Tuesday 19th, February 2019
canara news

ದುಬಾಯಿನಲ್ಲಿ ನಡೆಯಲಿದೆ ರಾಮಕ್ಷತ್ರಿಯ ಸಮಾಜ ಬಾಂಧವರ ವಿಶ್ವದ ಪ್ರಪ್ರಥಮ ಜಾಗತಿಕ `ಕ್ಷಾತ್ರ ಸಂಗಮ - 2019'

Published On : 05 Dec 2018   |  Reported By : Rons Bantwal


ಮುಂಬಯಿ, ಡಿ.04: ಜಗತ್ತಿನ ಎಲ್ಲೆಡೆ ಪಸರಿಕೊಂಡು ಸೇವಾ ನಿರತ ರಾಮಕ್ಷತ್ರಿಯ ಸಮಾಜ ಬಾಂಧವರ ವಿಶ್ವ ಸಮ್ಮೇಳನ `ಕ್ಷಾತ್ರ ಸಂಗಮ-2019' ಜಾಗತಿಕ ಸಮಾವೇಶವನ್ನು 2019ರ ಸಾಲಿನ ಏಪ್ರಿಲ್ ಕೊನೆಯ ವಾರದಲ್ಲಿ ದುಬೈನಲ್ಲಿ ಆಯೋಜಿಸಲಾಗುವುದು ಎಂದು ವಿಶ್ವ ಕ್ಷಾತ್ರ ಸಂಗಮ - 2019 ದುಬೈ ಇದರ ಮುಖ್ಯ ಸಂಘಟಕ, ಹೆಸರಾಂತ ಸಾಮಾಜಿಕ ಕಾರ್ಯಕರ್ತ ಹಾಗೂ ಕರ್ನಾಟಕ ಎನ್‍ಆರ್‍ಐ ಫೆÇೀರಂ ಇದರ ಪ್ರಧಾನ ಕಾರ್ಯದರ್ಶಿ ಪ್ರಬಾಕರ್ ಅಂಬಲತರೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Prabhakar Ambalthere

Prabhakar Ambalthere

ರಾಮಕ್ಷತ್ರಿಯರ ಈ ಮಹಾಸಮ್ಮೇಳನಕ್ಕೆ ಭಾರತ ದೇಶದಾದ್ಯಂತ ಸೇರಿದಂತೆ ಗಲ್ಫ್ ರಾಷ್ಟ್ರಗಳು, ವಿದೇಶಗಳಲ್ಲಿ ನೆಲೆಸಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿ ಮಿಂಚಿದ ಪ್ರತಿಭಾನ್ವಿತರು, ಸಾಧಕರು, ಗಣ್ಯರನೇಕರು ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದಲ್ಲಿ ರಾಮಕ್ಷತ್ರಿಯರ ಪರಂಪರಿಕಾ, ಸಂಪ್ರದಾಯಿಕ ಸಂಸ್ಕೃತಿ-ಸಂಸ್ಕಾರ, ಕಲೆಗಳ ಅನಾವರಣ ಗೊಳಿಸಿ ವೈವಿಧ್ಯಮಯ ಸಾಂಸ್ಕೃತಿಕ ವೈಭವ ಮೇಳೈಸಲಿದೆ. ವೈವಿಧ್ಯತೆಗಳೊಂದಿಗೆ ಆಯೋಜಿಸಲ್ಪಡುವ ಸಮಾವೇಶದಲ್ಲಿ ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ನ್ನು ಹಮ್ಮಿಕೊಳ್ಳಲಾಗುತ್ತಿದ್ದು ಸಮಾಜ ಬಾಂಧವರಿಗೆ ತಮ್ಮ ಪ್ರತಿಭಾನ್ವೇಷಣೆ ಸೂಕ್ತ ವೇದಿಕೆ ಒದಗಿಸಲಾಗುವುದು. ಭವ್ಯ ಸಮಾರಂಭ ವೇದಿಕೆಯಲ್ಲಿ ಸಮಾಜದ ಸಾಧಕರಿಗೆ ಸನ್ಮಾನ, ಸತ್ಕಾರಗಳೊಂದಿಗೆ ಸನ್ಮಾನಿಸಿ ಗೌರವಿಸಲಾಗುವುದು .

ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತ ಪಾಲ್ಗೊಳ್ಳುವ ರಾಮಕ್ಷತ್ರಿಯ ಪ್ರತಿನಿಧಿಗಳಿಗೆ ವೀಸಾ, ಉಳಕೊಳ್ಳುವ ವ್ಯವಸ್ಥೆ ಜೊತೆಗೆ ಪ್ರವಾಸೋದ್ಯಮ ಪಯಣವಾಗಿಸಿ ದುಬೈ ಪ್ರವಾಸಕ್ಕೂ ಅವಕಾಶವಿದೆ. ಆಸಕ್ತ ರಾಮಕ್ಷತ್ರಿಯ ಬಂಧುಗಳು ತಮ್ಮ ಹೆಸರುಗಳನ್ನು ತತ್‍ಕ್ಷಣವೇ ನೋಂದಣಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇ-ಮೇಯ್ಲ್ ಐಡಿpambalthere@gmail.com ಅಥವಾ ಶೋಭಾ ಅಂಬಲತರೆ (ಸಂಪರ್ಕ ಸಂಖ್ಯೆ 09945850116) ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ವಿದೇಶದಲ್ಲಿ ಆಯೋಜಿಸುವ ಪ್ರಪ್ರಥಮ ವಿಶ್ವ ಕ್ಷಾತ್ರ ಸಂಗಮ ಇದಾಗಲಿದ್ದು ಸಮ್ಮೇಳನದ ದಿನಾಂಕ ಹಾಗೂ ಹೆಚ್ಚಿನ ಮಾಹಿತಿಗಳ ವಿವರಗಳನ್ನು ಶೀಘ್ರವೇ ತಿಳಿಸಲಾಗುವುದು. ಆ ಪ್ರಯುಕ್ತ ದೇಶವಿದೇಶಗಳಲ್ಲಿ ವಿಶೇಷವಾಗಿ ಕರ್ನಾಟಕ ರಾಜ್ಯದಾದ್ಯಂತ ನೆಲೆಯಾದ ರಾಮಕ್ಷತ್ರಿಯ ಬಾಂಧವರು, ರಾಮಕ್ಷತ್ರಿಯ ಸಮಾಜದ ಎಲ್ಲಾ ಸಂಘ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರು ಸಕ್ರೀಯರಾಗಿ ಪಾಲ್ಗೊಳ್ಳುವಂತೆ ಹಾಗೂ ಸ್ವಜಾತಿ ಬಾಂಧÀವರು ಅತ್ಯಾಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶಕ್ಕೆ ಸಂಪೂರ್ಣ ಬೆಂಬಲ ನೀಡಿ ಯಶಸ್ಸಿಗೆ ಸಹಕರಿಸುವಂತೆ ಸಂಘಟನಾ ಸಮಿತಿ ಮುಖ್ಯಸ್ಥರು ವಿನಂತಿಸಿದ್ದಾರೆ.

 

 
More News

  ಚಾರ್‍ಕೋಪ್ ಕನ್ನಡಿಗರ ಬಳಗದ ಕಾರಂತೋತ್ಸವ-ಸದಾನಂದ ಸುವರ್ಣ ದತ್ತಿ ಕಾರ್ಯಕ್ರಮ
ಚಾರ್‍ಕೋಪ್ ಕನ್ನಡಿಗರ ಬಳಗದ ಕಾರಂತೋತ್ಸವ-ಸದಾನಂದ ಸುವರ್ಣ ದತ್ತಿ ಕಾರ್ಯಕ್ರಮ
ಹವ್ಯಕ ವೆಲ್ಫೇರ್ ಟ್ರಸ್ಟ್‍ನಿಂದ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-2019' ಪ್ರದಾನ
ಹವ್ಯಕ ವೆಲ್ಫೇರ್ ಟ್ರಸ್ಟ್‍ನಿಂದ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-2019' ಪ್ರದಾನ
ಬಿಎಸ್‍ಕೆಬಿಎ ಸಂಸ್ಥೆಯಿಂದ ರಂಗೇರಿದ ಶಂಕರ್ ಮಹಾದೇವನ್ ಸಂಗೀತ ರಸಮಂಜರಿ
ಬಿಎಸ್‍ಕೆಬಿಎ ಸಂಸ್ಥೆಯಿಂದ ರಂಗೇರಿದ ಶಂಕರ್ ಮಹಾದೇವನ್ ಸಂಗೀತ ರಸಮಂಜರಿ

Comment Here