Friday 19th, April 2024
canara news

ಮೈಸೂರು ಅಸೋಸಿಯೇಷನ್-ನವಿ ಮುಂಬಯಿ ಕನ್ನಡ ಸಂಘ ಸಂಯೋಜನೆಯಲ್ಲಿ

Published On : 20 Nov 2018   |  Reported By : Rons Bantwal


ನ.24-ನವಿ ಮುಂಬಯಿ ಮತ್ತು ನ.25-ವಡಾಲಾದಲ್ಲಿ ಜಾನಪದಜಾತ್ರೆ

ಮುಂಬಯಿ,ನ.19: ಕನ್ನಡ-ಸಂಸ್ಕೃತಿ ಇಲಾಖೆ, ಕೇಂದ್ರ ಸರ್ಕಾರದ ದಕ್ಷಿಣ ಕೇಂದ್ರ ವಲಯ ಸಾಂಸ್ಕೃತಿಕ ಕೇಂದ್ರ, ನಾಗಪುರ ನೆರವಿನಲ್ಲಿ, ಮುಂಬಯಿಯ ಮೈಸೂರು ಅಸೋಸಿಯೇಷನ್, ನವಿ ಮುಂಬಯಿ ಕನ್ನಡ ಸಂಘ, ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಗಳು ಸೇರಿಕೊಂಡು ನವೆಂಬರ್.24 ಮತ್ತು 25, 2018 ರಂದು, `ಜಾನಪದಜಾತ್ರೆ'ಯನ್ನು ಜರುಗಿಸುತ್ತಿದೆ.

ಶನಿವಾರ ನವೆಂಬರ್ 24, 2018 ರಂದು ನವಿ ಮುಂಬಯಿ ಕನ್ನಡ ಸಂಘದಲ್ಲಿ, ಅಂತೆಯೇ ಭಾನುವಾರ ನವೆಂಬರ್ 25, 2018 ರಂದು ರಾಷ್ಟ್ರೀಯಕನ್ನಡ ಶಾಲೆ ವಡಾಲಾದಲ್ಲಿ ಈ ಜಾನಪದಜಾತ್ರೆ ಜರುಗಲಿದೆ. ಎರಡೂ ದಿನಗಳಂದು, ಹಗಲು 3.00 ಘಂಟೆಗೆ ಮೆರವಣಿಗೆ ಹೊರಟು, ಆ ಪ್ರದೇಶದಲ್ಲಿಕುಣಿಯುತ್ತಾ ಆಮೇಲೆ 5.00 ಘಂಟೆಯಿಂದ 8.00 ಘಂಟೆಯವರೆಗೆಎಲ್ಲಾ ಕುಣಿತಗಳ ಹಾಡುಗಳ ಪ್ರದರ್ಶನ ನಡೆಯುತ್ತದೆ. ಇದರಲ್ಲಿ ಜಾನಪದ ಗಾಯನ, ತತ್ವಪದ, ಸುಗಮ ಸಂಗೀತ, ತೊಗಲುಬೊಂಬೆ, ಹುಲಿವೇಷ, ಪೂಜಾಕುಣಿತ, ಗಾರುಡಿ ಗೊಂಬೆ, ಕೀಲು ಕುದುರೆ,ಡೊಳ್ಳು ಕುಣಿತ, ಗೊರವರಕುಣಿತ, ನಗಾರಿ ವಾದನ ಮತ್ತು ಹಲವಾರು ಕುಣಿತಗಳಿರುತ್ತದೆ.

ಕರ್ನಾಟಕ ಕಲೆಗಳ ಬೀಡಾಗಿದೆ. ಪ್ರಾಚೀನ ಕಾಲದಿಂದಲೂ ಕನ್ನಡಿಗರು, ಹಾಡು, ಕುಣಿತ, ನಾಟಕಗಳಿಗೆ ಹೆಸರಾದವರು. ತಮಿಳಿನ `ಚಿಲಪಡಿಕ್ಕಾರಂ'. ಐದನೆಯ ಶತಮಾನದಲ್ಲಿ ಕೂಡ, `ಕರುನಾಡರ್ ಆಡಿದರ್'ಎಂದು ಉಲ್ಲೇಖಿಸುತ್ತದೆ. ಜನರು, ತಮ್ಮ ಬೇಸಾಯದಲ್ಲಿ, ಅಕ್ಕಿ–ರಾಗಿ ಕುಟ್ಟುವುದರಲ್ಲಿ ಮಗುವನ್ನು ತೂಗುವುದರಲ್ಲಿಯೇ ಅಲ್ಲದೆ, ತಮ್ಮ ದೇವರ ಮೆರವಣಿಗೆಗಳಲ್ಲಿ, ಕುಣಿದು ಆ ದೇವರುಗಳನ್ನು ಕೊಂಡಾಡುತ್ತಿದ್ದುದು, 2000ಕ್ಕೂ ಮಿಕ್ಕ ವರ್ಷಗಳಿಂದ ನಡೆದು ಬಂದಿದೆ. ವೀರಗಾಸೆ, ಕಳಸ ಕುಣಿತ, ಪೂಜಾ ನೃತ್ಯ, ಪಟಕುಣಿತ, ಹುಲಿ ವೇಷ, ಮುಂತಾದವುಗಳು ಇಂದೂಕನ್ನಡ ನಾಡಿನ ಹಳ್ಳಿಗಳಲ್ಲಿ ಮೆರೆಯುತ್ತಿವೆ.

ಅಳಿದು ಹೋಗುತ್ತಿದ್ದ ಈ ಕಲೆಗಳನ್ನು 2000ದಿಂದ ಅನೇಕರು ಮತ್ತೆಎತ್ತಿ ಹಿಡಿದಿದ್ದಾರೆ. ಐ.ಎಂ ವಿಠ್ಠಲಮೂರ್ತಿ, ಶ್ರೀನಿವಾಸ ಜಿ.ಕಪ್ಪಣ್ಣ, ನಾಗರಾಜಮೂರ್ತಿ ಇವರು ಕರ್ನಾಟಕದುದ್ದಕ್ಕೂ ಜಾನಪದ ಜಾತ್ರೆಗಳನ್ನು ಆಡಿಸಿ, ಅವುಗಳನ್ನು ಮತ್ತೆಎತ್ತಿ ಹಿಡಿದಿದ್ದಾರೆ. ತಾಳವೇ ಜೀವವಾದ ಈ ಕುಣಿತಗಳ ಹಾಡುಗಳಿಗೆ, ಮತ್ತೆ ಹೊಸ ಮೆರುಗನ್ನುಕೊಟ್ಟುಜನಪ್ರಿಯವಾಗಿ ಮಾಡಿದ್ದಾರೆ.

ಕರ್ನಾಟಕ ಸರ್ಕಾರ ಮತ್ತುಕನ್ನಡ-ಸಂಸ್ಕೃತಿಇಲಾಖೆಯ ಪಾತ್ರ, ಈ ಪುನರುಜ್ಜೀವನದಲ್ಲಿ ಅಪಾರವಾಗಿದೆ. 2006ರಲ್ಲಿ, `ಸುವರ್ಣ ಕರ್ನಾಟಕ' ಜಾತ್ರೆಯಲ್ಲಿ, ಮುಂಬಯಿಯ 30 ಕನ್ನಡ ಸಂಘಗಳು ಒಡಗೂಡಿ ರಾಷ್ಟ್ರೀಯ ಕನ್ನಡ ಶಾಲೆ ವಡಾಲದಲ್ಲಿ ಬರಮಾಡಿಕೊಂಡು ಅದ್ಧೂರಿಯಾಗಿ ಮೆರವಣಿಗೆಯನ್ನು ನಡೆಸಿದ್ದನ್ನು ನಾವಿಲ್ಲಿ ನೆನಸಬಹುದು. ಅಂತೆಯೇ 2017ರಲ್ಲಿ, ತರಳಬಾಳು ಮಠದ ಶ್ರೀ ಶಿವಾಚಾರ ಸ್ವಾಮಿಗಳು, ತಮ್ಮಅಡಿಯಲ್ಲಿ ತಯಾರಾದ 200 ಕಲಾವಿದರನ್ನು ಮುಂಬಯಿಗೆ ಕರೆತಂದು, ಆಡಿಸಿದ್ದನ್ನು ಕೂಡ ಮರೆಯುವಂತಿಲ್ಲ.

ಈ ಎಲ್ಲಾ ಕಲಾವಿದರೂ ಕೂಡ ಕರ್ನಾಟಕದ ಹಳ್ಳಿ-ಹಳ್ಳಿಗಳಿಂದ ಬರುತ್ತಿದ್ದಾರೆ. ಇವರ ಕುಣಿತಗಳನ್ನು ನೋಡುವ, ಹಾಡುಗಳನ್ನು ಕೇಳುವ ಒಂದು ಅಪೂರ್ವ ಅವಕಾಶ ಮುಂಬಯಿಗರಿಗೆ ದೊರೆಯಲಿದೆ. ಎಲ್ಲರಿಗೂ ನಲ್ಮೆಯ ಬರುವನ್ನು ಸಂಯೋಜಕರು ಕೋರುತ್ತಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here