ಮುಂಬಯಿ, ಡಿ.07: ಎಕೊನೋಮಿಕ್ ಗ್ರೋಥ್ ಸೊಸೈಟಿ ಆಫ್ ಇಂಡಿಯಾ ದೆಹಲಿ ಸಂಸ್ಥೆ ಕೊಡಮಾಡುವ `ಗೋಲ್ಡನ್ ಇಮೇಜ್ ಆಫ್ ಏಷ್ಯಾ ಇಂಟರ್ನೇಶÀನಲ್' ಪ್ರಶಸ್ತಿಯನ್ನು ಮಾರ್ಕ್ಎಟ್ ಇ-ಕಾಂ ಸೊಲ್ಯುಶನ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಆಶಾ ಶಿವಾನಂದ ಶೆಟ್ಟಿ ಆತ್ತಾವರ ಇವರಿಗೆ ಪ್ರದಾನಿಸಿ ಗೌರವಿಸಿತು.
ಇತ್ತೀಚೆಗೆ ದುಬೈ ಬರ್ದುಬೈ ಇಲ್ಲಿನ ಹೊಲಿಡೇ ಇನ್ ಹೊಟೇಲು ಸಭಾಗೃಹಲ್ಲಿ ನಡೆದ `ಇಂಟರ್ ನ್ಯಾಶನಲ್ ಇಂಟಿಗ್ರೇಶನ್ ಆಂಡ್ ವಲ್ಡ್ಫೀಸ್' ಕಾರ್ಯಗಾರದಲ್ಲಿ ನಡೆಸಲ್ಪಟ್ಟ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾರ್ಜ ಸರಕಾರದ ಶೇಕ್ ಅಮೀರ್ ಮುಹಮ್ಮದ್, ಭಾರತ ಮಾಜಿ ವಿದೇಶಾಂಗ ಸೇವೆಯ ಡಾ| ವಿ.ಎಂ ಸೋನಿ, ದುಬೈ-ಭಾರತ ರಾಯಭಾರಿ ಜಿತೇಂದ್ರ ನೆಗಿ ಉಪಸ್ಥಿತರಿದ್ದು ಆಶಾ ಶೆಟ್ಟಿ ಅವರಿಗೆ ಪ್ರಶಸ್ತಿ ಹಸ್ತಾಂತರಿಸಿ ಶುಭರೈಸಿದರು.
ಸಮಾರಂಭದಲ್ಲಿ ದುಬೈ-ದೆಹಲಿ ಸಿ.ಐ.ಎಸ್ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ರಾಜನ್ ಮಧು, ಉಕ್ರೇನ್ನ ಉದ್ಯಮಿ ಆಲಾ ಮಧು ಭಾಗವಹಿಸಿದ್ದರು. ಶ್ರೀಮತಿ ಆಶಾ ಶಿವಾನಂದ ಶೆಟ್ಟಿ ಅತ್ತಾವರ ಇವರು ತುಳುವೆರೆ ಆಯನೋ ಕೂಟ ಕುಡ್ಲ ಇದರ ಉಪಾಧ್ಯಕ್ಷೆ ಮತ್ತು ವಿನ್ನರ್ಸ್ ವೇವ್ (ಇಂಡಿಯಾ) ಸಂಸ್ಥೆಯ ಸಂಚಾಲಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.