Friday 24th, May 2019
canara news

ಅರ್ವತ್ತಮೂರನೇ ವಾರ್ಷಿಕ ಮಹಾಸಭೆ ಜರುಗಿಸಿದ ಚೆಂಬೂರು ಕರ್ನಾಟಕ ಸಂಘ

Published On : 03 Dec 2018


ಚೆಂಬೂರು ವಿದ್ಯಾ ಸಂಕುಲ ನಮ್ಮ ಹಿರಿಮೆಯಾಗಿದೆ :ಹೆಚ್.ಕೆ ಸುಧಾಕರ .

ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.02: ಸುಮಾರು ಆರು ದಶಕಗಳ ನಮ್ಮ ಪೂರ್ವಜರ ದೂರದೃಷ್ಠಿತ್ವದಿಂದ ಅಸ್ತಿತ್ವಕ್ಕೆ ಬಂದ ಈ ಸಂಘವು ಕರ್ಮಭೂಮಿ ಮುಂಬಯಿನ ಜನಸೇವೆಗೆ ವರದಾನವಾಗಿದೆ. ಅವರ ಧ್ಯೇಯೋದ್ದೇಶಗಳನ್ನು ಪಕ್ವಗೊಳಿಸುವ ಪ್ರಯತ್ನ ಪ್ರಸಕ್ತ ಸಮಿತಿ ನಡೆಸಿದ್ದು ಆಮೂಲಕ ಸಂಘದ ಸ್ಥಾಪಕರ ಋಣ ಸಂದಾಯ ಮಾಡುವಲ್ಲಿ ಯಶಕಂಡಿದೆ ಎನ್ನುವ ಅಭಿಮಾನ ನಮಗಿದೆ. ಇಂತಹ ಸೇವಾ ವಿದ್ಯಾ ಸಂಕುಲ ನಮ್ಮ ಹಿರಿಮೆಯಾಗಿದೆ ಎಂದು ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಹೆಚ್.ಕೆ ಸುಧಾಕರ ತಿಳಿಸಿದರು.

ಚೆಂಬೂರು ಕರ್ನಾಟಕ ಸಂಘ ತನ್ನ 63ನೇ ವಾರ್ಷಿಕ ಮಹಾಸಭೆಯನ್ನು ಇಂದಿಲ್ಲಿ ಭಾನುವಾರ ಪೂರ್ವಾಹ್ನ ಚೆಂಬೂರು ವಿದ್ಯಾಸಾಗರ ಸಂಕೀರ್ಣದ ವಿದ್ಯಾಸಾಗರ ಸಂಕೀರ್ಣದಲ್ಲಿ ಜರುಗಿಸಿದ್ದು ದೀಪಹಚ್ಚಿ ಮಹಾಸಭೆಗೆ ಚಾಲನೆಯನ್ನೀಡಿ ಸಭೆಯ ಅಧ್ಯಕ್ಷತೆ ವಹಿಸಿ ನ್ಯಾಯವಾದಿ ಸುಧಾಕರ ಮಾತನಾಡಿದರು.

ಉಪಾಧ್ಯಕ್ಷ ಪ್ರಭಾಕರ ಬಿ.ಬೋಳಾರ್, ಜತೆ ಕಾರ್ಯದರ್ಶಿ ಸುಧಾಕರ ಹೆಚ್.ಅಂಚನ್, ಜತೆ ಕೋಶಾಧಿಕಾರಿ ಸುಂದರ್ ಎನ್.ಕೋಟ್ಯಾನ್ ವೇದಿಕೆಯಲ್ಲಿ ಆಸೀನರಾಗಿದ್ದು, ಹಂಗಾಮಿ ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್ ಕೆ.ಶೆಟ್ಟಿಗಾರ್ ಸ್ವಾಗತಿಸಿ ಗತವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಗೌರವ ಕೋಶಾಧಿಕಾರಿ ಟಿ.ಆರ್ ಶೆಟ್ಟಿ ಗತ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿ ಸಂಘದ ಚಟುವಟಿಕೆಗಳ ಸ್ಥೂಲ ಮಾಹಿತಿಯನ್ನಿತ್ತÀರು.

ಸಂಕಲ್ಪಗಳು ಪವಿತ್ರವಾಗಿದ್ದರೆ ಪ್ರಪಂಚವೇ ಪವಿತ್ರವಾಗುವುದು ಎಂದರಿತ ನಾವು ಯಾವುದೇ ಮತಧರ್ಮ, ಪ್ರಾಂತ್ಯ, ಭೇದಭಾವ ಮಾಡದೆ ಈ ಯಾಂತ್ರಿಕ ನಗರದಲ್ಲಿ ಸಾಮರಸ್ಯವಾಗಿ ಬಾಳಲು ಮಕ್ಕಳನ್ನು ಪ್ರೇರೆಪಿಸುತ್ತಿದ್ದೇವೆ. ಮಕ್ಕಳ ವಿಕಾಸವನ್ನೇ ಉದ್ದೇಶವಾಗಿರಿಸಿ ಉತ್ತೇಜಿಸುತ್ತಾ ಭವ್ಯ ಭಾರತದ ಪ್ರಜೆಗಳಾಗಿ ಸರ್ವೋತ್ಕೃಷ್ಟ ಜೀವನಕ್ಕೆ ಬೆಂಬಲಿಸುತ್ತಿದ್ದೇವೆ. ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಮುನ್ನಡೆಯಲು ವಿಶೇಷವಾಗಿ ಬಡಮಕ್ಕಳ ವಿದ್ಯಾರ್ಜನೆಗೆ ಹುರಿದುಂಬಿಸುತ್ತಿದ್ದೇವೆ. ಸಮತೆ, ಸಮಾನತೆಯನ್ನೇ ಮಾಪನವಾಗಿಸಲು ಈ ವಿದ್ಯಾಸಂಕುಲ ಪ್ರೇರಕವಾಗಿದೆ. ಸ್ವಾರ್ಥ ರಹಿತ ಸರಸ್ವತಿ ಆರಾಧನೆಯಿಂದ ಸರ್ವೋತ್ಕೃಷ್ಟ ಸಮಾಜ ನಿರ್ಮಾಣ ಸಾಧ್ಯ. ಆದುದರಿಂದ ಸ್ವಾರ್ಥವನ್ನು ಬದಿಗಿಟ್ಟು ದೀನ ದಲಿತರ ಸೇವೆಗೆ ನಮ್ಮ ಜೀವನ ಮುಡಿಪಾಗಿಸೋಣ ಎಂದೂ ನ್ಯಾಯವಾದಿ ಸುಧಾಕರ ಆಶಯ ವ್ಯಕ್ತಪಡಿಸಿದರು.

ಹೇಮಲತಾ ಎ.ಶೆಟ್ಟಿ ಮತ್ತು ಸುಕನ್ಯಾ ಪೂಜಾರಿ ಅವರನ್ನು ಅಂತರಿಕ ಲೆಕ್ಕ ಪರಿಶೋಧಕರನ್ನಾಗಿ ಹಾಗೂ ಸಿಎ| ವಿಶ್ವನಾಥ್ ಶೆಟ್ಟಿ ಅವರನ್ನು ಬಾಹ್ಯಲೆಕ್ಕ ಪರಿಶೋಧಕರನ್ನಾಗಿ ಸಭೆ ನೇಮಕಗೊಳಿಸಿತು. ನಂತರ 2018-2021ರ ಅವಧಿಗೆ ಕಾರ್ಯಕಾರಿ ಸಮಿತಿಗೆ ಜಯ ಎನ್.ಶೆಟ್ಟಿ, ಪ್ರಭಾಕರ ಬಿ.ಬೋಳಾರ್, ದೇವದಾಸ್ ಕೆ.ಶೆಟ್ಟಿಗಾರ್, ಕೆ.ಜಯ ಎಂ.ಶೆಟ್ಟಿ, ಮಧುಕರ್ ಜಿ.ಬೈಲೂರು, ಸುಂದರ್ ಎನ್.ಕೋಟ್ಯಾನ್ ಸೇರಿದಂತೆ ಆರು ಸದಸ್ಯರನ್ನು ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು. ಆಯ್ಕೆ ಪ್ರಕ್ರಿಯೆಗೆ ಚುನಾವಣಾ ಅಧಿಕಾರಿಗಳಾಗಿ ಪದ್ಮನಾಭ ಪೂಜಾರಿ ಮತ್ತು ನಿತ್ಯಾನಂದ ಪೂಜಾರಿ ಸಹಕರಿಸಿದ್ದು ಭಾಸ್ಕರ್ ಕರ್ನಿರೆ ಆಯ್ಕೆಪಟ್ಟಿ ಪ್ರಕಟಿಸಿ ಶುಭಾರೈಸಿದರು.

ವೇದಿಕೆಯಲ್ಲಿ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ಸದಸ್ಯರನ್ನೊಳಗೊಂಡು, ಕಾರ್ಯಕಾರಿ ಸಮಿತಿ ಸದಸ್ಯರುಗ ಳಾದ ವಿಶ್ವನಾಥ ಎಸ್.ಶೇಣವ, ರಾಮ ಪೂಜಾರಿ, ಅಶೋಕ್ ಸಾಲ್ಯಾನ್, ಮೋಹನ್ ಕೆ.ಕಾಂಚನ್, ಯೋಗೇಶ್ ವಿ.ಗುಜರನ್, ರಂಜನ್‍ಕುಮಾರ್ ಆರ್.ಅಮೀನ್, ಸುಧೀರ್ ವಿ.ಪುತ್ರನ್, ಚಂದ್ರಶೇಖರ ಎ.ಅಂಚನ್, ಗುಣಾಕರ ಹೆಚ್.ಹೆಗ್ಡೆ ಹಾಗೂ ಸಭೆಯಲ್ಲಿ ಶಂಕರ್ ಶೆಟ್ಟಿ, ಶ್ರೀಧರ್ ಶೆಟ್ಟಿ, ನಾಗೇಶ್ ಕೋಟ್ಯಾನ್, ಉಮೇಶ್ ಎನ್.ಕೋಟ್ಯಾನ್ ಸೇರಿದಂತೆ ಸದಸ್ಯರನೇಕರು ಸಭೆಯಲ್ಲಿ ಹಾಜರಿದ್ದರು.

ಆರಂಭದಲ್ಲಿ ಪದಾಧಿಕಾರಿಗಳು ಮಾತೆ ಸರಸ್ವತಿ ಹಾಗೂ ಮಹಾ ಗಣಪತಿಗೆ ಪೂಜೆ ಸಲ್ಲಿಸಿದರು. ನಂತರ ಶಾಲಾ ವಿದ್ಯಾಥಿರ್üನಿಯರ ಪ್ರಾರ್ಥನೆಯೊಂದಿಗೆ ಸಭೆ ಆದಿಗೊಂಡಿತು. ಗತ ಸಾಲಿನಲ್ಲಿ ಅಗಲಿದ ರಾಜು ಶೆಟ್ಟಿ, ಜಯ ಟಿ.ಪೂಜಾರಿ, ಶೀನ ಎಸ್.ಶೆಟ್ಟಿಗಾರ್, ವೈ.ಶಿವರಾಮ ಆಚಾರ್ಯ ಮತ್ತಿತರ ಸದಸ್ಯರಿಗೆ ಬಾಷ್ಪಾಂಜಲಿ ಕೋರಲಾಯಿತು. ಸಭಿಕರ ಪರವಾಗಿ ಭಾಸ್ಕರ್ ಕರ್ನಿರೆ, ಎಂ.ಎನ್ ಕರ್ಕೇರ, ಮಿಲಿಂದ್ ನಾಡಗೌಡ, ರಾಜೀವ್ ಬಿ.ಸನಿಲ್, ರವಿ ಶೆಟ್ಟಿ ಕೊಡ್ಯಡ್ಕ, ಪದ್ಮನಾಭ್ ಪೂಜಾರಿ ಮತ್ತಿತರರು ಮಾತನಾಡಿ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು. ದೇವ್‍ದಾಸ್ ಕೆ.ಶೆಟ್ಟಿಗಾರ್ ಅಭಾರ ಮನ್ನಿಸಿದರು.

 
More News

ಸಂಗೀತ ಪ್ರೇಮಿಗಳ ಮನಸೆಳೆದ  `ಕೊಂಕಣಿ ಶ್ರೀರಾಮ ಗೀತಾ'
ಸಂಗೀತ ಪ್ರೇಮಿಗಳ ಮನಸೆಳೆದ `ಕೊಂಕಣಿ ಶ್ರೀರಾಮ ಗೀತಾ'
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ

Comment Here