Tuesday 20th, August 2019
canara news

ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಮಹಾಸಭೆ

Published On : 27 Dec 2018   |  Reported By : Rons Bantwal


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ (ಬ್ರಹ್ಮಾವರ), ಡಿ.25: ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಯ ಮಹಾಸಭೆ ಕಳೆದ ಭಾನುವಾರ ಕರ್ನಾಟಕ ವಿಶ್ವಕರ್ಮ ಅಸೋಶೀಯೇಶನ್ ಮುಂಬಯಿ ಮಾಜಿ ಅಧ್ಯಕ್ಷ ಜಿ.ಟಿ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ವ್ಯಕ್ತಿ ಅಧಿಕಾರಕ್ಕಾಗಿ ಅಧಿಕಾರಕ್ಕೆ ಬರಬಾರದು ದೇವಸ್ಥಾನದ ಅಭಿವೃದ್ಧಿಗೆ ಮತ್ತು ಸಮಾಜದ ಅಭಿವೃದ್ಧಿಗೆ ಆಡಳಿತ ಮಂಡಳಿ ಪೂರಕವಾಗುವರು ಬೇಕು ಎಂದರು.

ಕೂಡುವಳಿಕೆಯ ನಾನಾ ಭಾಗದಿಂದ ಆಡಳಿತ ಮಂಡಳಿಗೆ ಆಕಾಂಕ್ಷಿಗಳ ಪಟ್ಟಿ ಬಂದಿದ್ದು ಸಭಾಧ್ಯಕ್ಷರು ದೇವಸ್ಥಾನದ ಅಭಿವೃದ್ಧಿ ಮತ್ತು ಪರಂಪರೆಗೆ ಅನುಕೂಲವಾಗುವ ರೀತಿಯಲ್ಲಿ ಆಯ್ದ ಕೆಲವರ ಹೆಸರನ್ನು ಹೇಳಿದಾಗ ಸರ್ವಾನುಮತದಿಂದ ಆಯ್ಕೆ ನಡೆಯಿತು.

ಆಡಳಿತ ಮೋಕ್ತೇಸರರಾಗಿ ವಿ.ಶ್ರೀಧರ ಆಚಾರ್ಯ ವಡೆಯರಹೋಬಳಿ ಪುನರಾಯ್ಕೆಗೊಂಡರು.2ನೇ ಮೋಕ್ತೇಸರರಾಗಿ ಪ್ರವೀಣ ಆಚಾರ್ಯ ರಂಗನಕೆರೆ 3ನೇ ಮೊಕ್ತೇಸರರಾಗಿ ರವಿ ಆಚಾರ್ಯ ಕೆಳಾರ್ಕಳ ಬೆಟ್ಟು ಮತ್ತು ಇನ್ನಿತರ ಸದಸ್ಯರ ಆಯ್ಕೆ ನಡೆಯಿತು. ಬ್ರಹ್ಮಾವರ ವೃತ್ತ ನೀರೀಕ್ಷಕ ಶ್ರೀಕಾಂತ್, ಪಿಎಸ್‍ಐ ರಾಘವೇಂದ್ರ ದೇವಸ್ಥಾನದ ತಂತ್ರಿಗಳಾದ ಲಕ್ಷ್ಮೀಕಾಂತ ಶರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೇವಸ್ಥಾನದ ಎಲ್ಲಾ ಗ್ರಾಮ ಮೋಕ್ತೇಸರ ಸಮಕ್ಷಮದಲ್ಲಿ ಮತ್ತು ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಆಯ್ಕೆ ಪ್ರಕ್ರೀಯೆಯಲ್ಲಿದ್ದರು. ದಯಾನಂದ ಕೃಷ್ಣಯ್ಯ ಆಚಾರ್ಯ ಸ್ವಾಗತಿಸಿದರು. ವಿ.ಶ್ರೀಧರ ಆಚಾರ್ಯ ಪ್ರಸ್ತವನೆಗೈದರು. ಟಿ.ಜಿ ಆಚಾರ್ಯ ಸಭಾಕಲಾಪ ನಿರೂಪಿಸಿದರು. ಗಣಪತಿ ಆಚಾರ್ಯ ವರದಿ ವಾಚಿಸಿದರು. ಹರೀಶ ಆಚಾರ್ಯ ಕುಳಾಯಿ ಲೆಕ್ಕಪತ್ರ ಮಂಡಿಸಿ, ನಾಗರಾಜ ಆಚಾರ್ಯ ವಂದಿಸಿದರು.

 
More News

ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ
ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ
ನೆರೆ ಬಾಧಿತ ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ ಬಿಎಸ್‍ಎಂ-ಮಹಿಳಾ ವಿಭಾಗ
ನೆರೆ ಬಾಧಿತ ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ ಬಿಎಸ್‍ಎಂ-ಮಹಿಳಾ ವಿಭಾಗ
ವಾಶಿಯಲ್ಲಿ ಸಾಹಿತ್ಯ ಬಳಗ ಮುಂಬಯಿ ಆಯೋಜಿಸಿದ ಮಕ್ಕಳ ಪ್ರಥಮ ಸಮ್ಮೇಳನ
ವಾಶಿಯಲ್ಲಿ ಸಾಹಿತ್ಯ ಬಳಗ ಮುಂಬಯಿ ಆಯೋಜಿಸಿದ ಮಕ್ಕಳ ಪ್ರಥಮ ಸಮ್ಮೇಳನ

Comment Here