Friday 28th, February 2020
canara news

ಓಂ ಶಕ್ತಿ ಮಹಿಳಾ ಸಂಸ್ಥೆಯಿಂದ ಆದಿವಾಸಿ ಜನತೆಗೆ ಪಶು-ಕೋಳಿ ಸಾಕಾಣಿಗೆ ಪೆÇ್ರೀತ್ಸಹ

Published On : 04 Feb 2019   |  Reported By : Rons Bantwal


ಆದಿವಾಸಿಗಳ ವರಮಾನ ವೃದ್ಧಿಸುವ ಯೋಜನೆ ಶ್ಲಾಘನೀಯ-ಶಾಸಕ ಕಿಸನ್ ಕತೋರೆ

ಮುಂಬಯಿ (ಕಲ್ಯಾಣ್), ಜ.31: ಕಲ್ಯಾಣ್‍ನಿಂದ ಅನತಿ ದೂರದಲ್ಲಿ ಇರುವ ಆದಿವಾಸಿಗಳು ನೆಲೆಸಿರುವ ಮೋಹ್‍ವಾಡಿಗೆ ಬಂದು ಇಲ್ಲಿಯ ಜನರಲ್ಲಿ ಪ್ರೀತಿ ಕಾಳಜಿ ಇರಿಸಿ ಅವರಿಗೆ ಸ್ವದ್ಯೋಗವನ್ನು ಕಲ್ಪಿಸಿ ಅವರೂ ಸ್ವಾವಲಂಬನೆಯ ಬದುಕನ್ನು ನಡೆಸಲು ಪಶು ಸಂಗೋಪನೆ ಮತ್ತು ಕೋಳಿ ಸಾಕಾಣಿಕೆ ವೃತ್ತಿಗೆ ಅವಕಾಶ ಮಾಡಿ ಕೊಡುವುದು ನಿಜವಾಗಿಯೂ ಶ್ಲಾಘನೀಯ. ಹಳ್ಳಿಯ ಜನರು ಈ ಯೋಜನೆಗೆ ಮಹತ್ವಕೊಟ್ಟು ಅದರ ಸದುಪಯೋಗ ಪಡೆದು ತಮ್ಮ ಆದಾಯವನ್ನು ವೃದ್ಧಿಸಬೇಕು ಎಂದು ಅಂಬರ್‍ನಾಥ್-ಮುರ್ಬಾಡ್ ಶಾಸಕ ಕಿಸನ್ ಜೀ ಕತೋರೆ ತಿಳಿದರು.

ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್ ಹಮ್ಮಿಕೊಂಡಿರುವ ಗ್ರಾಮ ವಿಕಾಸ ಯೋಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕತೋರೆ, ಓಂ ಶಕ್ತಿ ಸಂಸ್ಥೆ ಕಲ್ಪಿಸಿದ ಕೋಳಿ ಹಾಗೂ ಆಡು ಸಾಕಣೆ ಯೋಜನೆ ಇದೇ ಪ್ರಪ್ರಥಮವೂ ಅತ್ಯಂತ ಅರ್ಥಪೂರ್ಣವೂ ಆಗಿದೆ. ಮೋಹ್‍ವಾಡಿಯ ಆದಿವಾಸಿ ಜನ ವಸತಿಯ ಅಭಿವೃದ್ಧಿ ಗಾಗಿ ಕೈಗೊಂಡಿರುವ ಕೈಂಕರ್ಯ ಕ್ಕೆ ತನ್ನ ಸಂಪೂರ್ಣ ಸಹಕಾರವಿದೆ. ತಮ್ಮೆಲ್ಲ ಕಾರ್ಯ ಯೋಜನೆಗಳ ವೈಖರಿ ಇಲ್ಲಿನ ಜನತೆಗೆ ಮೋಹ ಗಳಿಸುವಲ್ಲಿ ಸಫಲವಾಗಲಿ ಎಂದು ಹಾರೈಸಿದರು.

ಓಂ ಶಕ್ತಿ ಮಹಿಳಾ ಸಂಸ್ಥೆಯ ಅಧ್ಯಕ್ಷೆ ಹರಿಣಿ ಟಿ.ಶೆಟ್ಟಿ ಮಾತನಾಡಿ, ತೀರಾ ಹಿಂದುಳಿದ ಜನವಸತಿ ಪ್ರದೇಶವನ್ನು ಆಯ್ಕೆ ಮಾಡಿ ಅವರ ಜೀವನ ಗುಣಮಟ್ಟ ವನ್ನು ಉತ್ತಮ ಗೊಳಿಸುವ ಉದ್ದೇಶದಿಂದ ಇಂದು 50 ಕುಟುಂಬಕ್ಕೆ 45 ಮೇಕೆ ಹಾಗೂ 600 ಕೋಳಿ ಮರಿಗಳನ್ನು ಕೊಟ್ಟು ಅವುಗಳನ್ನು ಸಾಕಿ ತಮ್ಮ ಆದಾಯವನ್ನು ಹೆಚ್ಚಿಸಲು ನಾವು ಮಾಡುತ್ತಿರುವ ಸಣ್ಣ ಪ್ರಯತ್ನ ಅಷ್ಟೇ ಎಂದರು.

ಸಂಸ್ಥೆಯ ಗೌರವಾಧ್ಯಕ್ಷೆ ಚಿತ್ರ ಆರ್.ಶೆಟ್ಟಿ ಮಾತನಾಡಿ, ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಬಡ ಹಳ್ಳಿಯನ್ನು ಗುರುತಿಸಿ,ಅದರ ಸುಸ್ಥಿತಿಗಾಗಿ ಅಳಿಲ ಸೇವೆಯನ್ನು ಮಾಡುತ್ತಾ ಒಂದು ಮಾದರಿ ಹಳ್ಳಿ ಯಾಗಿ ಪರಿವರ್ತಿಸುವ ಕನಸು ನಮ್ಮದು. ಅದರಂತೆ ಈ ಪ್ರದೇಶದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ನಾವು ರೂಪಿಸಿಕೊಂಡಿರುವೆವು.ಇದು ನಮ್ಮ ಮೊದಲ ಹೆಜ್ಜೆ. ಇದಕ್ಕೆ ಪೂರಕವಾಗಿ ಇಲ್ಲಿನ ಪಂಚಾಯಿತಿ ಸಮಿತಿಯ ಸದಸ್ಯ ಹಾಗೂ ಸಮಾಜ ಸೇವಕ ಶ್ರೀ ಅನಿಲ್ ಘರಾಟ್ ಇಂದಿನ ನಮ್ಮ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ್ದಾರೆ. ಮೋಹ್‍ವಾಡಿ ಹೆಸರಿಗೆ ಅನ್ವಯವಾಗುವಂತೆ ಪ್ರೀತಿ ತುಂಬಿರುವ ಜನವಸತಿ ಪ್ರದೇಶ. ಇಲ್ಲಿಯ ವಾಸಿಗಳು ನಮ್ಮ ಉದ್ದೇಶಿತ ಕಾರ್ಯಗಳಿಗೆ ಸಹಕರಿಸಿ ನಾಲ್ಕೈದು ವರ್ಷಗಳಲ್ಲಿ ಈ ಪ್ರದೇಶವು ಮಾದರಿಗ್ರಾಮವಾಗಿ ಬೆಳಗಲಿ ಎಂದು ಹಾರೈಸಿದರು.

ಅತಿಥಿüಗಳಾಗಿ ಕಲ್ಯಾಣ್ ಹೋಟೆಲ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ಪ್ರವೀಣ್ ವಿ.ಶೆಟ್ಟಿ, ಮುರ್ಬಾಡ್ ಪಂಚಾಯಿತಿ ಸಮಿತಿ ಉಪಸಭಾಪತಿ ಸೀಮಾ ಅನಿಲ್ ಘರಾಟ್, ಪಂಚಾಯಿತಿ ಸಮಿತಿ ಸದಸ್ಯ ಅನಿಲ್ ಘರಾಟ್, ಸುಭಾಷ್ ಘರಾಟ್, ಪೆÇೀಲೀಸ್ ಇನ್ಸ್ಸ್‍ಪೆಕ್ಟರ್ ಪೆÇೀರೆ ಸಾಬ್ ಉಪಸ್ಥಿತರಿದ್ದು ಕೊನೆಯಲ್ಲಿ 50 ಕುಟುಂಬದವರ ಆಧಾರ್ ಕಾರ್ಡ್ ಪರಿಶೀಲಿಸಿ 45 ಮೇಕೆಗಳನ್ನು ಮತ್ತು 600 ಕೋಳಿಗಳನ್ನು ಹಂಚಲಾಯಿತು.

ಅನಿಲ್ ಶೆಟ್ಟಿ ಕೇಂಜ, ಓಂ ಶಕ್ತಿ ಕೋಶಾಧಿಕಾರಿ ಸುರೇಖಾ ಹೆಚ್.ಶೆಟ್ಟಿ, ಜೊತೆ ಕೋಶಾಧಿಕಾರಿ ಕುಶಲ ಜಿ.ಶೆಟ್ಟಿ, ಸಂಘಟಕಿ ರಜನಿ ಎಸ್.ಶೆಟ್ಟಿ, ಸುಚಿತ ಜೆ.ಶೆಟ್ಟಿ, ಯಶೋದ ಎಸ್.ಶೆಟ್ಟಿ, ಜಯಶ್ರೀ ಕೆ.ಶೆಟ್ಟಿ, ಉಷಾ ಎ.ಶೆಟ್ಟಿ, ಸುಮತಿ ಎಸ್.ಶೆಟ್ಟಿ, ವಿಶಾಲ ಜೆ.ಶೆಟ್ಟಿ, ರೇವತಿ ಪಿ.ಶೆಟ್ಟಿ ಮತ್ತು ಆಶ್ನಾ ಪಿ.ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಮಾಜ ಕಲ್ಯಾಣ ಸಮಿತಿ ಸಂಚಾಲಕಿ ಶಶಿ ಪಿ.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಗ್ರೀಷ್ಮ ಪಿ. ಶೆಟ್ಟಿ ಧನ್ಯವದಿಸಿದರು.
More News

ಕುಕ್ಕಾಜೆ-ಮಂಚಿ ಗ್ರಾಮ ಪಂಚಾಯತ್ ವಠಾರದಲ್ಲಿ ರಕ್ತದಾನ ಶಿಬಿರ
ಕುಕ್ಕಾಜೆ-ಮಂಚಿ ಗ್ರಾಮ ಪಂಚಾಯತ್ ವಠಾರದಲ್ಲಿ ರಕ್ತದಾನ ಶಿಬಿರ
ಮಾ.8: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ
ಮಾ.8: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ
ಶ್ರೀ ಪುರಂದರದಾಸರ 456ನೇ ಆರಾಧನಾ ಮಹೋತ್ಸವಗೈದ ಮುಂಬಯಿ ಕನ್ನಡ ಸಂಘ
ಶ್ರೀ ಪುರಂದರದಾಸರ 456ನೇ ಆರಾಧನಾ ಮಹೋತ್ಸವಗೈದ ಮುಂಬಯಿ ಕನ್ನಡ ಸಂಘ

Comment Here