Wednesday 24th, April 2024
canara news

ಬಿ. ಎಸ್ ಕೆ. ಬಿ. ಎಸೋಸಿಯೇಶನ್, ಗೋಕುಲ -ಆಶ್ರಯದಲ್ಲಿ ಮಕ್ಕಳ ದಿನಾಚರಣೆ

Published On : 30 Nov 2018   |  Reported By : Rons Bantwal


ಮುಂಬಯಿ, ನ.27: ಬಿ. ಎಸ್ ಕೆ. ಬಿ. ಎಸೋಸಿಯೇಶನ್, ಸಾಯನ್, ಗೋಕುಲದ ಯುವ ವಿಭಾಗವು ಪ್ರತಿ ವರ್ಷದಂತೆ ಈ ವರ್ಷವೂ ಮಕ್ಕಳ ದಿನಾಚರಣೆಯನ್ನು ರವಿವಾರ ದಿನಾಂಕ ನವೆಂಬರ್ 25 ರಂದು ಆಶ್ರಯ, ನೇರೂಲ್ ನಲ್ಲಿ ಸಂಭ್ರಮದಿಂದ ಆಚರಿಸಿತು. ಪ್ರಪ್ರಥಮವಾಗಿ ಬಾಲಕಲಾವೃಂದದ ಮಕ್ಕಳಿಂದ ಗಣೇಶ ವಂದನೆ ಪ್ರಾರ್ಥನೆ ನೆರವೇರಿತು. ನಂತರ ಯುವ ವಿಭಾಗದ ಅಧ್ಯಕ್ಷ ಹರಿದಾಸ್ ಭಟ್, ಕಾರ್ಯದರ್ಶಿ ಎ.ಪಿ.ಕೆ. ಪೆÇೀತಿ ಹಾಗೂ ಇತರ ಪದಾಧಿಕಾರಿಗಳು, ಚಿಣ್ಣರು ಹಾಗೂ ತೀರ್ಪುಗಾರರಾಗಿ ಆಗಮಿಸಿದ ಅತಿಥಿಗಳಿಂದ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಹರಿದಾಸ್ ಭಟ್ ರವರು ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತವನ್ನು ಕೋರಿದರು. 2 ವರ್ಷದವರೆಗಿನ ಮಕ್ಕಳಿಗಾಗಿ 'ಆರೋಗ್ಯಯುತ ಮಗು ಸ್ಪರ್ಧೆ', 2 ರಿಂದ 15 ವರ್ಷದವರೆಗಿನ ಚಿಣ್ಣರಿಗಾಗಿ ಗುರಿ ಎಸೆತ, ಶಿಶುಗೀತೆಗಳು, ಶ್ಲೋಕ ಪಠನೆ, ಚಿತ್ರಕಲೆ, ರಸಪ್ರಶ್ನೆ, ನೃತ್ಯ, ಛದ್ಮವೇಷ ಇತ್ಯಾದಿ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳ ತೀರ್ಪುಗಾರರಾಗಿ ಡಾ. ಪ್ರಮೋದ್ ಧನವಡೆ, ಡಾ. ಗಿರೀಶ್ ಕುಲಕರ್ಣಿ, ಮೀನಾ ಅಯ್ಯರ್, ಜನೆಟ್ ಡಿಕ್ರೂಜ್, ಉಮಾ ರಾಜಗೋಪಾಲ್, ಶಂಕರನ್ ಕಣ್ಣನ್, ಸ್ಮಿಟ್ಲಿ ಮ್ಯಾಕ್ ಮೋಹನ್ ಪಾಲ್, ಲಾಫಿ ಮ್ಯಾಕ್ ಮೋಹನ್ ಪಾಲ್ ರವರು ಸಹಕರಿಸಿದರು. ಹರಿದಾಸ್ ಭಟ್, ಪ್ರಶಾಂತ್ ಹೆರ್ಲೆ, ಶ್ರೀಲಕ್ಷ್ಮಿ ಉಡುಪ, ಮಿತುಲ್ ರಾವ್, ಸುಪ್ರಿಯಾ ಉಡುಪ, ಹಾಗೂ ಸುದರ್ಶನ್ ಉಡುಪ ಕಾರ್ಯಕ್ರಮ ನಿರೂಪಿಸಿದರು. ರಸಪ್ರಶ್ನೆಯ ಕಾರ್ಯಕ್ರಮವನ್ನು ಕ್ಷಮಾ ರಾವ್ , ಸಪ್ನಾ ಭಟ್ , ಗುರುಪ್ರಸಾದ್ ಭಟ್ ನೆರವೇರಿಸಿಕೊಟ್ಟರು.

ಕೊನೆಯಲ್ಲಿ ಉಪಾಧ್ಯಕ್ಷ ವಾಮನ್ ಹೊಳ್ಳ ಮತ್ತು ಇತರ ಪದಾಧಿಕಾರಿಗಳು ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಗೈದರು. ಸಪ್ನಾ ಭಟ್ ವಿಜೇತ ಮಕ್ಕಳ ಯಾದಿಯನ್ನು ವಾಚಿಸಿದರು. ಶ್ರೀಲಕ್ಷ್ಮಿ ಉಡುಪ ಧನ್ಯವಾದ ಸಮರ್ಪಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪೆÇ್ರೀತ್ಸಾಹಕರ ಬಹುಮಾನಗಳನ್ನು ನೀಡಲಾಯಿತು. ಯುವ ವಿಭಾಗದ ಎಲ್ಲಾ ಕಾರ್ಯಕರ್ತರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರ್ವಹಿಸಿಕೊಟ್ಟು ಪ್ರಶಂಸೆಗೆ ಪಾತ್ರರಾದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ನೂರಾರು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪುಟಾಣಿಗಳಿಗೆ ಕರತಾಡನದ ಪೆÇ್ರೀತ್ಸಾಹವನ್ನಿತ್ತರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here