Thursday 18th, April 2024
canara news

*ಸ್ಟೀವನ್ ಕುಲಾಸೊ 'ನಿರಂತರ್' ಉದ್ಯಾವರದ ಅಧ್ಯಕ್ಷರಾಗಿ ಆಯ್ಕೆ*

Published On : 26 Nov 2018   |  Reported By : media release


'ನಿರಂತರ್' ಉದ್ಯಾವರ ಸಾಂಸ್ಕೃತಿಕ ಸಂಸ್ಥೆಯ ನೂತನ ಮತ್ತು ಸ್ಥಾಪಕ ಅಧ್ಯಕ್ಷರಾಗಿ ಸ್ಟೀವನ್ ಕುಲಾಸೊ ಉದ್ಯಾವರ ಆಯ್ಕೆಯಾಗಿದ್ದಾರೆ.

ಕೊಂಕಣಿ ಕಲೆಗೆ, ವಿಶೇಷವಾಗಿ ಸಾಂಸ್ಕೃತಿಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಂತಹ, ಸಮಾನ ಮನಸ್ಕರ ತಂಡ 'ನಿರಂತರ್' ಉದ್ಯಾವರ.

ಕಾರ್ಯದರ್ಶಿ ಯಾಗಿ ಮೈಕಲ್ ಡಿಸೋಜ, ಕೋಶಾಧಿಕಾರಿ ರೋಶನ್ ಕ್ರಾಸ್ತಾ, ಉಪಾಧ್ಯಕ್ಷರಾಗಿ ಸವಿತಾ ಡಿಸೋಜಾ, ಸಾಂಸ್ಕೃತಿಕ ಕಾರ್ಯದರ್ಶಿ ಜೂಲಿಯ ಡಿಸೋಜಾ, ಮಾಧ್ಯಮ ಸಂಚಾಲಕ ರೋಶನ್ ಡಿಸೋಜಾ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರೊನಾಲ್ಡ್ ಡಿಸೋಜ, ಅನಿಲ್ ಡಿಸೋಜಾ, ಸುನೀಲ್ ಡಿಸೋಜಾ, ಒಲಿವಿರಾ ಕಾರ್ಡ್ರೆಸ್, ಸಿಂಥಿಯಾ ನೋರನ್ನ ಮತ್ತು ಜುಡಿತ್ ಪಿರೇರ ಆಯ್ಕೆಯಾಗಿದ್ದಾರೆ.

ಉತ್ತಮ ಕಾರ್ಯಕ್ರಮ ನಿರ್ವಾಹಕರಾಗಿರುವ ಸ್ಟೀವನ್ ಕುಲಾಸೊ ಉದ್ಯಾವರ ರವರು ಸಾಮಾಜಿಕ ಕಾರ್ಯಕರ್ತರಾಗಿ, ಲಯನ್ಸ್ ಕ್ಲಬ್ , ಜೇಸಿಐ, ಉಡುಪಿ ಹೆಲ್ಪ್ ಲೈನ್, ಸೌಹಾರ್ದ ಸಮಿತಿ, ಮತ್ತು ವಿವಿಧ ಸಂಘ ಸಂಸ್ಥೆಯಲ್ಲಿ ಮಾತ್ರವಲ್ಲದೆ, ರಾಜಕೀಯ ಪಕ್ಷದಲ್ಲಿಯೂ ಗುರುತಿಸಿಕೊಂಡಿದ್ದು, ಐಸಿವೈಎಂ ಉಡುಪಿ ವಲಯದ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇತ್ತೀಚೆಗೆ ಪ್ರಸ್ತುತ ದುಬೈನಲ್ಲಿ ಉದ್ಯೋಗದಲ್ಲಿರುವ ಉಡುಪಿ ಮಂಗಳೂರು ಪರಿಸರದ ಪ್ರತಿಭಾವಂತ ಕೊಂಕಣಿ ಕಲಾವಿದರು ಕೊಂಕಣಿ ಚಲನಚಿತ್ರ ನಟ ಪ್ರದೀಪ್ ಬರ್ಬೋಜಾ ರವರ ನೇತೃತ್ವದಲ್ಲಿ ಉಡುಪಿಯ ಅಜ್ಜರಕಾಡು ಪುರಭವನದಲ್ಲಿ, ನಿರಂತರ್ ಉದ್ಯಾವರದ ನೇತೃತ್ವದಲ್ಲಿ ಕೊಂಕಣಿ ಹಾಸ್ಯಮಯ ನಾಟಕವನ್ನು ಪ್ರದರ್ಶನ ಮಾಡಲಾಗಿತ್ತು.

ಜನವರಿ ತಿಂಗಳ 18,19 ಮತ್ತು 20 ರಂದು ಉದ್ಯಾವರದ ಸಂತ ಫ್ರಾನ್ಸಿಸ್ ಝೆವಿಯರ್ ಚರ್ಚ್ ವಠಾರದಲ್ಲಿ ಮಂಗಳೂರಿನ ಪ್ರಸಿದ್ಧ ಕಲಾವಿದರಿಂದ ಮೂರು ದಿನಗಳ ಕೊಂಕಣಿ ನಾಟಕೋತ್ಸವ ಜರುಗಲಿದೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here