Thursday 25th, April 2024
canara news

ಐವತ್ತ ಎಂಟನೇ ವಾರ್ಷಿಕೋತ್ಸವ ಆಚರಿಸಿದ ಗುರುನಾರಾಯಣ ನೈಟ್ ಹೈಸ್ಕೂಲ್

Published On : 13 Jan 2019   |  Reported By : Rons Bantwal


ಮನುಕುಲಕ್ಕೆ ಶಿಕ್ಷಣವೂ ಜೀವನವಾಗಿದೆ : ದಾಮೋದರ ಸಿ.ಕುಂದರ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಜ.12: ಮನುಕುಲಕ್ಕೆ ಶಿಕ್ಷಣವೇ ಜೀವನವಾಗಿದೆ ಆದುದರಿಂದ ಹಗಲು, ರಾತ್ರಿ ಶಾಲೆಗಳೆಂಬ ಕೀಳರಿಮೆ ಸಲ್ಲದು. ಉತ್ತಮ ಅಂಗಗಳನ್ನು ಪಡೆದು ಸುಶಿಕ್ಷಿತರಾಗಿ ಬದುಕು ಬಂಗಾರವಾಗಿಸಿ. ಕಲಿತ ಶಾಲೆಗೂ ಸ್ವಂತಿಕೆಗೂ ಪ್ರತಿಷ್ಠೆಯನ್ನು ರೂಪಿಸಿ ಎಂದು ಹಿರಿಯ ಹೊಟೇಲು ಉದ್ಯಮಿ, ಭಾರತ್ ಬ್ಯಾಂಕ್‍ನ ನಿರ್ದೇಶಕ ದಾಮೋದರ್ ಸಿ.ಕುಂದರ್ ತಿಳಿಸಿದರು.

ಇಂದಿಲ್ಲಿ ಶನಿವಾರÀ ಸಂಜೆ ಸಾಂತಾಕ್ರೂಜ್‍ನ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಸಂಚಾಲಕತ್ವದ ಗುರುನಾರಾಯಣ ರಾತ್ರಿ ಪ್ರೌಢಶಾಲೆ ತನ್ನ 58ನೇ ವಾರ್ಷಿಕ ದಿನಾಚರಣೆ ಸಂಭ್ರಮಿಸಿದ್ದು ಮುಖ್ಯ ಅತಿಥಿsಯಾಗಿದ್ದು ದಾಮೋದರ್ ಕುಂದರ್ ವಿದ್ಯಾಥಿರ್üಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿ ಕಿವಿಮಾತುಗಳನ್ನಾಡಿ ಮುಂದಿನ ವರ್ಷದಿಂದ ಈ ಶಾಲೆಯಲ್ಲಿ ಅತ್ಯಾಧಿಕ ಅಂಕಗಳೊಂದಿಗೆ ತೇರ್ಗಡೆಯಾಗುವ ಮೊದಲ ವಿದ್ಯಾಥಿರ್üಗೆ ರೂಪಾಯಿ 10,000/-, ದ್ವಿತೀಯ ವಿದ್ಯಾಥಿರ್üಗೆ ರೂಪಾಯಿ 5,000/-, ತೃತೀಯ ವಿದ್ಯಾಥಿರ್üಗೆ ರೂಪಾಯಿ 5,000/- ನಗದು ನನ್ನ ಪರವಾಗಿ ಘೋಷಿಸಿ ಮಕ್ಕಳಿಗೆ ಪೆÇ್ರೀತ್ಸಹಿಸಿ ಸಲಹಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಗೌರವ ಅತಿಥಿsಗಳಾಗಿದ್ದ ಭಾರತ್ ಬ್ಯಾಂಕ್‍ನ ಮಾಜಿ ನಿರ್ದೇಶಕ, ಸಮಾಜ ಸೇವಕ ಎನ್.ಎಂ ಸನಿಲ್ ದೀಪಹಚ್ಚಿ ಸಮಾರಂಭ ಉದ್ಘಾಟಿಸಿದರು. ಗೌರವ ಅತಿಥಿsಗಳಾಗಿ ಗುರುನಾರಾಯಣ ರಾತ್ರಿ ಪ್ರೌಢಶಾಲಾ ಸ್ಥಾಪಕ ಶಿಕ್ಷಕ ಯು.ಕೆ ಸುವರ್ಣ, ಅಕ್ಷಯ ಮಾಸಿಕದ ಗೌರವ ಸಂಪಾದಕ ಎಂ.ಬಿ ಕುಕ್ಯಾನ್ ಉಪಸ್ಥಿತರಿದ್ದರು.


ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್, ವೇದಿಕೆಯಲ್ಲಿದ್ದು ಅತಿಥಿüಗಳನ್ನು ಒಳಗೊಂಡು ವಿವಿಧ ಸ್ಪರ್ಧೆಯಲ್ಲಿ ವಿಜೇತ ಮತ್ತು ಗರಿಷ್ಠ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾಥಿರ್üಗಳಿಗೆ ಪಾರಿತೋಷಕಗಳನ್ನು ವಿತರಿಸಿದರು.

ಇದೇ ಶುಭಾಸರದಲ್ಲಿ ಎಂ.ಬಿ ಕುಕ್ಯಾನ್ ತನ್ನ ಶಾಶ್ವತನಿಧಿಯ ವಾರ್ಷಿಕ ಸ್ವರ್ಣ ಪದಕವನ್ನು 2018ರ ಸಾಲಿನ ಎಸ್‍ಎಸ್‍ಸಿ ಪರೀಕ್ಷೆಯಲ್ಲಿ ಶಾಲೆಯಲ್ಲಿ ಮೊದಲ ಸ್ಥಾನ ಗಳಿಸಿದ ಶಾಲಾ ವಿದ್ಯಾಥಿರ್üನಿ ಮಾ| ಕಿಶೋರ್ ಪವಾರ್ ಅವರಿಗೆ ತನ್ನ ಸ್ವಹಸ್ತದಲ್ಲಿ ಪ್ರದಾನಿಸಿ ಶುಭಾರೈಸಿದರು.

ಎನ್.ಎಂ ಸನಿಲ್ ಮಾತನಾಡಿ ಇದೊಂದು ಸಮಾಜ ನಿರ್ಮಾಣದಉತ್ತಮವಾದ ಕಾರ್ಯಕ್ರಮ. ಎಲ್ಲರನ್ನೂ ವಿದ್ಯಾವಂತರನ್ನಾಗಿಸುವ ಕೆಲಸ ಈ ಸಂಸ್ಥೆಯ ಮಾರ್ಗರ್ಶಕ ಜಯ ಸಿ.ಸುವರ್ಣ ಮಾಡಿದ್ದಾರೆ. ಅವರನ್ನು ಮಕ್ಕಳು ಸದಾ ನೆನಪಿನಲ್ಲಿಡಬೇಕು. ಈ ಶಾಲೆಯನ್ನು ನಿರ್ವಹಿಸುವಲ್ಲಿ ರವೀಂದ್ರ ಅಮೀನ್ ಅವರ ಸೇವೆ ಅನುಪಮವಾದುದು. ಮಕ್ಕಳೇ ತಾವು ಟಿ.ವಿ ಮತ್ತು ಮೊಬೈಲ್ ಇತ್ಯಾದಿಗಳಿಂದ ದೂರವಿದ್ದು ಉತ್ತಮ ವಿದ್ಯಾಭ್ಯಾಸ ಪಡೆದು ಬಾಳು ಹಸನುಗೊಳಿಸಿ ಶಾಲೆಯನ್ನೂ ಬೆಳಗಿಸಿ ಎಂದÀರು.

ಯು.ಕೆ ಸುವರ್ಣಅವರು ಗತದಿನಗಳನ್ನು ಮೆಲುಕು ಹಾಕಿ ಅಂದಿನ ಕಾಲಸ್ಥಿತಿಯನ್ನು ಸ್ಮರಿಸಿದರು. ಕಲಿತ ಶಾಲೆಯನ್ನು ಯಾರೂ ಎಂದೂ ಮರೆಯಬಾರದು. ಉತ್ತಮ ವಿದ್ಯಾಭ್ಯಾಸ ಪಡೆದು ಒಳ್ಳೆಯ ಪ್ರಜೆಗಳಾಗಿ ಎಂದು ವಿದ್ಯಾಥಿರ್üಗಳೆಲ್ಲರಿಗೂ ಹಾರೈಸಿದರು.

ಎಂ.ಬಿ ಕುಕ್ಯಾನ್ ಮಾತನಾಡಿ ನಾವು ನಮ್ಮ ಬಾಲ್ಯಾವಸ್ಥೆಯನ್ನು ಮರೆಯದೆ ಪ್ರತಿಯೊಬ್ಬರನ್ನು ಸಮಾನವಾಗಿ ಕಂಡು ಮುನ್ನಡೆದಾಗ ಅದೇ ಮಾನವ ಜೀವನ ಪಾವನವಾಗುವುದು. ಹಿಂದಿನನ್ನು ಮನವರಿಸಿ ಮುಂದಿನ ಬದುಕನ್ನು ಅರ್ಥಪೂರ್ಣವಾಗಿಸಬೇಕು. ನಮ್ಮಿಂದ ಇನ್ನೊಬ್ಬರಿಗೆ ಉಪಕಾರ ಆಗುವ ನಿಟ್ಟಿನಲ್ಲಿ ಸಾಮರಸ್ಯಯುತವಾಗಿ ಜೀವನ ಸಾಗಿಸಿದಾಗ ನಾವು ಪಡೆದ ಶಿಕ್ಷಣ ಸಾರ್ಥಕವಾಗುವುದು ಎಂದÀರು.

ಮಕ್ಕಳು ವಿದ್ಯಾವಂತರಾಗಿ ಸಂಸಾರಯುತವಾಗಿ ಬಾಳಿದಾಗ ದೇಶದ ಒಳ್ಳೆಯ ನಾಗರಿಕಗಲು ಸಾಧ್ಯ. ಶಿಕ್ಷಣಯುತರಾಗಿ ರಾಷ್ಟ್ರದ ಸದ್ಪ್ರಜೆಗಳಗಬೇಕು. ಒಳ್ಳೆಯದಾಗಿ ಕಲಿತು ಈ ವರ್ಷವೂ 100% ಫಲಿತಾಂಶ ತರಬೇಕು. ಈ ಸಂಸ್ಥೆಗೆ ಜಯ ಸುವರ್ಣರ ಮಾರ್ಗದರ್ಶನ ದೊರೆಯುವುದು ನಮ್ಮ ಪುಣ್ಯ. ದಾನಿಗಳ ಸಹಕಾರದಿಂದ ಮುಂದೆಯೂ ಎಲ್ಲಾ ಕಾರ್ಯಕ್ರಮಗಳು ಒಳ್ಳೆಯ ರೀತಿಯಲ್ಲಿ ನೇರವೇರಲಿ ಎಂದÀು ಚಂದ್ರಶೇಖ ಪೂಜಾರಿ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ತಿಳಿಸಿದರು.


ವಿದ್ಯಾಥಿರ್üನಿ ಬಳಗದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಾಲಾ ಉಪ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್ ಸ್ವಾಗತಿಸಿದರು. ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್ ಪ್ರಸ್ತಾವಿಕ ನುಡಿಗಳನ್ನಾಡಿ, ಅತಿಥಿsಗಳನ್ನು ಪರಿಚಯಿಸಿ ಸಭಾ ಕಾರ್ಯಕ್ರಮ ನಿರೂಪಿಸಿದರು.

ಅಸೋಸಿಯೇಶನ್‍ನ ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚ, ಸ್ಮರಣಿಕೆ ನೀಡಿ ಗೌರವಿಸಿದರು. ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರಯ್ಯ ಸಿ. ವಾರ್ಷಿಕ ವರದಿ ವಾಚಿಸಿದರು. ಅಧ್ಯಾಪಕ ಎಂ.ಐ ಬಡಿಗೇರ ಅಭಾರ ಮನ್ನಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ-ಶಿಕ್ಷಕಿಯರುಗಳಾದ ಮೋಹಿನಿ ಪೂಜಾರಿ, ಹೇಮಾ ಗೌಡ, ವಿಮಲಾ ಶಿವರಾಜ್ ಪಾಟೀಲ್, ನವಿತಾ ಎಸ್.ಸುವರ್ಣ, ಸುನೀಲ್ ಪಾಟೀಲ್ ವಿದ್ಯಾಥಿರ್s ಪ್ರತಿನಿಧಿ ದಿವ್ಯ ಡಿ.ಚವಾಣ್ ವಿದ್ಯಾಥಿರ್üಗಳನೇಕರು ಸೇರಿದಂತೆ ನೂರಾರು ಶಿಕ್ಷಣಾಭಿಮಾನಿಗಳು ಉಪಸ್ಥಿತರಿದ್ದು, ವಾರ್ಷಿಕ ದಿನಾಚರಣಾ ಅಂಗವಾಗಿ ಸುಷ್ಮಾ ಎಸ್. ಪೂಜಾರಿ ಕೋರಿಯೋಗ್ರಾಫಿಯಲ್ಲಿ ಶಾಲಾ ವಿದ್ಯಾಥಿರ್sಗಳು ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ಸಾದರ ಪಡಿಸಿದರು. ಶಿಕ್ಷಕ ಸಿದ್ಧರಾಮಯ್ಯ ದಶಮಣಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಾಹಿಸಿದರು. ಸಿದ್ಧರಾಮಯ್ಯ ದಶಮಣಿ ರಚಿಸಿ ನಿರ್ದೇಶಿಸಿದ `ಗಂಡ ಹೆಂಡತಿಯ ಜಗಳ ಗಂಧ ತೀದಿದಂಗೆ' ನಾಟಕವನ್ನು ವಿದ್ಯಾಥಿರ್sಗಳು ಪ್ರದರ್ಶಿಸಿದರು.

ಮೊಬಾಯ್ಲ್‍ನಲ್ಲಿ ಮಗ್ನರಾದ ಮಕ್ಕಳು
ಅತಿಥಿಗಳು ಮಕ್ಕಳಿಗೆ ಹಿತನುಡಿಗಳನ್ನಾಡುತ್ತಿದ್ದರೆ, ಶಿಕ್ಷಕರು ಮತ್ತು ಸಂಘಟಕರು ಶಾಲೆ, ಸಂಸ್ಥೆಯ ಆರಂಭ, ಚಟುವಟಿಕೆ, ಕಷ್ಟಸುಖಗಳನ್ನು ಹೇಳುತ್ತಲೇ ಇದ್ದರು. ಆದರೆ ಸಭಿಕ ಮಕ್ಕಳು ಮೊಬಾಯ್ಲ್‍ನಲ್ಲಿ ವಾಟ್ಸಪ್, ಲೂಡೋ ಆಟವಾಡುತ್ತಾ ಮೊಬಾಯ್ಲ್ ಮಹಿಮೆಗೆ ಶರಣಾಗಿದ್ದರು. ವಾರ್ಷಿಕ ಶಾಲಾ ಶುಲ್ಕಕ್ಕಿಂತ ದುಬಾರಿ ಮೊಬಾಯ್ಲ್‍ಗಳು ಮಕ್ಕಳಲ್ಲಿದ್ದು ಇದನ್ನು ಗಮನಿಸಿದವರು ಶಿಕ್ಷಕರ ಗಮನಕ್ಕೆ ತಂದಾಗ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಮೊಬಾಯ್ಲ್ ಮುಕ್ತರಾಗುವಂತೆ ವಿನಂತಿಸಿದರು. ಆದರೂ ಮಕ್ಕಳಂತೂ ತಮ್ಮದೇ ಹವಾವನ್ನು ಮುಂದುವರಿಸಿ ಮೊಬಾಯ್ಲ್‍ಗೆ ಅಂಟಿಕೊಂಡು ಕೇರೇ ಅನ್ನದೆ ಆಟದಲ್ಲೇ ತೊಡಗಿಸಿ ಕೊಂಡು ಶಿಕ್ಷಕರನ್ನೇ ಮೂಖರನ್ನಾಗಿಸಿರುವುದು ವಿಪರ್ಯಾಸ ಅನ್ನಿಸಿತು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here