Thursday 25th, April 2024
canara news

ಬಿಲ್ಲವರ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್‍ನ ಮುಂಬಯಿ ಮಹಿಳಾ ವಿಭಾಗದಿಂದ

Published On : 17 Jan 2019   |  Reported By : Rons Bantwal


ಮಕರ ಸಂಕ್ರಾತಿ ಆಚರಣೆ-ಮಹಿಳಾ ಕವಿಗೋಷ್ಠಿ-ಅರಸಿನಕುಂಕುಮ ಕಾರ್ಯಕ್ರಮ

(ವರದಿ / ಚಿತ್ರ: ರೋನ್ಸ್ ಬಂಟ್ವಾಳ್)

ಮುಂಬಯಿ, ಜ.14: ಸ್ವಜಾತಿಯ ಸಂಘಟನೆಗೈದು ಭವನ ರಚಿಸಿ ಸಮಾಜವನ್ನು ಒಗ್ಗೂಡಿಸಿ ಮಹಿಳೆಯನ್ನೂ ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಶ್ರಮಿಸಿದ ಮಹಾನ್ ಯುಗಪುರುಷ ಜಯ ಸಿ.ಸುವರ್ಣರ ಸೇವೆ ಅನನ್ಯವಾದುದು. ಮಹಿಳೆಯರು ಸುಸಂಸ್ಕೃತ ವಿಚಾರಧಾರೆಯುಳ್ಳವರಾಗಿ ಸಂಸಾರ ಮತ್ತು ಸಮಾಜವನ್ನು ಸುಗಮವಾಗಿ ಸಾಗಿಸಬೇಕು. ಆವಾಗಲೇ ಮಹಿಳೆಯ ಜೀವನ ಸಾರ್ಥಕತೆವುಳ್ಳದಾಗುತ್ತದೆ. ಭೂಲೋಕದಲ್ಲಿ ಪ್ರತ್ಯಕ್ಷವಾಗಿ ಕಾಣುವ ದೇವರೇ ಸೂರ್ಯ. ಜಾತಿ ಭೇದ ತೋರದೆ ಭೂಮಿಗೆ ಪ್ರಕಾಶಮಾನನಾಗಿ ಜೀವಸಂಕುಲವನ್ನು ಬೆಳಗಿಸುವ ದೇವನು. ಸೂರ್ಯ ದೇವರೇ ನಮ್ಮ ಬದುಕಿನ ಕಣ್ಣು ಆಗಿದ್ದಾರೆ. ಧನುರಾಶಿಯಿಂದ ಮತ್ತು ಮಕರರಾಶಿಯತ್ತ ಪಯಣಿಸುವ ಕಾಲಘಟ್ಟದ ಸಂಭ್ರಮಯುತ ಸಂಕ್ರಾತಿ ಪುಣ್ಯಾಧಿಯಾಗಿದ್ದು ಇದು ಉತ್ತರೊತ್ತರದ ಸಂಕೇತವಾಗಿದೆ. ಆದುದರಿಂದಲೇ ಮಕರ ಸಂಕ್ರಮಣ ಪವಿತ್ರ ಕಾಲವಾಗಿ ಶಾಸ್ತ್ರನುಸಾರ ಪುಣ್ಯಾಧಿಯಾಗಿದೆ ಎಂದು ರಕ್ಷಣಾ ಇಲಾಖೆಯ ನಿವೃತ್ತಾಧಿಕಾರಿ, ಸಮಾಜ ಸೇವಕಿ ನಳಿನಾ ಎಸ್.ಸಾಲ್ಯಾನ್ ನುಡಿದರು.

 

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗವು ಇಂದಿಲ್ಲಿ ಸೋಮವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ವಾರ್ಷಿಕ ಮಕರ ಸಂಕ್ರಮಣ ಸಂಭ್ರಮ ಸಂಭ್ರಮಿಸಿದ್ದು ನಳಿನಾ ಸಾಲ್ಯಾನ್ ಅತಿಥಿüಗಳನ್ನೊಳಗೊಂಡು, ಕಳಶಕ್ಕೆ ಅಕ್ಷತೆ ಸುರಿದು ಸಂಪ್ರದಾಯಿಕವಾಗಿ ಸಂಭ್ರಮಕ್ಕೆ ಚಾಲನೆಯಿತ್ತರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿದ ಭವ್ಯ ಕಾರ್ಯಕ್ರಮದಲ್ಲಿ ಗೌರವ ಅತಿಥಿsಯಾಗಿ ಸಮಾಜ ಸೇವಕಿ ಜಯಲಕ್ಷಿ ್ಮೀ ಚಂದ್ರಶೇಖರ್ ಪೂಜಾರಿ ಮತ್ತು ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆಯರಾದ ಪ್ರಭಾ ಕೆ.ಬಂಗೇರ ಮತ್ತು ಗಿರಿಜಾ ಚಂದ್ರಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಿಳೆಯರು ನಕ್ಕರೆ ಸಮಾಜವೇ ಸಮಾಧಾನ ಪಡುತ್ತದೆ. ಆದುದರಿಂದ ಮಕರ ಸಂಕ್ರಾತಿ ಪರ್ವಕಾಲದಲ್ಲಿ ಮಹಿಳೆಯ ಮುಖದಲ್ಲಿ ನಗು ಕಾಣಬೇಕು. ಅದೇ ನಮ್ಮ ಧೇಯೋದ್ದೇಶದಲ್ಲಿ ಒಂದಾಗಿದೆ. ಮಹಿಳಾ ಪ್ರಧಾನ ಸಮಾಜದಲ್ಲಿ ಮಹಿಳೆಯ ನಗು ಸಮಾಜವನ್ನು ಜೀವಂತವಾಗಿಸುತ್ತದೆ. ಇಂತಹ ಆನಂದದಾಯಕ ಸಡಗರದಲ್ಲಿ ಸಂತೋಷ ಹೊರಚಿಮ್ಮಿಸಿದಾಗ ನೆಮ್ಮದಿ ತನ್ನೀಂತಾನೇ ಫಲಿಸಿ ಮಾಡಿದ ಕೆಲಸವೂ ಫಲವತ್ತಾಗುವುದು. ಕವಿತೆಯಿಂದ ಭಾಷೆಯ ಸೊಬಗು ಹೆಚ್ಚಿಸುತ್ತದೆ ಮತ್ತು ಕವನ ಜೀವನವಾದಾಗ ಸಮೃದ್ಧಿಯ ಬದುಕು ಪ್ರಾಪ್ತಿಸುವುದು. ಆದುದರಿಂದ ಜೀವನವನ್ನು ಕವಿತೆಯಾಗಿಸಿ ಬದುಕನ್ನು ಸುಂದರವಾಗಿಸಿ ಎಂದು ಚಂದ್ರಶೇಖರ್ ಪೂಜಾರಿ ಅಧ್ಯಕ್ಷೀಯ ಭಾಷಣದಲ್ಲಿ ಮಹಿಳೆಯರಿಗೆ ಸ್ಫೂರ್ತಿ ನೀಡಿ ಪ್ರೇರೆಪಿಸಿದರು.

ಆದಿಯಲ್ಲಿ ಪದಾಧಿಕಾರಿಗಳು, ಅತಿಥಿüಗಳನ್ನೊಳಗೊಂಡು ಕಾರ್ಯಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್ ಭವನದಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪೂಜೆ ನೆರವೇರಿಸಿ ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಯಂತಿ ವಿ.ಉಳ್ಳಾಲ್ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ಸುಮಿತ್ರಾ ಎಸ್.ಬಂಗೇರ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳು ಅತಿಥಿüಗಳಿಗೆ ಶ್ರೀಫಲ, ತಂಬೂಲ, ಗುಲಾಬಿಪುಷ್ಪ, ಕೃತಿಗಳನ್ನಿತ್ತು ಗೌರವಿಸಿದರು. ಜೊತೆ ಕಾರ್ಯದರ್ಶಿ ಜಯಂತಿ ಎಸ್.ಕೋಟ್ಯಾನ್ ಕೃತಜ್ಞತೆ ಸಮರ್ಪಿಸಿದರು.

ಮಹಿಳಾ ಕವಿಗೋಷ್ಠಿ:
ವಾರ್ಷಿಕ ಮಕರ ಸಂಕ್ರಮಣ ಸಂಭ್ರಮದ ಪ್ರಯುಕ್ತ ನಾಡಿನ ಹೆಸರಾಂತ ಲೇಖಕಿ,ಕವಿ ಮಿತ್ರಾ ವೆಂಕಟ್ರಾಜ್ ದೀಪ ಪ್ರಜ್ವಲಿಸಿ ತಮ್ಮ ಅಧ್ಯಕ್ಷತೆಯಲ್ಲಿ ಮಹಿಳಾ ಕವಿಗೋಷ್ಠಿ ನಡೆಸಿದರು. ಶಾರದಾ ಆನಂದ್ ಅಂಚನ್, ಲೀಲಾ ಗಣೇಶ್ ಕಾರ್ಕಳ, ಪ್ರೇಮಾ 00.ಪೂಜಾರಿ, ಕುಸುಮಾ ಸಿ.ಅವಿೂನ್, ವಾಣಿ ಪಿ. ಶೆಟ್ಟಿ, ಶಾರದ ಅಂಬೆಸಂಗೆ, ಡಾ| ರಜನಿ ವಿನಾಯಕ ಪೈ, ಲಲಿತಾ ಪ್ರಭು ಅಂಗಡಿ ಮತ್ತಿತರ ಕವಿಗಳು ಪಾಲ್ಗೊಂಡು ತಮ್ಮ ಕವಿತೆಗ ಳನ್ನು ಪ್ರಸ್ತುತ ಪಡಿಸಿದರು.

ಸಂಕ್ರಾತಿ ಅಂದರೆ ಸೃಜನಶೀಲತೆಯಾಗಿದೆ. ಈ ಸಡಗರವನ್ನು ಕವಿಕೂಟದೊಂದಿಗೆ ಸಂಭ್ರಮಿಸುವುದು ಅರ್ಥಪೂರ್ಣವಾದುದು. ಕವಿತೆ ಹೊರ ಬರುವುದೆಂದರೆ ಮರುಜೀವನ ಎಂದಾರ್ಥ. ಭಾಷೆಯನ್ನು ಬಗ್ಗಿಸಿ ಕುಗ್ಗಿಸುವ ಕಲೆ ಕವಿತೆಯಾಗಿದ್ದು, ತಮ್ಮೆಲ್ಲರ ಕವಿತಾರ್ಥಗಳು ಬದುಕಿನ ದೀಪ ಊರ್ಜಿತವಾಗಿಸಲಿ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಮಿತ್ರಾ ವೆಂಕಟ್ರಾಜ್ ತಿಳಿಸಿದರು.

ಸಬಿತಾ ಜಿ.ಪೂಜಾರಿ ಮತ್ತು ಲತಾ ವಿ.ಬಂಗೇರ ಪ್ರಾರ್ಥನೆಯನ್ನಾಡಿದರು. ಹೇಮಾ ಸದಾನಂದ್ ಅವಿೂನ್ ಕವಯತ್ರಿಯರನ್ನು ಪರಿಚಯಿಸಿ ಕವಿಗೋಷ್ಠಿ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಜಯಂತಿ ಎಸ್.ಕೋಟ್ಯಾನ್ ವಂದಿಸಿದರು.

ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಕುಸುಮಾ ಅವಿೂನ್, ಸದಸ್ಯೆಯರುಗಳಾದ ವಿಲಾಸಿನಿ ಕೆ.ಸಾಲ್ಯಾನ್, ರೇಖಾ ಸದಾನಂದ್, ಲಕ್ಷಿ ್ಮೀ ಪೂಜಾರಿ, ರೋಹಿಣಿ ಎಸ್.ಪೂಜಾರಿ, ಪುಷ್ಪ ಎಸ್. ಅವಿೂನ್, ಸುಜತಾ ಡಿ.ಪೂಜಾರಿ, ಜಲಜಾಕ್ಷಿ ಎನ್.ಪೂಜಾರಿ, ವಿಶೇಷ ಆಮಂತ್ರಿತ ಸದಸ್ಯೆಯರಾದ ಬಬಿತಾ ಜೆ.ಕೋಟ್ಯಾನ್, ಯಶೋಧಾ ಎನ್.ಟಿ ಪೂಜಾರಿ, ಪೂಜಾ ಪುರುಷೋತ್ತಮ ಕೋಟ್ಯಾನ್, ಹೀರಾ ಡಿ.ಅವಿೂನ್, ವನಿತಾ ಪೂಜಾರಿ, ವತ್ಸಲಾ ಕೆ.ಪೂಜಾರಿ, ಪ್ರೇಮಾ ಆರ್.ಕೋಟ್ಯಾನ್, ಭವಾನಿ ಸಿ.ಕೋಟ್ಯಾನ್, ಗಿರಿಜಾ ಬಿ.ಪೂಜಾರಿ, ಶಾಂತ ಬಿ.ಪೂಜಾರಿ, ಸುಮಲತಾ ವಿ.ಅವಿೂನ್ ಸೇರಿದಂತೆ ಕೃಪಾ ಭೋಜ್‍ರಾಜ್ ಕುಳಾಯಿ, ಶ್ರೀಮಂತಿ ಎಸ್.ಪೂಜಾರಿ, ಲಕ್ಷ್ಮೀ ಎನ್. ಕೋಟ್ಯಾನ್, ಡಾ| ಗೀತಾಂಜಲಿ ಎಲ್.ಸಾಲ್ಯಾನ್, ಪ್ರಭಾ ಎನ್.ಪಿ ಸುವರ್ಣ, ಮೋಹಿನಿ ವಿ.ಆರ್ ಕೋಟ್ಯಾನ್, ಸುಧಾ ಎಲ್.ಅವಿೂನ್, ನೂರಾರು ಮಹಿಳೆಯರು ಉಪಸ್ಥಿತರಿದ್ದು ಮಹಿಳಾ ಪದಾಧಿಕಾರಿಗಳು ಮಹಿಳೆಯರಿಗೆ ಅರಸಿನ ಕುಂಕುಮ, ಎಳ್ಳುಂಡೆ, ಬಾಗಿನವನ್ನಿತ್ತು ಮಕರ ಸಂಕ್ರಮಣ ಸಂಭ್ರಮಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here