Friday 24th, May 2019
canara news

ಕುಂದಾಪುರ ತೆರಾಲಿಯ ಸಂಭ್ರಮ - ಜೀವನ ಪಯಣದಲ್ಲಿ ದೇವರ ವಾಕ್ಯ ನಮಗೆ ವಾಹನವಾಗಿದೆ -ಫಾ|ಜೆರಾಲ್ಡ್ ಡಿಮೆಲ್ಲೊ

Published On : 30 Nov 2018   |  Reported By : Bernard Dcosta


ಕುಂದಾಪುರ,ನ.28: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ಮಂಗಳವಾರದಂದು ದೇವರ ದೇವರ ವಾಕ್ಯದ ಪೂಜಾ ವಿಧಿಯಿಂದ ಆರಂಭ ಗೊಂಡಿತು. ಸಂಜೆ ರೋಜರಿ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನೆಡೆಸಿದ ತರುವಾಯ ಈ ದೇವರ ವಾಕ್ಯದ ಭಕ್ತಿಯನ್ನು ಆಚರಿಸಲಾಯಿತು.

“ಅತನು ಎನು ಹೇಳುತ್ತಾನೊ ಅದರಂತೆ ಮಾಡಿ” ಮೇರಿ ಮಾತೆ ತನ್ನ ಪುತ್ರನ ವಾಕ್ಯಗಳನ್ನು ಆಲಿಸಿ ಅದರಂತೆ ನೆಡೆಯಿರಿ ಎಂದು ನಮ್ಮನ್ನು ಪ್ರೇರಣೆ ನೀಡುತಿದ್ದಾಳೆ, ಅದಕ್ಕಾಗಿ ನಮಗೆ ದೇವರ ಗ್ರಂಥದಲ್ಲಿ ಯೇಸು ಎನು ಹೇಳಿದ್ದಾನೆ ಎಂದು ನಮ್ಮ ಹ್ರದಯಗಳಲ್ಲಿ ಮನನ ಮಾಡಿ ಕೊಳ್ಳುವುದರಿಂದ ನಮಗೆ ದೇವರ ವಾಕ್ಯದಂತೆ ನೆಡೆಯಲು ಸಾಧ್ಯವಾಗುತ್ತದೆ’ ಎಂದು ದೇವರ ವಾಕ್ಯದ ವಿಧಿಯನ್ನು ನೆಡೆಸಿಕೊಟ್ಟ ಪ್ರಧಾನ ಗುರು ಕೊಳಲಗಿರಿಯ ಧರ್ಮಗುರು ವಂ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಸಂದೇಶ ನೀಡಿದರು. ‘ದೇವರ ವಾಕ್ಯದ ಪ್ರಭಾವ ನಮ್ಮ ಜೀವನದ ಎಲ್ಲಾ ಸಂದರ್ಭಗಳಲ್ಲಿ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ, ಜೀವನದ ಪಯಣದಲ್ಲಿ ದೇವರ ವಾಕ್ಯ ನಮಗೆ ವಾಹನವಾಗಿದೆ, ಹಾಗಾಗಿ ಮೇರಿ ಮಾತೆಯ ಪ್ರೇರಣೆಯಿಂದ ದೇವರ ವಾಕ್ಯವನ್ನು ನಾವು ಪಾಲಿಸೋಣ’ ಎಂದು ಅವರು ನುಡಿದರು.

ದೇವರ ವಾಕ್ಯದ ಭಕ್ತಿ ಸಂಭ್ರಮದ ವಿಧಿಯಲ್ಲಿ ಈ ಹಿಂದೆ ಸೇವೆ ನೀಡಿದ ಮಂಗಳೂರು ರೊಜಾರಿಯೊ ಕ್ಯಾಥೆಡ್ರಲ್ ಇಗರ್ಜಿಯ ಧರ್ಮಗುರು ಅ|ವಂ|ಜೆ.ಬಿ.ಕ್ರಾಸ್ತಾ, ಕುಂದಾಪುರ ಇಗರ್ಜಿಯ ಹಾಗೂ ವಲಯ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಕುಂದಾಪುರ ಸಂತ ಮೇರಿಸ್ ಜೂ.ಕಾಲೇಜಿನ ಪ್ರಾಂಶುಪಾಲಾರಾದ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ಮತ್ತು ಸಂತ ಜುಜೆ ವಾಜ್ ಇವರಿಗೆ ಸಮರ್ಪಿಲ್ಪಟ್ಟ ಕುಂದಾಪುರ ವಲಯದ, ಎಲ್ಲಾ ಇಗರ್ಜಿಗಳ ಧರ್ಮಗುರುಗಳು, ಕಟ್ಖರೆ ಬಾಲ ಯೇಸು ಆಶ್ರಮದ ಧರ್ಮಗುರುಗಳು ಹಾಗೂ ಅತಿಥಿ ಧರ್ಮಗುರುಗಳು ಈ ಪೂಜಾವಿಧಿಯಲ್ಲಿ ಪಾಲುಗೊಂಡರು. ಗಾಯನ ಮಂಡಳಿಯ ನೇತ್ರತ್ವವನ್ನು ವಂ| ಫಾ ರೋಯ್ ಲೋಬೊ ವಹಿಸಿದ್ದರು.

ಇಗರ್ಜಿಯ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಜೇಕಬ್ ಡಿಸೋಜಾ ವಂದನಾರ್ಪಣೆ ಸಲ್ಲಿಸಿದರು. ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, ಸದಸ್ಯರು, ಗುರಿಕಾರರು, ಧರ್ಮ ಭಗಿನಿಯರು ಉಪಸ್ಥಿತರಿದ್ದರು. ಈ ಜಾತ್ರೆಗೆ ಕ್ರೈಸ್ತ ಬಾಂಧವರಲ್ಲದೆ, ಜಾತಿ ಧರ್ಮ ಭೇದ ಭಾವ ಮರೆತು ಬಹು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಭಾವೈಕತೆ ಮೆರೆದರು.

 
More News

ಸಂಗೀತ ಪ್ರೇಮಿಗಳ ಮನಸೆಳೆದ  `ಕೊಂಕಣಿ ಶ್ರೀರಾಮ ಗೀತಾ'
ಸಂಗೀತ ಪ್ರೇಮಿಗಳ ಮನಸೆಳೆದ `ಕೊಂಕಣಿ ಶ್ರೀರಾಮ ಗೀತಾ'
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ

Comment Here