Tuesday 23rd, April 2019
canara news

ಮೈಸೂರು ಅಸೋಸಿಯೇಷನ್ ಸಭಾಗೃಗದಲ್ಲಿ ತುಳು ಸಾಹಿತ್ಯ-ಸಂಸ್ಕೃತಿ ಮೇಳೈಸಿದ ತುಳು ಸತ್ಸಂಗ

Published On : 24 Dec 2018


ಬದಲಾದ ಕಾಲದಲ್ಲೂ ಸಂಸ್ಕೃತಿ ಉಳಿವು ಕಷ್ಟವಲ್ಲ : ಶ್ರೀ ವಿದ್ಯಾಪ್ರಸನ್ನ ತೀರ್ಥರು

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.23: ಪೂರ್ವಜರು ಕಷ್ಟಕಾಲದಲ್ಲಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ್ದಾರೆ. ಆದರೆ ಪ್ರಸ್ತುತ ಇಷ್ಟದ ಕಾಲದಲ್ಲಿ ನಾವು ಪರಂಪರಿಕಾ ಮೂಲ ಸಂಸ್ಕೃತಿಯನ್ನು ಮರೆತು ಬಾಳುವುದು ಅನಿಷ್ಟ. ಸದ್ಯ ಬೇಕಾದಷ್ಟು ಅನುಕೂಲಕರವಾದ ಸಮಯ ನಮಗಿದೆ. ಆದರೂ ಬುದ್ಧಿಜಿವಿಯಾದ ಮಾನವನಿಗೆ ಸದ್ಯ ಪುರ್ಸೋತ್ತು ಇಲ್ಲವಾಗಿರುವುದೇ ದುರಂತ. ಪೂಜೆಪುರಸ್ಕಾರದಿಂದ ಹಿಡಿದು ಎಲ್ಲವನ್ನೂ ಹಣಕಾಸು ಮೂಲಕವೇ ಪೂರೈಸುವ ಕಾಲಘಟ್ಟವಾಗಿಸಿ ಬದುಕುವ ಮನುಜೀವಿಗೆ ಸಂಸ್ಕೃತಿಯ ಮರೆವು ಕಾಲ ಬಂದೊದಗಿರುವುದೇ ವಿಪರ್ಯಾಸ. ಆದರೂ ಸಾಧ್ಯವಾದ ಸಂಸ್ಕಾರಗಳನ್ನು ಉಳಿಸುವ ಪ್ರಯತ್ನ ಮಾಡೋಣ ಎಂದು ಜಗದ್ಗುರು ಶ್ರೀ ಮಧ್ವ್ವಾಚಾರ್ಯ ಮಹಾಸಂಸ್ಥಾನಂ ಶ್ರೀ ಸಂಪುಟ ನರಸಿಂಹಸ್ವಾಮೀ ಶ್ರೀ ಸುಬ್ರಹ್ಮಣ್ಯ ಇದರ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥರು ತಿಳಿಸಿದರು.

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಭಕ್ತಾಧಿಗಳು ಮತ್ತು ದೈವಜ್ಞ ವಿದ್ವಾನ್ ಹೆರ್ಗ ರವೀಂದ್ರ ಭಟ್ ಇವರ ಸಂಯೋಜನೆ ಮತ್ತು ಪರಿಕಲ್ಪನೆಯಲ್ಲಿ ಇಂದಿಲ್ಲಿ ಭಾನುವಾರ ಸಂಜೆ ಮಾಟುಂಗಾದಲ್ಲಿನ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ತುಳು ಸತ್ಸಂಗ ಕಾರ್ಯಕ್ರಮ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾಪ್ರಸನ್ನರು ತುಳುನಾಡಿನ ನೆಲದ ಮಣ್ಣಿನ ಗುಣವೇ ಸರ್ವೋತ್ಕೃಷ್ಟವಾದುದು. ಇಂತಹ ತವರೂರಿನ ಸೌಂದರ್ಯವಾಗಲಿ, ದೈವದೇವರುಗಳ ವಿಚಾರ, ಹಬ್ಬಹರಿದಿನಗಳನ್ನಾದರೂ ಮಕ್ಕಳಲ್ಲಿ ತಿಳಿಪಡಿಸಿ ರೂಢಿಸುತ್ತಾ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲ ಪರಮ ಕರ್ತವ್ಯವಾಗಬೇಕು. ಮುಂಬಯಿಗರ ಕೊಡುಗೆಯಿಲ್ಲದೆ ತುಳುನಾಡ ಸಂಸ್ಕೃತಿ ಉಳಿದಿಲ್ಲ. ಬದಲಾದ ಕಾಲಘಟ್ಟದಲ್ಲೂ ಸಂಸ್ಕೃತಿಯ ಉಳಿವು ಕಷ್ಟವಲ್ಲ. ಸಾಂಸರಿಕ ಜವಾಬ್ದಾರಿ ತಿಳಿದು ಬಾಳಿದಾಗಲೇ ಸಂಸ್ಕೃತಿಯ ಉಳಿವು ಸಾಧ್ಯವಾಗುವುದು ಎಂದರು.

ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರಾಗಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ, ಲೋನಾವಳಾ ನಗರ ಪರಿಷತ್‍ನ ಉಪಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್ ಎಸ್.ಪೂಜಾರಿ ಉಪಸ್ಥಿತರಿದ್ದು ಬಂಟ್ಸ್ ಸಂಘ ಮುಂಬಯಿ ಸಂಚಾಲಕತ್ವದ ಎಸ್.ಎಂ ಶೆಟ್ಟಿ ಕಾಲೇಜ್ ಪೆÇವಾಯಿ ಪ್ರಾಂಶುಪಾಲ ಶ್ರೀಧರ್ ಎಸ್. ಶೆಟ್ಟಿ ಉಪಸ್ಥಿತರಿದ್ದು, ಸಾಹಿತ್ಯ ಬಳಗ ಮುಂಬಯಿ ಇದರ ಅಧ್ಯಕ್ಷ ಹೆಚ್.ಬಿ.ಎಲ್ ರಾವ್ ಮತ್ತು ಹಿರಿಯ ಹೊಟೇಲು ಉದ್ಯಮಿ ಶಿವರಾಮ ಜಿ.ಶೆಟ್ಟಿ ಅಜೆಕಾರು ಇವರನ್ನು ಸನ್ಮಾನಿಸಿ ಅಭಿನಂದಿಸಿದರು.

ಶಾಂಭವಿ ಆಚಾರ್ಯ ಮತ್ತು ಬಳಗದ ಪ್ರಾರ್ಥನೆಯೊದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶ್ರೀ ಅಂಬಿಕಾ ದೇವಸ್ಥಾನ ವಿದ್ಯಾವಿಹಾರ್‍ನ ಪ್ರಧಾನ ಅರ್ಚಕ ವೇ| ಮೂ| ಪೆರ್ಣಂಕಿಲ ಹರಿದಾಸ ಭಟ್ ಸ್ವಾಗತಿಸಿ ಆಶಯ ನುಡಿಗಳನ್ನಾಡಿದರು. ಹೆರ್ಗ ರವೀಂದ್ರ ಭಟ್ ಪ್ರಸ್ತಾವನೆಗೈದÀರು. ರಾಷ್ಟ್ರಪತಿ ಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ ಶೆಟ್ಟಿ ಮತ್ತು ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಸುಬ್ರಹ್ಮಣ್ಯ ಮಠ ಮುಂಬಯಿ ಶಾಖೆ (ಚೆಂಬೂರು) ವ್ಯವಸ್ಥಾಪಕ ವಿಷ್ಣು ಕಾರಂತ್ ಧನ್ಯವದಿಸಿದರು.

 
More News

ಸ್ವರ್ಗೀಯ ತುಳಸಿ ವೇಣುಗೋಪಾಲ್-ಡಾ| ಬಿ.ಎ ಸನದಿ ಅವರಿಗೆ
ಸ್ವರ್ಗೀಯ ತುಳಸಿ ವೇಣುಗೋಪಾಲ್-ಡಾ| ಬಿ.ಎ ಸನದಿ ಅವರಿಗೆ
ಕುಂದಾಪುರದ ಆಥಿರ್üಕ ಅಸಹಾಯಕ ವಧುವಿಗೆ ಪಾಣಿಗ್ರಹಣ ನೆರವೇರಿಸಿದ
ಕುಂದಾಪುರದ ಆಥಿರ್üಕ ಅಸಹಾಯಕ ವಧುವಿಗೆ ಪಾಣಿಗ್ರಹಣ ನೆರವೇರಿಸಿದ
ಮುಲುಂಡ್ ಕನ್ನಡ ಸಂಘದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ
ಮುಲುಂಡ್ ಕನ್ನಡ ಸಂಘದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ

Comment Here