Thursday 28th, March 2024
canara news

ಜ.15: ಮಲಾಡ್ ಕುರಾರ್ ವಿಲೇಜ್‍ನ ಶ್ರೀ ದುರ್ಗಾ ಪರಮೇಶ್ವರಿ ಮಂದಿರದಲ್ಲಿ

Published On : 12 Jan 2019   |  Reported By : Rons Bantwal


ಮಕರ ಸಂಕ್ರಾಂತಿ ಆಚರಣೆ-ಅರಸಿನ ಕುಂಕುಮ ಕಾರ್ಯಕ್ರಮ

ಮುಂಬಯಿ, ಜ.10: ಉಪನಗರ ಮಲಾಡ್ ಪೂರ್ವದ ತಾನಾಜಿ ನಗರದ ಕುರಾರ್ ವಿಲೇಜ್‍ನಲ್ಲಿರುವ ಶ್ರೀ ದುರ್ಗಾ ಪರಮೇಶ್ವರಿ ಮಂದಿರದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಸಮಿತಿ (ರಿ.) ವತಿಯಿಂದ ಇದೇ ಜ.15ನೇ ಮಂಗಳವಾರ ಸಂಜೆ 5.00 ಗಂಟೆಯಿಂದ 7.00 ಗಂಟೆ ವರೆಗೆ ಮಕರ ಸಂಕ್ರಾಂತಿ ಆಚರಣಾ ಪ್ರಯುಕ್ತ ಅರಸಿನ ಕುಂಕುಮ ಕಾರ್ಯಕ್ರಮ ಆಯೋಜಿಸಿದೆ.

ಮಕರ ಸಂಕ್ರಾಂತಿ ಆಚರಣೆಯ ಸಮೀಪ ಸುಮಂಗಲೆಯರು ತಮ್ಮ ಮಾಂಗಲ್ಯ ಭಾಗ್ಯವು ಸ್ಥಿರವಾಗಿರಲೆಂದು ಪರಸ್ಪರ ಹರಸಿಕೊಳ್ಳುವ ಸಂಪ್ರದಾಯ ಅರಸಿನ ಕುಂಕುಮ ಆಗಿದ್ದು, ಅದನ್ನು ಮಹಿಳೆಯರು ಪರಸ್ಪರ ಸ್ನೇಹಮಿಲನ ಕಾರ್ಯಕ್ರಮ ಆಗಿಸುವುದು ರೂಡಿಯಲ್ಲಿದೆ. ಅಂದು ಸಂಜೆ 6.00 ಗಂಟೆಗೆ ಅರಸಿನ ಕುಂಕುಮ ಆಚರಣೆ ಆರಂಭ ಗೊಳ್ಳಲಿದ್ದು ತದನಂತರ 7.30 ಗಂಟೆಗೆ ರಂಗಪೂಜೆ ನಡೆಸಲಾಗುವುದು.

ಅಂತೆಯೇ ಸಭಾ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಮುಖ್ಯ ಅತಿಥಿüಯಾಗಿ ಶಾಸಕಿ (ಎಂಎಲ್‍ಸಿ) ವಿದ್ಯಾತಾಯಿ ಚವ್ಹಾಣ್ (ಎನ್‍ಸಿಪಿ), ಅತಿಥಿüಗಳಾಗಿ ನಗರ ಸೇವಕಿ ದಕ್ಷಾ ಜೆ.ಪಟೇಲ್ (ಬಿಜೆಪಿ), ಸಾಹೇಲಿ ಸುನಿಲ್ ಪ್ರಭು, ಶಿವಸೇನೆ ಉಪವಿಭಾಗ ಪ್ರಮುSರಾದ ಪೂಜಾ ಚವ್ಹಾಣ್, ರೂಪಾಲಿ ರಾವ್ ರಾಣೆ, ರಾಜಕೀಯ ಧುರೀಣೆಯರಾದ ರೀನಾ ಸುವಳೆ ರತ್ನ ಪ್ರಭಾ ಶಿವಾಜಿ ಠಾಕೂರ್ ಆಗಮಿಸಲಿದ್ದಾರೆ.

ಈ ಮಹಿಳಾ ಪ್ರಾಧಾನ್ಯ ಕಾರ್ಯಕ್ರಮಕ್ಕೆ ಮಲಾಡ್ ಪರಿಸರದ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಮಿತಿಯ ಅಧ್ಯಕ್ಷÀ ರಘುನಾಥ ಕೊಟ್ಟಾರಿ, ಉಪಾಧ್ಯಕ್ಷ ಪದ್ಮನಾಭ ಟಿ.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಎಸ್.ಬಿ ಕೋಟ್ಯಾನ್, ಕೋಶಾಧಿಕಾರಿ ಬಾಬು ಎಂ.ಸುವರ್ಣ, ಎಲ್ಲಾ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಅರ್ಚಕರಾದ ರಾಘವೇಂದ್ರ ಭಟ್ ಸೂಡ ಮತ್ತು ಮಹಿಳಾ ಸದಸ್ಯೆಯರುಗಳಾದ ವತ್ಸಲ ಎಸ್.ಕೋಟ್ಯಾನ್, ಕಲಾವತಿ ಜಿ. ಕೋಟ್ಯಾನ್, ಲತಾ ಜಿ.ಕುಂದರ್, ಆಶಾ ಆರ್.ಕೋಟ್ಯಾನ್, ಗೀತಾ ಸಿ.ಜತ್ತನ್ ಈ ಮೂಲಕ ವಿನಂತಿಸಿದ್ದಾರೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here