Friday 29th, March 2024
canara news

ಫೆ.03: ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ ವಿದ್ಯಾಲಯದ 57ನೇ ವಾರ್ಷಿಕೋತ್ಸವ

Published On : 02 Feb 2019   |  Reported By : Rons Bantwal


ಕನ್ನಡ ಭವನದ ಮುಖವಾಣಿ `ಮಧುರವಾಣಿ'ಯ 50ರ ಸಂಭ್ರಮ

ಮುಂಬಯಿ, 30: ಬೃಹನ್ಮುಅಂಬಯಿ ಫೆÇೀರ್ಟ್ (ಕೋಟೆ) ಪರಿಸರದಲ್ಲಿಮಾರು 57 ವರುಷಗಳ ದೀರ್ಘ ಇತಿಹಾಸವಿರುವ ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ ಮುಂಬಯಿಯ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿದ್ದು ಶಾಲೆ ಹಾಗೂ ಕಿರಿಯ ಮಹಾವಿದ್ಯಾಲಯವು ಸುಮಾರು ಐದುವರೆ ದಶಕಗಳಿಂದÀ ವಿದ್ಯಾರ್ಜನೆ ಗೈಯುತ್ತಿದೆ. ಸಂಸ್ಥೆ ಹಾಗೂ ಶಾಲೆಯ ಸುವರ್ಣ ಮಹೋತ್ಸವ ಯಶಸ್ವಿಯಾಗಿ ಆಚರಿಸಿ ಇದೀಗ ವಜ್ರಮಹೋತ್ಸವದತ್ತ ದಾಪುಜಿಸಿದ್ದು ಇದರ ಉದ್ಘಾಟನಾ ಸಮಾರಂಭ ಇದೇ ಬರುವ ರವಿವಾರ (ಫೆ.03) ಅಪರಾಹ್ನಗಾಲು ಹಾಕುತ್ತಿದೆ. ಪ್ರಸಕ್ತ ಸಾಲಿನಲ್ಲಿ ಕನ್ನಡ ಭವನದ ಮುಖವಾಣಿ ಆದ `ಮಧುರವಾಣಿ'ಯ 50ರ ಹರೆಯದ ಈ ಸಂದರ್ಭದಲ್ಲಿ ಸರಣಿ ಕಾರ್ಯಕ್ರಮಗಳನ್ನು ಆಯೋ 2.30 ಗಂಟೆಗೆ ಅಲೆಗ್ಸಾಂಡ್ರೀಯ ಗಲ್ರ್ಸ್ ಹೈಸ್ಕೂಲ್, ಇಎನ್‍ಟಿ ಆಸ್ಪತ್ರೆ ಮತ್ತು ಟಾಟಾ ಟೆಲಿಕಾಂಮ್ ಎದುರು, ಹಝಾರಿಮಲ್ ಸೊಮಾನಿ ಮಾರ್ಗ, ಫೆÇೀರ್ಟ್ (ವಿಟಿ), ಮುಂಬಯಿ ಇಲ್ಲಿ ನಡೆಸಲಿದೆ.

  

              A B SHETTY                   KAIRABETTU VISHNATH BHAT

  

Krishna Y.Shetty                           PR NAGARHALLI

   

 Dr. R.K SHETTY  (LIC)               SHRINIVAS SHETTY

MOHAN MARNAD

ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ ಕಾರ್ಯಾಧ್ಯಕ್ಷ ಎ.ಬಿ ಶೆಟ್ಟಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಆಶೀರ್ವಚನ ನೀಡÀುವರು. ಹಿರಿಯ ಉದ್ಯಮಿ, ಸಮಾಜ ಸೇವಕ ಹಾಗೂ ಶಿಕ್ಷಣಪ್ರೇಮಿ, ಕೃಷ್ಣ ಪ್ಯಾಲೇಸ್ ಸಮೂಹ ಸಂಸ್ಥೆ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಕೃಷ್ಣ ವೈ.ಶೆಟ್ಟಿ ಸಮಾರಂಭ ಉದ್ಘಾಟಿಸುವರು. ಕನ್ನಡ ಭವನದ ನಿವೃತ್ತ ಪ್ರಾಂಶುಪಾಲ ಹಾಗೂ ಶ್ರೀ ಸರ್ವಜ್ಞ ವಿದ್ಯಾಪೀಠ ವಿರಾರ್ ಇದರ ಕುಲಪತಿ ಆಚಾರ್ಯ ಪ್ರಹ್ಲಾದಾಚಾರ್ಯ ಆರ್.ಅನಾಗರಹಳ್ಳಿ ಮುಖ್ಯ ಅತಿಥಿüಯಾಗಿ ಮತ್ತು ಬಂಟರ ಸಂಘ ಮುಂಬಯಿ ಇದರ ಅಂಧೇರಿ-ಬಾಂದ್ರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಮತ್ತು ಯಶಸ್ವಿ ಉದ್ಯಮಿ ಡಾ| ಆರ್.ಕೆ ಶೆಟ್ಟಿ, ಸಮಾಜ ಸೇವಕ, ಶಿಕ್ಷಣ ಪ್ರೇಮಿ ಶ್ರೀನಿವಾಸ ಶೆಟ್ಟಿ ಗೌರವ ಅತಿಥಿüಗಳಾಗಿ ಆಗಮಿಸಲಿರುವರು.

ಈ ಸಂದರ್ಭದಲ್ಲಿ, ಪ್ರಸಕ್ತ ವರ್ಷದ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಶ್ರೇಷ್ಠ ರಂಗಕರ್ಮಿ, ಪ್ರಸಿದ್ಧ ಕಂಠದಾನ ಕಲಾವಿದ ಮೊಹನ್ ಮಾರ್ನಾಡ್ ಇವರನ್ನು ಅವಳಿ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಗುವುದು. ಮನೋರಂಜನೆ ಕಾರ್ಯಕ್ರಮದ ಅಂಗವಾಗಿ ಕಲಾ ಸೌರಭ ಮುಂಬಯಿ ಗಾಯನ ನರ್ತನದ ಅಪೂರ್ವ ಸಂಗಮ `ಸಂಗೀತ ಶೃಂಗಾರ' ಪ್ರಸ್ತುತಿಯಲ್ಲಿ ವಿದ್ಯಾಥಿರ್üಗಳು ನೃತ್ಯ ಪ್ರದರ್ಶಿಸುವರು.

ಈ ಎಲ್ಲಾ ಕಾರ್ಯಕ್ರಮಕ್ಕೆ ಮಹಾನಗರದಲ್ಲಿನ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜತೆಗೆ ಜರಗಲಿರುವ ಮುಂದಿನ ವಿವಿಧ ಕಾರ್ಯಕ್ರಮಗಳಿಗೆ ತಮ್ಮ ಸಹಕಾರ ನೀಡಿ ನಮ್ಮನ್ನು ಪೆÇ್ರೀತ್ಸಾಹಿಸುವರೇ ಸಂಸ್ಥೆ ಹಾಗೂ ಶಾಲೆ ಕಾಲೇಜು ಪರವಾಗಿ ಗೌರವ ಪ್ರಧಾನ ಕಾರ್ಯದರ್ಶಿ ಶೇಖರ ಎ.ಅಮೀನ್ ಈ ಮೂಲಕ ವಿನಂತಿಸಿದ್ದಾರೆ.

ಮೋಹನ್ ಮಾರ್ನಾಡ್: ಮುಂಬಯಿ ಕನ್ನಡ-ತುಳು ರಂಗಭೂಮಿಯಲ್ಲಿ ಒಂದು ಪ್ರಮುಖ ಹೆಸರು ಮೊಹನ್ ಮಾರ್ನಾಡ್, ನಟನೆ, ನಿರ್ದೇಶನ, ಕಂಠದಾನ, ಬರವಣಿಗೆ, ಸಮಾಜ ಸೇವೆ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಇವರು ಕ್ರೀಯಾಶೀಲರು. ಸುಮಾರು ಲಕ್ಷಕ್ಕೂ ಹತ್ತಿರದಷ್ಟು ರೇಡಿಯೋ, ಟಿವಿ ಜಾಹಿರಾತುಗಳಿಗೆ ಕಂಠದಾನ ಮಾಡಿರುವರು. ವಾಣಿಜ್ಯ ಪದವೀಧರರಾದ ಇವರು ಆರಂಭದಲ್ಲಿ 80-90ರ ದಶಕಗಳಲ್ಲಿ `ಕಲಾ ಜಗತ್ತು' ನಾಟಕ ಸಂಸ್ಥೆಯ ಪ್ರಮುಖ ನಟರಾಗಿಯೂ ಖ್ಯಾತಿ ಪಡೆದವರು, ಕರ್ನಾಟಕ ಸಂಘ, ಮುಂಬಯಿ `ಕಲಾಭಾರತಿ ತಂಡ'ದ ಪ್ರಧಾನ ನಟ ಇವರು. ಹಲವಾರು ಪ್ರಸಿದ್ಧ ನಿರ್ದೇಶಕರ ನಾಟಕಗಳಲ್ಲಿ ಒಟ್ಟು 375 ಕ್ಕೂ ಮಿಕ್ಕಿ ಕನ್ನಡ ತುಳು ಹಾಗೂ ಇತರ ಭಾಷೆಗಳ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ತುಳು ಚಲನಚಿತ್ರ ಹಾಗೂ ಹಿಂದಿ ಧಾರವಾಹಿಗಳಲ್ಲಿ ಅಬಿನಯಿಸಿದ ಇವರು ತಮ್ಮ ನಾಟಕಕ್ಕೆ ಹಲವಾರು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುವರು. ಮೋಹನ್ ಮಾರ್ನಾಡ್ ರಚಿತ ಟಿಪ್ಪು ಸುಲ್ತಾನ್ ನಾಟಕದಲ್ಲಿ 40ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿರುವುದು ಎಲ್ಲರ ಮನ ಸೆಳೆದಿರುವ ವಿಚಾರ. 2006ರಲ್ಲಿ ಜರಗಿದ 8ನೇ ಏಷ್ಯನ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ಅತ್ಯುತ್ತಮ ತುಳು ಡಿಜಿಟಲ್ ಚಲನಚಿತ್ರ ಪ್ರಶಸ್ತಿ ಗೆದ್ದುಕೊಂಡಿರುವ `ಸುದ್ದ' ತುಳು ಡಿಜಿಟಲ್ ಸಿನಿಮಾದ ನಿರ್ಮಾಪಕರಲ್ಲಿ ಇವರು ಒಬ್ಬರಾಗಿರುವರು. ಹಲವಾರು ಕನ್ನಡ ಚಟುವಟಿಕೆಗಳಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡಿರುವ ಇವರು ಸದ್ದಿಲ್ಲದ ಕೊಡುಗೈ ದಾನಿಯೂ ಅಗಿರುವರು. ಇವರು ಹಲವಾರು ವಿಧ್ಯಾಥಿರ್üಗಳನ್ನು ದತ್ತು ಪಡೆದಿರುವುದಲ್ಲದೆ, ವಿಧ್ಯಾಥಿರ್üಗಳಿಗೆ ಶಾಲಾ ಸಲಕರಣೆಗಳನ್ನು ಸದ್ದಿಲ್ಲದೆ ಒದಗಿಸುತ್ತಿದ್ದಾರೆ. ಕನ್ನಡ ಭವನ ಕಿರಿಯ ಮಹಾವಿದ್ಯಾಲಯದ ಮಾಜಿ ವಿದ್ಯಾಥಿರ್üಯಾಗಿರುವ ಇವರು ಪ್ರಸಕ್ತ ವರ್ಷದ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ ವಾರ್ಷಿಕ ರಂಗಪ್ರಶಸ್ತಿಗೆ ಭಾಜನರಾಗಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಅವರಿಗೆ ಇನ್ನಷ್ಟು ಪ್ರಶಸ್ತಿಗಳು ಅವರ ಮುಡಿಯನ್ನು ಅಲಂಕರಿಸಲಿ, ಅವರ ಕಲಾಹಸ್ತಗಳಿಗೆ ಇನ್ನಷ್ಟು ಕನ್ನಡ ಕಲಾಮಾತೆಯ ಸೇವೆ ಮಾಡುವ ಶಕ್ತಿಯನ್ನು ಆ ಭಗವಂತ ನೀಡಲಿ. ಸದಾ ನಗು ನಗುವ ಸುಖ ನೆಮ್ಮದಿಯ ಜೀವನದೊಂದಿಗೆ ಇನ್ನಷ್ಟುಕೀರ್ತಿವಂತರಾಗುವ ಯೋಗ ಭಾಗ್ಯವನ್ನು ಅವರಿಗೆ ಆ ದೇವರು ಅನುಗ್ರಹಿಸಲಿ ಎಂದು ಆಶಿಸುತ್ತೆವೆ.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here