Thursday 25th, April 2024
canara news

ಅಂತರ ಅನಾಥಾಶ್ರಮದ ಮಕ್ಕಳ ಓಲಂಪಿಕ್ಸ್ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧಾ ಕೂಟ

Published On : 22 Nov 2018   |  Reported By : media release


ಮಂಗಳೂರು ನವೆಂಬರ್ 21 : ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆ ಹಾಗೂ ರೋಟರ್ಯಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ತಮ್ಮ ಸಂಸ್ಥೆಯ ಸಮಾಜ ಸೇವಾ ಚಟುವಟಿಕೆಗಳ ಅಂಗವಾಗಿ ನಗರದ ಸುತ್ತಮುತ್ತಲಿನಲ್ಲಿ ಕಾರ್ಯಾಚರಿಸುತ್ತಿರುವ ಅನಾಥಾಶ್ರಮ ಮಕ್ಕಳಿಗಾಗಿ 20ನೇ ವಾರ್ಷಿಕ ರೋಟರಿ “ಅಂತರ ಅನಾಥಶ್ರಮ ಮಕ್ಕಳ ಓಲಂಪಿಕ್ಸ್ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧಾ ಕೂಟ” ವನ್ನು ರವಿವಾರ ತಾ. 25.11.2018 ರಂದು ನಗರದ ಕೆನರಾ ಹೈಸ್ಕೂಲ್ ಉರ್ವ ಪ್ರಾಂಗಣದಲ್ಲಿ ಆಯೋಜಿಸಲಾಗಿದೆ.

ಸಂಘಟನಾ ಅಧ್ಯಕ್ಷರಾದ ರೋ|ಡಾ| ದೇವದಾಸ್ ರೈ ರವರು ಇಂದು ಜರಗಿದ ಪತ್ರಿಕಾಗೋಷ್ಠಿಯಲ್ಲಿ ದ.ಕ. ಜಿಲ್ಲಾಧಿಕಾರಿಯವರಾದ ಶಶಿಕಾಂತ್ ಸೆಂಥಿಲ್ ಎಸ್. ಯವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಬೆ. 09.00 ಗಂಟೆಗೆ ಸ್ಪರ್ಧಾಕೂಟವನ್ನು ಉದ್ಘಾಟಿಸಲಿರುವರು. ರೋಟರಿ ಜಿಲ್ಲಾ 3181 ವಲಯ– II ದ ಸಹಾಯಕ ಗವರ್ನರ್‍ರಾದ ರೊ| ಕಿರಣ್ ಪ್ರಸಾದ್ ರೈ ರವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು. ರೋಟರಿ ಸಂಸ್ಥೆಯ ಅಧ್ಯಕ್ಷರಾದ ರೋ. ಸಂತೋಷ್ ಶೇಟ್ ಅವರು ಅಧ್ಯಕ್ಷತೆ ವಹಿಸಲಿರುವವರು ಎಂದು ಮಾಹಿತಿ ನೀಡಿದ್ದಾರೆ

ಈ ಅಂತರ ಅನಾಥಾಶ್ರಮ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧಾ ಕೂಟದಲ್ಲಿ ನಗರದ ಸುತ್ತಮುತ್ತಲು ಕಾರ್ಯಾಚರಿಸುತ್ತಿರುವ ವಿವಿಧ 11 ಅನಾಥಾಶ್ರಮಗಳ ನಿವಾಸಿಗಳಾದ ಸುಮಾರು 600 ವಿದ್ಯಾರ್ಥಿಗಳು ಭಾಗವಹಿಸಲಿರುವರು. ವಿದ್ಯಾರ್ಥಿಗಳ ವಿವಿಧ ತಂಡಗಳ ಆಕರ್ಷಕ ಪಥ ಸಂಚಲನದ ಬಳಿಕ 100 ಮೀ. ಓಟ, ಕಪ್ಪೆ ಜಿಗಿತ ಓಟ, ಚಮಚ ಮತ್ತು ಲಿಂಬೆ ಹಣ್ಣಿನ ಓಟ, ತಲೆಯ ಮೇಲೆ ಪುಸ್ತಕ ಸಮತೋಲನ ಓಟ, ಕಾಲುಗೋಣಿಚೀಲ ಓಟ, ಹಗ್ಗಜಗ್ಗಾಟ, ಸ್ಪರ್ಧಾ ವಿಭಾಗದಲ್ಲಿ ವಿದ್ಯಾರ್ಥಿಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಹಾಗೂ ಮಧ್ಯಾಹ್ನ ಜರಗುವ ಸಾಂಸ್ಕøತಿಕ ಸ್ಪರ್ಧಾಕೂಟದಲ್ಲಿ ತಮ್ಮ ನೃತ್ಯ, ನಟನೆ, ಕಲಾಕೌಶಲ್ಯವನ್ನು ಪ್ರದರ್ಶಿಸಲಿರುವವರು. ಸಂಜೆ 05.00 ಗಂಟೆಗೆ ಜರಗುವ ಸಮಾರೋಪ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ 3181ರ ಚುನಾಯಿತ ಗರ್ವನರ್‍ರಾದ ರೋ. ರಂಗನಾಥ್ ಭಟ್ ರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸ್ಪರ್ಧಾ ವಿಜೇತರಿಗೆ ಆಕರ್ಷಕ ಬಹುಮಾನ ಮತ್ತು ಸರ್ವಾಂಗೀಣ ಪ್ರದರ್ಶನ ನೀಡಿದ ತಂಡಕ್ಕೆ ಪ್ರಶಸ್ತಿ ಫಲಕವನ್ನು ಪ್ರಧಾನ ಮಾಡಲಿರುವರು. ರೋಟರಿ ಸಂಸ್ಥೆಯ ಅಧ್ಯಕ್ಷ ಸಂತೋಷ್ ಶೇಟ್ ಕಾರ್ಯದರ್ಶಿ ರೋ. ಜೋಯಲ್ ಲೋಬೋ, ರೋಟರ್ಯಾಕ್ಟ್ ಸಂಸ್ಥೆಯ ಅಧ್ಯಕ್ಷ ರೋ| ಗಣೇಶ್ ಮತ್ತು ಕಾರ್ಯದರ್ಶಿ ರೋ. ಶೆಲ್ದನಾ ಕ್ರಾಸ್ತ ರವರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here