Friday 19th, April 2024
canara news

ಕರ್ನಾಟಕ ಸಂಘ ಅಸಲ್ಫಾ-ಕನ್ನಡ ವಿದ್ಯಾ ಭವನದಲ್ಲಿ ಗಣರಾಜ್ಯೋತ್ಸವ ಸಂಭ್ರಮ

Published On : 01 Feb 2019   |  Reported By : Rons Bantwal


ಆಟೋಟ ಸ್ಪರ್ಧೆಗಳ ವಿಜೇತ ವಿದ್ಯಾಥಿರ್üಗಳಿಗೆ ಪ್ರಮಾಣ ಪತ್ರಗಳನ್ನು ಪ್ರದಾನ

(ಚಿತ್ರ / ವರದಿ: ರೊನಿಡಾ ಮುಂಬಯಿ)

ಮುಂಬಯಿ, ಜ.28: ಘಾಟ್ಕೋಪರ್ ಪಶ್ಚಿಮದ ಅಸಲ್ಫಾ ಇಲ್ಲಿನ ಎನ್‍ಎಸ್‍ಎಸ್ ರಸ್ತೆಯಲ್ಲಿನ ಕನ್ನಡ ವಿದ್ಯಾ ಭವನದಲ್ಲಿ ಕರ್ನಾಟಕ ಸಂಘ ಅಸಲ್ಫಾ ಇದರ ಸದಸ್ಯರು ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಕನ್ನಡ ವಿದ್ಯಾಥಿರ್üಗಳೊಂದಿಗೆ ಗಣರಾಜ್ಯೋತ್ಸವ ಸಮಾರಂಭವನ್ನು ಉತ್ಸಾಹ ಸಡಗರದಿಂದ ಆಚರಿಸಿದರು.

ಬೆಳಿಗ್ಗೆ ಸಂಘದ ಉಪಾಧ್ಯಕ್ಷ ಜಯರಾಮ ಜಿ.ರೈ ಧ್ವಜಾರೋಹಣ ನೆರವೇರಿಸಿ ರಾಷ್ಟ್ರಗೌರವ ಸಲ್ಲಿಸುತ್ತಾ ಸರ್ವರಿಗೂ ಶುಭ ಹಾರೈಸಿದರು. ಶಾಲಾ ವಿದ್ಯಾಥಿರ್üಗಳು ತಮ್ಮ ತೊದಲು ನುಡಿಗಳಿಂದ ಪ್ರಜಾಪ್ರಭುತ್ವ ದಿನಾಚರಣೆಯ ಮಹತ್ವ, ಅದಕ್ಕಾಗಿ ದುಡಿದ ಹಲವು ಮಹನೀಯರು, ಯೋಧರÀ ಹಿರಿಮೆ ವಿವರಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಂತರ್ಶಾಲಾ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾಥಿರ್üಗಳಿಗೆ ಶಾಲಾ ಪ್ರಾಧ್ಯಾಪಕ ಗುರುರಾಜ್ ಮತ್ತು ಜಯರಾಮ ರೈ ಗೌರವ ಪ್ರಮಾಣ ಪತ್ರಗಳನ್ನು ಪ್ರದಾನಿಸಿ ಅಭಿನಂದಿಸಿದರು.

ಈ ಸುಸಂದರ್ಭದಲ್ಲಿ ಆನೇಕ ಹಳೇ ವಿದ್ಯಾಥಿರ್üಗಳು ಭಾಗವಹಿಸಿ ತಮ್ಮ ಮಾತೃಶಾಲೆಯ ಮೇಲಿರುವ ಅಭಿಮಾನ ತೋರಿದರು. ಸದಾನಂದ ಸಫಲಿಗ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು. ರಾಷ್ಟ್ರಗೀತೆ ಮತ್ತು ಸಿಹಿ ವಿತರಣೆಯೊಂದಿಗೆ ಸಮಾರಂಭ ಕೊನೆಗೊಂಡಿತು




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here