Friday 24th, May 2019
canara news

ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಆಯೋಜಿಸಿದ್ದ ಮುಂಬಯಿ ಕಾವ್ಯ ಸಂಭ್ರಮ

Published On : 04 Dec 2018   |  Reported By : Rons Bantwal


ಕಾವ್ಯ ಸಂಭ್ರಮಗಳಿಗೆ ಅಡಂಬರ ಮುಖ್ಯವಲ್ಲ ಶ್ರೇಷ್ಠತೆ ಮುಖ್ಯ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.02: ನಿಸ್ವಾರ್ಥ ಸೇವೆಯ ಶೇಖರ ಅಜೆಕಾರು ಅವರ ಸಮಾಜಮುಖಿ ಸೇವೆಯಿಂದ ಇಂತಹ ಸಾಹಿತಿಕ ಸಂಭ್ರಮಗಳು ಸಾಧ್ಯವಾಗುತ್ತಿವೆ. ಇದಕ್ಕೆಲ್ಲಾ ಅಡಂಬರ ಮುಖ್ಯವಲ್ಲ ಶ್ರೇಷ್ಠತೆ ಮತ್ತು ಪ್ರಧಾನ್ಯತೆ ಮುಖ್ಯ. ನೂರು ಜನಕ್ಕಿಂತ ಆಸಕ್ತ ಮೂರು ಜನರ ಕೂಡುವಿಕೆಯೂ ಇದಕ್ಕೆ ಮುಖ್ಯ. ಇಂತಹ ಕಾವ್ಯ ಸಂಭ್ರಮಗಳು ಸಮಾಜವನ್ನು ಸದಾ ಕಾವ್ಯಾತ್ಮಕವಾಗಿಸಿ ಜಾಗೃತÀವಾಗಿಸುವುದಕ್ಕೆ ಪ್ರೇರಣೆ ಆಗಲಿ ಎಂದು ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಾಬಾಳಿಕೆ ತಿಳಿಸಿದರು

ದಶ ಸಂಭ್ರಮದಲ್ಲಿನ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಸಹಯೋಗದೊಂದಿಗೆ ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಸಂಸ್ಥೆ ತನ್ನ ಸ್ವರ್ಣಮಹೋತ್ಸವ ವರ್ಷಾಚರಣಾ ಪ್ರಯುಕ್ತ ಘಾಟ್‍ಕೋಪರ್ ಪಂತ್‍ನಗರದಲ್ಲಿನ ವೆಲ್ಫೇರ್ ಸೊಸೈಟಿಯ ಬಾಬಾ'ಸ್ ಮಹೇಶ್ ಎಸ್.ಶೆಟ್ಟಿ ಸಭಾಗೃಹದಲ್ಲಿ ಇಂದಿಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಮುಂಬಯಿ ಕಾವ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಇನ್ನಾಬಾಳಿಕೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ನಾಡಿನ ಪ್ರತಿಷ್ಠಿತ ರಂಗಕರ್ಮಿ ನಾರಾಯಣ ಶೆಟ್ಟಿ ನಂದಳಿಕೆ, ಅತಿಥಿü ಅಭ್ಯಾಗತರುಗಳಾಗಿ ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿ ಕಾರ್ಯಧ್ಯಕ್ಷ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ, ಪತ್ರಕರ್ತ ನವೀನ್ ಕೆ.ಇನ್ನಾ, ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಇದರ ಮುಖ್ಯಸ್ಥ ವಿಶ್ವನಾತ್ ದೊಡ್ಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಾಂದರ್ಭಿಕವಾಗಿ ಮಾತನಾಡಿ ಶುಭಾರೈಸಿದರು.

ಗೋಪಾಲ್ ತ್ರಾಸಿ, ನಾರಾಯಣ ಶೆಟ್ಟಿ ನಂದಳಿಕೆ, ಸಂತು ಮುದ್ರಾಡಿ, ಸಾ.ದಯಾ, ಅರುಷಾ ಎನ್.ಶೆಟ್ಟಿ, ಸುಜತಾ ಶೆಟ್ಟಿ, ಲತಾ ಪ್ರಭು ಅಂಗಡಿ, ಅಶೋಕ್ ವಳದೂರು, ವಿಶ್ವನಾಥ್ ದೊಡ್ಮನೆ, ವಿನೋದ್‍ರಾಜ್ ಜೈನ್, ನಾಗಶ್ರೀ ಸಂತೋಷ್ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು.

ಶೇಖರ ಅಜೆಕಾರು ಅಂದರೆ ಆಗಲೇಬೇಕು ಎನ್ನುವುದಕ್ಕೆ ಓರ್ವ ನಿದರ್ಶನ. ಅಪ್ರತಿಮ ಪ್ರತಿಭಾವಂತರಾದ ಇವರು ಮುಂಬಯಿನ ಹೊಟೇಲು ನೌಕರರಿಗೆ ಸಾಹಿತಿಕ ವೇದಿಕೆ ಕಲ್ಪಿಸಿಕೊಟ್ಟ ಮೊದಲ ಸಂಘಟಕ. ವ್ಯತ್ಯಾಸವಿಲ್ಲದ ವ್ಯವಸ್ಥೆಗೆ ವಿಶ್ವಾಸನೀಯ ಹೆಸರೇ ಅಜೆಕಾರು ಆಗಿದ್ದಾರೆ ಎಂದು ನಾರಾಯಣ ನಂದಳಿಕೆ ತಿಳಿಸಿದರು.

ಕನ್ನಡದ ಸಂವೇದನಾಶೀಲ ಕವಿ ಗೋಪಾಲ ತ್ರಾಸಿ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಅಧ್ಯಕ್ಷ ಶೇಖರ ಅಜೆಕಾರು ಸ್ವಾಗತಿಸಿ ಅತಿಥಿü, ಕವಿವರ್ಯರಿಗೆ ವೀಳೆದೆಲೆ, ಕೃತಿ-ಲೇಖನಿಗಳನ್ನಿತ್ತು ಶಾಲು ಹೊದಿಸಿ ಗೌರವಿಸಿದರು.

ಸಾಹಿತ್ಯ ಲೋಕಕ್ಕೆ ಪ್ರೇರಣೆ ಕೊಡುವ ಉದ್ದೇಶ ನಮ್ಮದಾಗಿದೆ. ನನ್ನನ್ನು ಬೆಳೆಸಿದ್ದೇ ಮುಂಬಯಿ ಆದುದರಿಂದ ಇಂತಹ ಸಂಭ್ರಮ ಮೂಲಕ ಈ ಕರ್ಮಭೂಮಿಯ ಋಣ ಸಂದಾಯಿಸುವೆ. ಸದ್ಯ ಯುವ ಕವಿಗಳಿಗೆ ಭಾಗ್ಯ ಬಂದಿದ್ದು ಇಂತಹ ಕಾರ್ಯಕ್ರಮಗಳು ಅವರಿಗೆ ವೇದಿಕೆಗಳಾಗಿವೆ. ಕಾವ್ಯ ಸಂಭ್ರಮವೂ ಕನ್ನಡ ಕಟ್ಟುವ ಕಾರ್ಯಕ್ಕೆ ಪೂರಕವಾಗಿದೆ ಎಂದು ಪ್ರಸ್ತಾವನೆಗೈದÀು ಅಜೆಕಾರು ತಿಳಿಸಿದರು.

ಕವಿಗೋಷ್ಠಿಗಳಂತಹ ಕಾರ್ಯಕ್ರಮಗಳಿಗೆ ಪ್ರೇಕ್ಷಕರನ್ನು ದೂರಿ ಪ್ರಯೋಜನವಿಲ್ಲ. ಕಾರಣ, ಕವಿತೆ ಬೆಳವಣಿಕೆಗಳಷ್ಟೇ ಜನರಿಗೆ ಮೆಚ್ಚುಗೆ ಆಗುವುದು. ಕವಿತೆ ಮನಾಕರ್ಷಕವಾದಾಗಲೇ ಕವಿಗಳು ಜನಾಕರ್ಷಣೆ ಮತ್ತು ಮಾನ್ಯತೆಗೆ ಪಾತ್ರರಾಗುವುದು. ಆದ್ದರಿಂದ ಕವಿಗಳೆಣಿಸುವವರು ಜನರಲ್ಲಿ ಕವಿತಾಸಕ್ತಿ ಬೆಳೆಸುವ ಅಗತ್ಯವಿದೆ
ಎಂದು ಕನ್ನಡದ ಸಂವೇದನಾಶೀಲ ಕವಿ ಗೋಪಾಲ ತ್ರಾಸಿ ಕಾವ್ಯ ಸಂಭ್ರಮಕ್ಕೆ ಮುನ್ನುಡಿಯಿತ್ತರು.

ವೆಲ್ಫೇರ್ ಸೊಸೈಟಿಯ ಕನ್ನಡ ವೆಲ್ಫೇರ್‍ನ ಕಾರ್ಯದರ್ಶಿ ಸುಧಾಕರ ಎಲ್ಲೂರು, ಮಹಿಳಾ ವಿಭಾಗಧ್ಯಕ್ಷೆ ಶಾಂತÀ ನಾರಾಯಣ ಶೆಟ್ಟಿ, ಸುರೇಶ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಮತ್ತಿತರ ಪದಾಧಿಕಾರಿಗಳು, ಮತ್ತಿತರ ಸದಸ್ಯರು, ಗಣ್ಯರನೇಕರು ಉಪಸ್ಥಿತರಿದ್ದು ತಿಮ್ಮ ಎಸ್.ದೇವಾಡಿಗ ಪ್ರಾರ್ಥನೆಯನ್ನಾಡಿದರು. ಕು| ಸುಪ್ರಿಯಾ ಸುಬ್ರಹ್ಮಣ್ಯ ಉಡುಪ ಕಾರ್ಯಕ್ರಮ ಮತ್ತು ಕವಿಗೋಷ್ಠಿ ನಿರ್ವಾಹಿಸಿ ಕೃತಜ್ಞತೆ ಸಲ್ಲಿಸಿದರು.
More News

ಸಂಗೀತ ಪ್ರೇಮಿಗಳ ಮನಸೆಳೆದ  `ಕೊಂಕಣಿ ಶ್ರೀರಾಮ ಗೀತಾ'
ಸಂಗೀತ ಪ್ರೇಮಿಗಳ ಮನಸೆಳೆದ `ಕೊಂಕಣಿ ಶ್ರೀರಾಮ ಗೀತಾ'
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ

Comment Here