Friday 19th, April 2024
canara news

ಬೊರಿವಿಲಿ ದೇವುಲಪಾಡದ ಶ್ರೀ ಬ್ರಹ್ಮ ಬೈದರ್ಕಳರ ಗರಡಿಯಲ್ಲಿ ನೆರವೇರಿಸಲ್ಪಟ್ಟ ನಲ್ವತ್ತೈದÀನೇ ವಾರ್ಷಿಕ ಬೈದರ್ಕಳ ನೇಮೋತ್ಸವ

Published On : 03 Feb 2019   |  Reported By : Rons Bantwal


ಮುಂಬಯಿ, ಜ.30: ಬೊರಿವಿಲಿ ಪೂರ್ವದಲ್ಲಿನ ದೇವುಲಪಾಡಾದಲ್ಲಿನ ಓಂ ಶ್ರೀ ಜಗಧೀಶ್ವರೀ ಸೇವಾ ಸಮಿತಿ ಸಂಚಾಲಕತ್ವದ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ 45ನೇ ವಾರ್ಷಿಕ ಬೈದರ್ಕಳ ನೇಮೋತ್ಸವ ಕಳೆದ ಶುಕ್ರವಾರ ಕ್ಷೇತ್ರÀದ ಸೇವಾ ಸಮಿತಿ ಅಧ್ಯಕ್ಷ ಶೇಖರ್ ಇಂದು ಸಾಲಿಯಾನ್ ಕಟಪಾಡಿ ಮಾರ್ಗರ್ಶನದಲ್ಲಿ ವಿಧಿವತ್ತಾಗಿ ನೆರವೇರಿಸಿತು.

ಶ್ರೀ ಜಗನ್ಮಾತೆಯು ಓಂ ಶ್ರೀ ಜಗದೀಶ್ವರೀ ಎಂಬ ನಾಮದಿಂದ ತುಳುನಾಡಿನ ವೀರೀರ ದೈವಗಳಾದ ಕೋಟಿ ಚೆನ್ನಯರನ್ನು ಒಳಗೂಡಿಕೊಂಡಿರುವ ದೇವುಲಪಾಡ ಅಶ್ವತ್ತದಡಿ ಕ್ಷೇತ್ರದಲ್ಲಿ ನೆಲೆಯಾಗಿ ಭಕ್ತರ ಸಂಕಷ್ಟಗಳನ್ನು ಪರಿಹರಿಸಿ ಮೆರೆಯುತ್ತಿರುವ ಎನ್ನಲಾದ ಗರಡಿಯಲ್ಲಿ ಆ ಪ್ರಯುಕ್ತ ಕಳೆದ ಗುರುವಾರ ಅಪರಾಹ್ನ ಕಲಶ ಪ್ರತಿಷ್ಠೆ, ರಾತ್ರಿ ಅಗಲ ತಂಬಿಲ ನಂತರ ಬೈದರ್ಕಳ ದರ್ಶನ ಇನ್ನಿತರ ಪೂಜಾಧಿಗಳಿಂದ ನೇಮೋತ್ಸವಕ್ಕೆ ಚಾಲನೆ ನೀಡಲಾಯಿತು. ಶುಕ್ರವಾರ ಬೆಳಿಗ್ಗೆ ಗಣಹೋಮ, ದುರ್ಗಾಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ಬೈದರ್ಕಳ ನೇಮ(ಕೋಲ) ನಂತರ ಜೋಗಿ ಪುರುಷರ ನೇಮೋತ್ಸವ ಮತ್ತು ಮಾಯಂದಳ್ ನೇಮ ನಡೆಸಿ ಶನಿವಾರ ಮುಂಜಾನೆ ಮಂಗಳವನ್ನಾಡಿ ವಾರ್ಷಿಕ ನೇಮೋತ್ಸವಕ್ಕೆ ಅಂತ್ಯವನ್ನಾಡಲಾಯಿತು.

ನೇಮೋತ್ಸವದಲ್ಲಿ ಪ್ರಸಾದ್ ಕಲ್ಯ (ಮುಲುಂಡ್) ದೇವಿಪಾತ್ರಿಯಾಗಿ, ನರ್ಸಪ್ಪ ಕೆ.ಮಾರ್ನಾಡ್ ಮಧ್ಯಾಸ್ಥರಾಗಿ, ಹರಿ ಪೂಜಾರಿ ಮತ್ತು ಭಾಸ್ಕರ ಪೂಜಾರಿ ಬೈದರ್ಕಳರ ಪೂಜಾರಿಗಳಾಗಿದ್ದು, ಬೂಬ ಪರವ, ನರಸಿಂಹ ಪರವ ಮತ್ತು ಗುಂಡು ಪರವ ಕೋಲ ನೇರವೇರಿಸಿದರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎನ್.ಕೋಟ್ಯಾನ್, ಭಾರತ್ ಬ್ಯಾಂಕ್‍ನ ನಿರ್ದೇಶಕ ಪ್ರೇಮನಾಥ್ ಪಿ.ಕೋಟ್ಯಾನ್, ಸ್ಥಳಿಯ ನಗರ ಸೇವಕಿ ಆಶಾ ವಿ.ಪಾಟೀಲ್, ಶಿವಸೇನಾ ಧುರೀಣರಾದ ಯೋಗೇಶ್ ಬೋಯಿರ್ ಮತ್ತು ಪ್ರಕಾಶ್ ಬೇರೆಕರ್ ಅತಿಥಿüಗಳಾಗಿ ಆಗಮಿಸಿದ್ದು, ಸುಕುಮಾರ್ ಭಟ್ ಬೈಕಲ ಪೂಜಾಧಿಗಳನ್ನು ನೆರವೇರಿಸಿ ಭಕ್ತಾಭಿಮಾನಿಗಳಿಗೆ ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ಸೇವಾ ಸಮಿತಿ ಉಪಾಧ್ಯಕ್ಷ ಲಕ್ಷ ್ಮಣ ಬಿ.ಬೆಳುವಾಯಿ, ಗೌ| ಪ್ರ| ಕಾರ್ಯದರ್ಶಿ ವಿಶ್ವನಾಥ ಬಿ.ಬಂಗೇರ, ಗೌ| ಕೋಶಾಧಿಕಾರಿ ರಘು ಕೆ.ಕೋಟ್ಯಾನ್, ಜೊತೆ ಕಾರ್ಯದರ್ಶಿ ಸದಾಶಿವ ಡಿ.ಸಾಲ್ಯಾನ್, ಜೊತೆ ಕೋಶಾಧಿಕಾರಿ ದಿನೇಶ್ ಆರ್.ಶೆಟ್ಟಿ, ಕಾರ್ಯಕಾರಿ ಸಮಿತಿ ಅಧ್ಯಕ್ಷ ದಯಾನಂದ ಪೂಜಾರಿ ವಾರಂಗ, ಉಪಾಧ್ಯಕ್ಷ ನರ್ಸಪ್ಪ ಕೆ.ಮಾರ್ನಾಡ್, ಕಾರ್ಯದರ್ಶಿ ಜಯರಾಮ ಪೂಜಾರಿ, ಜೊತೆ ಕಾರ್ಯದರ್ಶಿ ವಿಠಲ ಹೆಚ್.ಪೂಜಾರಿ ಸೇರಿದಂತೆ ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು, ನೂರಾರು ಭಕ್ತಾಧಿಗಳು ಆಗಮಿಸಿ ಶ್ರೀ ಜಗಧೀಶ್ವರಿ ಮತ್ತು ಬ್ರಹ್ಮ ಬೈದರ್ಕಳರ ಕೃಪೆಗೆ ಪಾತ್ರರಾದರು. ಶೇಖರ್ ಸಾಲಿಯಾನ್ ಸ್ವಾಗತಿಸಿ ಗಣ್ಯರನ್ನು ಮತ್ತು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸೇವಾದಳದ ದಕ್ಷ ಹಾಗೂ ಶಿಸ್ತುಬದ್ಧ ಸೇವೆಯನ್ನು ಪರಿಗಣಿಸಿ ಸೇವಾದಳದ ದಳಪತಿ ಗಣೇಶ್ ಜಿ.ಪೂಜಾರಿ ಅವರನ್ನು ಶಾಲು ಹೊದಿಸಿ ಫಲಪುಷ್ಪ, ಪ್ರಸಾದ ನೀಡಿ ಅನುಗ್ರಹಿಸಿದರು. ದಯಾನಂದ ಪೂಜಾರಿ ವಾರಂಗ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ಬಿ.ಬಂಗೇರ ಅಭಾರಮನ್ನಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here