Thursday 25th, April 2024
canara news

ಎಲ್ಲರೂ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿ ರಾಷ್ಟ್ರಪ್ರೇಮ ಮೆರೆಯಬೇಕು

Published On : 30 Jan 2019


ಸಮತೋಲನ ಜೀವನ ಸಂಕಿರಣ-ರಾಷ್ಟ್ರಪ್ರೇಮ ಪ್ರೇರಕ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ತಳ್ಪಡೆ 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.30: ಇದೊಂದು ದೇಶಪ್ರೇಮ, ರಾಷ್ಟ್ರಗೌರವದ ಕಾರ್ಯಕ್ರಮವಾಗಿದೆ. ನನಗೂ ಸಹಭಾಗಿಯಾಗುವ ಭಾಗ್ಯ ನೀಡಿರುವಿರಿ. ಪ್ರಪಂಚದಲ್ಲೇ ಒಳ್ಳೆಯ ಹಾಗೂ ಕೆಟ್ಟ ಮನುಷ್ಯರು ಇರುವುದು ಸ್ವಾಭಾವಿಕ. ಇವುಗಳ ಭಿನ್ನತೆ ತಿಳಿದು ಸಮಾನತೆಯನ್ನು ಕಂಡುಕೊಳ್ಳಲು ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ. ಇಂತಹ ಮೌಲಿಕ ಕಾರ್ಯಕ್ರಮ ಆಯೋಜಿಸಿದ ಡಾ| ಆರ್.ಕೆ ಶೆಟ್ಟಿ ಮತ್ತು ಸಮಿತಿಗೆ ನನ್ನದೊಂದು ಸಲಾಮು. ಒಳ್ಳೆಯ ಮತ್ತು ಸಮಾಜ ಚಿಂತನೆವುಳ್ಳವ ರಿಂದ ಮಾತ್ರ ಇಂತಹ ಯೋಚನೆ, ಯೋಜನೆಗಳು ಸಾಧ್ಯವಾಗುವುದು. ರಾಷ್ಟ್ರದ ಗಣರಾಜ್ಯೋತ್ಸವದ ಶುಭಾವಸಾರದಲ್ಲಿ ನಾವೂ ಎಲ್ಲರೂ ಸಮಾಜಪರ ಕೆಲಸ ಮಾಡಬೇಕು. ಇಂತಹ ಸರ್ವೋತ್ಕೃಷ್ಟ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ನನಗೆ ತುಂಬಾ ಸಂತೋಷ ನೀಡಿದೆ. ಇಂತಹ ಒಳ್ಳೆಯ ಮತ್ತು ಪುಣ್ಯ ಕಟ್ಟುವ ಕೆಲಸ ಮುಂದೆಯೂ ನಡೆಯಲಿ ಎಂದು ಬಾಲಿವುಡ್ ಸಿನೆಮಾ ಅಭಿನೇತ ಶ್ರೇಯಸ್ ತಳ್ಪಡೆ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಏರ್ಪಡಿಸಿದ್ದ `ಸಮತೋಲನ ಜೀವನ' ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿüಯಾಗಿದ್ದು ತಳ್ಪಡೆ ಮಾತನಾಡಿದರು.

ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಅವರ ದೂರದೃಷ್ಠಿತ್ವದ ಆಥಿರ್üಕವಾಗಿ ಹಿಂದುಳಿದ ಸ್ವಸಮಾಜದ ಸಹೋದರ ಸಹೋದರಿಯರ ಬಾಳಿನ ಏಳ್ಗೆಯ ಧ್ಯೇಯವನ್ನಿರಿಸಿ ಆಯೋಜಿಸಲಾದ ಕಾರ್ಯಕ್ರಮವನ್ನು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭÀದಲ್ಲಿ ಭಾರತ ರಾಷ್ಟ್ರದ ಧೀರಯೋಧ ಮೇಜರ್ ಡಾ| ಗೌರವ್ ಎಸ್.ಶೆಟ್ಟಿ ಅವರನ್ನು ನಟ ತಳ್ಪಡೆ ಸನ್ಮಾನಿಸಿ ಶುಭಾರೈಸಿದರು ಹಾಗೂ ಸೂರಜ್ ಶೆಟ್ಟಿ ಮತ್ತು ಸಂತೋಷ್ ಶೆಟ್ಟಿ ಅವರಿಗೆ ಪ್ರತಿಭಾ ಗೌರವ ಪ್ರದಾನಿಸಿ ಅಭಿನಂದಿಸಿದರು.


ಗೌರವ ಅತಿಥಿsಗಳೂ ಮತ್ತು ಸಂಪನ್ಮೂಲ ವ್ಯಕ್ತಿಯಾಗಿದ್ದ ರಾಷ್ಟ್ರದ ಹೆಸರಾಂತ ಹಣಕಾಸು ವಿದ್ವಾಂಸ, ಆಥಿರ್üಕ ಸಲಹೆಗಾರ ಸಿಎ| ಅಮನ್ ಚೌಗ್ ಆಗಮಿಸಿ `ಹಣಕಾಸಿನ ಸಮತೋಲನ' (ಮ್ಯಾನೇಜಿಂಗ್ ಮನಿ) ಬಗ್ಗೆ ವಿಶೇಷ ಮಾಹಿತಿ ನೀಡಿದರು. ನಾಡಿನ ನಾಮಾಂಕಿತ ವೈದ್ಯಾಧಿಕಾರಿ ಡಾ| ಹರೀಶ್ ಶೆಟ್ಟಿ `ಆರೋಗ್ಯ ಸಮತೋಲನ' (ಮ್ಯಾನೇಜಿಂಗ್ ಹೆಲ್ತ್) ಬಗ್ಗೆ, ಪ್ರಸಿದ್ದ ಸಂಸಾರಿಕ ಉಪದೇಶಕ ಮುರಳಿ ಮೆಹ್ತಾ ಅವರು `ಕೌಟುಂಬಿಕ ಸಮತೋಲನ' (ಮ್ಯಾನೇಜಿಂಗ್ ಫ್ಯಾಮಿಲಿ) ಬಗ್ಗೆ ಮತ್ತು ಹೆಸರಾಂತ ಮನೋ ಮೇಧಾವಿ ದೀಪಕ್ ರಾವ್ ಅವರು `ಮಾನಸಿಕ ಸ್ಥೈರ್ಯ' (ಪವರ್ ಆಫ್ ಮೈಂಡ್) ಕುರಿತು ಕಾರ್ಯಗಾರ ನಡೆಸಿ ಸಮತೋಲನ ಜೀವನದ ಅರಿವು ಮೂಡಿಸಿದರು.


ಮೇಜರ್ ಗೌರವ್ ಮಾತನಾಡಿ ಸ್ವಸಮಾಜದ ಗೌರವ ಸ್ವೀಕರಿಸಲು ಅಭಿಮಾನವೆಣಿಸುತ್ತಿದೆ. ರಾಷ್ಟ್ರಾಭಿಮಾನ ಮತ್ತು ದೇಶದ ಹಿತಾಸಕ್ತಿ ಎಲ್ಲ ಭಾರತೀಯರ ಹೊಣೆಯಾಗಿದೆ. ಆದುದರಿಂದ ಯುವಜನತೆ ಭಾರತೀಯ ಸೈನ್ಯದಲ್ಲಿ ಭರ್ತಿಯಾಗಿ ದೇಶಸೇವೆಯಲ್ಲಿ ಆಸಕ್ತಿ ತೋರಬೇಕು ಎಂದರು.

ಬಂಟರ ಸಂಘದ ಸಾಮಾಜಿಕ ಸೇವಾ ಕಾರ್ಯಕ್ರಮಗಳಿಂದ ನಮ್ಮ ಜನತೆ ಫಲಾನುಭವ ದೊರಕಿದೆ. ಸಂಘದ 92 ವರ್ಷಗಳ ಸೇವೆಯಲ್ಲಿ ಕಳೆದ ಸುಮಾರು 25 ವರ್ಷಗಳಲ್ಲಿ ಬಂಟರ ಸಂಘವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹತ್ವಪೂರ್ಣ ದಿಸೆÉಯನ್ನು ಕಂಡಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ನಡೆಸಿ ಸ್ವಸ್ಥ್ಯ ಸಮಾಜ ರೂಪಿಸುವಲ್ಲಿ ಶ್ರಮಿಸಿದ ಅಭಿಮಾನ ನಮಗಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಪಯ್ಯಡೆ ಅಭಿಪ್ರಾಯಪಟ್ಟರು.

ಜನತೆಯ ಪೆÇ್ರೀತ್ಸಹವು ನಮ್ಮ ಸಮಾಜಮುಖಿ ಸೇವೆಗೆ ಸಕ್ರೀಯವಾಗಿಸಿದೆ. ನಾನು ಅಂತರಾಷ್ಟ್ರೀಯ ಮಟ್ಟದ ಸೇವಾ ಕಾರ್ಯಕ್ರಮಗಳಲ್ಲಿ ಪಳಗಿದ್ದರೂ ಸದ್ಯ ಸ್ವಸಮಾಜದ ಜನತೆಯ ಸೇವೆಯಲ್ಲಿ ತೊಡಗಿಸಿ ಕೊಂಡು ಸೇವೆಯ ಆಳ ಅರಿತು ಕೊಳ್ಳುವಂತಾಗಿದೆ. ಈ ಅವಕಾಶ ನನ್ನ ಸೌಭಾಗ್ಯವೇ ಸರಿ. ನಿಸ್ವಾರ್ಥ ಸೇವೆಯ ದೃಷ್ಟಿಕೋನ ಮೂಡಿಸಿ ಸಮಾಜದ ಜನತೆಯನ್ನು ಏಕಾಗ್ರಗೊಳಿಸುತ್ತಾ ಇನ್ನಷ್ಟು ಸಕ್ರೀಯರಾಗುವ ಪ್ರಯತ್ನ ಮಾಡುವೆ ಎಂದು ಪ್ರಸ್ತಾವಿಕ ನುಡಿಗಳನ್ನಾಡಿ ಡಾ| ಆರ್.ಕೆ ಶೆಟ್ಟಿ ಆಶಯ ವ್ಯಕ್ತಪಡಿಸಿದರು.

ಬಂಟ್ಸ್ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಸಿಎ| ಸಂಜೀವ ಶೆಟ್ಟಿ, ಗೌ| ಕೋಶಾಧಿಕಾರಿ ಪ್ರವೀಣ್ ಬಿ.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿಜಯ್ ಶೆಟ್ಟಿ, ಸಮಾಜ ಕಲ್ಯಾಣ ಸಮಿತಿ ಕಾರ್ಯಧ್ಯಕ್ಷ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಪ್ರಾದೇಶಿಕ ಸಮಿತಿ ಕೋಶಾಧಿಕಾರಿ ಕರುಣಾಕರ್ ವಿ.ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಸಾದ್ ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ವನಿತಾ ವೈ.ನೋಂಡಾ, ಯುವ ವಿಭಾಗಧ್ಯಕ್ಷ ರಕ್ಷಿತ್ ಶೆಟ್ಟಿ, ನಿಧಿ ಸಂಗ್ರಹ ಸಮಿತಿ ಕಾರ್ಯಾಧ್ಯಕ್ಷ ಯಶವಂತ ಶೆಟ್ಟಿ, ಸದಸ್ಯತ್ವ ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಲಕ್ಷಣ ಶೆಟ್ಟಿ, ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ನಾನಯರ ಗರಡಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಸವಿತಾ ಶೆಟ್ಟಿ, ದತ್ತು ಸ್ವೀಕಾರ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಸೂರಜ್ ಶೆಟ್ಟಿ, ವೈವಾಹಿಕ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ, ಉದ್ಯಮ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಳ್ವ ಇನ್ನಿತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಕ್ಷಯ್ ಶೆಟ್ಟಿ ಮತ್ತು ಬಳಗದ ಪ್ರಾರ್ಥನಾನೃತ್ಯದೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಪ್ರಾದೇಶಿಕ ಸಮಿತಿ ಗೌರವ ಕಾರ್ಯದರ್ಶಿ ರವಿ ಆರ್.ಶೆಟ್ಟಿ, ಸ್ವಾಗತಿಸಿದರು. ಬಂಟರವಾಣಿ ಮಾಸಿಕದ ಸಂಪಾದಕ ಅಶೋಕ್ ಪಕ್ಕಳ ಅತಿಥಿüಗಳನ್ನು ಪರಿಚಯಿಸಿದರು. ಮನೀಷಾ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ರಮೇಶ್ ಡಿ.ರೈ ಕಯ್ಯಾರು ದಾನಿಗಳ ಯಾದಿ ವಾಚಿಸಿದ್ದು, ಪ್ರಾದೇಶಿಕ ಸಮಿತಿ ಉಪ ಕಾರ್ಯಾಧ್ಯಕ್ಷ ನ್ಯಾ| ಆರ್.ಜಿ ಶೆಟ್ಟಿ ಕೃತಜ್ಞತೆ ಸಮರ್ಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಷ್ಯಾನ್ ಡ್ಯಾನ್ಸ್ ಮತ್ತು ವಿಶ್ವಮಾನ್ಯತಾ ಇಂದ್ರಜಾಲ ಮೋದಿಗಾರ ಕುದ್ರೋಳಿ ಗಣೇಶ್ ತನ್ನ ಸಹ ಕಲಾವಿದರೊಂದಿಗೆ ಮಸ್ತ್ ಮ್ಯಾಜಿಕ್ ಪ್ರದರ್ಶಿಸಲ್ಪಟ್ಟಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿ ಕಂಡಿತು.

ರಾಷ್ಟ್ರಪ್ರೇಮಕ್ಕೆ ಪ್ರೇರಕವಾದ ಕಾರ್ಯಕ್ರಮ:
ಅತಿಥಿüಗಳು, ಭಾಷಣ, ಪರಸ್ಪರ ಹೊಗಳುವಿಕೆ, ಪುಷ್ಪಗುಪ್ಚ ವಿತರಣಾ ಕಾರ್ಯಕ್ರಮಕ್ಕಿಂತಲೂ ಉದ್ದೇಶ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಮಿತಿ ಪಡೆಯು ಶಿಸ್ತಿನ ಸಿಪಾಯಿಗಳಂತೆ ನಿಂತಿದ್ದರು. ಸುಧಾಮ ಶೆಟ್ಟಿ ನಿಟ್ಟೆ ಮತ್ತು ಮಮತಾ ಶೆಟ್ಟಿ ಸಾಣೂರು ದಂಪತಿ ಸುಪುತ್ರ, ಬಂಟ ಸಮುದಾಯದ ಭಾರತ ಕಂಡ ವೀರ ಸೈನ್ಯಾಧಿಕಾರಿ ಮಿಲಿಟರಿ ಸಾವಸ್ತ್ರದಲ್ಲೇ ವೇದಿಕೆಯನ್ನು ಅಲಂಕರಿಸಿದ ಮೇಜರ್ ಡಾ| ಗೌರವ್ ಎಸ್.ಶೆಟ್ಟಿ ಅವರಿಗೆ ರಾಜಗಾಂಭೀರ್ಯತೆÉ, ಮಿಲಿಟರಿ ಗೌರವದಂತೆಯೇ ಶಿಸ್ತುಬದ್ಧವಾಗಿ ಸನ್ಮಾನಿಸಿದ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಮೇಜರ್ ಗೌರವ್ ಅವರ ಸಾಧನಾನಡೆ ಸಾಕ್ಷ ್ಯಚಿತ್ರ ಮೂಲಕ ಭಿತ್ತರಿಸುತ್ತಿದ್ದಂತೆಯೇ ಕಿಕ್ಕಿರಿದು ನೆರೆದಿದ್ದ ಸಭಿಕರು ವೀಕ್ಷಿಸಿ ಭಾವೋದ್ವಕರಾಗಿ ದ್ದೂ ಹರ್ಷೋದ್ಗಾರದಿಂದ ನಿಂತುಕೊಂಡು ಮೇಜರ್ ಗೌರವ್‍ರಿಗೆ ಸಲ್ಯೂಟು ಹೊಡೆದರೆ ಮತ್ತನೇಕರು ಭಾರತ್ ಮಾತಾಕೀ ಜೈ ಘೋಷಣೆಗೈದÀು ರಾಷ್ಟ್ರಗೌರವ ಮೆರೆದರು. ಆರ್.ಕೆ ಶೆಟ್ಟಿ ಅವರ ಸಾರಥ್ಯದ ಅರ್ಥಗರ್ಭಿತ ಸೇವಾ ಕಾರ್ಯಕ್ರಮ ಭಾರೀ ಪ್ರಶಂಸೆಗೆ ಪಾತ್ರವಾಗಿ ಸಾಕ್ಷಾತ್ ರಾಷ್ಟ್ರ ಪ್ರೇಮಕ್ಕೆ ನಾಂದಿಯನ್ನಾಡಿತು. ದೃಢಚಿತ್ತರಾಗಿ ಕಾರ್ಯಕ್ರಮ ಅನುಭವಿಸಿದ ಸಭಿಕರು ಮುಕ್ತ ಕಂಠದಿಂದ ಶ್ಲಾಘಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here