Saturday 20th, April 2024
canara news

ವಜ್ರಮಹೋತ್ಸವ ಸಡಗರದಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ಸಾಧನೆಯ ಹಾದಿಯ ಹೆಜ್ಜೆಗುರುತು ಮೂಡಿಸಲಿದೆ ಹೀರಕ ಮಹೋತ್ಸವ

Published On : 05 Dec 2018   |  Reported By : Rons Bantwal


(ಮಾಹಿತಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.05: ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು... ಬದುಕು ಬಲುಹಿನ ನಿಧಿಯು ಸದಭಿಮಾನದ ಬೀಡು... ಎನ್ನುತಾ ಹಚ್ಚೇವು ಕನ್ನಡದ ದೀಪ ಎನ್ನುತಾ ಸಮಾಜಮುಖಿ ಚಿಂತನೆಗಳ ಮೂಲಕ ಕನ್ನಡಿಗರ ಕರ್ಮಕಾಶಿ ಎನಿಸಿದ ಮುಂಬಯಿ ಇಲ್ಲಿನ ಸಾಂತಕ್ರೂಜ್ ಪರಿಸರದ ಪ್ರಭಾವಿ ಕನ್ನಡಿಗರಾದ ಲೋಕಯ್ಯ ಶೆಟ್ಟಿ, ಕೆ.ಬಿ ಜೈನ್, ಎಂ.ಆರ್ ಬಸ್ರೂರು, ಬಿ.ಪಿ ಅಮೀನ್, ಎನ್.ಎಂ ಕಂಡ್ಲೂರ್, ಎಸ್.ಟಿ.ಕುಂಟಾಡಿ, ಫೆಲಿಕ್ಸ್ ಡಿಸೋಜಾ, ಬಿ.ಡಿ ಸುವರ್ಣ ಮತ್ತಿತರ ಮಹಾನೀಯರು ಸೇರಿಕೊಂಡು, ಹೊರನಾಡ ಬೃಹನ್ಮುಂಬಯಿನಲ್ಲಿ ಕನ್ನಡದ ಕಂಪು ಪಸರಿಸುವ ಯೋಚನೆಗನ್ನು ಮೈಗೂಡಿಸಿ ಶೈಕ್ಷಣಿಕ, ಆರೋಗ್ಯಭಾಗ್ಯದ ಸೇವೆ, ಸಂಸ್ಕೃತಿ, ಸಾಹಿತ್ಯ, ಕಲೆ, ಯಕ್ಷಗಾನಕ್ಕೆ ಪೆÇ್ರೀತ್ಸಾಹ ಇತ್ಯಾದಿಗಳ ಯೋಜನೆಗÀಳನ್ನು ಹಾಕಿಕೊಂಡರು. ಸಾಂತಾಕ್ರೂಜ್-ಕಲೀನಾ ಪರಿಸರದ ಕನ್ನಡಿಗರನ್ನು ಒಂದು ಗೂಡಿಸುತ್ತಾ ಪರಿಸರದ ಕನ್ನಡಿಗ ವಿವೇಕಿಗಳು, ಸುಪ್ರಜೆಗಳು, ಸುಪ್ರಭುಗಳು, ಚೆಲುವರು, ಕನ್ನಡಾಭಿಮಾನಿ ಅತ್ಯುಗ್ರರು, ಕನ್ನಡದ ಗಂಭೀರಚಿತ್ತರು ಒಗ್ಗೂಡಿ 1955ರಲ್ಲಿ `ವಕೋಲ ಮಿತ್ರ ಮಂಡಳಿ' ನಾಮಾಂಕಿತ ಸಂಸ್ಥೆ ಅಸ್ತಿತ್ವಕ್ಕೆ ತಂದರು. 1957ರಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ಎಂಬ ಹೆಸರಿನಿಂದ ಸೇವಾರಂಭಿಸಿ 1964ರಲ್ಲಿ ನೋಂದಾವಣಿ ಗೊಳಿಸಿದ ಈ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಮುಂಬಯಿವಾಸಿ ಕರ್ನಾಟಕದ ಜನತೆಯ ಪಾಲಿಗೆ ಮರೆಯಲಾಗದ ಮಹಾನ್ ಸಾಮ್ರಾಜ್ಯ ಕಟ್ಟಿಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.

      

 L V Amin                                Sujatha R.Shetty                                  Sudhakar Uchil

     

 Narayana Shetty                                         N.M Sanil                                           B. R Poonja

     

Gunapal Shetty Ikala                   B.Ravindra Amin                               Vanita Nonda.

ನಾವು ಹುಟ್ಟಿ ಬೆಳೆದ ಬಾಷೆ, ಸಂಸ್ಕೃತಿಯ ತವರೂರು ಕರ್ನಾಟಕ ಆದರೆ ಉದರ ಪೆÇೀಷಣೆಗಾಗಿ ಆಯ್ದ ಹೊರನಾಡು  ಮಹಾರಾಷ್ಟ್ರ. ಇಲ್ಲೂ ನಮ್ಮೆಲ್ಲರ ಹನುಮಶಕ್ತಿಯ ತವರು, ಚೈತನ್ಯದ ಜಲಪಾತ ಎಂದೇ ಬಿಂಬಿತ ಕರ್ನಾಟದ ರಾಜ್ಯದ ನೆಲಸಂಪತ್ತು ಉಳಿಸಿ ಬೆಳೆಸುತ್ತಾ ನಮ್ಮ ಕನ್ನಡ ಭಾಷೆಯ ಅಸ್ಮಿತೆ ಜಗಕ್ಕೆ ತೋರ್ಪಡಿಸಲು ಪ್ರೇರಕರಾದವರಲ್ಲಿ ಮುಂಬಯಿವಾಸಿ ಕನ್ನಡಿಗರು. ಇಲ್ಲಿನ ಕನ್ನಡಿಗರು ತಮ್ಮ ಸ್ವಸಾಧನೆಗಳಿಂದ ಕನ್ನಡದ ಸಮೃದ್ಧವಾದ ಇತಿಹಾಸ ಮತ್ತು ಭವ್ಯವಾದ ಪರಂಪರೆ ರೂಪಿಸಿ ನಿಷ್ಠಾವಂತ ಕನ್ನಡಿಗರಾಗಿ ಮೆರೆದÀವರು. ತಮ್ಮ ಬದುಕನ್ನು ರೂಪಿಸಿಕೊಳ್ಳುವ ಜೊತೆಜೊತೆಗೆ ಕನ್ನಡ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಕೀರ್ತಿಗೂ ಭಾಜನರಾಗಿದ್ದಾರೆ. ಅದಕ್ಕೆ ಸಾಕ್ಷಿಯಂತೆ ಸುಮಾರು ಆರು ದಶಕಗಳ ಹಿಂದೆ ಕರ್ನಾಟಕದ ಜನತೆಯನ್ನು ಒಗ್ಗೂಡಿಸಿ ಕಾರ್ಯಪ್ರವೃತ್ತವಾಗಿ ತನ್ನ ಸಾರ್ಥಕ ಸೇವೆಯೊಂದಿಗೆ ಕನ್ನಡದ ಉಜ್ವಲವಾದ ಸಂಸ್ಕೃತಿಯನ್ನು ಮಹಾನರದಾದ್ಯಂತ ಪಸರಿಸಿ ವಿಕಾಸಶೀಲವಾಗಿ ನಡೆದು ಕನ್ನಡದ ತವನಿಧಿ ಆಗಿ ಇಂದು ವಜ್ರಮಹೋತ್ಸವ ಸಡಗರದಲ್ಲಿ ಬೆಳಗುತ್ತಿದೆ. ಕರ್ಮಭೂಮಿ ಮಹಾರಾಷ್ಟ್ರದ ನೆಲದಲ್ಲೂ ಸಂಘದ ಹಾಲಿ ಅಧ್ಯಕ್ಷ ಎಲ್.ವಿ ಅಮೀನ್ ತನ್ನ ಸಾರಥ್ಯದಲ್ಲಿ ಎಲ್ಲರನ್ನೂ ಸಮನ್ವಯಗೊಳಿಸಿ ಸಂಘವನ್ನು ಮುನ್ನಡೆಸಿರುವುದು ಹೆಮ್ಮೆದಾಯಕ. ತಾಯಿ ಭುವನೇಶ್ವರಿ ಈ ಸಂಘವನ್ನು ಶತಮಾನಗಳತ್ತ ಮುನ್ನಡೆಸಲಿ ಎಂದೇ ಹಾರೈಕೆ.

ಕನ್ನಡ ಸಂಘ ಸಾಂತಾಕ್ರೂಜ್:
ಪ್ರಾರಂಭಿಕ ಹಂತದಲ್ಲಿ ಸಂಘದ ಶ್ರೇಯೋಭಿವೃದ್ಧಿ ಜೊತೆಗೆ ಕನ್ನಡದ ಏಳಿಗೆಗಾಗಿ ಶ್ರಮಿಸಿ ಕನ್ನಡಾಂಭೆಯ ಮಡಿಲಲ್ಲಿ ರಾರಾಜಿಸಿದ ಕನ್ನಡ ಸಂಘ ಸಾಂತಾಕ್ರೂಜ್, ಕನ್ನಡ ಧ್ಯೇಯದ ಚುಕ್ಕಾಣಿ ಹಿಡಿದ ಈ ಸಂಘದ ಪ್ರಜ್ಞಾವಂತ ಸದಸ್ಯರು ನ್ಯೂ ಇಂಗ್ಲೀಷ್ ನೈಟ್ ಹೈಸ್ಕೂಲ್ ಸ್ಥಾಪಿಸಿ ಅದನ್ನು ನ್ಯೂ ಮೋಡೆಲ್ ಹೈಸ್ಕೂಲ್ ಕಟ್ಟಡದಲ್ಲಿ ಕೆಲವು ವರ್ಷ ನಡೆಸಿಕೊಂಡು ಬಂದಿರುವರು. ಸುಮಾರು ಎಂಟು ಶಿಕ್ಷಕರ ಸಹಾಯದಿಂದ ಅಂದಾಜು 250 ವಿದ್ಯಾಥಿರ್sಗಳು ವಿದ್ಯಾದಾನ ಪಡೆಯುತ್ತಿದ್ದರೂ ಕ್ರಮೇಣ ಆಥಿರ್sಕ ಮುಗ್ಗಟ್ಟಿನಿಂದ ಶಾಲೆ ನಡೆಸಲು ಅಸಾಧ್ಯವಾಯಿತು. ಅಲ್ಲಿನ ವಿದ್ಯಾಥಿರ್sಗಳ ವಿಧ್ಯಾಭ್ಯಾಸ ಕುಂಠಿತ ಆಗಬಾರದು ಎಂದು ಮಹಾನಗರ ಪಾಲಿಕಾ ಕನ್ನಡ ಶಾಲೆಯಲ್ಲಿ ವಿಲೀನಗೊಳಿಸಿ ವಿದ್ಯಾಥಿರ್sಗಳಿಗೆ ಪಠ್ಯಪುಸ್ತಕ ಮತ್ತು ಇತರ ಪರಿಕರಗಳನ್ನು ಒದಗಿಸುವುದರ ಜೊತೆಗೆ ಕನ್ನಡ ಸಂಘದ ವತಿಯಿಂದ ಇತರ ವಿದ್ಯಾಥಿರ್sಗಳಿಗೂ ಪಠ್ಯಪುಸ್ತಕ, ಸಮವಸ್ತ್ರ, ಇತರ ಪರಿಕರಗಳನ್ನು ಉಚಿತವಾಗಿ ನೀಡುತ್ತಾ, ಓರ್ವ ಶಿಕ್ಷಕಿಯ ವೇತನವನ್ನೂ ಸಂಘವೇ ಬರಿಸುತ್ತಾ ಪುಣ್ಯ ಕಟ್ಟಿಕೊಂಡಿತು.

ಈ ಸಂಘದ ಧ್ಯೇಯೊದ್ದೇಶದಂತೆ ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿಯೂ ಅನನ್ಯ ವಾದ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಭೀಕರ ಕಾಯಿಲೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ವೈದ್ಯಕೀಯ ನೆರವು ,ಕ್ಷಾಮ ಪೀಡಿತ ಪ್ರದೇಶದ ರೈತರಿಗೆ ಆಥಿರ್sಕ ನೆರವು, ಭೂಕಂಪ ಪೀಡಿತರಿಗೆ ನೆರವು ಹೀಗೆ ಬಡಪಾಯಿಗಳ ಅರ್ಜಿಗಳನ್ನು ಸ್ವೀಕರಿಸಿ ತನ್ನಿಂದಾದ ನೆರವು ನೀಡಿದೆ. 2005ರಲ್ಲಿ ಮುಂಬಯಿನಲ್ಲಿ ಸುರಿದ ಕುಂಭದ್ರೋಣ ಮಳೆಯಿಂದ ಸಾಂತಾಕ್ರೂಜ್ ಪರಿಸರ ಜಲಾವೃತ್ತವಾಗಿ ಅನೇಕ ಬಡಕುಟುಂಬಗಳು ನೆರೆಪೀಡಿತರಾಗಿದ್ದು, ನಿರಾಶ್ರಿತರಿಗೆ, ಸಂಘದ ಕುಟುಂಬಗಳಿಗೆ ಬಟ್ಟೆಬರೆ, ದವಸ ಧಾನ್ಯ, ಆಹಾರವÀನ್ನು ಪೂರೈಸಿ ಮಾನವೀಯ ನೆಲೆಯಲ್ಲಿ ಶ್ಲಾಘನೀಯ ಕಾರ್ಯ ನಿರ್ವಹಿಸಿದೆ.

ಸಂಘದ ಶ್ರೇಯೋಭಿಲಾಷಿ, ಮಾಜಿ ಪ್ರಧಾನ ಕಾರ್ಯದರ್ಶಿ ದಿ| ನಾಗಪ್ಪ ಕಂಡ್ಲೂರ್ ಸಂಘದ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದವರು. ಅದರಸವಿನೆನಪಿಗಾಗಿ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆಗಳನ್ನು ಆಯೋಜಿಸಿ ಚಲಿತ ಫಲಕವನ್ನು (ರೋಲಿಂಗ್ ಶಿಲ್ಡ್) ನೀಡುತ್ತಾ ಬಂದಿದೆ. ಪ್ರಾರಂಭಿಕ ಹಂತದಲ್ಲಿ ಕನ್ನಡ ಸಂಘದ ಸಭೆಕಲಾಪಗಳನ್ನು ಅಂದಿನ ಅಧ್ಯಕ್ಷ ಫೆಲಿಕ್ಸ್ ಡಿಸೋಜಾ ಅವರ ಸ್ವಗೃಹದಲಿ ನಡೆಸಲಾಗುತಿತ್ತು. ಸ್ವಂತ ಕಚೇರಿಗೆ ಸ್ಥಳಾವಕಾಶಕ್ಕಾಗಿ ಪ್ರಯತ್ನಿಸಿದರೂ ಆಥಿರ್sಕ ಮುಗ್ಗಟ್ಟಿನಿಂದ ಅದು ಕಾರ್ಯಗತಗೊಳ್ಳಲಿಲ್ಲ. ಆದಾಗ್ಯೂ ಕನ್ನಡ ಸಂಘ ಸಾಂತಾಕ್ರೂಜ್ ತನ್ನ ಚಟುವಟಿಕೆಗಳನ್ನು ಕುಂಠಿತ ಗೊಳಿಸದೇ ಮುನ್ನಡೆಯಿತು. ತನ್ನ ಪರಿಮಿತಿಯಲ್ಲಿ ಅನೇಕ ಜನಪರ, ಕನ್ನಡಪರ ಯೋಜನೆಗಳನ್ನು ಹಮ್ಮಿಕೊಂಡು ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವಲ್ಲಿ ಯಶಕಂಡಿದೆ. ಕರ್ನಾಟಕದ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸ್ಥಾಪನೆಗೊಂಡ ಕನ್ನಡ ಸಂಘ ಅದೊಂದಕ್ಕೇ ಅಂಟಿಕೊಳ್ಳದೆ ವೈವಿಧ್ಯಮಯ ಚಟುವಟಿಕೆಗಳತ್ತ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಸ್ವಾತಂತ್ರ ್ಯ ದಿನಾಚರಣೆ, ಪ್ರಜಾಪ್ರಭುತ್ವ ದಿನಾಚರಣೆ, ಶೈಕ್ಷಣಿಕ ಚಟುವಟಿಕೆಗಳನ್ನು ಆಚರಿಸುತ್ತಾ ಬಂದಿದೆ. ಇದೆಲ್ಲವೂ ನಿಸ್ವಾರ್ಥ ಸಮಾಜಸೇವಕರ ನೆರವಿನಿಂದ ಯಶಸ್ವಿ ಆಗಿದೆ ಎಂದೇಳುತ್ತಾರೆ ಸಂಸ್ಥೆಯ ರೂವಾರಿಗಳು.

ಕಳೆದ ಅರ್ವತ್ತು ವರ್ಷಗಳಲ್ಲಿ ಸಂಘದ ಅಧ್ಯಕ್ಷರಾಗಿ ಲೋಕಯ್ಯ ಶೆಟ್ಟಿ, ಕೆ.ಬಿ ಜೈನ್, ಎಂ.ಆರ್ ಬಸ್ರೂರು, ಬಿ.ಪಿ ಅಮನ್, ಫೆಲಿಕ್ಸ್ ಡಿಸೋಜಾ ಮತ್ತು ಹಾಲಿ ಅಧ್ಯಕ್ಷರಾಗಿ ಎಲ್.ವಿ ಅವಿೂನ್ ಸೇವೆ ಸಲ್ಲಿಸಿ ಸಂಘವನ್ನು ಮುನ್ನಡಿಸಿದ್ದಾರೆ.

1996ರಲ್ಲಿಸಂಘದ 38ನೇ ವಾರ್ಷಿಕೋತ್ಸವಕ್ಕೆ ಸ್ಥಾನೀಯ ಪ್ರಸಿದ್ಧ ಸಮಾಜಸೇವಕ, ಕನ್ನಡಪ್ರೇಮಿ, ಉದ್ಯಮಿ ಎಲ್.ವಿ ಅಮೀನ್ ಅವರನ್ನು ವಾರ್ಷಿಕೋತ್ಸವ ಸಮಿತಿ ಕಾರ್ಯಾಧ್ಯಕ್ಷರನ್ನಾಗಿ ಮತ್ತು ಸ್ಮರಣಸಂಚಿಕೆ ಕಾರ್ಯಾಧ್ಯಕ್ಷರನ್ನಾಗಿ ಉದ್ಯಮಿ ನಾರಾಯಣ ಶೆಟ್ಟಿ ಅವರನ್ನು ಆಯ್ಕೆಗೊಳಿಸಲಾಗಿತ್ತು. ಅವರ ನೇತೃತ್ವದಲ್ಲಿ 1996ರ ಫೆ.25ರಂದು ಗಾಲಾ ಆಡಿಟೋರಿಯಂನಲ್ಲಿ ವಾರ್ಷಿಕೋತ್ಸವವು ಅದ್ದೂರಿಯಿಂದ ನಡೆಸಲ್ಪಟ್ಟಿತು. ಇವರ ಸೇವಾ ದಕ್ಷತೆ, ಕಾರ್ಯವೈಖರಿ ಗುರುತಿಸಿದ ಕನ್ನಡ ಸಂಘದ ಸದಸ್ಯರು ಎಲ್.ವಿ ಅಮೀನ್ ಅವರನ್ನು ಸಂಘದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ನೇಮಿಸಿತು. ನಂತರದ ದಿನಗಳಲ್ಲಿ ಎಲ್.ವಿ ಅಮೀನ್ ಸಾರಥ್ಯದಲ್ಲಿ ಕನ್ನಡ ಸಂಘವು ಹೊಸ ಆಯಾಮವನ್ನೇ ಪಡೆದು ವೈಶಿಷ್ಟ ್ಯಪೂರ್ಣವಾಗಿ ಬೆಳೆಯಿತು. ಸಂಘಕ್ಕೆ ಸ್ವಂತಿಕೆಯ ಕಛೇರಿಯನ್ನು ರೂಪಿಸಿ 2001 ಡಿ.16.ರಂದು ಮಾನ್ಯ ಜಯ ಸಿ.ಸುವರ್ಣ ಅವರ ದಿವ್ಯ ಹಸ್ತದಿಂದ ಸೇವಾರ್ಪಣೆಗೊಳಿಸಿ ಘನ ಕಾರ್ಯವನ್ನು ಸಿದ್ಧಿಸಿದರು. ಆ ಮೂಲಕ ಕನ್ನಡ ಸಂಘದ ಅನೇಕ ವರ್ಷಗಳ ಕನಸು ನನಸು ಗೊಳಿಸಿದರು. ಮತ್ತೆ ಕನ್ನಡ ಸಂಘ ಸ್ವಂತ ಕಚೇರಿಯಲ್ಲಿ ಸಕ್ರಿಯವಾಗಿ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿ ತನ್ನದೇ ಆದ ಸ್ವಂತಿಕೆಯ ಸ್ಥಾನಮಾನಕ್ಕೆ ಭಾಜನವಾಯಿತು. ಅಂತೆಯೇ ಎಲ್.ವಿ ಅಮೀನ್ ಅವರ ನೇತೃತ್ವದಲ್ಲಿಯೇ ಸಂಘವು 25.02.1996ರಲ್ಲಿ ಗಾಲಾ ಸಭಾಗೃಹದಲ್ಲಿ ಸಂಘದ 38ರ ಸಂಭ್ರಮದಲ್ಲೇ ರಜತೋತ್ಸವ ಮತ್ತು 16.12.2007 ರಂದು ಬಿಲ್ಲವ ಭವನದಲ್ಲಿ ಸುವರ್ಣ ಮಹೋತ್ಸವ ಸಂಭ್ರಮಿಸಿತು. ತನ್ನ ಕಾಲಾವಧಿಯಲ್ಲಿ ಶಿಕ್ಷಣ ಮತ್ತು ಸಂಸ್ಕೃತಿಗೆ ಹೆಚ್ಚು ಮಹತ್ವ ನೀಡಿದ ಎಲ್.ವಿ ಅಮೀನ್ ಸಾವಿರಾರು ವಿದ್ಯಾಥಿರ್sಗಳಿಗೆ ಆಥಿರ್sಕ ಸಹಾಯಸ್ತ ಚಾಚಿದರು. ತೀರ ಬಡ ವಿದ್ಯಾಥಿರ್sಗಳನ್ನು ದತ್ತು ಸ್ವೀಕಾರ ಮಾಡಿ ಅವರ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಸಂಘವೇ ಭರಿಸುವ ವ್ಯವಸ್ಥೆ ಮಾಡಿದರು. ಸಂಘದ ಕಚೇರಿಯನ್ನೂ ಹೊಸ ವಿನ್ಯಾಸದೊಂದಿಗೆ ಸಜ್ಜುಗೊಳಿಸಿ ಸಾಮಾಜಿಕ ಕಾರ್ಯಕ್ಕೆ ಅನುಕೂಲ ಕಲ್ಪಿಸಿಕೊಟ್ಟರು.

ಇತ್ತೀಚಿಗಿನ ವರ್ಷಗಳಲ್ಲಿ ಸಂಘದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ ್ಯ ನೀಡಿ ಮಹಿಳೆಯರನ್ನು ಪೆÇ್ರೀತ್ಸಹಿಸಿದ್ದು, ತುಂಬಾ ಆರೋಗ್ಯಕರ ಬೆಳವಣಿಗೆ. ಹೆಣ್ಣು ಮನೆ-ಸಮಾಜದ ಕಣ್ಣು. ಅವಳು ಉಭಯ ಕುಲದೀಪಿಕೆ ಅದಕ್ಕಾಗಿಯೇ ಪ್ರಾಜ್ಞರು ಗೃಹಂ ಗೃಹ ಮಿತ್ಯಾಹು ಗೃಹಿಣಿ ಗೃಹ ಮುಟ್ಟ ್ಯತೇ ಎನ್ನುತ್ತಾ ಸಂಘದಲ್ಲಿ ಮಹಿಳೆಯ ಪ್ರಾಮುಖ್ಯತೆ, ಪಾತ್ರವನ್ನು ಹೆಚ್ಚಿಸಿಕೊಂಡರು. ಮಹಿಳೆಯರೂ ಸ್ವಪ್ರೇರಿತರಾಗಿ ಸಂಘದ ಎಲ್ಲಾ ಚಟುವಟಿಕೆಗಳÀಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು ಕಾರ್ಯಕಾರಿ ಸಮಿತಿಯಲ್ಲೂ ಪದಾಧಿಕಾರಿಗಳಾಗಿ ಅವಿರತ ಸೇವೆ ಸಲ್ಲಿಸುತ್ತಿದ್ದಾರೆ.

ದಕ್ಷ ಮತ್ತು ನಿಸ್ವಾರ್ಥ ಸೇವೆಗಳ ಫಲಾನುಭಗಳಿಂದ ಕನ್ನಡ ಸಂಘ ಸಾಂತ್ರಾಕ್ರೂಜ್ ಇದೀಗ ಅರ್ವತ್ತರ ಸಂಭ್ರಮಕ್ಕೆ ಸಜ್ಜಾಗಿ ವಜ್ರಮಹೋತ್ಸವ ಆಚರಣೆಯ ಮಹತ್ತರ ಕಾಲಘಟ್ಟದಲ್ಲಿ ಸಟೆದು ನಿಂತಿದೆ. ಅದೂ ಎಲ್.ವಿ ಅಮೀನ್ ಅವರ ನಾಯಕತ್ವದಲ್ಲೇ ಬೆಳ್ಳಿಹಬ್ಬ, ಸ್ವರ್ಣಹಬ್ಬ ಆಚರಿಸಿ ಇದೀಗ ವಜ್ರಮಹೋತ್ಸವಕ್ಕೆ ಅಣಿಯಾಗಿರುವುದು ಯೋಗಾನು ಯೋಗ. ಅಮೀನ್ ಅವರ ಅಧ್ಯಕ್ಷತೆಯಲ್ಲಿ ಸಂಘವು ಅರ್ವತ್ತರ ಸಂಭ್ರಮ ಆಚರಿಸುತ್ತಿರುವುದು ಸಾಂತಾಕ್ರೂಜ್ ಪರಿಸರದ ಕನ್ನಡ ಬಂಧು-ಬಾಂಧವರಿಗೆ ಒಂದು ವಿಶಿಷ್ಟ ಅನುಭವ ಮತ್ತು ಉತ್ಸಹದಾಯಕ ಎಂದಾಗಿಸಿದೆ.

ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಕನ್ನಡರಾಜ್ಯೋತ್ಸವ ಅದ್ದೂರಿಯಿಂದ ನಡೆದಿದೆ. ರಾಜ್ಯೋತ್ಸವಕ್ಕೆ ಮುಂಬಯಿ ಕನ್ನಡ ಸಂಘ ಸಂಸ್ಥೆಗಳ ಕೊಡುಗೆ ಬಹಳಷ್ಟಿದೆ. ಆದುದರಿಂದಲೇ ಮುಂಬಯಿಯಲ್ಲಿ ಕನ್ನಡ ವಿಪುಲವಾಗಿ ಸಮೃದ್ಧವಾಗಿ ಬೆಳೆಯುತ್ತಿದೆ. ಕನ್ನಡಿಗರು ಎಲ್ಲೇ ಇರಲಿ ಕನ್ನಡವನ್ನು ಮರೆಯದೆ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಕೈ ಜೋಡಿಸುವ ಎಂದು ಆಶಿಸುವ ಕನ್ನಡ ಸಂಘ ಸಾಂತಾಕ್ರೂಜ್ ಕಾರ್ಯಕಾರಿ ಸಮಿತಿಯು ಮಹಾನಗರದಲ್ಲಿನ ಕನ್ನಡ ಮನಸ್ಸುಸುಗಳೆಲ್ಲಾ ಈ ಉತ್ಸವದಲ್ಲಿ ಸಕ್ರೀಯರಾದರೆ ವಜ್ರೋತ್ಸವ ವಿಜೃಂಭಣೆಯಿಂದ ಜರಗುವುದರÀಲ್ಲಿ ಸಂಶಯವಿಲ್ಲ ಎನ್ನುತ್ತಿದ್ದಾರೆ. ಸಿರಿಗನ್ನಡಂ ಗೆಲ್ಗೆ...

ಕನ್ನಡ ಸಂಘ ಸಾಂತಾಕ್ರೂಜ್ ತನ್ನ ವಜ್ರಮಹೋತ್ಸವ ಸಮಾರಂಭವನ್ನು ಇದೇ ಡಿ.16ರ ಆದಿತ್ಯವಾರ ಬೆಳಿಗ್ಗೆ 9.00 ಗಂಟೆಯಿಂದ ರಾತ್ರಿ 9.00 ಗಂಟೆ ತನಕ ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್‍ನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ದಿನಪೂರ್ತಿಯಾಗಿಸಿ ಆಚರಿಸÀಲಿದೆ.

ಸಂಘದ ಪ್ರಸಕ್ತ ಪದಾಧಿಕಾರಿಗಳು
ಕನ್ನಡ ಸಂಘ ಸಾಂತಾಕ್ರೂಜ್ ಇದರ (2001 ರಿಂದ ಏಳÀನೇ ಅವಧಿಗೆ) ಎಲ್.ವಿ ಅಮೀನ್ ಅಧ್ಯಕ್ಷ ಆಗಿ ಶ್ರಮಿಸುತ್ತಿದ್ದಾರೆ. ಗುಣಪಾಲ ಶೆಟ್ಟಿ ಐಕಳ (ಉಪಾಧ್ಯಕ್ಷ) ಸುಜತಾ ಆರ್.ಶೆಟ್ಟಿ (ಗೌ| ಪ್ರ| ಕಾರ್ಯದರ್ಶಿ) ಸುಧಾಕರ್ ಉಚ್ಚಿಲ್ (ಗೌ| ಪ್ರ| ಕೋಶಾಧಿಕಾರಿ) ಚಂದ್ರಹಾಸ ಜೆ.ಕೋಟ್ಯಾನ್ (ಜೊತೆ ಕಾರ್ಯದರ್ಶಿ), ದಿನೇಶ್ ಬಿ.ಅವಿೂನ್ (ಜೊತೆ ಕೋಶಾಧಿಕಾರಿ) ಆಗಿರುವರು.

ಗೋವಿಂದ ಆರ್.ಬಂಗೇರಾ, ಸುಮಾ ಎಂ.ಪೂಜಾರಿ, ಶಾಲಿನಿ ಜಿ.ಶೆಟ್ಟಿ, ಆರ್.ಪಿ ಹೆಗ್ಡೆ (ಕಾರ್ಯಕಾರಿ ಸಮಿತಿ ಸದಸ್ಯರು), ನಾರಾಯಣ ಎಸ್.ಶೆಟ್ಟಿ, ಬಿ.ಆರ್ ಪೂಂಜಾ, ಎನ್.ಎಂ ಸನೀಲ್ (ಸಲಹಾ ಸಮಿತಿ ಸದಸ್ಯರು), ಶಿವರಾಮ ಎಂ.ಕೋಟ್ಯಾನ್, ಲಿಂಗಪ್ಪ ಬಿ.ಅವಿೂನ್, ವಿಜಯಕುಮಾರ್ ಕೆ.ಕೋಟ್ಯಾನ್, ಉಷಾ ವಿ.ಶೆಟ್ಟಿ, ಹರೀಶ್ ಜೆ.ಪೂಜಾರಿ, ಸುಜತಾ ಸುಧಾಕರ್ ಉಚ್ಚಿಲ್ (ವಿಶೇಷ ಆಮಂತ್ರಿತ ಸದಸ್ಯರು), ರಾಜಶೇಖರ್ ಎ.ಅಂಚನ್ (ಆಂತರಿಕ ಲೆಕ್ಕ ಪರಿಶೋಧಕ), ಹೆಚ್.ಡಿ ಪೂಜಾರಿ (ಬಾಹ್ಯ ಲೆಕ್ಕ ಪರಿಶೋಧಕ) ಆಗಿದ್ದಾರೆ. ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷರಾಗಿ ಬನ್ನಂಜೆ ರವೀಂದ್ರ ಅವಿೂನ್ ಮತ್ತು ಕಾರ್ಯದರ್ಶಿ ಆಗಿ ಶಕೀಲಾ ಪಿ.ಶೆಟ್ಟಿ, ವನಿತಾ ವೈ.ನೋಂದ (ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ), ಲಕ್ಷ್ಮೀ ಎನ್.ಕೋಟ್ಯಾನ್ (ಕಾರ್ಯದರ್ಶಿ) ಆಗಿ ಶ್ರಮಿಸುತ್ತಿದ್ದಾರೆ.

ವಜ್ರಮಹೋತ್ಸವ ಸಮಿತಿ:
ಸಂಘದ ಪ್ರಸಕ್ತ ಎಲ್ಲಾ ಪದಾಧಿಕಾರಿಗಳು, ಸದಸ್ಯರನ್ನು ಒಳಗೊಂಡು ವಜ್ರಮಹೋತ್ಸವ ಸಮಿತಿ ರಚಿಸಲಾಗಿದ್ದು, ನಾರಾಯಣ ಎಸ್.ಶೆಟ್ಟಿ ಮತ್ತು ಎನ್.ಎಂ ಸನಿಲ್ (ಗೌರವಾಧ್ಯಕ್ಷರುಗಳು) ಹಾಗೂ ಬಿ.ಆರ್ ಪೂಂಜ (ಕಾರ್ಯಧ್ಯಕ್ಷರು) ವಜ್ರಮಹೋತ್ಸವ ಸಂಭ್ರಮ ಸಮಿತಿ, ಗುಣಪಾಲ ಶೆಟ್ಟಿ ಐಕಳ (ಕಾರ್ಯಾಧ್ಯಕ್ಷ ರು, ನಿಧಿ ಸಂಗ್ರಹ ಸಮಿತಿ), ಬನ್ನಂಜೆ ರವೀಂದ್ರ ಅವಿೂನ್ (ಕಾರ್ಯಾಧ್ಯಕ್ಷರು), ಗೋವಿಂದ ಆರ್.ಬಂಗೇರಾ, ಆರ್.ಪಿ ಹೆಗ್ಡೆ, ವಿಜಯ ಕೋಟ್ಯಾನ್ (ಕಾರ್ಯಾದರ್ಶಿಗಳು) ಸ್ಮರಣಸಂಚಿಕೆ ಸಮಿತಿ, ವನಿತಾ ವೈ.ನೋಂದ (ಕಾರ್ಯಾಧ್ಯಕ್ಷೆ) ಮತ್ತು ಲಕ್ಷ್ಮೀ ಎನ್.ಕೋಟ್ಯಾನ್ (ಕಾರ್ಯದರ್ಶಿ) ಕಾರ್ಯಕ್ರಮ ಸಮಿತಿ ಜವಾಬ್ದಾರಿ ನಿಭಾಯಿಸಲಿದ್ದಾರೆ.

ವಜ್ರಮಹೋತ್ಸವ ಸಂಭ್ರಮ ಸಮಿತಿಯಲ್ಲಿ ಸಿಎ| ಐ.ಆರ್ ಶೆಟ್ಟಿ, ಡಾ| ಆರ್.ಕೆ ಶೆಟ್ಟಿ, ಜಗದೀಶ್ ಅಮನ್, ಪ್ರಕಾಶ್ ಸಿ.ಶೆಟ್ಟಿ, ಡಾ| ಆರ್.ಕೆ ಶೆಟ್ಟಿ, ಶಿವರಾಮ ಎಂ.ಕೋಟ್ಯಾನ್, ಚಾರ್ಲ್ಸ್ ಡಿಸೋಜಾ, ಸುಂದರ್ ಎಂ.ಶೆಟ್ಟಿ, ಸುರೇಂದ್ರ ಎ.ಪೂಜಾರಿ, ಬಿ.ಆರ್ ರಾವ್, ಕೆ.ಎಂ ಸುವರ್ಣ, ವಿ.ಕೆ ಶೆಟ್ಟಿ, ಸುಧಾಕರ ಶೆಟ್ಟಿ ಮುಂಡ್ಕೂರು, ಜಯಶಂಕರ ಶೆಟ್ಟಿ, ವಾಮನ ಡಿ.ಪೂಜಾರಿ, ಸದಾನಂದ ಸಫಲಿಗ, ಸದಾನಂದ ಜಿ.ಶೆಟ್ಟಿ, ಎಸ್.ಡಿ ಅಮೀನ್, ಮೋಹನ್‍ದಾಸ್ ಎಸ್.ಶೆಟ್ಟಿ, ಪ್ರಕಾಶ್ ಕುಮಾರ್, ಯೋಗೇಶ್ ಶೆಟ್ಟಿ, ಸಿಎ| ಸುನೀಲ್ ಕೆ.ಶೆಟ್ಟಿ, ಬಿ.ಎನ್ ಶೆಟ್ಟಿ, ಸಿಎ| ಪ್ರಕಾಶ್ ಶೆಟ್ಟಿ, ಭುಜಂಗ ಆರ್.ಶೆಟ್ಟಿ, ಜಗದೀಶ್ ಅವಿೂನ್, ಪ್ರಸನ್ನ ಶೆಟ್ಟಿ, ಲೀಲಾ ಎಸ್.ಸಾಲ್ಯಾನ್ ಸೇರಿದಂತೆ ಸದಸ್ಯರನೇಕರು ಸೇವಾ ನಿರತರಾಗಿದ್ದಾರೆ.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here