Saturday 20th, April 2024
canara news

ಹದಿನಾಲ್ಕನೇ ವಾರ್ಷಿಕೋತ್ಸವ ಸಂಭ್ರಮಿಸಿದ ನಮನ ಫ್ರೆಂಡ್ಸ್ ಮುಂಬಯಿ

Published On : 30 Jan 2019   |  Reported By : Rons Bantwal


ನಮನೋತ್ಸವ ರಾಷ್ಟ್ರದ ಗಣರಾಜ್ಯೋತ್ಸವಕ್ಕೆ ಮಾದರಿ-ಪಂ| ನವೀನ್‍ಚಂದ್ರ ಸನಿಲ್ 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ. 26: ಭಾರತ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಬಹಳಷ್ಟು ಯೋಧರು, ಸೇನಾನಿಗಳು, ರಾಷ್ಟ್ರಪ್ರೇಮಿಗಳು ಹೋರಾಟ ಮಾಡಿದ್ದರು. ಆ ಪಯ್ಕಿ ನನ್ನ ಪಿತರೋರ್ವರು ಎಂದೆÉೀಳಲು ಹೆಮ್ಮೆಯೆಣಿಸುತ್ತಿದೆ. ಕಾರ್ಯಕ್ರಮದ ಈ ವೇದಿಕೆಗೆ ನನ್ನ ತಂದೆ ರಾಮ ಸನಿಲ್ ಅವರ ಹೆಸರನ್ನಿಟ್ಟು ಅವರನ್ನು ಸ್ಮರಿಸಿದ್ದು ಬಡಎರ್ಮಾಳ್ ಗರಡಿಮನೆತನಕ್ಕೆ ಸಂದ ಗೌರವವಾಗಿದೆ. ಹೊಸ ಸಂವಿಧಾನದ ಸಂಕ್ರಮಣ ನಿಬಂಧನೆಗಳ ಅಡಿಯಲ್ಲಿ ಸಂವಿಧಾನ ಸಭೆಯೊಂದಿಗೆ ಭಾರತದ ಸಂಸತ್ತು ರಚನೆ ಆಗಿದ್ದು ಭಾರತೀಯ ಸಂವಿಧಾನ ಜಾರಿಗೆ ಬಂದ ಉತ್ಸವವೇ ಗಣರಾಜ್ಯ ಸಂಭ್ರಮ ಮತ್ತು ಇದೇ ಭಾರತೀಯ ಗಣರಾಜ್ಯೋತ್ಸವ. ಇಂತಹ ಶುಭಾವಸರದಲ್ಲಿ ನಮನ ಮಿತ್ರ ಬಳಗವು ವಾರ್ಷಿಕೋತ್ಸವ ಸಂಭ್ರಮಿಸುತ್ತಿರುವುದು ಅಭಿನಂದನೀಯ. ಸಾಮರಸ್ಯತ್ವಕ್ಕೆ ಪೂರಕವಾಗಿ ಆಚರಿಸುವ ಸಂಸ್ಥೆಯ ನಮನೋತ್ಸವ ರಾಷ್ಟ್ರದ ಗಣರಾಜ್ಯೋತ್ಸವಕ್ಕೆ ಮಾದರಿ ಎಂದು ಅಂತರಾಷ್ಟ್ರೀಯ ಪ್ರಸಿದ್ಧ, ರಷ್ಯಾದ ಟಶ್ಖೆಂಟ್‍ನಲ್ಲಿ `ಏಷಿಯಾ ಪೆಸಿಫಿಕ್ ಅಚೀವರ್ಸ್ ಅವಾರ್ಡ್' ಪುರಸ್ಕೃತ ವಾಸ್ತುತಜ್ಞ ಪಂಡಿತ್ ನವೀನ್‍ಚಂದ್ರ ಆರ್.ಸನಿಲ್ ತಿಳಿಸಿದರು.

ಇಂದಿಲ್ಲಿ ಶನಿವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ನಾರಾಯಣ ಗುರು ಸಭಾಗೃಹ ದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಡಎರ್ಮಾಳ್ ಗರಡಿಮನೆ ಸ್ವರ್ಗೀಯ ರಾಮ ಬಿ.ಸನಿಲ್ ಸ್ಮರಣಾರ್ಥ ವೇದಿಕೆಯ ಲ್ಲಿ ನಮನ ಫ್ರೆಂಡ್ಸ್ ಮುಂಬಯಿ ತನ್ನ14ನೇ ವಾರ್ಷಿಕೋತ್ಸವ ಸಂಭ್ರಮಿಸಿದ್ದು ಪಂಡಿತ್ ನವೀನ್‍ಚಂದ್ರ ಸನಿಲ್ ದೀಪ ಪ್ರಜ್ವಲಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಂಟ್ಸ್ ಸಂಘ ಮುಂಬಯಿ ಇದರ ಜ್ಞಾನ ಮಂದಿರ ಸಮಿತಿ ಕಾರ್ಯಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ ಸಭಾಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮಕ್ಕೆ ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನ ಮುಂಬಯಿ ಸ್ಥಾಪಕಾಧ್ಯಕ್ಷ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಆಶೀರ್ವಚಗೈದರು. ಗೌರವ ಅತಿಥಿsಗಳಾಗಿ ಚಾಮುಂಡೇಶ್ವರಿ ಸೇವಾ ಸಮಿತಿ ಥಾಣೆ ಸಂಸ್ಥಾಪಕ ಶಿವಪ್ರಸಾದ್ ಪೂಜಾರಿ ಪುತ್ತೂರು, ಅಕ್ಷಯ ಮಾಸಿಕದ ಸಹ ಸಂಪಾದಕ ಧರ್ಮೇಶ್ ಎಸ್.ಸಾಲ್ಯಾನ್, ಬಿಲ್ಲವರ ಅಸೋಸಿಯೇಶನ್‍ನ ಅಂಧೇರಿ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರ ಎಸ್.ಕೋಟ್ಯಾನ್, ಮಲಾಡ್ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಕೆ.ಪೂಜಾರಿ, ಭಯಂದರ್ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ನರೇಶ್ ಕೆ.ಪೂಜಾರಿ, ಬಂಟರವಾಣಿ ಮಾಸಿಕದ ಗೌರವ ಸಂಪಾದಕ ಅಶೋಕ್ ಪಕ್ಕಳ, ಸಮಾಜ ಸೇವಕಿ ಜ್ಯೋತಿ ಅಶೋಕ್ ಶೆಟ್ಟಿ, ಕಮಲ ಕಲಾ ವೇದಿಕೆ ಸಂಸ್ಥೆಯ ಅಧ್ಯಕ್ಷ ಹರೀಶ್ ಕೋಟ್ಯಾನ್ ಪಡುಇನ್ನಾ, ಉದ್ಯಮಿಗಳಾದ ಪ್ರಮೋದ್ ಕರ್ಕೇರ ಅಡ್ವೆ, ಪ್ರಕಾಶ್ ಮೂಡಬಿದ್ರಿ, ಕಿರಣ್ ಪೂಜಾರಿ ವಾಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಅಪ್ಪಾಜಿಬೀಡು ರಮೇಶ್ ಗುರುಸ್ವಾಮಿ ಮತ್ತು ಸಂಗೀತ ವಿದ್ವಾಂಸ ಪ್ರವೀಣ್ ಹೀರಾ ಇವರಿಗೆ ಗುರುವಂದನೆಗೈದು ಗೌರವಿಸಲಾಯಿತು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ, ವಾಸ್ತು ಪಂಡಿತ ಅಶೋಕ್ ಪುರೋಹಿತ್, ಕೃಷ್ಣ ಬಿ.ಶೆಟ್ಟಿ ಅಂಧೇರಿನವೀನ್ ಪಡು ಇನ್ನಾ, ರಮ್ಯಾ ಉದಯ ಶೆಟ್ಟಿ, ಇವರನ್ನು ಅತಿಥಿsಗಣ್ಯರು ಫಲಪುಷ್ಪ, ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಿದರು ಹಾಗೂ ಜಯಶೀಲ ಸುವರ್ಣ ಮತ್ತು ಚೇತನ್ ರಾವುತ್ ಗೌರವಿಸಿ ಅಭಿನಂದಿಸಿದರು.

ಕಲಾವಿದರ ಬದುಕಿಗೆ ಬೆಳಕು ನೀಡಿದವರಲ್ಲಿ ಪ್ರಭಾಕರ ಬೆಳುವಾಯಿ ಓರ್ವರು. ಪತ್ರಿಕೆ, ಸಂಘಟನೆ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸನ್ಮಾನಗಳ ಮೂಲಕ ನೂರಾರು ಕಲಾವಿದರನ್ನು ಪೆÇ್ರೀತ್ಸಹಿಸಿರುವುದು ಸ್ತುತ್ಯಾರ್ಹ. ಶ್ರಮಕ್ಕೆ ಭಗವತನ ಅನುಗ್ರಹ ಎಂದಿಗೂ ಇರುತ್ತದೆ ಅನ್ನುವುದಕ್ಕೆ ಈ ಸಂಭ್ರಮವೇ ಸಾಕ್ಷಿ. ಇದೇ ನಿಜಾರ್ಥದ ದೇವರ ಕಾಯಕವಾಗಿದೆ ಎಂದು ವಿಶ್ವನಾಥ ಭಟ್ ಹರಸಿದರು.

ಒಂದು ಸಂಸ್ಥೆಯನ್ನು ಅಸ್ತಿತ್ವಕ್ಕೆ ತರುವುದು ದೊಡ್ಡದಲ್ಲ ಅದನ್ನು ನಡೆಸುವುದೇ ದೊಡ್ಡತನ. ದೂರದೃಷ್ಠಿತ್ವ, ನಿಸ್ವಾರ್ಥ ಸೇವೆಯೊಂದಿಗೆ ಮುನ್ನಡೆಸುವ ಸಂಸ್ಥೆ ಯಾವೊತ್ತೂ ವಿಸ್ತೃತವಾಗಿ ಬೆಳೆಯುವುದು. ಅಂತೆಯೇ ಈ ಸಂಸ್ಥೆಯೂ ತೆರೆಮರೆಯ ಸೇವೆಯೊಂದಿಗೆ ತನ್ನ ನಡೆಯನ್ನು ಮುನ್ನಡೆಸಿದೆ. ಕಲೆ, ಸಂಸ್ಕೃತಿ, ಶಿಕ್ಷಣ, ಆರೋಗ್ಯ ಇತ್ಯಾದಿಗಳ ಸೇವೆಯಲ್ಲಿ ತೊಡಗಿಸಿ ಹಲವಾರು ಪ್ರತಿಭೆಗಳನ್ನು ಬರವಣಿಗೆ ಮೂಲಕ ಗುರುತಿಸಿ ತಾನು ಎಂದಿಗೂ ಪ್ರಚಾರಕ್ಕೆ ಬಾರದೆ ಗೌಪ್ಯವಾಗಿಯೇ ನೆರವು ನೀಡುತ್ತಿರುವ ಪ್ರಭಾಕರ ಬೆಳುವಾಯಿ ಓರ್ವ ಸಹೃದಯಿ ಸಮಾಜ ಸೇವಕ. ಸನ್ನಿಧ್ ಮತ್ತು ಬೆಳುವಾಯಿ ಇವರ ಸಂಘಟನಾ ಚಾತುರ್ಯತೆ, ಚುರುಕುತನದ ಸೇವಾ ಚಟುವಟಿಕೆಗಳನ್ನು ನಾನು ಸಮೀಪ್ಯದಿಂದ ಅವಲೋಕಿಸಿದ್ದೇನೆ. ಅದು ನಿಜವಾಗಿಯೂ ಮೆಚ್ಚುವಂತಹದ್ದು. ಇವರಿಂದ ಇನ್ನೂ ಇಂತಹ ನೂರಾರು ಕಾರ್ಯಕ್ರಮಗಳು ಮೂಡಿಬರಲಿ ಎಂದು ಅಧ್ಯಕ್ಷೀಯ ಭಾಷಣದಲ್ಲಿ ರವೀಂದ್ರನಾಥ ಭಂಡಾರಿ ಆಶಯ ವ್ಯಕ್ತ ಪಡಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಶಸ್ತಿ ಪುರಸ್ಕೃತ ಯುವ ಗಾಯಕಿರಾದ ಕು| ಅನನ್ಯ ಅಂಚನ್ ಮತ್ತು ಕು| ಅಶ್ಮಿತಾ ಅಂಚನ್ ರಸಮಂಜರಿ ಸಾದರ ಪಡಿಸಿದರು. ಮಹಾನಗರ ವಿವಿಧ ಸಂಘ ಸಂಸ್ಥೆಗಳ ಕಲಾವಿದರು ಸೇರಿದತೆ ಕು| ಖುಷಿ ಪೂಜಾರಿ, ಕು| ಅರುಷಿ ಪೂಜಾರಿ ನೃತ್ಯವೈಭವ ಪ್ರಸ್ತುತ ಪಡಿಸಿದರು. ಹೆಸರಾಂತ ಕೋರಿಯೋಗ್ರಾಫರ್ ಸನ್ನಿಧ್ ಪೂಜಾರಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ರಂಗಮಿಲನ ಮುಂಬಯಿ ತಂಡದ ಕಲಾವಿದರು ನಯನ ಸಚಿನ್ ರಚಿಸಿ, ಮನೋಹರ್ ಶೆಟ್ಟಿ ನಂದಳಿಕೆ ನಿರ್ದೇಶಿಸಿದ `ದಾದನ ಉಂಡುಗೆ' ತುಳು ರಹಸ್ಯಮಯ ರೋಮಾಂಚಕ ನಾಟಕ ಪ್ರದರ್ಶಿಸಿದರು.

ನಮನ ಫ್ರೆಂಡ್ಸ್ ಮುಂಬ¬ ಸಂಸ್ಥಾಪಕ ಪ್ರಭಾಕರ ಬೆಳುವಾಯಿ ಸ್ವಾಗತಿಸಿ ಅತಿಥಿüಗಳಿಗೆ ಪುಷ್ಫಗುಪ್ಚ, ಸ್ಮರಣಿಕೆನೀಡಿ ಗೌರವಿಸಿದರು. ಸುರೇಂದ್ರ ಕುಮಾರ್ ಮಾರ್ನಾಡ್ ಪ್ರಸ್ತಾವಿಕ ನುಡಿಗಳನ್ನಾಡಿ ಸಭಾ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಎರ್ಮಾಳ್ ಸನ್ಮಾನಿತರನ್ನು ಪರಿಚಯಿಸಿ ವಂದಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here