Monday 22nd, July 2019
canara news

ಭಂಡಾರಿ ಸೇವಾ ಸಮಿತಿ ಸಂಭ್ರಮಿಸಿದ 2018ನೇ ವಾರ್ಷಿಕ ಸಮ್ಮಿಲನ

Published On : 24 Dec 2018   |  Reported By : Rons Bantwal


ಮಾನವೀಯತೆ ಮೆರೆದು ಸಮುದಾಯ ಬಲಪಡಿಸಿ: ಲಕ್ಷ ್ಮಣ್ ಕರಾವಳಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.24: ಆರುವರೆ ದಶಕದ ಸೇವೆಗೆ ಗುರು ಹಿರಿಯರ ದೂರದೃಷ್ಟಿಯೇ ಕಾರಣ. ಅವರೆಲ್ಲರ ಶ್ರಮದ ಫಲವಾಗಿ ನಾವೆಲ್ಲರೂ ಒಗ್ಗೂಡಿದ್ದೇವೆ. ಬಂಧುಗಳು ಆರೋಗ್ಯ ಬಗ್ಗೆ ಕಾಳಜಿ ವಹಿಸಿ ವಿಮಾ ಯೋಜನೆ ಹಾಗೂ ವಿದ್ಯಾನಿಧಿ ರೂಪಿಸಿ ಸಮಾಜವನ್ನು ಸ್ವಸ್ಥ್ಯವಾಗಿಸಬೇಕು. ಸಮಲೋಚಿತ ಸೇವೆಯಿಂದ ಸಮಾಜದ ಉದ್ಧಾರ ಸಾಧ್ಯವಾಗುವುದು ಆದುದರಿಂದ ಸಮುದಾಯದ ಏಳಿಗೆಗೆ ಸಂಸ್ಥೆಗಳು ನಿಸ್ವಾರ್ಥವಾಗಿ ಸೇವಾತತ್ಪರಾಗಬೇಕು. ಅವಿರತ ಶ್ರಮಿಸಿದಾಗಲೇ ಸಮಗ್ರ ಸಮಾಜದ ಸರ್ವೋನ್ನತಿ ಸಾಧ್ಯವಾಗುತ್ತಿದ್ದು, ಭಂಡಾರಿ ಬಂಧುಗಳು ಮಾನವೀಯತೆ ಮೆರೆದು ಸಮುದಾಯವನ್ನು ಬಲಪಡಿಸಬೇಕು ಎಂದು ಕರಾವಳಿ ಇಂಟರ್ ನೆಟ್ ಸರ್ವಿಸ್ ಎಂಡ್ ಕೇಬಲ್ ಟಿವಿ ನೆಟ್‍ವರ್ಕ್‍ನ ಆಡಳಿತ ನಿರ್ದೇಶಕ ಲಕ್ಷ ್ಮಣ್ ಕರಾವಳಿ ನುಡಿದರು.

 

ಭಂಡಾರಿ ಸೇವಾ ಸಮಿತಿ ತನ್ನ 2018ನೇ ವಾರ್ಷಿಕ ಸಮ್ಮಿಲನ 2018ನ್ನು ಇಂದಿಲ್ಲಿ ರವಿವಾರ ದಿನಪೂರ್ತಿ ಆಗಿಸಿ ಮುಲುಂಡ್ ಪಶ್ಚಿಮದ ಸರಸ್ವತಿವಾಡಿ ಅಲ್ಲಿನ ಶ್ರೀ ಕುಛ್ ದೇಶಿಯಾ ಸರಸ್ವತಿ ಮಹಾ ಸಂಸ್ಥಾನ್ ಟ್ರಸ್ಟ್ ಸಭಾಗೃಹದಲ್ಲಿ ಸಂಭ್ರಮಿಸಿದ್ದು ಸಮ್ಮಿಲನ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ದೀಪ ಪ್ರಜಲಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಲಕ್ಷ ್ಮಣ್ ಕರವಳಿ ಮಾತನಾಡಿದರು.

ಭಂಡಾರಿ ಸೇವಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಆರ್.ಎಂ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭಕ್ಕೆ ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿ ಶುಭಶಂಸನೆಗೈದರು.

ಗೌರವ ಅತಿಥಿüಗಳಾಗಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್.ಭಂಡಾರಿ, ಭಂಡಾರಿ ಮಹಾ ಮಂಡಲ ಅಧ್ಯಕ್ಷ ಸದಾಶಿವ ಎ.ಭಂಡಾರಿ ಸಕಲೇಶಪುರ, ಶಿವಾಸ್ ಹೇರ್ ಡಿಝೈನರ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಶಿವರಾಮ ಕೆ.ಭಂಡಾರಿ, ತಿರುಮಲ ಸಮೂಹ ಪುಣೆ ಇದರ ಆಡಳಿತ ನಿರ್ದೇಶಕ ಪ್ರಶಾಂತ್ ಕಾರ್ಕಳ್ ಪುಣೆ, ಸಮಾಜ ಸೇವಕರಾದ ಜಯಕೃಷ್ಣ ಎ.ಶೆಟ್ಟಿ, ಇಂದ್ರಾಳಿ ದಿವಾಕರ ಶೆಟ್ಟಿ, ಭಂಡಾರಿ ಸೇವಾ ಸಮಿತಿ ಮುಂಬಯಿ ಮಾಜಿ ಅಧ್ಯಕ್ಷರುಗಳಾದ ಮಾಧವ ಆರ್.ಭಂಡಾರಿ ಮೂಡಬಿದ್ರೆ, ನ್ಯಾ| ಸುಂದರ್ ಜಿ.ಭಂಡಾರಿ, ಬಾಲಕೃಷ್ಣ ಪಿ.ಭಂಡಾರಿ, ನ್ಯಾ| ಶೇಖರ ಎಸ್.ಭಂಡಾರಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರಾದ ಲಲಿತಾ ವಿ.ಭಂಡಾರಿ, ಶೋಭಾ ಸುರೇಶ್ ಭಂಡಾರಿ, ಹಾಲಿ ಕಾರ್ಯಾಧ್ಯಕ್ಷೆ ಶಾಲಿನಿ ಆರ್.ಭಂಡಾರಿ ವೇದಿಕೆಯಲ್ಲಿ ಆಸೀನರಾಗಿದ್ದು ಅತಿಥಿsಗಳನ್ನೊಗೊಂಡು ಅಧ್ಯಕ್ಷರು ವಿದ್ಯಾನಿಧಿ ಮನವಿ ಪತ್ರ ಬಿಡುಗಡೆ ಗೊಳಿಸಿದರು.

ಅತಿಥಿüಗಳು ಸಮಾಜದ ಸಾಧಕರಾದ ವಿಠಲ್ ಕೆ.ಭಂಡಾರಿ ಭಾಂಡೂಪ್ ಮತ್ತು ಪುಷ್ಪ ವಿಠಲ್, ಟಿ.ಎಂ ಶೇಖರ್ ಭಂಡಾರಿ ಮುಲುಂಡ್ ಮತ್ತು ಶುಭ ಶೇಖರ್ ದಂಪತಿಗಳನ್ನು ಹಾಗೂ ವನಿತಾ ಎಸ್.ಭಂಡಾರಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ಹಾಗೂ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು.

ಭಂಡಾರಿ ಸಮಾಜ ಸದ್ಯ ಭಾರೀ ಸಾಂಘಿಕತೆಯಲ್ಲಿ ಸಾಗುತ್ತಿದೆ. ಮುಂಬಯಿವಾಸಿ ಭಂಡಾರಿಗಳು ಏಕತೆಗೆ ಸರ್ವರಿಗೂ ಮಾದರಿ ಆಗಿದ್ದಾರೆ. ಮುಂಬಯಿ ಸಂಘದಿಂದ ಭಂಡಾರಿ ಸಮುದಾಯ ಜಾಗತಿಕವಾಗಿ ಪ್ರಸಿದ್ಧಿಗೆ ಬಂದಿದೆ ಎನ್ನಲು ಅಭಿಮಾನವೆಣಿಸುತ್ತಿದೆ ಎಂದು ಸದಾಶಿವ ಭಂಡಾರಿ ತಿಳಿಸಿದರು.

ಸುರೇಶ್ ಭಂಡಾರಿ ಮಾತನಾಡಿ ತುಳುವರು ಅಂದರೆ ಏಕತೆಗೆ ಮತ್ತು ಸಂಸ್ಕೃತಿಗೆ ಹೊಂದಿ ಕೊಳ್ಳುವವರು ಎಂದಾರ್ಥ. ಮುಂಬಯಿನ ಎಲ್ಲಾ ತುಳು ಕನ್ನಡಿಗರು ಸಂಘಟನಾ ಚತುರರು. ಈ ಮಧ್ಯೆ ನಮ್ಮ ಭಂಡಾರಿ ಸಂಘವು ಒಳಗೊಂಡಿದೆ. ಇಂದಿಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಸೇರಿದ ಸ್ವಸಮಾಜದ ಬಂಧುಗಳ ಏಕತೆಯಿಂದ ಸಮುದಾಯದ ಅಭಿವೃದ್ಧಿ ಆಗುವಂತೆ ಭಾಸವಾಗುತ್ತದೆ. ಇಂತಹ ಒಗ್ಗಟ್ಟು ಇನ್ನಷ್ಟು ಬೆಳೆಯಲಿ. ದಾನ ಧರ್ಮದಿಂದ ಪುಣ್ಯ ಕಟ್ಟಿಕೊಳ್ಳಲು ಮನುಜ ಜನ್ಮದಿಂದ ಸಾಧ್ಯವಾಗಿದ್ದು ಇದನ್ನು ಮಾಡಿ ಪುಣ್ಯಕಟ್ಟಿ ಕೊಳ್ಳೋಣ. ನಮ್ಮ ಜೀವನವು ಈ ಜನ್ಮಕ್ಕೆ ಮಾತ್ರವಲ್ಲ ಜನ್ಮಜನ್ಮಾಂತರಕ್ಕೆ ಮುನ್ನಡೆಯವಂತಾಗಬೇಕು ಅದಕ್ಕಾಗಿ ಸೆವೆಯ ಮೂಲಕ ಸಮಾಜ ಋಣ ಪೂರೈಸಿ ಜೀವನ ಹಸನುಗೊಳಿಸೋಣ ಎಂದರು.

ಬೆಳಿಗ್ಗೆ ಉಪಸ್ಥಿತ ಪದಾಧಿಕಾರಿಗಳನ್ನೊಗೊಂಡು ಅಧ್ಯಕ್ಷರು ದೀಪ ಪ್ರಜ್ವಲಿಸಿ ವಾರ್ಷಿಕ ಸಮ್ಮಿಲನಕ್ಕೆ ಚಾಲನೆ ನೀಡಿದರು. ಬಳಿಕ ರಂಗೋಲಿ, ಚಿತ್ರಕಲಾ ಸ್ಪರ್ಧೆ ನಡೆಸಲ್ಪಟ್ಟಿತು. ಸಂಸ್ಥೆಯ ಸದಸ್ಯರು, ಮಹಿಳೆಯರು ಮತ್ತು ಮಕ್ಕಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ಹರೀಶ್ ಶೆಟ್ಟಿ ಎರ್ಮಾಳ್ ನಿರ್ದೇಶನದಲ್ಲಿ ಪನ್ವಿ ಕ್ರಿಯೇಷನ್ಸ್ ಸಂಸ್ಥೆ ಸಂಗೀತ, ನೃತ್ಯಗಳ ಮೇಲೈಕೆಯ ಸಂಗೀತ ರಸಮಂಜರಿ ಕಾರ್ಯಕ್ರಮ ಪ್ರಸ್ತುತ ಪಡಿಸಿತು.

ಗಾಯತ್ರಿ ನಾರಾಯಣ ಭಂಡಾರಿ ಪ್ರಾರ್ಥನೆಯನ್ನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಶಶಿಧರ ಡಿ.ಭಂಡಾರಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷರುಗಳಾದ ಪ್ರಭಾಕರ್ ಪಿ.ಭಂಡಾರಿ ಮತ್ತು ಪುರುಷೋತ್ತಮ ಜಿ.ಭಂಡಾರಿ, ಕು| ಕ್ಷಮಾ ಆರ್.ಭಂಡಾರಿ ಮತ್ತು ಪಲ್ಲವಿ ಆರ್.ಭಂಡರಿ ಅತಿಥಿüಗಳನ್ನು ಪರಿಚಯಿಸಿದರು. ಗೌರವ ಕೋಶಾಧಿಕಾರಿ ಕರುಣಾಕರ ಎಸ್.ಭಂಡಾರಿ, ಜೊತೆ ಕಾರ್ಯದರ್ಶಿ ನ್ಯಾ| ಶಾಂತರಾಜ್ ಡಿ.ಭಂಡಾರಿ, ಜೊತೆ ಕೋಶಾಧಿಕಾರಿಗಳಾದ ಪ್ರಕಾಶ್ ಕೆ.ಭಂಡಾರಿ ಮತ್ತು ಸುಭಾಶ್ ಜಿ.ಭಂಡಾರಿ, ಮಹಿಳಾ ಕಾರ್ಯಾದರ್ಶಿ ಜಯಸುಧಾ ಟಿ.ಭಂಡಾರಿ ಮತ್ತಿತರ ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಜಯಶೀಲ ಭಂಡಾರಿ ಮತ್ತು ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ರೇಖಾ ಎ.ಭಂಡಾರಿ ಮತ್ತು ಸನ್ಮಾನಿತರನ್ನು ಪರಿಚಯಿಸಿದರು. ಸರಿತಾ ಕೆ.ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ರಂಜಿತ್ ಎಸ್.ಭಂಡಾರಿ ವಂದನಾರ್ಪಣೆಗೈದರು.

 
More News

ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್‍ನ ಪ್ರಥಮ ವಾರ್ಷಿಕ ಮಹಾಸಭೆ
ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್‍ನ ಪ್ರಥಮ ವಾರ್ಷಿಕ ಮಹಾಸಭೆ
ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2019 ಪುರಸ್ಕಾರ ಪ್ರಕಟ  ಪ್ರಥಮ ಪುರಸ್ಕಾರಕ್ಕೆ ಹಿರಿಯ ಪತ್ರಕರ್ತ ನ್ಯಾ| ವಸಂತ ಕಲಕೋಟಿ ಆಯ್ಕೆ
ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2019 ಪುರಸ್ಕಾರ ಪ್ರಕಟ ಪ್ರಥಮ ಪುರಸ್ಕಾರಕ್ಕೆ ಹಿರಿಯ ಪತ್ರಕರ್ತ ನ್ಯಾ| ವಸಂತ ಕಲಕೋಟಿ ಆಯ್ಕೆ
ಶಿವಾ'ಸ್ ಹೇರ್ ಡಿಝೈನರ್ಸ್ ಪ್ರಸಿದ್ಧಿಯ ಶಿವರಾಮ ಕೆ.ಭಂಡಾರಿಗೆ ಲಂಡನ್‍ನಲ್ಲಿ ಭಾರತ್ ರತ್ನ ಜೀವಮಾನ  ಪ್ರಶಸ್ತಿ-2019 ಪ್ರಾಪ್ತಿ
ಶಿವಾ'ಸ್ ಹೇರ್ ಡಿಝೈನರ್ಸ್ ಪ್ರಸಿದ್ಧಿಯ ಶಿವರಾಮ ಕೆ.ಭಂಡಾರಿಗೆ ಲಂಡನ್‍ನಲ್ಲಿ ಭಾರತ್ ರತ್ನ ಜೀವಮಾನ ಪ್ರಶಸ್ತಿ-2019 ಪ್ರಾಪ್ತಿ

Comment Here