Friday 29th, March 2024
canara news

ಯು.ಎ.ಇ ಕೆ.ಸಿ.ಎಫ್ ಪ್ರತಿಭೋತ್ಸವ ಲೋಗೋ ಬಿಡುಗಡೆಗೊಳಿಸಿದ NMC ಸಮೂಹ ಸಂಸ್ಥೆಗಳ ಸಂಸ್ಥಾಪಕ ಕರಾವಳಿ ಕನ್ನಡಿಗರ ಅಭಿಮಾನ ಬಿ.ಆರ್ ಶಟ್ಟಿ

Published On : 25 Dec 2018   |  Reported By : Shodhan Prasad


ಅಶ್ರಫ್ ಕುಕ್ಕಾಜೆಯವರು ವಿನ್ಯಾಸಗೊಳಿಸಿದ ಲೋಗೋ ಆಯ್ಕೆ ಕೆ.ಸಿ.ಎಫ್ ಯು.ಎ.ಇ ನ್ಯಾಷನಲ್ ಸಮಿತಿಯಿಂದ ಆಯೋಜಿಸಿದ ಪ್ರತಿಭೋತ್ಸವ ಯುನಿಕ್ ಲೋಗೋ ಕಂಟೆಸ್ಟ್-2019 ಸ್ಪರ್ಧೆಯಲ್ಲಿ ಅಶ್ರಫ್ ಕುಕ್ಕಾಜೆ ವಿನ್ಯಾಸಗೊಳಿಸಿದ ಲೋಗೋವನ್ನು ರಾಷ್ಟ್ರೀಯ ಸಮೀತಿ ಆಯ್ಕೆ ಮಾಡಿ ಪ್ರತಿಭೋತ್ಸವ ಲೋಗೋವಾಗಿ ಬಳಸುವಂತೆ ಸೂಚಿಸಿದೆ. *ರಾಜ್ಯದಿಂದ ವಿಶೇಷವಾಗಿ ಪರಿಣತಿ ಹೊಂದಿದ ವಿನ್ಯಾಸಗಾರರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಲೋಗೋ ವಿನ್ಯಾಸವನ್ನು ಕಳುಹಿಸಿಕೊಟ್ಟಿದ್ದರು*. 50 ಕ್ಕೂ ಮಿಕ್ಕ ವಿನ್ಯಾಸವನ್ನು ಪರಿಶೀಲಿಸಿದ ಕೆ.ಸಿ.ಎಫ್ ರಾಷ್ಟ್ರೀಯ ನಾಯಕರು ಕೊನೆಗೆ ಅಶ್ರಫ್ ಕುಕ್ಕಾಜೆಯವರು ರಚಿಸಿದ ಲೋಗೋವನ್ನು ಅಧಿಕೃತವಾಗಿ ಆಯ್ಕೆ ಮಾಡಲಾಯಿತು.

*ಕೆ.ಸಿ.ಎಫ್ ರಾಷ್ಟ್ರೀಯ ನಾಯಕರು ಮತ್ತು ಪ್ರತಿಭೋತ್ಸವ ಸ್ವಾಗತ ಸಮಿತಿ ನಾಯಕರ ಸಹಭಾಗಿತ್ವದಲ್ಲಿ ಯುಎಇ ಎಕ್ಸ್ ಚೇಂಜ್ ಮಾಲಕ NMC ಸಮೂಹ ಸಂಸ್ಥೆಗಳ ಸಂಸ್ಥಾಪಕ ಪ್ರಖ್ಯಾತ ಉದ್ಯಮಿ ಸೃಜನಶೀಲ ವ್ಯಕ್ತಿತ್ವದಿಂದ ಜನ ಮನಸ್ಸು ಗೆದ್ದ ಕರಾವಳಿ ಕನ್ನಡಿಗರ ಹೆಮ್ಮೆಯ ಪುತ್ರ ಬಿ.ಆರ್ ಶೆಟ್ಟಿಯವರು ಅಧಿಕೃತವಾಗಿ ಬಿಡುಗಡೆಗೊಳಿಸಿದರು.*

ಪ್ರಸ್ತುತ ಲೋಗೋವಿನ ತಳ ಭಾಗ ಮರಳು ಗಾಡಿನಿಂದ ಆವೃತ್ತಗೊಂಡಿದ್ದು ಪ್ರವಾಸೀ ಜೀವನದ ಆರಂಭವನ್ನು ತಿಳಿಸುತ್ತದೆ. ಮರಳುಗಾಡಿನ ದೇಶೀಯ ಆಹಾರ ಕಾರ್ಜುರದ ಮರವೊಂದು "k" ಆಕಾರದಲ್ಲಿ ಭಾಗಿ ನಿಂತಿದ್ದು ಅರಬ್ ರಾಷ್ಟ್ರದ ಮರಳುಗಾಡಿನ ಪ್ರಶಾಂತ ವಾತಾವರಣದಲ್ಲಿ ಬೆಳೆದು ಬರುತ್ತಿರುವ ಕಾರ್ಜುರದ ಮರದ ಹಾಗೆ ಪ್ರವಾಸಿ ಜೀವನವು ಆರಂಭಗೊಳ್ಳುತ್ತದೆ. ಚಂದ್ರನ ಆಕಾರದಲ್ಲಿ "C" ಮೂಡಿ ಬಂದಿದ್ದು ಪ್ರವಾಸಿ ಜೀವನದ ಬೆಳಕಾಗಿ ಕೆ.ಸಿ.ಎಫ್ ಕಾರ್ಯನಿರ್ವಹಿಸುತ್ತಿದೆ ಎಂದು ಸೂಚಿಸುತ್ತದೆ. ಗಿಡ ಮತ್ತು ಎಲೆಗಳ ರೂಪದಲ್ಲಿ "F" ಮೂಡಿ ಬಂದಿದ್ದು . ಇದರ ಮಧ್ಯೆ ಪೆನ್ಸಿಲ್ ಆಕಾರದಲ್ಲಿ ಒಂದು ಎಲೆಯು ಪ್ರತಿಭೆಗಳನ್ನು ಹೋಲುವ ರೀತಿಯಲ್ಲಿದೆ.ಇದರ ಮೇಲ್ತುದಿಯಲ್ಲಿ ಬಣ್ಣ ಬಣ್ಣದ ಬಿಂದುಗಳು ಸೌಂದರ್ಯವನ್ನು ನೀಡಿದ್ದು ಕೆ.ಸಿ.ಎಫ್ ಮೂಲಕ ವಿವಿಧ ರೀತಿಯ ಪ್ರಯೋಜನಗಳನ್ನು ಪಡೆದು ಸುಂದರವಾದ ಪ್ರವಾಸಿ ಜೀವನವನ್ನು ಆಸ್ವಾದಿಸಬಹುದು ಎಂಬ ಸ್ಪಷ್ಟ ಸಂದೇಶವನ್ನು ಸಾರುತ್ತದೆ.

ವಿನ್ಯಾಸ ಕಳುಹಿಸಿಕೊಟ್ಟು ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ವಿನ್ಯಾಸಗಾರರಿಗೂ ಯು.ಎ.ಇ ಕೆ.ಸಿ.ಎಫ್ ಅಭಾರಿಯಾಗಿದೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here