Friday 24th, May 2019
canara news

ಅರುಣೋದಯ ಕಲಾ ನಿಕೇತನ ವಜ್ರಮಹೋತ್ಸವ ಸಮಾರಂಭ

Published On : 30 Nov 2018   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ನ.28: ಮಹಾನಗರದ ಪ್ರತಿಷ್ಠಿತ ಹಾಗೂ ಹಿರಿಯ ಕಲಾಸಂಸ್ಥೆ `ಅರುಣೋದಯ ಕಲಾ ನಿಕೇತನ ಮುಂಬಯಿ ಸಾರ್ಥಕ ಆರು ದಶಕಗಳನ್ನು ಪೂರೈಸಿದ್ದು ಇಂದಿಲ್ಲಿ ಆದಿತ್ಯವಾರ ಚೆಂಬೂರು ಅಲ್ಲಿನ ಫೈನ್ ಆಟ್ರ್ಸ್ ಕಲ್ಚರಲ್ ಸೆಂಟರ್‍ನ ಶಿವಸ್ವಾಮಿ ಆಡಿಟೋರಿಯಂನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ 60ನೇ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಸಂಭ್ರಮಿಸಿತು.

 

ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್ ವಿದ್ಯಾವಿಹರ್ ದೀಪ ಬೆಳಗಿಸಿ ಸಂಭ್ರಮಕ್ಕೆ ಚಾಲನೆಯನ್ನಿತ್ತು ಶುಭಾರೈಸಿದರು. ಈ ಸಂದರ್ಭದಲ್ಲಿ ಅತಿಥಿü ಅಭ್ಯಾಗತರುಗಳಾಗಿ ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ್ ಪಾಲೆತ್ತಾಡಿ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್ ಹೆಗ್ಡೆ, ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ, ಸಮಾಜ ಸೇವಕಿ, ಓಂಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್ ಇದರ ಅಧ್ಯಕ್ಷೆ ಚಿತ್ರಾ ಆರ್.ಶೆಟ್ಟಿ , ಗೀತಾ ಎ.ಶೆಟ್ಟಿ, ಅಶೋಕ್ ಶೆಟ್ಟಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಅಧ್ಯಕ್ಷ ರಮೇಶ್ ಎಂ.ಬಂಗೇರ, ಪ್ರದೀಪ್ ಎಂ.ಚಂದನ್, ರಾಜೀವ್ ಎಂ ಚಂದನ್, ರಾಜು ಶ್ರೀಯಾನ್ ನಾವುಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿವಿಧ ಕಲಾ ಕ್ಷೇತ್ರಗಳಲ್ಲಿ ಸೇವೆಗೈದ ಸಾಧಕರಾದ ಕೆ.ಕೆ ಶೆಟ್ಟಿ, ಬಾಲಚಂದ್ರ ರಾವ್, ವಿ.ಕೆ ಸುವರ್ಣ, ಅನಿಲ್ ಕುಮಾರ್ ಹೆಗ್ಡೆ, ನಾರಾಯಣ ಶೆಟ್ಟಿ ನಂದಳಿಕೆ, ಕಮಲಾಕ್ಷ ಸರಾಫ್, ಡಾ| ಸುರೇಂದ್ರ ಕುಮಾರ್ ಹೆಗ್ಡೆ, ಗೀತಾ ಭಟ್, ಶೈಲಜಾ ಮಧುಸೂಧನ್, ರಾಘವೇಂದ್ರ ಬಾಳಿಗ, ಶ್ರೀಪತಿ ಹೆಗ್ಡೆ, ಪ್ರವೀಣ್ ಶೆಟ್ಟಿ ಎಕ್ಕಾರು, ಜಿ.ಟಿ ಆಚಾರ್ಯ, ಪದ್ಮನಾಭ ಸಸಿಹಿತ್ಲು, ಹರೀಶ್ ಪೂಜಾರಿ, ಕವಿರಾಜ್ ಸುವರ್ಣ, ಕುತ್ಪಾಡಿ ರಾಮಚಂದ್ರ ಗಾಣಿಗ ಮೊದಲಾದವರನ್ನು ಶಾಲು, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ವಜ್ರೋತ್ಸವ ಸಂಭ್ರಮ ನಿಮಿತ್ತ ಸಂಸ್ಥೆಯ ನೃತ್ಯ ಗುರು ನಿರ್ದೇಶಕಿ ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್ ಅವರ ಸಾರಥ್ಯದಲ್ಲಿ ನೃತ್ಯ ರೂಪಕಗಳ ಪ್ರದರ್ಶನ, ನೃತ್ಯ ವೈವಿಧ್ಯಮಯ ಸಂಗೀತಮೇಳ, ಸಂಗೀತ ನೃತ್ಯ ಇತ್ಯಾದಿಗಳೊಂದಿಗೆ ಒಂದೇ ವೇದಿಕೆಯಲ್ಲಿ ಒಂದೇ ಕಾಲಕ್ಕೆ ಸುಮಾರು 60 ಕಲಾವಿದರು ವಿವಿಧ ಭಾರತದ ಶಾಸ್ತ್ರೀಯ ನೃತ್ಯ, ಜುಗಲ್ ಬಂದಿ ನೃತ್ಯ ನಡೆಯಲಿದೆ. ಭರತನಾಟ್ಯಂ, ಮೋಹಿನಿಯಾಟ್ಟಂ, ಕಥಕ್, ಓಡಿಸ್ಸಿ, ಕೊಚುಪುಡಿ, ಮಣಿಪುರಿ, ಕಥ್‍ಕಳಿ ನೃತ್ಯ ಜುಗಲ್‍ಬಂದಿ ಇತ್ಯಾದಿಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿಸಲ್ಪಟ್ಟವು.

ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹದ ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಅಧ್ಯಕ್ಷತೆಯಲ್ಲಿ ವಜ್ರೋತ್ಸವದ ಭವ್ಯ ಸಮಾರಂಭ ನಡೆಸಲ್ಪಟ್ಟಿದ್ದು ಅತಿಥಿüಗಳಾಗಿ ಸಮಾಜ ಸೇವಕ ಮತ್ತು ಬಂಟ್ಸ್ ಸಂಘ ಬಳ್ಳಾರಿ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಭಂಡಾರಿ ಆ್ಯಂಡ್ ಭಂಡಾರಿ ಅಸೋಸಿಯೆಟ್ಸ್ ಸುಂದರ ಭಂಡಾರಿ, ಪಲ್ಲವಿ ಪೌಂಡೇಶನ್ ಬಂಗಾರಪೇಟೆ ಪಲ್ಲವಿ ಮಣಿ, ಅರುಣೋದಯ ಕಲಾ ನಿಕೇತನ ಟ್ರಸ್ಟಿಗಳಾದ ಸಂಜೀವ ಕೆ.ಸಾಲ್ಯಾನ್, ಗೋಪಾಲ್ ಪುತ್ರನ್, ಸುರೇಶ್ ಕಾಂಚನ್, ಸುಶೀಲಾ ಎಂ. ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿದ್ವಾನ್ ದಿ| ಗುರು ಎಂ.ಎನ್ ಸುವರ್ಣ ಅವರ ಸ್ವರಣಾರ್ಥವಾಗಿ `ಸುವರ್ಣ ಭಾರತ ರತ್ನ ಪ್ರಶಸ್ತಿಯನ್ನು ಕೊಚುಪುಡಿ ಪ್ರಖ್ಯಾತಿ ಗುರು ವೈಜಯಂತಿ ಕಾಶಿ (ಬಾವ), ಪ್ರಸಿದ್ಧ ಬಾಲಿವುಡ್ ಸಂಗೀತಕಾರ ಸುರೇಶ್ ವಾಡ್ಕರ್(ರಾಗ) ಮತ್ತು ಸುಪ್ರಸಿದ್ಧ ಡ್ರಂ ಮಾಸ್ಟರ್ ಆನಂದನ್ ಶಿವಮಣಿ(ತಾಳ) ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿದ್ವಾನ್ ದಿ| ಗುರು ಎಂ.ಎನ್ ಸುವರ್ಣ ಅವರ ಧರ್ಮಪತ್ನಿ ಹಾಗೂ ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್ ಅವರ ಮಾತೃಶ್ರೀ ಸುಶೀಲಾ ಎಂ. ಸುವರ್ಣ ಅವರಿಗೆ ಗುರುವಂದನಾ ಕಾರ್ಯಕ್ರಮ ನೇರವೇರಿತು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ನೀಡಿದ ಸಮಾಜ ಸೇವಕರಾದ ರಾಮಚಂದ್ರ ಬೈಕಂಪಾಡಿ, ದೇವರಾಯ ಮಂಜುನಾಥ ಶೇರಿಗಾರ್ ದಂಪತಿ, ಬೆಂಗಳೂರಿನ ಸಮಾಜ ಸೇವಕಿ ಶಶಿಕಲ ವಿ.ಕಾವ್ಲಿ, ಮತ್ತು ಸಂಘದ ಟ್ರಸ್ಟಿಗಳನ್ನು ಸನ್ಮಾನಿಸಲಾಯಿತು. ಉತ್ತಮ ವರುಷದ ವಿದ್ಯಾಥಿರ್s ಪುರಸ್ಕಾರವನ್ನು ಅನಿಷಾ ನಾಯಕ್ ಅವರಿಗೆ ನೀಡÀಲಾಯಿತು.

ದಯಾಸಾಗರ ಚೌಟ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್ ಧನ್ಯವಾದಗೈದರು.

 

 
More News

ಸಂಗೀತ ಪ್ರೇಮಿಗಳ ಮನಸೆಳೆದ  `ಕೊಂಕಣಿ ಶ್ರೀರಾಮ ಗೀತಾ'
ಸಂಗೀತ ಪ್ರೇಮಿಗಳ ಮನಸೆಳೆದ `ಕೊಂಕಣಿ ಶ್ರೀರಾಮ ಗೀತಾ'
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ

Comment Here