Saturday 20th, April 2024
canara news

ಸಾಣೆಕಲ್ಲು ರಾಮಕೃಷ್ಣ ನಾಯಕ್ ಜನ್ಮ ಶತಮಾನೋತ್ಸವ

Published On : 31 Dec 2018   |  Reported By : Rons Bantwal


ಮುಂಬಯಿ (ಉಡುಪಿ), ಡಿ.29: ಉಡುಪಿ: ಎರಡು ಶಾಲೆಗಳ ಸ್ಥಾಪಕ ಸಮಿತಿ ಸದಸ್ಯ, ಸಹೃದಯಿ ದಿ.ಸಾಣೆಕಲ್ಲು ರಾಮಕೃಷ್ಣ ನಾಯಕ್ ಅವರ ಜನ್ಮ ಶತಮಾನೋತ್ಸವವು ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಾಟಕದೊಂದಿಗೆ ಹಿರಿಯಡಕ ಸಮೀಪದ ಪಂಚನಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯ ರಂಗಮಂಟಪದಲ್ಲಿ ನಡೆಯಿತು.

ಜ್ಞಾನ ಸುಧಾ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ, ಶಿಕ್ಷಣ ತಜ್ಞ ಡಾ. ಸುಧಾಕರ ಶೆಟ್ಟಿ ಅವರ ಅವರು ಅಧ್ಯಕ್ಷತೆ ವಹಿಸಿದ್ದರು.

ಯಶಸ್ಸಿಗೆ ಸಂಖ್ಯೆ ಮುಖ್ಯವಲ್ಲ ಸಂಕಲ್ಪ ಮುಖ್ಯ. ತಂದೆ-ತಾಯಿಯರನ್ನು ಆಶ್ರಮಕ್ಕೆ ಸೇರಿಸಿ ಬೇಕಾದಷ್ಟು ದುಡ್ಡು ಖರ್ಚು ಮಾಡುವವರೇ ಹೆಚ್ಚಿರುವ ಈ ಕಾಲಘಟ್ಟದಲ್ಲಿ ೨೫ ವರ್ಷಗಳ ಮೊದಲು ತೀರಿ ಹೋದ ತಮ್ಮ ತಂದೆಯನ್ನು ನೆನಪಿಸಿಕೊಂಡು ಶತಮಾನೋತ್ಸವ ಆಚರಿಸುತ್ತಿರುವುದು ಒಂದು ಮಾದರಿಯ ಕೆಲಸ ಎಂದು ಕಾರ್ಯಕ್ರಮದ ಆದ್ಯಕ್ಷತೆ ವಹಿಸಿದ್ದ ಅವರು ಹೇಳಿದರು.

ರಾಮಕೃಷ್ಣ ಣಾಯಕ್ ಚಾರಿಟೇಬಲ್ ಟ್ರಸ್ಟ್ ಸಂಯೋಜಿಸಿದ ಕಾರ್ಯಕ್ರಮದಲ್ಲಿ ಎ.ನರಸಿಂಹ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಗೊಂಡ ರಾಮಕೃಷ್ಣ: ಶತಮಾನದ ಸವಿಸ್ಮರಣೆ ಕೃತಿಯನ್ನು ಸುಧಾಕರ ಶೆಟ್ಟಿ ಅವರು ಬಿಡುಗಡೆಗೊಳಿಸಿದರು.

ರಾಮಕೃಷ್ಣ ನಾಯಕರ ಕಲಾಕೃತಿಯನ್ನು ರಚಿಸಿದ ಕಲಾವಿದ ಹರೀಶ ಸಾಗ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ನ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ ನಾಯಕ್ ಅವರು ಸ್ವಾಗತಿಸಿದರು. ಸಂಘಟಕ ಪತ್ರಕರ್ತ ಶೇಖರ ಅಜೆಕಾರು ಅವರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿದ್ದ ವಿಶ್ರಾಂತ ಶಿಕ್ಷಕಿ ಜಯಂತಿ ಬಾಯಿ ಅವರು ರಾಮಕೃಷ್ಣರ ಸರಳತೆ, ಪ್ರಮಾಣಿಕತೆ, ಊರಿನ ಬಗೆಗಿನ ಕಾಳಜಿ ವಿಶೇಷವಾದುದು ಎಂದು ಅವರ ಗುಣ ವಿಶೇಷತೆಗಳನ್ನು ಪ್ರಶಂಸಿದರು.

ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಸುರೇಂದ್ರ ನಾಯಕ್, ಪಂಚನಬೆಟ್ಟು ಅನುದಾನಿತ ಶಾಲೆಯ ಸಂಚಾಲಕ ಎಂ.ವಿಶ್ವನಾಥ ರೈ, ಪಂಚನಬೆಟ್ಟು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎ.ನರಸಿಂಹ, ಪಂಚನಬೆಟ್ಟು ಶಾಲೆಯ ಮುಖ್ಯೋಪಾಧ್ಯಾಯ ರಮೇಶ್ ಸೇರ್ವೇಗಾರ್, ಪ್ರೌಢ ಶಾಲೆಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ. ಕರುಣಾಕರ ಶೆಟ್ಟಿ, ಮತ್ತು ಶಾಲಾ ಮುಖ್ಯೋಪಾಧ್ಯಾಯ ಪಾಂಡುರಂಗ ನಾಯಕ್ ಮತ್ತು ಕುಟುಂಬದ ಸದಸ್ಯರು ರಾಮಕೃಷ್ಣರ ವೈವಿಧ್ಯಮಯ ವ್ಯಕ್ತಿತ್ವವನ್ನು ಬಣ್ಣಿಸಿದರು. ಸತೀಶ ಬಿ. ಶೆಟ್ಟಿಗಾರ ಮತ್ತು ಸಂದೇಶ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.. ಮಜಭಾರತ ಖ್ಯಾತಿಯ ಆರಾಧನಾ ಭಟ್ ನಿಡ್ಡೋಡಿ ನಿರೂಪಣೆಯಲ್ಲಿ ಪ್ರತಿಭಾನ್ವಿತ ಅತೀಶ್ ಶೆಟ್ಟಿ, ಸಂಕೇತ್ ಮರಿಯಾಡಿ, ಸೃಜನ್ಯ ಜೆ.ಕೆ. ಹೋಮಲ್ಕೆ, ಅಥರ್ವ ಹೆಗ್ಡೆ, ಅಮೋಘ ಹೆಗ್ಡೆ, ಕಲಾಶ್ರೀ ಪ್ರವೀಣ್ ಆಚಾರ್ಯ ಗೋಳಿಯಂಗಡಿ, ಸುನಿಧಿ, ಸುನಿಜ ಮೊದಲಾದವರು ಬೆಳದಿಂಗಳೇ ಸಂಭ್ರಮ ಹೆಸರಿನ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಅಭಿನಯ ಕಲಾವಿದರು ಉಡುಪಿ ಅವರ ಒಂಚಿ ತೂಪಿನಿ ನಾಟಕ ಪ್ರದರ್ಶನವಾಯಿತು. ರಾಧಿಕಾ ನಾಯಕ್ ವಂದಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here