ಸಂದ ಗೌರವವಾಗಿದೆ. ಸರ್ವೋತ್ತಮ ಮಾತಾಪಿತರು ಮತ್ತು ಗುರುವೃಂದ ಪಡೆದು ಶೈಕ್ಷಣಿಕ ಕ್ಷೇತ್ರದಲ್ಲಿ ಈ ಮಟ್ಟಕ್ಕೆ ಬೆಳೆದ ನಾನು ಭಾಗ್ಯವಂತಳು ಎಂದು ಸನ್ಮಾನಕ್ಕೆ ಉತ್ತರಿಸಿ ಮಮತಾ ರಾವ್ ತಿಳಿಸಿದರು.

ಸ್ವರ್ಗೀಯ ಆನಂದ ಕುತ್ಪಾಡಿ ಮತ್ತು ಕುತ್ಪಾಡಿ ಗೋಪಾಲ್ ಅವರ ಪ್ರೇರಣೆಯಿಂದ ನಾನು ಮಟ್ಟಕ್ಕೆ ಬೆಳೆದವನು. ಈ ಸನ್ಮಾನ ನನ್ನ ಸ್ವಸಮಾಜ ತೀರಿಸಲಾಗದ ಋಣವಾಗಿದೆ. ನನ್ನ ಸಾಧೆನೆ ಏನಿದ್ದರೂ ಒಬ್ಬನ ಸಾಧನೆಯಲ್ಲ ಅದು ಒಂದು ತಂಡದ ಸಾಧನೆಯಾಗಿದೆ. ಆದ್ದರಿಂದ ಇಂತಹ ಗೌರವ ಭವಿಷ್ಯತ್ತಿನ ಪೀಳಿಗೆಗೆ ಮಾದರಿ ಎಂದು ರಘುರಾಮ ಬೈಕಾಡಿ ಕೊನೆಯಲ್ಲಿ ಯಕ್ಷಗಾನ ಭಾಗವತಿಕೆಯ ಒಂದು ತುಣುಕನ್ನು ಪ್ರಸ್ತುತಪಡಿಸಿ ಕಿಕ್ಕಿರಿದು ತುಂಬಿದ ಕಲಾಭಿಮಾನಿಗಳ ಭಾರೀ ಪ್ರಶಂಸೆಗೆ ಪಾತ್ರರಾದರು.

ಗಾಣಿಗ ಸಂಸ್ಥೆಯು ಸದ್ಯ ಉದಯೋನ್ಮುಖ ಸಂಸ್ಥೆಯಾಗಿ ಮುನ್ನಡೆಯುತ್ತಿದೆ. ಸಮುದಾಯದ ಜನತೆ ತಮ್ಮ ಸಂವೇದನೆಗಳನ್ನು ಮುಖಾಮುಖಿಯಾಗಿ ಹಂಚಿಕೊಂಡು ಭದ್ರತೆಯ ಸಮುದಾಯಕ್ಕೆ ಪಣತೊಡಬೇಕು. ಗಾಣಿಗ ಸಮಾಜದ ಭವಿಷ್ಯಕ್ಕೆ ಈ ಸಂಸ್ಥೆ ಸದಾ ಆಶ್ರಯವಾಗಲಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ರಾಮಚಂದ್ರ ಗಾಣಿಗ ತಿಳಿಸಿದರು.
ಉದ್ಯಮಿಗಳಾದ ಶಶಿ ಶೆಟ್ಟಿ, ಯು.ಎನ್ ರಾವ್, ಉದಯಕುಮಾರ್ ರಾವ್, ಚಂದ್ರಶೇಖರ್ ಆರ್.ಬೆಳ್ಚಡ, ಜಿ.ಟಿ ಆಚಾರ್ಯ, ಜೆ.ಎಂ ಕೋಟ್ಯಾನ್, ಪದ್ಮನಾಭ ಸಸಿಹಿತ್ಲು, ಭಾಸ್ಕರ್ ಕೆ., ಪರಮೇಶ್ವರ್ ಗಾಣಿಗ ಕುಂದಾಪುರ, ದೇವೇಂದ್ರ ರಾವ್, ಕು| ಅಂಕಿತಾ ನಾಯ್ಕ್ ಸೇರಿದಂತೆ ಉಪಸ್ಥಿತ ಇತರ ಗಣ್ಯರನ್ನು ಪದಾಧಿಕಾರಿಗಳು ಗೌರವಿಸಿದರು.
ದಿನಪೂರ್ತಿಯಾಗಿಸಿ ಸಂಭ್ರಮಿಸಿದ ವರ್ಧಂತ್ಯೋತ್ಸವದಲ್ಲಿ ರಾಜೇಶ್ ಆರ್.ಕುತ್ಪಾಡಿ, ವಿನಾಯಕ ಭಟ್ಕಳ, ಜಿ.ಗೋಪಾಲಕೃಷ್ಣ ಗೋವಿಂದ ಗಾಣಿಗ (4ಜಿ), ದಿನೇಶ್ ರಾವ್, ಆಶಾ ಹರೀಶ್ ತೋನ್ಸೆ, ಆರತಿ ಸತೀಶ್ ಗಾಣಿಗ, ಸದಾನಂದ ಕಲ್ಯಾಣ್ಪುರ, ಪೂರ್ಣಿಮಾ ಕಲ್ಯಾಣ್ಪುರ, ಪಿ.ಎನ್ ಗಾಣಿಗ, ಕಾಳಿಂಗ ರಾವ್, ತೋನ್ಸೆ ಬಾಲಕೃಷ್ಣ ಮತ್ತಿತರ ಸದಸ್ಯರು, ಕಚೇರಿ ಉಸ್ತುವರಿ ಪದ್ಮನಾಭ ಎನ್.ಗಾಣಿಗ ಸೇರಿದಂತೆ ನೂರಾರು ಗಾಣಿಗ ಬಂಧುಗಳು ಉಪಸ್ಥಿತರಿದ್ದು ಮಕ್ಕಳು ಮತ್ತು ಯುವ ವಿಭಾಗದ ಕಲಾವಿದರು ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಅಂತೆಯೇ ಯುವ ವಿಭಾಗದ ಕಾರ್ಯಾಧ್ಯಕ್ಷ ಗಣೇಶ್ ಆರ್.ಕುತ್ಪಾಡಿ ರಚಿಸಿ ನಿರ್ಮಿಸಿದ `ಬಾಹುಬಲಿ' ಕಿರುನಾಟಕ ಪ್ರದರ್ಶಿಸಿದರು. ದೇವೆಂದ್ರ ರಾವ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಾಹಿಸಿದರು. ವಿದ್ಯೋದಯ ಸಮಿತಿ ವತಿಯಿಂದ ವಿರಲ್ ಗಾಲ ಅವರು `ಶೈಕ್ಷಣಿಕ ಜಾಗೃತಿ' ಕಾರ್ಯಕ್ರಮ ನಡೆಸಿದರು.

ವೀಣಾ ದಿನೇಶ್ ಗಾಣಿಗ ಮತ್ತು ಆಶಾ ನಾಗೇಶ್ ಗಾಣಿಗ ಪ್ರಾರ್ಥನೆಯನ್ನಾಡಿದÀರು. ನ್ಯಾಯವಾದಿ ಯು. ಬಾಲಚಂದ್ರ ಕಟಪಾಡಿ ಸುಖಾಗಮನ ಬಯಸಿದರು. ಕೋಶಾಧಿಕಾರಿ ಜಯಂತ್ ಪಿ.ಗಾಣಿಗ, ಜೊತೆ ಕಾರ್ಯದರ್ಶಿ ಬಿ.ಜಗದೀಶ್ ಗಾಣಿಗ, ಉಷಾ ವಾಸುದೇವ ರಾವ್, ಮೋಹನ್ ರಾವ್, ಆರತಿ ಗಾಣಿಗ, ಪೂರ್ಣಿಮಾ ಕಲ್ಯಾಣ್ಪುರ, ಯುವ ಮುತ್ಸದ್ಧಿ ರತ್ನಾಕರ್ ಎ.ಶೆಟ್ಟಿ ಥಾಣೆ ಮತ್ತಿತರರು ಅತಿಥಿüಗಳಿಗೆ ಪುಷ್ಫಗುಪ್ಚವಿತ್ತು ಗೌರವಿಸಿದರು. ಕು| ಪೂಜಾ ಗಾಣಿಗ ಮತ್ತು ಮಂಜುಳಾ ರಾವ್ ಸನ್ಮಾನಪತ್ರ ವಾಚಿಸಿದರು. ಉಪಾಧ್ಯಕ್ಷ ಬಿ.ವಿ ರಾವ್ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಆರ್.ಗಾಣಿಗ ಧನ್ಯವದಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here