Tuesday 20th, August 2019
canara news

2019 ಜನವರಿ 04 ಡಿ.ಕೆ.ಎಸ್.ಸಿ ಯು.ಎ.ಇ "ಗ್ರಾಂಡ್ ಕರಾವಳಿ ಪ್ಯಾಮಲಿ ಮುಲಾಖತ್"

Published On : 03 Jan 2019   |  Reported By : media release


ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಮರ್ಕಜ್ ಮ್ಯಾನೇಜರ್ ಮೌಲಾನಾ ಮುಸ್ತಫಾ ಸಹದಿ, ಸಾಮಾಜಿಕ ನೇತಾರರಾದ ಮಮ್ತಾಜ್ ಅಲಿ ಹಾಗೂ ಡಿ.ಕೆ.ಎಸ್.ಸಿಸೆಂಟ್ರಲ್ ಕಮಿಟಿ ನೇತಾರರು.

ದುಬೈ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC) ಯು.ಎ.ಇ ವತಿಯಿಂದ ಡಿ.ಕೆ.ಎಸ್.ಸಿ ಸಂಘಟನೆ ಯ ಪ್ರವರ್ತಕರು, ಸದಸ್ಯರು, ಹಿತೈಷಿಗಳು ಹಾಗು ಕರಾವಳಿ ಪ್ರದೇಶದ ಕುಟುಂಬ ಸದಸ್ಯರನ್ನು ಒಂದೇ ಕಡೆ ಸೇರಿಸಿ ಧಾರ್ಮಿಕ ಚೌಕಟ್ಟಿನೊಳಗೆ ಗಂಡಸರು, ಮಹಿಳೆಯರು ಮಕ್ಕಳು ಪ್ರತ್ಯೇಕವಾಗಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಆಟೋಟ ಕಾರ್ಯಕ್ರಮದೊಂದಿಗೆ 2019 ಜನವರಿ 4 ರಂದು ವುಡ್ ಲೀಂ ಪಾರ್ಕ್ ಸ್ಕೂಲ್ ಅಜ್ಮಾನ್ ಇದರ ಒಳಾಂಗಣ ಹಾಗೂ ಒರಾಂಗಣ ವ್ಯವಸ್ಥೆ ಇದ್ದು ಪ್ರಕ್ರತಿ ಸೌಂದರ್ಯ ದಿಂದ ಕೂಡಿದ ಪ್ರದೇಶದಲ್ಲಿ "ಗ್ರಾಂಡ್ ಕರಾವಳಿ ಪ್ಯಾಮಲಿ ಮುಲಾಖತ್" ಸಂಘಟಿಸಿರುತ್ತದೆ. ವಿವಿಧ ಕಾರ್ಯಕ್ರಮಗಳು ಬೆಳಿಗ್ಗೆ 9 ಘಂಟೆಯಿಂದ 12 ತಂಡದಿಂದ ಮಾರ್ಚ್ ಪಾಸ್ಟ್ ನೊಂದಿಗೆ ನಮ್ಮತಾಯ್ನಾಡು ಭಾರತ ದೇಶ ಹಾಗೂ ತಾವು ಇರುವ ಯು.ಎ.ಇ ಎರಡು ರಾಷ್ಟ್ರಗಳ ರಾಷ್ಟ್ರಗೀತೆಯೊಂದಿಗೆ ಹಾಗೂ ದಪ್ ಪ್ರದರ್ಶನ ಅಲ್ಲದೆ ಮಕ್ಕಳಿಗೆ ಹಿರಿಯರಿಗೆ ಮಹಿಳೆಯರಿಗೆ ಪ್ರತ್ಯೇಕ ವಿವಿಧ ಮನಸ್ಸಿಗೆ ಉಲ್ಲಾಸ ತರುವ ಸ್ಪರ್ಧೆಗಳುನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಮರ್ಕಜ್ ಮ್ಯಾನೇಜರ್ ಮೌಲಾನಾ ಮುಸ್ತಫಾ ಸಹದಿ, ಸಾಮಾಜಿಕನೇತಾರರಾದ ಮಮ್ತಾಜ್ ಅಲಿ ಹಾಗೂ ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಹಾಗೂ ಬಹರೈನ್, ಓಮನ್ ರಾಷ್ಟ್ರಗಳ ನೇತಾರರು ಹಾಗೂ ಯು.ಎ.ಇ ಪ್ರಮಖ ಉದ್ಯಮಿಗಳು, ಸಾಮಾಜಿಕ ನೇತಾರರು ಆಗಮಿಸಲಿದ್ದಾರೆ. ವಿಶೇಷವಾಗಿ ತುಂಬೆಆಸ್ಪತ್ರೆ ಅಜ್ಮಾನ್ ಇದರ ಸಹಭಾಗಿತ್ವದಲ್ಲಿ ಉಚಿತ ಅರೋಗ್ಯ ತಪಾಸಣಾ ಕೇಂದ್ರವನ್ನು ತೆರೆಯಲಾಗಿದ್ದು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ.

ಕಾರ್ಯಕ್ರಮವು ಬೆಳಿಗ್ಗೆ ಘಂಟೆ 9 ಕ್ಕೆ ಆಗಮಿಸಿದ ಪ್ರತಿನಿದಿಗಳ ನೋಂದಾವಣೆ ಹಾಗೂ ಬೆಳಿಗ್ಗಿನ ಉಪಹಾರ ಹಾಗೂ 9 .30 ಕ್ಕೆ ಕಾರ್ಯಕ್ರಮವು ಅಧಿಕ್ರತವಾಗಿ ಉದ್ಘಾಟನೆಗೊಳ್ಳಲಿದ್ದು ಕ್ಲಪ್ತ ಸಮಯ 10 ಕ್ಕೆ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆಹಾಗೂ ಮಹಿಳೆಯರು ಮನೆಯಲ್ಲಿ ತಯಾರಿಸಿ ತಂದ ಖಾದ್ಯ ತಿಂಡಿ ತಿನಿಸುಗಳ ಸ್ಪರ್ಧೆಯು ನಡೆಯಲಿದೆ.

ಈ ಮಹತ್ತರವಾದ ಕಾರ್ಯಕ್ರಮಕ್ಕೆ ಕರಾವಳಿ ಯ ಡಿ.ಕೆ.ಎಸ್.ಸಿ ಹಿತೈಷಿಗಳು ಹಾಜರಾಗಿ ಯಶಸ್ವಿ ಗೆ ಸಹಕರಿಸುವಂತೆ ಮುಲಾಖತ್ ಚೆಯರ್ಮೆನ್ ಅಬ್ದುಲ್ ಲತೀಫ್ ಮುಲ್ಕಿ , ರಾಷ್ಟೀಯ ಕಮಿಟಿ ಅಧ್ಯಕ್ಷರಾದ ಹಾಜಿ.ಇಕ್ಬಾಲ್ ಕಣ್ಣಂಗಾರ್, ಪ್ರದಾನ ಕಾರ್ಯದರ್ಶಿ ಯೂಸುಫ್ ಅರ್ಲಪದವು, ಜನರಲ್ ಕನ್ವಿನರ್ ಶೈಫುದ್ದೀನ್ ಪಟೇಲ್ ಹಾಗೂ ಮುಲಾಖತ್ ಕಮಿಟಿ ಮತ್ತು ರಾಷ್ಟೀಯ ಸಮಿತಿ ಸರ್ವ ಸದಸ್ಯರು ವಿನಂತಿಸಿರುತ್ತಾರೆ.

ಪ್ರವೇಶ ಪತ್ರವು DKSC ಎಲ್ಲ ಯೂನಿಟ್ ನೇತಾರರಲ್ಲಿ ಪಡೆಯಬಹದು.
More News

ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ
ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ
ನೆರೆ ಬಾಧಿತ ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ ಬಿಎಸ್‍ಎಂ-ಮಹಿಳಾ ವಿಭಾಗ
ನೆರೆ ಬಾಧಿತ ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ ಬಿಎಸ್‍ಎಂ-ಮಹಿಳಾ ವಿಭಾಗ
ವಾಶಿಯಲ್ಲಿ ಸಾಹಿತ್ಯ ಬಳಗ ಮುಂಬಯಿ ಆಯೋಜಿಸಿದ ಮಕ್ಕಳ ಪ್ರಥಮ ಸಮ್ಮೇಳನ
ವಾಶಿಯಲ್ಲಿ ಸಾಹಿತ್ಯ ಬಳಗ ಮುಂಬಯಿ ಆಯೋಜಿಸಿದ ಮಕ್ಕಳ ಪ್ರಥಮ ಸಮ್ಮೇಳನ

Comment Here