Friday 19th, April 2024
canara news

ಮುಲುಂಡ್‍ನಲ್ಲಿ ನಡೆಸಲ್ಪಟ್ಟ ಕೊಂಡೆವೂರುನ `ವಿಶ್ವಜಿತ್ ಅತಿರಾತ್ರ ಸೋಮಯಾಗ'ದ ಸಿದ್ಧತಾ ಸಭೆ

Published On : 26 Jan 2019   |  Reported By : Ronida Mumbai


ಸೋಮಯಾಗ ಸಂಸ್ಕೃತಿ ಪಸರಿಸುವ ಕಾರ್ಯಕ್ರಮ: ಸಚಿವ ಶ್ರೀಪಾದ್ ನಾಯಕ್

(ಚಿತ್ರ / ವರದಿ : ರೊನಿಡಾ, ಮುಂಬಯಿ)

ಮುಂಬಯಿ, ಜ.26: ಜನರಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯಕ್ರಮ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾದುದು. ಇಂತಹ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಮುಂದೆಯೂ ಹಮ್ಮಿಕೊಳ್ಳಲಿ, ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಕೇಂದ್ರ ಸರಕಾರದ ಆಯುಷ್ ಖಾತೆ ಸಚಿವ ಹಾಗೂ ಸೋಮಯಾಗ ಕೇಂದ್ರ ಸಮಿತಿ ಗೌರವಾಧ್ಯಕ್ಷ ಶ್ರೀಪಾದ್ ಎಸ್ಸೋ ನಾಯಕ್ ತಿಳಿಸಿದರು.

ಫೆ.18ರಿಂದ ಸಪ್ತಾಹವಾಗಿ ಕೊಂಡೆವೂರುನಲ್ಲಿ ಜರುಗುವ `ವಿಶ್ವಜಿತ್ ಅತಿರಾತ್ರ ಸೋಮಯಾಗ' ನಿಮಿತ್ತ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮುಂಬಯಿ ಸಮಿತಿ ಇಂದಿಲ್ಲಿ ಭಾನುವಾರ ಸಂಜೆ ಮುಲುಂಡ್‍ನ ನವೋದಯ ವಿದ್ಯಾಲಯದ ಸಭಾಗೃಹದಲ್ಲಿ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಪ್ರಧಾನ ಅಭ್ಯಾಗತರಾಗಿ ಎಸ್ಸೋ ನಾಯಕ್ ಮಾತನಾಡಿದರು.

ಶ್ರೀಧಾಮ ಮಾಣಿಲ (ಬಂಟ್ವಾಳ) ಮುರುವ ಅಲ್ಲಿನ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಅವರು ಬರುವ ಫೆ.18ರಿಂದ 24ರ ತನಕ ಅರುಣ ಕೇತುಕ ಚಯಣದೊಂದಿಗೆ ಕಾಸರಗೋಡು ಉಪ್ಪಳ ಅಲ್ಲಿನ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಆಯೋಜಿಸಲಾದ `ವಿಶ್ವಜಿತ್ ಅತಿರಾತ್ರ ಸೋಮಯಾಗ'ದ ಅವಶ್ಯಕತೆ ಹಾಗೂ ಇದೀಗಲೇ ನಡೆಸಲ್ಪಟ್ಟ ಸಿದ್ಧತೆಗಳ ಮಾಹಿತಿ ಭಿತ್ತರಿಸಿದರು.

ಸೋಮಯಾಗ ಕೇಂದ್ರ ಸಮಿತಿ ಅಧ್ಯಕ್ಷ ಹಾಗೂ ಭವಾನಿ ಫೌಂಡೇಶನ್ ನವಿಮುಂಬಯಿ ಇದರ ಸಂಸ್ಥಾಪಕ ದಡ್ದಂಗಡಿ ಚೆಲ್ಲಡ್ಕ ಕುಸುಮೋದರ ಡಿ.ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದು, ಥಾಣೆ ಮುನ್ಸಿಪಾಲ್ ಕಾಪೆರ್Çೀರೇಶನ್‍ನ ಮೇಯರ್ ವಿೂನಾಕ್ಷಿ ಆರ್.ಶಿಂಧೆ (ಪೂಜಾರಿ) ಗಣೇಶ್ ಪುರಿ ಟ್ರಸ್ಟಿ ನ್ಯಾ| ಸಂದ್ಯಾ ಜಾಧವ್ ಹಾಗೂ ಸೋಮಯಾಗ ಸಮಿತಿ ಮುಂಬಯಿ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಕಾರ್ಯಾಧ್ಯಕ್ಷ ಕೃಷ್ಣ ಎನ್.ಉಚ್ಚಿಲ್, ಗೌರವ ಕಾರ್ಯದರ್ಶಿ ಸದಾಶಿವ ಶೆಟ್ಟಿ ಕುಳೂರು ಕಾರ್ಯಾಧ್ಯಕ್ಷರಾದ ಸಂಜೀವ ಶೆಟ್ಟಿ ಸಿಬಿಡಿ ಮತ್ತು ಭಾಸ್ಕರ್ ಶೆಟ್ಟಿ ಪುಣೆ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಡಿ.ಕೋಟ್ಯಾನ್, ಶ್ರೀ ನಿತ್ಯಾನಂದ ಯೋಗಾಶ್ರಮ ಮುಂಬಯಿ ಸಮಿತಿ ಅಧ್ಯಕ್ಷ ರಾಜೇಶ್ ರೈ ಪುತ್ತಿಗೆ, ನವೊದಯ ಕನ್ನಡ ಶಾಲೆಯ ಅಧ್ಯಕ್ಷ ಜಯ ಕೆ.ಶೆಟ್ಟಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಶನ್ ನಗರ ಜಯರಾಮ ಪೂಜಾರಿ, ವೇದಿಕೆಯಲ್ಲಿ ಉಪಸ್ಥಿತರಿದ್ದÀರು.

ನನ್ನ ಶಿಷ್ಯರ ಬಗ್ಗೆ ನನಗೆ ತುಂಬಾ ಅಭಿಮಾನÀವಿದೆ. ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ತುಂಬಾ ಉತ್ತಮ ಕಾರ್ಯಕ್ರಮಗಳೊಂದಿಗೆ ಅಭಿವೃದ್ಧಿಯನ್ನು ಮಾಡಿದ್ದಾರೆ. `ವಿಶ್ವಜಿತ್ ಅತಿರಾತ್ರ ಸೋಮಯಾಗ' ಕಾರ್ಯಕ್ರಮವು ತುಂಬಾ ಒಳ್ಳೆಯ ಕಾರ್ಯಕ್ರಮ. ಮುಂದಿನ ಅನೇಕ ಯೋಜನೆಗಳು ಪರಿಪೂರ್ಣಗೊಳ್ಳಲಿ ಎಂದು ಮೋಹನದಾಸ ಸ್ವಾಮೀಜಿ ಹರಸಿದರು.

ಶ್ರೀಯೋಗಾನಂದ ಸ್ವಾಮೀಜಿ ಅನುಗ್ರಹಿಸಿ ವಿಶ್ವಜಿತ್ ಅತಿರಾತ್ರ ಸೋಮಯಾಗದ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಯಾಗವು ಜಗತ್ತಿನ ಹಿತಕ್ಕಾಗಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಮ್ಮಿಕೊಂಡಿದ್ದೇವೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ. ಮುಂಬಯಿ ಸಮಿತಿಯಿಂದ ನಮಗೆ ತುಂಬಾ ಸಹಕಾರ ಮತ್ತು ಪೆÇ್ರೀತ್ಸಾಹ ದೊರಕಿದ್ದು, ಮುಂದೆಯೂ ನಿಮ್ಮ ಸಹಕಾರವನ್ನು ಬಯಸುತ್ತೇನೆ ನೆರೆದ ಭಕ್ತಾಭಿಮಾನಿಗಳಿಗೆ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.

ಸೋಮಯಾಗ ಕೇಂದ್ರ ಸಮಿತಿ ಅಧ್ಯಕ್ಷ ಸ್ಥಾನ ಪಡೆದಿರುವುದು ನನ್ನ ಭಾಗ್ಯ. ಶ್ರೀಧಾಮ ಮಾಣಿಲ ಕ್ಷೇತ್ರ ನನ್ನ ಊರಿನಲ್ಲಿದ್ದು, ಮುಂಬಯಿಯ ಹಲವರಿಗೆ ಸಹಕರಿಸಿ ಆರ್ಶಿವಾದಿಸಿದ ಕ್ಷೇತ್ರಕ್ಕೆ ಚಿರಋಣಿಯಾಗಿದ್ದೇನೆ. ಮುಂಬಯಿಯಲ್ಲಿನ ಅನೇಕ ಗಣ್ಯ ವ್ಯಕ್ತಿಗಳು ಸೋಮಯಾಗ ಧಾರ್ಮಿಕ ಕಾರ್ಯಕ್ರಮದಲ್ಲಿ ತಮ್ಮ ಕಾರ್ಯವನ್ನು ನಿರ್ವಾಹಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕಾಮಧೇನು ಹುಂಡಿ ಡಬ್ಬವನ್ನು ಸ್ವಾಮೀಜಿ ಅವರಿಗೆ ಹಸ್ತರಿಸಿ, ಮುಂದೆಯೂ ನನ್ನ ಸಹಕಾರ ಮತ್ತು ನನ್ನಿಂದಾಗುವ ಸಹಾಯವನ್ನು ನೀಡುವುದು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಕುಸುಮೋದರ ಶೆಟ್ಟಿ ತಿಳಿಸಿದರು.

ಶ್ರೀ ನಿತ್ಯಾನಂದ ಯೋಗಾಶ್ರಮ ಮುಂಬಯಿ ಸಮಿತಿ ಕಾರ್ಯಾಧ್ಯಕ್ಷರಾದ ರಮೇಶ್ ಕೋಟ್ಯಾನ್ ಮತ್ತು ಯಶೋಧಾ ಬಟ್ಟಂಪಾಡಿ, ಕೋಶಾಧಿಕಾರಿ ಅಶೋಕ್ ಎಂ.ಕೋಟ್ಯಾನ್ ಥಾಣೆ ಕೋಶಾಧಿಕಾರಿ ಆಶಾಲತಾ ಕೆ.ಉಳ್ಳಾಲ್, ಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ಕೆ. ಚೇವಾರ್ ಮತ್ತು ಉಷಾ ಶೆಟ್ಟಿ ಸಹಕರಿಸಿದರು. ಮೋನಪ್ಪ ಎಂ.ಭಂಡಾರಿ, ಯಶೋಧಾ ಭಟ್ಟಂಪಾಡಿ, ಜಯರಾಮ ಪೂಜಾರಿ, ವಿಶ್ವನಾಥ್ ಯು.ಮಾಡಾ, ತೋನ್ಸೆ ಸಂಜೀವ ಪೂಜಾರಿ, ಜಯಪ್ರಕಾಶ್ ಶೆಟ್ಟಿ, ಸ್ನೇಹ ಜಾಧವ್ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದು, ಧಾರ್ಮಿಕ ಕಾರ್ಯಕ್ರಮವಾಗಿ ಸಾಮೂಹಿಕ ಶ್ರೀ ವಿಷ್ಣುಸಹಸ್ರನಾಮ ಅಭಿಯಾನ, ಭಜನೆ ನಡೆಸಲ್ಪಟ್ಟಿತು.

ಧರ್ಮಪಾಲ್ ಯು.ದೇವಾಡಿಗ ಸ್ವಾಗತಿಸಿದರು. ಪ್ರಾರ್ಥನೆಯನ್ನಾಡಿದರು. ನ್ಯಾ| ಸಂಧ್ಯಾ ಜಾಧವ್ ಗಣೇಶ್ ಪುರಿಯ ಟ್ರಸ್ಟಿ ಅವರು ಸ್ವಾಮೀಜಿಯವರನ್ನೊಳಗೊಂಡು ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿದರು. ಸೋಮಯಾಗ ಸಮಿತಿ ಮುಂಬಯಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಡಿ.ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆಗೈದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here