Saturday 20th, April 2024
canara news

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯಿಂದ ಅಮೃತ ಮಹೋತ್ಸವಕ್ಕೆ ಚಾಲನೆ

Published On : 20 Dec 2018   |  Reported By : Rons Bantwal


ಧರ್ಮದ ಫಲವೇ ಈ ಸಂಭ್ರಮವಾಗಿದೆ : ರಮೇಶ್ ಪೂಜಾರಿ ನೆರೂಲ್
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.15: ಶನೇಶ್ವರನ ಭಕ್ತಿ, ಆರಾಧನೆಯಿಂದ ಬದುಕು ಜಾಗೃತವಾಗುವುದು. ಶನಿ ಮನುಕುಲದ ಜೀವದಾನಿಯಂತಿದ್ದು, ಶನಿ ಹಿಡಿಯದ ಮಾನವ ಇರಲಾರನು. ಇದು ದೈವಇಪ್ಛೆಯೇ ಸರಿ. ಇಂತಹ ದೇವರ ಗ್ರಂಥ ಪಾರಾಯಣ, ಪೂಜೆ ಪುರಸ್ಕಾರಗಳನ್ನು ನಡೆಸಿ ಅದಕ್ಕೊಂದು ಸಮಿತಿ ರಚಿಸಿ 75ರ ಸಂಭ್ರಮದಲ್ಲಿರುವ ಈ ಸಂಸ್ಥೆಯ ಧರ್ಮದ ಫಲವೇ ಈ ಸಂಭ್ರಮವಾಗಿದೆ ಎಂದು ಶ್ರೀ ಶನೀಶ್ವರ ದೇವಾಲಯ ನೆರೂಲ್ ಇದರ ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಂ.ಪೂಜಾರಿ ನುಡಿದರು.

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ತನ್ನ 74ನೇ ವಾರ್ಷಿಕ ಶನಿ ಮಹಾಪೂಜೆ ನೆರವೇರಿಸಿದ ಬಳಿಕ ಆಯೋಜಿಸಿದ್ದ ಸಮಾರಂಭದಲ್ಲಿ ರಮೇಶ್ ಪೂಜಾರಿ ಅವರು ಪಿಂಗಾರ ಅರಳಿಸಿ ಕಳಸೆಯಲ್ಲಿರಿಸಿ ಸೇವಾ ಸಮಿತಿಯ ಅಮೃತ ಮಹೋತ್ಸವಕ್ಕೆ ಚಾಲನೆಯನ್ನಿತ್ತು ಮಾತನಾಡಿದರು.

ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ ಗೌರವಾಧ್ಯಕ್ಷ ಹರೀಶ್ ಜಿ.ಅವಿೂನ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರುಗಳಾಗಿ ಉದ್ಯಮಿ ಪ್ರಮೋದ್ ಕರ್ಕೇರ, ಭಾರತ್ ಬ್ಯಾಂಕ್ ನಿರ್ದೇಶಕರಾದ ನ್ಯಾ| ಸೋಮನಾಥ್ ಬಿ.ಅವಿೂನ್ ಮತ್ತು ಪುರುಷೋತ್ತಮ ಎಸ್.ಕೋಟ್ಯಾನ್ (ಕಾರ್ಯಾಧ್ಯಕ್ಷ, ಅಮೃತಮಹೋತ್ಸವ ಸ್ಮರಣ ಸಂಚಿಕೆ ಸಮಿತಿ), ಶ್ರೀ ಮಹಾಶೇಷ ರುಂಡಮಾಲಿನಿ ಮಂದಿರ ಪೆÇವಾಯಿ ಇದರ ರಾಹುಲ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದು, ವಾಸ್ತು ಪಂಡಿತ ಅಶೋಕ್ ಪುರೋಹಿತ್ ಅವರು ಸ್ಮರಣ ಸಂಚಿಕೆಯ ಮನವಿಪತ್ರ ಬಿಡುಗಡೆ ಗೊಳಿಸಿದರು.

ಇದೇ ಶುಭಾವಸರದಲ್ಲಿ ನಾರಾಯಣ ಬಿ.ಸಾಲ್ಯಾನ್ ಸ್ಮರಣಾರ್ಥ ಪ್ರಶಸ್ತಿಯನ್ನು ಪುರೋಹಿತ ಶ್ರೀ ಮಹೇಶ್ ಶಾಂತಿ ಹೆಜ್ಮಾಡಿ ಅವರಿಗೆ ಪ್ರದಾನಿಸಲಾಯಿತು ಹಾಗೂ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಸ್ಥಾಪಕ ಸದಸ್ಯರಾಗಿದ್ದು ಕಾರ್ಯಕ್ರಮದಲ್ಲಿ ಉಪಸ್ಥಿತ 95ರ ವಯೋಮಿತಿಯ ಸೇಸಪ್ಪ ದೇವಾಡಿಗ (ಪತ್ನಿ ಗಂಗಾವತಿ ದೇವಾಡಿಗ ಜೊತೆಗೂಡಿ) ಹಾಗೂ ಸಮಿತಿಯಲ್ಲಿ ದೀರ್ಘಾವಧಿ ಸೇವೆಗೈದ ಶ್ರೀಕೃಷ್ಣ ನಾಯ್ಕ್ ಇವರನ್ನು ಸನ್ಮಾನಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾಥಿರ್üಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿದ ಅತಿಥಿüಗಳು ಉಪಸ್ಥಿತ ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರು, ಪ್ರತಿನಿಧಿಗಳನ್ನು ಮತ್ತು ಸಮಿತಿಗೆ ಹೆಚ್ಚಿನ ದೇಣಿಗೆ ಸಂಗ್ರಹಿಸಿದ ಸದಸ್ಯರನ್ನು ಗೌರವಿಸಿದ ಅತಿಥಿüಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭಾರೈಸಿದರು.

ಶನಿದೇವರ ಸ್ಮರಣೆ ಅಮೃತ ಕಾಲದಲ್ಲಿ ಈ ಸಮಿತಿಯಲ್ಲಿ ಶ್ರಮಿಸಿ ಉಪಸ್ಥಿತ 95ರ ಹಿರಿಯ ಚೇತನಕ್ಕೆ ಮಾಡಿದ ಸನ್ಮಾನದಿಂದಲೇ ನಾವು ದೇವರನ್ನು ಕಾಣಬಹುದು. ಇಂತಹ ಗೌರವ ಬಹುಶಃ ಮಹಾನಗರದಲ್ಲಿ ಇತಿಹಾಸ ಆಗಿದ್ದು ಶ್ಲಾಘನೀಯವೂ ಹೌದು. ಶನಿ ದೇವರಿಗೆ ಎಲ್ಲರೂ ಹೆದರುವುದು ಸರ್ವೇ ಸಾಮಾನ್ಯ. ಆದರೆ ಮನುಷ್ಯನಿಗೆ ಮನುಷ್ಯನಾಗಿಸಿ ಒಳಿತಿನ ಮಾರ್ಗಕ್ಕೆ ತರುವುದೇ ಶನಿದೇವರು. ಶನಿ ಹಿಡಿದ ಕಾಲದಲ್ಲಿ ನಮ್ಮೊಂದಿಗೆ ಯಾರ್ಯಾರು ಇರ್ತಾರೆ ಎಂದು ತಿಳಿಯಬಹುದು. ಆದ್ದರಿಂದ ಶನಿಯು ನಮ್ಮ ನೈಜ್ಯ ಸಂಬಂಧಿಗಳನ್ನು ತೋರತ್ತ್ತದೆ. ಶನಿ ಹೋಗುವಾಗ ಚೆನ್ನವಾದರೆ ಲಕ್ಷಿ ್ಮೀ ಒಳ ಸೇರುವಾಗ ಚಿನ್ನವಾಗಿ ಬದುಕು ಸುಂದರವಾಗುತ್ತದೆ ಎಂದು ಅಶೋಕ್ ಪುರೋಹಿತ್ ಬದುಕಿಗೆ ಉಪಯುಕ್ತ ಮುಖ್ಯವಾದ ಮೂರು ಸಲಹೆಗಳನ್ನಿತ್ತರು.

ಮನುಕುಲಕ್ಕೆ ಬುದ್ಧಿಸಿದ್ಧಿ ನೀಡುವ ಪರಮ ಶಕ್ತಿಯೇ ಶನೈಶ್ವರ. ಶನಿಯು ಎಂದಿಗೂ ದುಷ್ಟಶಕ್ತಿ ಆಗದೆ ಕರುಣಾಶೀಲ ಶಕ್ತಿ ಆಗಿಯೇ ಮನುಷ್ಯನಿಗೆ ಒಲಿಯುವನು. ಅಧರ್ಮಕ್ಕೆ ಫಲನೀಡುವ ಶನಿ ದೇವರು ಮಾನವ ಬದುಕನ್ನು ಬದಲಾಯಿಸ ಬಲ್ಲವ ಭಗವಂತನು ಎಂದು ರಾಹುಲ್ ಸುವರ್ಣ ತಿಳಿಸಿದರು.

90ರ ದಶಕದ ಕಾಲಕ್ಕೆ ಮುಂಬಯಿ ಬಂದ ತುಳು ಕನ್ನಡಿಗರು ಹಸಿವು ನೀಗಿಸುವುದರ ಜೊತೆಗೆ ತಮ್ಮತನವನ್ನು ರೂಪಿಸಿದ್ದರು. ಎಂದಿಗೂ ಸುಮ್ಮನಾಗಿರದೆ ತಮ್ಮತಮ್ಮ ಧರ್ಮ, ಸಂಸ್ಕೃತಿ, ಕಲಾರಾಧನೆಗೈದು ಸಹೋದರತ್ವದಿಂದ ಬದುಕು ರೂಪಿಸಿದ್ದರು. ಇಂತಹ ಒಗ್ಗಟ್ಟು ನಮ್ಮಲ್ಲೂ ನೆಲೆಯಾಗಬೇಕು ಎಂದು ಎಸ್.ಬಿ ಅಮೀನ್ ಆಶಯವ್ಯಕ್ತ ಪಡಿಸಿದರು.
ಅಮೃತಮಹೋತ್ಸವ ಸ್ಮರಣ ಸಂಚಿಕೆ ಸಮಿತಿ ಮುಖ್ಯಸ್ಥರನ್ನಾಗಿಸಿ ಈ ಸಂಸ್ಥೆ ನನ್ನ ಜವಾಬ್ದಾರಿ ಹೆಚ್ಚಿಸಿದೆ. ಎಲ್ಲರೂ ತಮ್ಮಿಂದಾದ ಸಹಯೋಗವಿತ್ತರೆ ಸ್ಮರಣ ಸಂಚಿಕೆಯನ್ನು ಸೌಂದರ್ಯಯುತವಾಗಿಸಿ ಸಮಿತಿಗೂ ಆದಾಯಕರ ಆಗುವಲ್ಲಿ ಹೊರತರಲು ಸಾಧ್ಯ ಎಂದು ಪುರುಷೋತ್ತಮ ಕೋಟ್ಯಾನ್ ತಿಳಿಸಿದರು.

ಕಿರಿಯನಾದ ನನಗೆ ಇಂತಹ 75ರ ಹೊಸ್ತಿಲಲ್ಲಿನ ಸಾಧನಾಶೀಲ ಧಾರ್ಮಿಕ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಭಾಗ್ಯ ಕರ್ಮದ ಫಲವೆಣಿಸುತ್ತಿದ್ದೇನೆ. ನಾವೆಲ್ಲರೂ ಜೊತೆಯಾಗಿ ಈ ಸಂಸ್ಥೆಯನ್ನು ಪೆÇೀಷಿಸಿ ಬೆಳೆಸಿ ಶತಮಾನದತ್ತ ಒಯ್ಯೋಣ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಹರೀಶ್ ಜಿ.ಅವಿೂನ್ ತಿಳಿಸಿದರು.

ಆರಂಭದಲ್ಲಿ ಸೇವಾ ಸಮಿತಿಯ 74 ವರ್ಷಗಳ ನಡೆ ಮತ್ತು ಸೇವೆಯನ್ನು ಸಾಕ್ಷ ್ಯಚಿತ್ರ ಮೂಲಕ ತಿಳಿಸಲಾಯಿತು. ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ ಅಧ್ಯಕ್ಷ ಜಗದೀಶ್ ಜೆ.ಕೋಟ್ಯಾನ್ ಸ್ವಾಗತಿಸಿ ಪ್ರಸ್ತಾವಣೆಗೈದರು. ಕೋಶಾಧಿಕಾರಿ ಶರತ್ ಜಿ.ಪೂಜಾರಿ ಪ್ರತಿಭಾನ್ವಿತರ ಪಟ್ಟಿ ವಾಚಿಸಿದರು. ತಾರನಾಥ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಸೇವಾ ಸಮಿತಿಯ ಉಪಾಧ್ಯಕ್ಷರುಗಳಾದ ರವಿ ಎಲ್.ಬಂಗೇರ ಮತ್ತು ಜನಾರ್ದನ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ರಾಜೇಶ್ ಸುವರ್ಣ, ಜೊತೆ ಕೋಶಾಧಿಕಾರಿಗಳಾದ ಪ್ರಶಾಂತ ಕರ್ಕೇರ ಮತ್ತು ಅಕ್ಷಯ್ ಸುವರ್ಣ, ಸಲಹೆಗಾರರಾದ ಭೋಜ ಬಿ.ಕೋಟ್ಯಾನ್, ಸದಾನಂದ ಸುವರ್ಣ, ಮಾಜಿ ಅಧ್ಯಕ್ಷ ವಿಶ್ವನಾಥ ಕೋಟ್ಯಾನ್, ಭುವಾಜಿ ವಾಸು ಸಾಲಿಯಾನ್, ವಜ್ರಮಹೋತ್ಸವ ಸಮಿತಿ ಕಾರ್ಯದರ್ಶಿ ಮೋಹನ್ ಪೂಜಾರಿ, ಅಂತರಿಕ ಲೆಕ್ಕಪರಿಶೋಧಕ ನಾಗೇಶ್ ಎ.ಸುವರ್ಣ, ಮತ್ತಿತರ ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ವಸಂತ್ ಎನ್.ಸುವರ್ಣ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಭಂಡಾರಿ ಕೃತಜ್ಞತೆ ಸಮರ್ಪಿದರು.

ವಾರ್ಷಿಕ ಶನಿ ಮಹಾಪೂಜೆ ಪ್ರಯುಕ್ತ ಹರೀಶ್ ಶಾಂತಿ ಹೆಜ್ಮಾಡಿ ಅಂಧೇರಿ ಪೌರೋಹಿತ್ಯದಲ್ಲಿ ಗಣಹೋಮ, ಸತ್ಯನಾರಾಯಣ ಪೂಜೆ ನಡೆಸಿ ಶ್ರೀ ಶನಿದೇವರ ಕಲಶ ಪ್ರತಿಷ್ಠಾಪನೆಗೈದÀು ತೀರ್ಥಪ್ರಸಾದ ವಿತರಿಸಿದರು. ಭಜನೆ ಮತ್ತು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಶನಿಗ್ರಂಥ ಪಾರಾಯಣ ನಡೆಸಲ್ಪಟ್ಟಿತು. ಕೊನೆಯಲ್ಲಿ ಶ್ರೀ ಶನೈಶ್ವರ ದೇವರಿಗೆ ಮಹಾ ಮಂಗಳಾರತಿ ನೆರವೇರಿಸಿ ಅನ್ನಸಂತರ್ಪಣೆಯೊಂದಿಗೆ ವಾರ್ಷಿಕ ಶನಿ ಮಹಾಪೂಜೆ ಸಮಾಪನ ಕಂಡಿತು. ಸಮಿತಿ ಸದಸ್ಯರನೇಕರು, ಭಕ್ತರು, ದಾನಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ಶನಿದೇವರ ಕೃಪೆಗೆ ಪಾತ್ರರಾದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here