Thursday 25th, April 2024
canara news

ಮಹಿಳೆಯರಿಂದ, ಮಹಿಳೆಯರಿಗಾಗಿ, ವಿಪ್ರ ಮಹಿಳೆಯರ ಸಮತಾ

Published On : 29 Jan 2019


ಮಂಗಳೂರು ಬಿಜೈಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಮಹಿಳೆಯರಿಂದ ಮಹಿಳೆಯರಿಗಾಗಿ ವಿಪ್ರ ಮಹಿಳೆಯರೇ ಸ್ವತಂತ್ರವಾಗಿ 1991 ರಿಂದ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಬಳಗವೇ ಸಮತಾ. 1991 ರಲ್ಲಿ ವಿಪ್ರ ಮಹಿಳೆಯರಿಗಾಗಿ ದ್ರಾವಿಡ ಬ್ರಾಹ್ಮಣ ಅಸೋಸಿಯೇಷನ್ ಸ್ಥಾಪಿಸಿದ ವಿಭಾಗ 2001 ರಲ್ಲಿ ಸಮತಾ (ರಿ) ಮಹಿಳಾ ಬಳಗವೆಂಬ ಹೆಸರಲ್ಲಿ ಸ್ವತಂತ್ರ ಸಂಸ್ಥೆಯಾಗಿ ನೋಂದಣಿಗೊಂಡಿತು.

ಸಮಸ್ತ ವಿಪ್ರ ಪಂಗಡಗಳ ಸ್ತ್ರೀಯರ ಪರಸ್ಪರ ಪರಿಚಯ, ಸೌಹಾರ್ದ, ಸಹಕಾರದ ತತ್ವದಡಿ 70 ಮಂದಿ ಸದಸ್ಯೆಯರಿಂದ ಪ್ರಾರಂಭಗೊಂಡ ಸಮತಾ ಇಂದು 500 ಕ್ಕೂ ಹೆಚ್ಚು ಸದಸ್ಯೆಯರನ್ನು ಹೊಂದಿದೆ. ವರ್ಷ ಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ವಿಪ್ರ ಬಳಗದಲ್ಲಿ ಜನಜನಿತ ಸಂಸ್ಥೆಯಾಗಿ ರೂಪುಗೊಂಡಿದೆ, ರೂಪುಗೊಳ್ಳುತ್ತಿದೆ.

2016 ರಲ್ಲಿ ರಜತ ಮಹೋತ್ಸವವನ್ನು ಸಮತಾ ಸಂಭ್ರಮದಿಂದ ಆಚರಿಸಿದೆ. ಇದೀಗ ಸಮತಾ 28 ನೇ ವರ್ಷದಲ್ಲಿ ರಮಾಮಣಿ ಭಟ್ ರವರ ಅಧ್ಯಕ್ಷತೆಯಲ್ಲಿ ಹಾಗೂ ಶೀಲಾ ಜಯಪ್ರಕಾಶ್ ರವರ ಕಾರ್ಯದರ್ಶಿತ್ವದಲ್ಲಿ ಮುನ್ನಡೆಯುತ್ತಿದೆ. ಈ ವರ್ಷ ಮೇ ತಿಂಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಕೊಡೆ, ಬ್ಯಾಗ್ ಇತ್ಯಾದಿಗಳನ್ನು ವಿತರಿಸಿದೆ. ಜೂನ್ ತಿಂಗಳಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಯಲ್ಲಿ 95 ಶೇ. ಮತ್ತು ಅಧಿಕ ಅಂಕಗಳಿಸಿದ ಮಕ್ಕಳನ್ನು ಪುರಸ್ಕರಿಸಲಾಗಿದೆ. ಧಾರ್ಮಿಕ ಸಮಾರಂಭಗಳಾದ ನವರಾತ್ರಿ/ದಸರಾ, ಕೃಷ್ಣ ಜನ್ಮಾಷ್ಟಮಿ, ವರ ಮಹಾಲಕ್ಷ್ಮಿಯನ್ನು ಒಟ್ಟಾಗಿ ಸಂಭ್ರÀಮದಿಂದ ಆಚರಿಸಲಾಗಿದೆ. ಈ ಎಲ್ಲಾ ಸಂದರ್ಭಗಳಲ್ಲಿ ಎಲ್ಲಾ ಸದಸ್ಯೆಯರಿಗೆ ನೃತ್ಯ, ಭಾಷಣ, ಕವನ, ಕಿರುಕಥೆ, ರಂಗೋಲಿ, ಹೂ ಜೋಡಣೆ, ಫಲವಸ್ತು ಕಾರ್ವಿಂಗ್, ಸಂಗೀತ, ಆಶುಭಾಷಣ, ಇತ್ಯಾದಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನವನ್ನು ನೀಡಲಾಗುತ್ತಿದೆ. ಕರ್ಣಾಟಕ ಬ್ಯಾಂಕ್ ಹಾಗೂ ಇತರ ಹಲವಾರು ಹಿತೈಷಿಗಳು ಸಹಕರಿಸುತ್ತಿರುವುದರಿಂದ ಕಾರ್ಯಕ್ರಮ ಸಾಂಘಿಕ ಶಕ್ತಿಯಿಂದ ಬಲಗೊಳ್ಳುತ್ತಿದೆ.

ಸಮತಾ ಮಹಿಳಾ ಬಳಗದ ಉದ್ದೇಶದಂತೆ ಮಹಿಳೆಯರಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಪ್ರಕಟಿಸಲು ಸೂಕ್ತ ವೇದಿಕೆಯನ್ನು ಸಮತಾ ನೀಡುತ್ತಿದೆ. ಭಾರತೀಯ ಸಂಪ್ರದಾಯ, ಸಂಸ್ಕøತಿ, ಹಬ್ಬ ಆಚರಣೆಗಳ ಮಹತ್ವವನ್ನು ತಿಳಿಸಿಕೊಟ್ಟು ಒಟ್ಟಾಗಿ ಆಚರಿಸುವಂತೆ ಪ್ರೇರೇಪಿಸಲಾಗುತ್ತಿದೆ. ನುರಿತ ಮಹಿಳೆಯರಿಂದ ಕರಕುಶಲ, ಭಜನಾ ಹಾಡು, ಇತರ ವಿಷಯಗಳನ್ನು ಕಲಿಸಿ ಮಹಿಳೆಯರ ಸಬಲೀಕರಣಕ್ಕೂ ಅವಕಾಶ ಒದಗಿಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದಿರುವವರಿಗೆ ಮದುವೆ, ಚಿಕಿತ್ಸೆಗಾಗಿ ಧನಸಹಾಯ ನೀಡಿ ಸಮಾಜವನ್ನು ಸಬಲಗೊಳಿಸಲು ಪ್ರಯತ್ತಿಸಲಾಗುತ್ತಿದೆ. ಉತ್ತಮ ವಿಷಯಗಳ ಸಂವಾದ, ವಿಚಾರಧಾರೆಗೆ ಅವಕಾಶ ನೀಡಿ, ಪ್ರವಾಸಗಳನ್ನು ಏರ್ಪಡಿಸಿ ಸಾಮಾಜಿಕ ಜ್ಞಾನ ಹೆಚ್ಚಿಸಲೂ ಪ್ರಯತ್ನಿಸಲಾಗುತ್ತಿದೆ.

ಸದಸ್ಯೆಯರೆಲ್ಲರ ತುಂಬು ಸಹಕಾರ, ಪ್ರೋತ್ಸಾಹಕರ ವಾತಾವರಣದಿಂದ ಸಮತಾ ಮಹಿಳಾ ಬಳಗ ಬಹಳ ಉತ್ತಮ ರೀತಿಯಲ್ಲಿ ಬೆಳೆದು ಬೆಳಗಲು ಕಾರಣವಾಗಿದೆ. ಅಂತಹ ಪ್ರಯತ್ನದಲ್ಲಿ ಇನ್ನಷ್ಟು ಪ್ರಗತಿಯಾಗಿ ಉತ್ತರೋತ್ತರ ಬೆಳಗಲಿ.

ಲೇಖನ: ರಾಯೀ ರಾಜ ಕುಮಾರ್, ಮೂಡುಬಿದಿರೆ.
(ಲೇಖಕರು: ಸಂಪನ್ಮೂಲ ವ್ಯಕ್ತಿ, ಸಮಾಜ ಚಿಂತಕರು, ಲೇಖಕರು)




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here