Tuesday 23rd, April 2019
canara news

ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯಿಂದ ಸಂಭ್ರಮಿಸಲ್ಪಟ್ಟ ವಜ್ರಮಹೋತ್ಸವ

Published On : 20 Dec 2018   |  Reported By : Rons Bantwal


ಸೇವೆಯ ಸಂತೃಪ್ತಭಾವವೇ ಆಚರಣೆಗಳ ಅಡಿಪಾಯ : ಡಾ| ಸುನೀತಾ ಎಂ.ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.20: ಮುಂಬಯಿಗೆ ಬಂದು ಅರ್ವತ್ತು ದಾಟಿದ ನನಗೆ ಕನ್ನಡದ ಕಹಳೆಯನ್ನು ಕೇಳಿ ನೋಡಿ ಬಹಳ ಸಂಗಮವೆಣಿಸಿದೆ. ಆರಂಭದಿಂದಲೇ ವಿವಿಧ ಸಂಘಸಂಸ್ಥೆಗಳ ಬೆಳವಣಿಗೆ ಕಂಡಿರುವ ದೊಡ್ಡ ಸಾರ್ಥಕತಾಭಾವ ನನಗಿದೆ. ಅದೇ ನನ್ನನ್ನು ಆನಂದೋತ್ಸವಕ್ಕೆ ಒಯ್ದಿದೆ. ಅದರಲ್ಲೊಂದು ಈ ಕನ್ನಡ ಸಂಘವಾಗಿದೆ. ಮನುಷ್ಯ ಅಥವಾ ಸಂಸ್ಥೆಗಳ ಬದುಕು ಹೇಗಿರಬೇಕು ಹೇಗೆ ಬಾಳಬೇಕು ಅಂದರೆ ಗೈ ಅಂತಿರಬೇಕು. (ಗೈ ಅಂದರೆ ಮಾಡು ಎಂದರ್ಥ). ಹಾನಿಕರವಲ್ಲದ ಸಮಾಜಕ್ಕೆ ಶುಭವಾಗುವ ಕಾಯಕಗಳನ್ನು ಮಾಡಿದಾಗಲೇ ಸಂಸ್ಥೆಗಳ ಹುಟ್ಟು ಸಾರ್ಥಕವಾಗುವುದು. ಅದಕ್ಕಾಗಿ ಬೇರೆಯವರು ನಮ್ಮಲ್ಲಿ ದೃಷ್ಠಿಯಿರಿಸುವ ಕೆಲಸ ನಾವುಗಳು ಮಾಡಬೇಕು ಅದು ಎಂದಿಗೂ ಶಾಸ್ವತವಾಗಿರುವುದು ಎಂದು ನಾಡಿನ ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ತಿಳಿಸಿದರು.

ಇಂದಿಲ್ಲಿ ಆದಿತ್ಯವಾರ ದಿನಪೂರ್ತಿಯಾಗಿಸಿ ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್‍ನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ತನ್ನ ಅರ್ವತ್ತರ ಸಂಭ್ರಮ ವಜ್ರಮಹೋತ್ಸವ ಸಂಭ್ರಮಿಸಿದ್ದು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ಸಂಘದ ಸೇವೆಯನ್ನು ಪ್ರಶಂಸಿಸಿ ಸುನೀತಾ ಶೆಟ್ಟಿ ಮಾತನಾಡಿದರು.

ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷ ಎಲ್.ವಿ ಅಮೀನ್ (ಪತ್ನಿ ಸುಧಾ ಎಲ್ವೀ ಜೊತೆಗೂಡಿ) ದೀಪ ಪ್ರಜ್ವಲಿಸಿ ಹೀರಕ ಮಹೋತ್ಸವಕ್ಕೆ ಚಾಲನೆ ನೀಡಿದ್ದು, ಪ್ಯಾಲೇಸ್ ಹೊಟೇಲು ಸಮೂಹದ ಆಡಳಿತ ನಿರ್ದೇಶಕ ಕೃಷ್ಣ ವೈ.ಶೆಟ್ಟಿ ಕಲ್ಪವೃಕ್ಷಪುಷ್ಪ ಅರಳಿಸಿ ಕಳಸೆಯಲ್ಲಿರಿಸಿ ಸಮಾರಂಭ ಉದ್ಘಾಟಿಸಿದರು.

ಕನ್ನಡದಲ್ಲಿ ಮೊಗ್ಗನ್ನು ದಾಯಿ ಎಂಬ ಅಕ್ಷರದಿಂದ ಕರೆಯಲಾಗುವುದು. ದಾಯಿ ಎಂದರೆ ಮಾಡು. ಬುದ್ಧಿಜೀವಿ ಜನ್ಮಕ್ಕೆ ಬಂದ ನಂತರ ಏನಾದರೂ ಮಾಡಬೇಕು ಸಾಧಿಸಬೇಕು. ಒಂದು ಸಂಸ್ಥೆಯಲ್ಲಿ ಒಳ್ಳೆಯ ಬೆಳವಣಿಗೆ ಆಗಿದ್ದಲ್ಲಿ ಸಂಸ್ಥೆಗಳು ಬಾಳುತ್ತಾ 25-50ವರ್ಷಗಳನ್ನ ಸಾಗುತ್ತವೆ. ಆವಾಗ ಆದರ ಬೆಳವಣಿಗೆ ಮತ್ತು ಆಕಾರ ನಿಲುವು ಆಗುತ್ತದೆ. 60 ತುಂಬುವಾಗ ಮೈತುಂಬಿ ಕೊಳ್ಳುತ್ತದೆ. ಇದೇ ಸಂತೃಪ್ತಭಾವವೇ ಸಂಭ್ರಮವಾಗುತ್ತದೆ. ಅಷ್ಟು ವರ್ಷ ದಾಟಿದ ನಂತರ ಸಾಹಿತ್ಯಕ್ಕೆ, ಭಾಷೆಗೆ ಮತ್ತು ಸಂಸ್ಕೃತಿ ಏನಾದರೂ ಮಾಡಿದರೆ ಆ ಸಂಸ್ಥೆಯ ಸೇವೆ ಸಾರ್ಥಕವಾಗುವುದು. ಈ ಸಂಘ ಇವಕ್ಕೆಲ್ಲಾ ಅರ್ಹವಾಗಿದೆ. ಎಲ್.ವಿ ಅವಿೂನ್ ಮತ್ತು ಎಲ್ಲಾ ಪದಾಧಿಕಾರಿಗಳು ಹಾಗೂ ಆರಂಭದಿಂದ ಸಂಘದ ಹಿತಕ್ಕೆ ದುಡಿದ ಎಲ್ಲರಿಗೂ ಸ್ಮರಸಿ ಅಭಿನಂದಿಸುವೆ. ಭೂತಕಾಲ ನಿರ್ಲಕ್ಷಿಸಿ ಬೊಗಸೆಯಲ್ಲಿ ವರ್ತಮಾನ ಇಟ್ಟುಕೊಳ್ಳಬೇಕು. ಆವಾಗಲೇ ಭೂತಕಾಲಕ್ಕೆ ಅನುವು ಆಗುವುದು. ಭಾಷಾಸಂಸ್ಥೆಗಳನ್ನು ಕಟ್ಟುವುದರಿಂದ ಸಂಸ್ಕಾರ ಉಳಿವು ಸಾಧ್ಯವಾಗಿದ್ದು ಋಣಾತ್ಮಕ ಭಾವವೇ ಸಂಸ್ಥೆಗಳ ಕರ್ತವ್ಯ ಆಗಬೇಕು ಎಂದು ಸುನೀತಾ ಶೆಟ್ಟಿ ಹಿತೋಪದೇಶವನ್ನಿತ್ತರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ನಿಕಟ ಪೂರ್ವಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ವಾಸ್ತುತಜ್ಞ ಅಶೋಕ್ ಪುರೋಹಿತ್, ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಉದ್ಯಮಿ ಕೃಪಾ ಭೋಜರಾಜ್ ಕುಳಾಯಿ, ಭಾರತ್ ಬ್ಯಾಂಕ್‍ನ ನಿರ್ದೇಶಕರುಗಳಾದ ದಾಮೋದರ ಸಿ.ಕುಂದರ್, ಪುರುಷೋತ್ತಮ ಎಸ್.ಕೋಟ್ಯಾನ್, ಬಿಎಸ್‍ಕೆಬಿ ಅಸೋಸಿಯೇಶನ್‍ನ ವಿಶ್ವಸ್ಥ ಸದಸ್ಯ ಬಿ.ಆರ್ ರಾವ್, ಅವೆನ್ಯೂ ಹೊಟೇಲು ಸಮೂಹದ ನಿರ್ದೇಶಕ ರಘುರಾಮ ಕೆ.ಶೆಟ್ಟಿ (ಬೆಳಗಾಂ), ಶ್ರೀಮತಿ ಶಾರದಾ ಭಾಸ್ಕರ್ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ಕಲ್ಯಾಣ್ ಇದರ ಸಂಸ್ಥಾಪಕಾಧ್ಯಕ್ಷ ನಡ್ಯೋಡಿಗುತ್ತು ಭಾಸ್ಕರ್ ಎಸ್.ಶೆಟ್ಟಿ, ಉದ್ಯಮಿಗಳಾದ ವಾಮನ ಡಿ.ಪೂಜಾರಿ, ಗ್ರೆಗೋರಿ ಡಿ'ಅಲ್ಮೇಡಾ, ಮಂಜುನಾಥ ಬನ್ನೂರು, ಪ್ರಕಾಶ್ ಶೆಟ್ಟಿ ಕಲೀನಾ, ಸುರೇಂದ್ರ ಎ. ಪೂಜಾರಿ, ಸುರೇಶ್ ಆರ್.ಕಾಂಚನ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಂಬಯಿ ಸಮಿತಿ ಉಪಾಧ್ಯಕ್ಷ ಅಶೋಕ್ ಆರ್.ಶೆಟ್ಟಿ ಪೆರ್ಮುದೆ, ಹೆಸರಾಂತ ಲೆಕ್ಕಪರಿಶೋಧಕಾರಾದ ಸಿಎ| ಅಶ್ವಜಿತ್ ಹೆಜಮಾಡಿ, ಸಿಎ| ಜಗದೀಶ್ ಶೆಟ್ಟಿ, ಆಹಾರ್ ಸಂಸ್ಥೆಯ ಮಾಜಿ ಅಧ್ಯಕ್ಷ ನಾರಾಯಣ ಆಳ್ವ, ವಸಾಯಿ ಕನ್ನಡ ಸಂಘ ಅಧ್ಯಕ್ಷ ಓ.ಪಿ ಪೂಜಾರಿ, ಶ್ರೀ ಕಟೀಲು ಯಕ್ಷಾ ವೇದಿಕೆ ವಸಾಯಿ ಕಾರ್ಯಾಧ್ಯಕ್ಷ ಪಾಂಡು ಎಲ್.ಶೆಟ್ಟಿ, ರಜಕ ಸಂಘ ದಹಿಸರ್ ವಿರಾರ್ ವಲಯದ ಮಾಜಿ ಕಾರ್ಯಾಧ್ಯಕ್ಷ ದೇವೆಂದ್ರ ಬುನ್ನಾನ್, ಗೋಪಿ ಪೂಜಾರಿ ಸೇರಿದಂತೆ ಸಂಘದ ಸಂಘದ ಉಪಾಧ್ಯಕ್ಷ ಗುಣಪಾಲ ಶೆಟ್ಟಿ ಐಕಳ, ಸಂಘದ ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ, ಗೌ| ಪ್ರ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್, ಜೊತೆ ಕೋಶಾಧಿಕಾರಿ ದಿನೇಶ್ ಅವಿೂನ್, ವಜ್ರಮಹೋತ್ಸವ ಸಮಿತಿಂiÀ ಗೌರವಾಧ್ಯಕ್ಷರಾದ ನಾರಾಯಣ ಎಸ್.ಶೆಟ್ಟಿ ಮತ್ತು ಎನ್.ಎಂ ಸನಿಲ್, ಕಾರ್ಯಧ್ಯಕ್ಷ ಬಿ.ಆರ್ ಪೂಂಜ, ಸ್ಮರಣ ಸಂಚಿಕೆ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್, ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷೆ ವನಿತಾ ವೈ.ನೋಂದ ಮತ್ತಿತರರು ಜೊತೆಗೂಡಿ ಏಕಕಾಲಕ್ಕೆ ಅರ್ವತ್ತು ದೀಪಗಳನ್ನು ಹಚ್ಚಿ ಸಮಾರಂಭಕ್ಕೆ ಚಾಲನೆ ನೀಡಿದರು.

ಅರ್ವತ್ತೊಂದರತ್ತ ಸಾಗುವ ಈ ಪ್ರಾತಃಕಾಲದಲ್ಲಿ 60 ದೀಪಗಳನ್ನು ಬೆಳಗಿಸಿ ಉದ್ಘಾಟಿಸಿರುವುದೇ ಇತಿಹಾಸ ಮತ್ತು ಅಪರೂಪದ ದೃಶ್ಯ. ಸಂಘದ ನೇತೃತ್ವ ವಹಿಸಿದ ಎಲ್.ವಿ ಅವಿೂನ್ ಮತ್ತು ಸರ್ವರಿಗೂ ಅಭಿನಂದನೆಗಳು. ಧಾರ್ಮಿಕ ಮತ್ತು ದಾನ ನೀಡುವ ಕಾರ್ಯಗಳ ಶುಭಾರಂಭ ಸಂಸ್ಥೆಯಿಂದಲೇ ನಡೆಯಬೇಕು. ಕನ್ನಡ ಸಂಘ ಸಾಂತಾಕ್ರೂಜ್ ಕೂಡಾ ಇದಕ್ಕೆ ಪೂರಕವಾಗಿ ಪೆÇೀಷಕಸಂಸ್ಥೆ ಆಗಲಿ. ಮುಂದೆ ಅನೇಕನೇಕ ಸಮಾಜಪರ ಕಾರ್ಯಕ್ರಮಗಳು ನಡೆದು ಸಮಾಜಕ್ಕೆ ಹಿತವಾಗಲಿ ಎಂದು ಅಶೋಕ್ ಪುರೋಹಿತ್ ಶುಭನುಡಿಯನ್ನಾಡಿದರು.

ಶ್ರೀ ನಿತ್ಯಾನಂದ ಸ್ವಾಮೀಜಿ ಅವರ ಆರಾಧನೆಯಿಂದ ಆರಂಭವಾದ ವಜ್ರಮಹೋತ್ಸವ ಪರಿಪೂರ್ಣತೆ ಕಂಡಿದೆ. ಮುಂಬಯಿಯ ಸಾಮಾಜಿಕ ಸೇವೆಯಲ್ಲಿ ಮುನ್ನಡೆದು ತನ್ನದೇ ಪ್ರತಿಷ್ಠೆಯನ್ನು ರೂಪಿಸಿದೆ. ಈ ಕನ್ನಡ ಸಂಘದಲ್ಲಿ ಸೇವೆ ಮಾಡುವ ಭಾಗ್ಯವನ್ನು ಎಲ್ವೀ ಅವಿೂನ್ ನೀಡಿದ್ದಾರೆ. ಜಾತಿಮತ ಧರ್ಮ ಮೆರೆತು ಅತ್ಮೀಯವಾದ ವಾತಾವರಣದೊಂದಿಗೆ ಸಾಗುವ ಈ ಸಂಸ್ಥೆ ಉತ್ತರೋತ್ತರವಾಗಿ ಬೆಳೆದು ಎಲ್.ವಿ.ಅಮೀನ್ ಅವರ ನೇತೃತ್ವದಲ್ಲೇ ಶತಸಂಭ್ರಮ ಕಾಣುವಂತಾಗಲಿ ಎಂದು ನಿತ್ಯಾನಂದ ಕೋಟ್ಯಾನ್ ಶುಭ ನುಡಿದರು.

ಕನ್ನಡಾಭಿಮಾನಿ,ದಿಗ್ಗಜರ ಅಭಯಾಸ್ತಗಳಿಂದ ವಜ್ರದೀಪ ಬೆಳಗಿಸಲು ಸರ್ವ ಕನ್ನಡಿಗರ ಸಹಯೋಗವೇ ಕಾರಣ. ನನ್ನ ಸಾರಥ್ಯದ ಕಾಲಾವಧಿಯಲ್ಲಿ ಎಕಕಾಲಕ್ಕೆ 60 ಜ್ಯೋತಿಗಳನ್ನು ಬೆಳೆಗಿಸಿ ವಜ್ರಮಹೋತ್ಸವ ಆಚರಿಸುತ್ತಿರುವುದು ನನ್ನ ಸೌಭಾಗ್ಯ ಎಂದೆಣಿಸಿದ್ಡೇನೆ. ಅಖಂಡ ವಜ್ರಮಹೋತ್ಸವ ಸಮಿತಿ ನನ್ನ ಜೊತೆಯಿದ್ದು ಪೆÇ್ರೀತ್ಸಹಿಸಿದ ಕಾರಣ ಈ ಸಡಗರ ವಿಭಿನ್ನವಾಗಿ ಮೂಡಿಬಂತು. ಸರ್ವರಿಗೂ ನಾನೂ ಕೃತಜ್ಞನಾಗಿರುವೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಎಲ್.ವಿ ಅವಿೂನ್ ತಿಳಿಸಿದರು.


ವೈಶಿಷ್ಟ ್ಯಪೂರ್ಣ ಕಾರ್ಯಕ್ರಮ:
ವೇದಿಕೆಯಲ್ಲಿ ಕಂಗೋಳಿಸುತ್ತಿದ್ದ ಕನ್ನಡದ ಕಾಂತಿಯ ರಥ... ಮುಂಭಾಗದಲ್ಲಿ ಶಿಸ್ತಿನ ಶಿಪಾಯಿಗಳಾಗಿ ನಿಂತ ಗಣ್ಯರು, ಪದಾಧಿಕಾರಿಗಳು ಏಕಕಾಲಕ್ಕೆ ಅರ್ವತ್ತು ದೀಪಗಳನ್ನು ಬೆಳಗಿಸಿ ಕನ್ನಡದ ತೇರನ್ನೆಳೆದ ಸನ್ನಿವೇಶ ಅಭೂತಪೂರ್ವವಾದುದು. ಇತರ ಭಾಷಿಗರೊಂದಿಗೆ ಕನ್ನಡದ ಸಾಮರಸ್ಯವನ್ನು ಬೆರೆಸಿ ಕನ್ನಡದ ದೀಪಗಳನ್ನು ಹಚ್ಚುತ್ತಾ ಕನ್ನಡದ ಮನಸುಗಳಿಗೆ ಮುದನೀಡಿ ರಥೋತ್ಸವದ ಕಳೆ ಮೊಳಗಿತು. ನೆರೆದ ಕನ್ನಡಾಭಿಮಾನಿಗಳನ್ನು ಬೆರಗಾಗುವಂತೆ ಮಾಡಿದ ಸಂಘದ ಈ ವಿನೂತನ ಕಾರ್ಯಕ್ರಮ ನೂತನ ದಾಖಲೆಗೆ ಸಾಕ್ಷಿಯಾಯಿತು. ಆ ಮೂಲಕ ಅಧ್ಯಕ್ಷ ಎಲ್.ವಿ ಅವಿೂನ್ ದಕ್ಷ ಮತ್ತು ಸಂಘಟನಾ ಚತುರತೆಗೆ ಪಾತ್ರರಾಗಿ ಇತರ ಸಂಸ್ಥೆಗಳಿಗೂ ಮಾದರಿ ಎಂದೆನಿಸಿದರು.

ಆದಿಯಲ್ಲಿ ಭವನದ ಆವರಣದಲ್ಲಿನ ಶ್ರೀ ಮಹಾವಿಷ್ಣು ದೆವಸ್ಥಾನದಲ್ಲಿ ವಿದ್ವಾನ್ ಅರವಿಂದ ಬನ್ನಿಂತ್ತಾಯ ಪೂಜೆ ನೆರವೇರಿಸಿ ಪ್ರಸಾದವನ್ನಿತ್ತು ಹರಸಿದರು. ಬಳಿಕ ಮಂಗಳ ದೀಪವನ್ನು ಅತಿಥಿü ಗಣ್ಯರು ವಾದ್ಯಘೋಷ, ಭಜನೆಯೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿದರು. ಮಧ್ಯಾಂತರದಲ್ಲಿ ಅತಿಥಿüಗಳು ಸಂಘದ ಶಾಸ್ವತ ವಿದ್ಯಾನಿಧಿ ದಾನಿಗಳಿಗೆ ಸನ್ಮಾನಿಸಿ ಅಭಿವಂದಿಸಿದರು. ಸಾಕ್ಷ ್ಯಚಿತ್ರ ಮೂಲಕ ಸಂಘದ ಸಾಧನಾನಡೆ ಬಗ್ಗೆ ಸ್ಥೂಲವಾದ ಮಾಹಿತಿ ಭಿತ್ತರಿಸಲಾಯಿತು.

ಕು| ಶ್ರದ್ಧಾ ಪೂಜಾರಿ ಪ್ರಾರ್ಥನೆಯನ್ನಾಡಿದರು. ಪದ್ಮನಾಭ ಸಸಿಹಿತ್ಲು ರಚಿತ ವಜ್ರಮಹೋತ್ಸವದ ಇಂಪಾದ ಹಾಡಿನೊಂದಿಗೆ ಸಮಾರಂಭ ವಿಧ್ಯುಕ್ತವಾಗಿ ಅನಾವರಣ ಗೊಳಿಸಲ್ಪಟ್ಟಿತು. ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಅಶೋಕ್ ಪಕ್ಕಳ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಹೆಜ್ಮಾಡಿ ಸ್ವಾಗತಿಸಿ ವಂದನಾರ್ಪಣೆಗೈದರು.

ಕ್ರೇಜ್ ಪ್ಲಾನೆಟ್ ಪೆÇ್ರಡಕ್ಷನ್ಸ್ ಸಾರಥ್ಯದಲ್ಲಿ ಲತೇಶ್ ಎಂ.ಪೂಜಾರಿ ನಿರ್ದೇಶನದಲ್ಲಿ ಸಂಘದ ಸದಸ್ಯರು, ಮಕ್ಕಳು ವಿವಿಧ ಮನೋರಂಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾದರ ಪಡಿಸಿದರು. ಕು| ನಿಖಿತಾ ಸದಾನಂದ ಅವಿೂನ್ ತಂಡದ ಭರತನೃತ್ಯದೊಂದಿಗೆ ಸಾಂಸ್ಕೃತಿಕ ವೈಭವ ಆರಂಭಗೊಂಡಿತು. ಶ್ರೀ ದುರ್ಗಾ ಪರಮೇಶ್ವರಿ ಕೃಪಾ ಪೆÇೀಷಿತ ಯಕ್ಷಗಾನ ಕಲಾ ಮಿತ್ರ ಮಂಡಳಿ ಸಾಕಿನಾಕ ಇದರ ಬಾಲ ಕಲಾವಿದರು `ವೀರ ಅಭಿಮನ್ಯು' ಯಕ್ಷಗಾನ ಹಾಗೂ ರವಿಕುಮಾರ್ ಕಡೆಕಾರು ರಚಿತ `ಪುರ್ಸೊತ್ತಿಜ್ಜಿ' ತುಳು ನಾಟಕವನ್ನು ಕರುಣಾಕರ ಕೆ.ಕಾಪು ನಿರ್ದೇಶನದಲ್ಲಿ ಅಭಿನಯ ಮಂಟಪ ಮುಂಬಯಿ ಕಲಾವಿದರು ಪ್ರದರ್ಶಿಸಿದರು. ಕೃಷ್ಣರಾಜ್ ಶೆಟ್ಟಿ ಮುಂಡ್ಕೂರು ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.

 

 

 
More News

ಸ್ವರ್ಗೀಯ ತುಳಸಿ ವೇಣುಗೋಪಾಲ್-ಡಾ| ಬಿ.ಎ ಸನದಿ ಅವರಿಗೆ
ಸ್ವರ್ಗೀಯ ತುಳಸಿ ವೇಣುಗೋಪಾಲ್-ಡಾ| ಬಿ.ಎ ಸನದಿ ಅವರಿಗೆ
ಕುಂದಾಪುರದ ಆಥಿರ್üಕ ಅಸಹಾಯಕ ವಧುವಿಗೆ ಪಾಣಿಗ್ರಹಣ ನೆರವೇರಿಸಿದ
ಕುಂದಾಪುರದ ಆಥಿರ್üಕ ಅಸಹಾಯಕ ವಧುವಿಗೆ ಪಾಣಿಗ್ರಹಣ ನೆರವೇರಿಸಿದ
ಮುಲುಂಡ್ ಕನ್ನಡ ಸಂಘದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ
ಮುಲುಂಡ್ ಕನ್ನಡ ಸಂಘದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ

Comment Here