Tuesday 19th, February 2019
canara news

ಹವ್ಯಕ ವೆಲ್ಫೇರ್ ಟ್ರಸ್ಟ್‍ನಿಂದ ವಿ.ಜಿ ಭಟ್ ಸ್ಮಾರಣಾರ್ಥ ಕವಿಗೋಷ್ಠಿ-ಕವನ ಸ್ಪರ್ಧಾ ಬಹುಮಾನ ವಿತರಣೆ

Published On : 28 Nov 2018   |  Reported By : Rons Bantwal


ಕವಿತೆಯನ್ನು ಒಳ್ಳೆದಾಗಿ ಪ್ರಸ್ತುತಿ ಮಾಡಿದರೆ ಸಹೃದಯವನ್ನು ತಟ್ಟುತ್ತದೆ: ಗೋಪಾಲ ತ್ರಾಸಿ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ನ.25: ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬಯಿ ಸಂಸ್ಥೆಯು ಇಂದಿಲ್ಲಿ ಭಾನುವಾರ ಸಂಜೆ ಘಾಟ್ಕೋಪರ್ ಪಶ್ಚಿಮದ ದೀಪ್ತಿ ಸೊಲಿಟೇರ್ ಕಟ್ಟಡದಲ್ಲಿನ ಹವ್ಯಕರ ಸಭಾಗೃಹದಲ್ಲಿ ನಾಡಿನ ಹೆಸರಾಂತ ಕವಿವರ್ಯ ವಿ.ಜಿ ಭಟ್ ಸ್ಮಾರಣಾರ್ಥ ಕವಿಗೋಷ್ಠಿ ಮತ್ತು ಕವನ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಆಯೋಸಿತ್ತು. ಅತಿಥಿü ಅಭ್ಯಾಗತರಾಗಿ ಉಪಸ್ಥಿತ ಗೋಪಾಲ ತ್ರಾಸಿ ಅವರು ದೀಪ ಬೆಳಗಿಸಿ ಉಭ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು.

ಕನ್ನಡದ ಸಂವೇದನಾಶೀಲ ಕವಿ ಗೋಪಾಲ ತ್ರಾಸಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕವಿಗೋಷ್ಠಿಯಲ್ಲಿ ಸಾ.ದಯಾ, ಡಾ| ಕರುಣಾಕರ್ ಶೆಟ್ಟಿ ಪಣಿಯೂರು, ಶಾಂತಾ ಶಾಸ್ತ್ರಿ, ಕೆ.ಗೋವಿಂದ ಭಟ್, ವಿಶ್ವನಾಥ ಶೆಟ್ಟಿ ಪೇತ್ರಿ, ಡಾ| ಜಿ.ಪಿ ಕುಸುಮಾ, ಸುನಂದ ಭಟ್, ಡಾ| ದಾಕ್ಷಾಯನಿ ಯೆಡಹಳ್ಳಿ, ಶಾರದಾ ಅಂಬಸಂಗೆ, ಶೈಲಜಾ ಹೆಗ್ಡೆ, ನ್ಯಾ| ಅಮಿತಾ ಭಾಗವತ್, ಶಶಿಕಲಾ ಹೆಗ್ಡೆ ಪಾಲ್ಗೊಂಡು ತಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು.

ಇಂದಿನ ದಿನದಲ್ಲಿ ಪೆನ್ನು ಹಿಡಿದವನಿಗೆ ಕಷ್ಟದ ದಿನ. ಸಮೂಹದ ಜೊತೆ ಹೋಗುವವ ಇಂದು ಗೆಲ್ಲುತ್ತಾನೆ. ಏಕೆಂದರೆ ನಾವು ಇಂದು ಸಮೂಹ ಸನ್ನಿಯಲ್ಲಿ ಕೊಚ್ಚಿ ಹೋಗುತ್ತಿರುವಂತಹ ಸಂದರ್ಭದಲ್ಲಿದ್ದೇವೆ. ವ್ಯಂಗೆ ಮತ್ತು ವಿಡಂಬನೆಯನ್ನು ಪ್ರಮುಖ ಹಸ್ತವಾಗಿಸಿರಿಕೊಡವರು ವಿ.ಜಿ ಭಟ್. ಅವರ ಸ್ಮರಣಾರ್ಥವಾಗಿ ಕವಿತಾ ಸ್ಪರ್ಧೆ ಹಾಗೂ ಕವಿಗೋಷ್ಠಿಯನ್ನು ಹಮ್ಮಿಕೊಂಡಿರುವುದು ನಿಜವಾಗಿಯೂ ಈ ಸಂಸ್ಥೆ ಅವರಿಗೆ ಸಲ್ಲಿಸಿದ ಗೌರವಾರ್ಪಣೆ. ಕವಿಗಳಿಗೆ ಒಂದು ಜವಾಬ್ದಾರಿ ಇರಬೇಕು. ಪರಂಪರೆಯನ್ನು, ಕೊಂಡಿಯನ್ನು ವಿಸ್ತರಿಸುವ ಕೆಲಸ ಇಂದು ನಡೆಯಬೇಕಾಗಿದೆ. ಕವಿತೆಯನ್ನು ಪ್ರಸ್ತುತ ಪಡಿಸುವ ಹಕ್ಕು ಅಯೋ ಕವಿಗಳಿಗೆ ಇದೆ. ಕವಿತೆಯನ್ನು ಒಳ್ಳೆದಾಗಿ ಪ್ರಸ್ತುತಿ ಮಾಡಿದರೆ ಅದು ಸಹೃದಯವನ್ನು ತಟ್ಟುತ್ತದೆ. ಕವಿತೆ ಓದಿದ ಎಲ್ಲರಿಗೂ ಅಬಿನಂದಿಸಿ ಕವಿಗೋಷ್ಠಿಯ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಗೋಪಾಲ ತ್ರಾಸಿ ತಿಳಿಸಿದರು.


ಇದೇ ಸಂದರ್ಭದಲ್ಲಿ ಟ್ರಸ್ಟ್ ಇತ್ತೀಚೆಗೆ ಆಯೋಜಿಸಿದ್ದ ಕವನ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಹವ್ಯಕ ವೆಲ್ಫೇರ್ ಟ್ರಸ್ಟ್‍ನ ಅಧ್ಯಕ್ಷ ಶಿವಕುಮಾರ್ ಪಿ.ಭಾಗ್ವತ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟಿತು. ಮುಖ್ಯ ಅತಿಥಿüಯಾಗಿ ವಿ.ಎನ್ ಹೆಗಡೆ ಕಲ್ವಾ, ಗೌ| ಪ್ರ| ಕಾರ್ಯದರ್ಶಿ ನಾರಾಯಣ ಆರ್.ಅಕದಾಸ ಉಪಸ್ಥಿತರಿದ್ದು ಕವನ ಸ್ಪರ್ಧೆಯ ವಿಜೇತರಾದ ಪ್ರಜ್ಞಾ ಮತ್ತಿಹಳ್ಳಿ ಧಾರವಾಡ (ಪ್ರಥಮ), ಸ್ಮಿತಾ ಅಮೃತ್‍ರಾಜ್ ಸಂಪಾಜೆ (ದ್ವಿತೀಯ), ಧೀರೇಂದ್ರ ನಾಗರಹಳ್ಳಿ, ಬೆಂಗಳೂರು (ತೃತೀಯ), ಹೇಮಾ ಸದಾನಂದ್ ಅಮೀನ್ (ಸಮಾಧಾನಕರ) ಇವರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಅಭಿವಂದಿಸಿದರು.

ವಿ.ಎನ್ ಹೆಗಡೆ ಮಾತನಾಡಿ ಒಳನಾಡಿಗಿಂತ ಹೊರನಾಡಿನಲ್ಲಿ ಕನ್ನಡದ ಕೆಲಸಗಳು ಹೆಚ್ಚಾಗಿ ನಡೆಯುತ್ತಿವೆ. ಸೂರಿ ವೆಂಕಟ್ರಮಣ ಕರ್ಕಿ ಶಾಸ್ತ್ರಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವ ಈ ಸಂಸ್ಥೆ ಇದೀಗ ವಿ.ಜಿ ಭಟ್ ಸ್ಮರಣಾರ್ಥ ಕವಿತಾ ಸ್ಪರ್ಧೆಯನ್ನು ಅಯೋಜಿರುವುದು ಒಂದು ಮೈಲು ಗಲ್ಲು. ಕನ್ನಡ ನಮ್ಮ ಮಾತೃಭಾಷೆ. ಮಾತೃಭಾಷೆಯ ಅಭಿಮಾನವಿರಬೇಕು. ಎಲ್ಲಾ ಕನ್ನಡಿಗರನ್ನು ಸೇರಿಸಿ ಕಾರ್ಯಕ್ರಮ ಮಾಡುವ ಅವಶ್ಯಕತೆ ಇಂದಿದೆ. ಅಂತಹ ಕಾರ್ಯಕ್ರಮವನ್ನು ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂದಾಳತ್ವ ವಹಿಸಿ ಮಾಡಲಿ ಎಂದರು.

ಎಳೆಯ ಪ್ರಾಯದಿಂದ ತನ್ನ ಕೊನೆಯ ದಿನದ ವರೆಗೆ ಕವ್ಯ ರಚನೆಯಲ್ಲಿ ನಿರತರಾಗಿದ್ದವರೇ ಖ್ಯಾತ ಸಾಹಿತಿ ವಿ.ಜಿ ಭಟ್. ಕನ್ನಡ ಭಾಷೆಗೆ-ಸಾಹಿತ್ಯಕ್ಕೆ ಮಹತ್ವದ ಸ್ಥಾನ ಕೊಡುವಲ್ಲಿ ಶ್ರಮಿಸಿದವರು. ನಮ್ಮ ಈ ಸಂಸ್ಥೆ ಸಮಾಜಕ್ಕೆ ಮತ್ತು ಸಂಸ್ಕೃತಿಗೆ ಮಹತ್ವವನ್ನು ಕೂಡುತ್ತ ಬಂದಿದೆ. ಕಲೆ ಸಾಹಿತ್ಯ, ಸಾಂಸ್ಕೃತಿಕ ಮೌಲ್ಯಗಳನ್ನು ನೀಡುವಂತದು. ಆದುದರಿಂದ ಕಲೆ ಮತ್ತು ಸಾಹಿತ್ಯಕ್ಕೆ ಮಹತ್ವ ನೀಡುವ ಅಗತ್ಯವಿದೆ. ಹವ್ಯಕ ವೆಲ್ಫೇರ್ ಟ್ರಸ್ಟ್ ವಿ.ಜಿ ಭಟ್ ಸ್ಮರಣಾರ್ಥ ಕಾವ್ಯ ಸ್ಪರ್ಧೆಗೆ ಬಂದ ಪ್ರತಿಕ್ರಿಯೆ ಅದ್ಭುತವಾದುದು ಎಂದು ಅಧ್ಯಕ್ಷ ಶಿವಕುಮಾರ್ ಭಾಗ್ವತ್ ನುಡಿದರು.


ಟ್ರಸ್ಟ್‍ನ ಮುಖವಾಣಿ `ಹವ್ಯಕ ಸಂದೇಶ' ಮಾಸಿಕದ ಸಂಪಾದಕಿ ನ್ಯಾಯವಾದಿ ಅಮಿತಾ ಎಸ್.ಭಾಗ್ವತ್ ಸ್ವಾಗತಿಸಿ, ವಿ.ಜಿ ಭಟ್ ಅವರ ಬಗ್ಗೆ ವಿವರ ನೀಡಿದರು. ಶಶಿಕಲಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಆರ್.ಅಕದಾಸ ವಂದನಾರ್ಪಣೆಗೈದರು.
More News

  ಚಾರ್‍ಕೋಪ್ ಕನ್ನಡಿಗರ ಬಳಗದ ಕಾರಂತೋತ್ಸವ-ಸದಾನಂದ ಸುವರ್ಣ ದತ್ತಿ ಕಾರ್ಯಕ್ರಮ
ಚಾರ್‍ಕೋಪ್ ಕನ್ನಡಿಗರ ಬಳಗದ ಕಾರಂತೋತ್ಸವ-ಸದಾನಂದ ಸುವರ್ಣ ದತ್ತಿ ಕಾರ್ಯಕ್ರಮ
ಹವ್ಯಕ ವೆಲ್ಫೇರ್ ಟ್ರಸ್ಟ್‍ನಿಂದ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-2019' ಪ್ರದಾನ
ಹವ್ಯಕ ವೆಲ್ಫೇರ್ ಟ್ರಸ್ಟ್‍ನಿಂದ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-2019' ಪ್ರದಾನ
ಬಿಎಸ್‍ಕೆಬಿಎ ಸಂಸ್ಥೆಯಿಂದ ರಂಗೇರಿದ ಶಂಕರ್ ಮಹಾದೇವನ್ ಸಂಗೀತ ರಸಮಂಜರಿ
ಬಿಎಸ್‍ಕೆಬಿಎ ಸಂಸ್ಥೆಯಿಂದ ರಂಗೇರಿದ ಶಂಕರ್ ಮಹಾದೇವನ್ ಸಂಗೀತ ರಸಮಂಜರಿ

Comment Here