Friday 28th, February 2020
canara news

ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ಸಂಭ್ರಮದ ತಯಾರಿ

Published On : 06 Feb 2019   |  Reported By : Vincent Mascarenhas


ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬವನ್ನು ಫೆಬ್ರವರಿ 15ರಂದು ಸಂಭ್ರಮದಿಂದ ಆಚರಿಸಲಾಗುವುದು. ಹಬ್ಬಕ್ಕೆ ತಯಾರಿಯಾಗಿ ಫೆಬ್ರವರಿ 6 ರಂದು ಒಂಬತ್ತು ದಿನಗಳ ನವೇನ ಪ್ರಾರ್ಥನೆ ಆರಂಭಗೊಳ್ಳುವುದು. ಸಾಯಾಂಕಾಲ 4.30 ಗಂಟೆಗೆ ಅಲಂಕರಿಸಿದ ಸಂತ ಆಂತೋನಿಯವರ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಜೆಪ್ಪು ಸಂತ ಆಂತೋನಿ ಆಶ್ರಮದಿಂದ ಕಂಕನಾಡಿ ವೃತ್ತ, ಫಳ್ನೀರ್ ಕಡೆಯಿಂದ ಮಿಲಾಗ್ರಿಸ್ ಚರ್ಚ್ ತನಕ ಕೊಂಡೊಯ್ಯಲಾಗುವುದು. ಜೆಪ್ಪು ಸಂತ ಆಂತೋನಿ ಜಾಕೊಬೈಟ್ ಸೀರಿಯನ್ ಮಹಾದೇವಾಲಯದ ಪ್ರಧಾನ ಗುರುಗಳಾದ ಫಾ. ಅನಿಶ್ ಪಿ.ವಿ. ಇವರು ಮೆರವಣಿಗೆಗೆ ಚಾಲನೆ ನೀಡುವರು. ಬಿಜೈ ಸೈಂಟ್ ಆ್ಯನ್ ಗುರುಮಠದ ಮುಖ್ಯಸ್ಥರಾದ ಫಾ. ಪಾವ್ಲ್ ಮೆಲ್ವಿನ್ ಡಿ’ಸೋಜರವರು ಪುಣ್ಯ ಕ್ಷೇತ್ರದ ಧ್ವಜ ಹಾರಿಸಿ ಮೊದಲ ದಿನದ ಬಲಿಪೂಜೆಯನ್ನು ಅರ್ಪಿಸುವರು.

ಒಂಬತ್ತು ದಿನಗಳ ನವೇನ ಪ್ರಾರ್ಥನೆಯ ಸಮಯದಲ್ಲಿ ಒಂಬತ್ತು ವಿವಿಧ ವರ್ಗಗಳ (ಯುವ ಜನರು, ಮಕ್ಕಳು, ದಂಪತಿ, ವ್ಯಾಧಿಸ್ತರು, ಧಾರ್ಮಿಕರು, ಮುಖಂಡರು) ಜನರಿಗಾಗಿ ಪ್ರಾರ್ಥಿಸಲಾಗುವುದು. ಬಲಿ ಪೂಜೆ ಅರ್ಪಿಸಲು ಮತ್ತು ಪ್ರವಚನ ನೀಡಲು ಪ್ರಖ್ಯಾತ ಧರ್ಮಗುರುಗಳನ್ನು ಆಹ್ವಾನಿಸಲಾಗಿದೆ. ಆಯಾಯ ದಿನದ ವರ್ಗಗಳ ಜನರಿಗೆ ಸಂಭದ ಪಟ್ಟಂತೆ ಪ್ರವಚನ ನೀಡಲಾಗುವುದು.

ಹಬ್ಬದ ಬಲಿಪೂಜೆಯನ್ನು ಅ. ವಂ. ಡಾ. ಎಲೋಶಿಯಸ್ ಪಾವ್ಲ್ ಡಿ’ಸೋಜ ಮಂಗಳೂರಿನ ವಿಶ್ರಾಂತ ಧರ್ಮಾಧ್ಯಕ್ಷರು ಫೆಬ್ರವರಿ 6 ರಂದು ಸಾಯಾಂಕಾಲ 6 ಗಂಟೆಗೆ ಮಿಲಾಗ್ರಿಸ್ ಚರ್ಚ್ ಮೈದಾನದಲ್ಲಿ ಅರ್ಪಿಸುವರು. ಸಾಯಾಂಕಾಲ 4.30 ಗಂಟೆಗೆ ಕೇರಳದ ಅಲೆಪ್ಪಿ ಧರ್ಮಪ್ರಾಂತ್ಯದ ವಂ. ಡಾ. ಜೊಯ್ ಪುತೆನ್‍ವಿತ್ತಿಲ್ ಮಲಯಾಳಂ ಭಾಷೆಯಲ್ಲಿ ಬಲಿಪೂಜೆ ಅರ್ಪಿಸುವರು. ಬೆಳಗ್ಗೆ 8 ಗಂಟೆಗೆ ವ್ಯಾದಿಸ್ತರಿಗಾಗಿ ಫಾ. ಮ್ಯಾಕ್ಷಿಮ್ ಡಿ’ಸೋಜ, ಸಂತ ಯೋಸೆಫ್ ಗುರುಮಠದ ಪ್ರಾಧ್ಯಪಕರು ಬಲಿಪೂಜೆಯನ್ನು ಅರ್ಪಿಸುವರು. 11 ಗಂಟೆಗೆ ಮೊನ್ಸಿಂಜೊರ್ ಮ್ಯಾಕ್ಷಿಮ್ ನೊರೊನ್ಹಾ ಧರ್ಮಪ್ರಾಂತ್ಯದ ಶ್ರೇಷ್ಟ ಗುರುಗಳು ಅಶ್ರಮದ ನಿವಾಸಿ ಮತ್ತು ವಿಶೇಷ ಆಹ್ವಾನಿತರಿಗಾಗಿ ಅರ್ಪಿಸುವರು.

13ನೇ ಶತಮಾನದಲ್ಲಿ ಪೆÇರ್ತುಗಲ್‍ನಲ್ಲಿ ಜೀವಿಸಿದ ಸಂತ ಆಂತೋನಿಯವರ ನಾಲಗೆ ಮತ್ತು ಸ್ವರ ಗಂಟಲು ಇಂದಿಗೂ ಜೀವಂತವಾಗಿದ್ದು ಇಟಲಿಯ ಪಾದುವ ನಗರದಲ್ಲಿನ ಸಂತ ಆಂತೋನಿಯವರ ಮಹಾ ದೇವಲಯದಲ್ಲಿ ಇಡಲಾಗಿದೆ. ಈ ಪುಣ್ಯ ಸ್ಮರಣಿಕೆಗಳ ಗೌರಾವಾರ್ಥ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಹಬ್ಬದ ಮುಂಚಿನ ದಿನ ಫೆಬ್ರವರಿ 14 ರಂದು ಸಾಯಾಂಕಾಲದ ನವೇನ ಬಲಿಪೂಜೆಯ ಬಳಿಕ ಮಿಲಾಗ್ರಿಸ್ ದೇವಾಲಯದ ತೆರೆದ ಮೈದಾನದಲ್ಲಿ ಸಾಂತ್ ಆಂತೊನಿ, ಪತ್ರ್ ಪತಿಕ್ ಪಾವಯ್(ಸಂತ ಆಂತೊನಿಯವರೆ ಈ ಪತ್ರವನ್ನು ಪತಿಗೆ ತಲುಪಿಸಿ) ಎಂಬ ಒಂದು ಗಂಟೆಯ 2ಆ ನಾಟಕವನ್ನು ಪ್ರಸ್ತುತ ಪಡಿಸಲಾಗುವುದು. 17 ನೇಯ ಶತಮಾನದಲ್ಲಿ ನಡೆದ ಈ ಪವಾಡ ನಡೆದ ಬಳಿಕ ಭಕ್ತಾಧಿಗಳು ಪತ್ರ ಬೇಗನೆ ತಲುಪಲಿ ಎಂಬ ಆಪೇಕ್ಷೆಯೊಂದಿಗೆ ಸಂತ ಆಂತೋನಿಯವರಲ್ಲಿ ಪ್ರಾರ್ಥಿಸಿ ಪತ್ರದ ಮೇಲೆ ಎಸ್.ಎ.ಜಿ.(Sಚಿiಟಿಣ ಂಟಿಣhoಟಿಥಿ ಉuiಜe) ಎಂದು ಬರೆಯುವ ಸಂಪ್ರದಾಯವನ್ನು ಆರಂಭಿಸಿದರು.

ಪತ್ರಿಕಾ ಗೋಷ್ಟಿಯಲ್ಲಿ ಆಶ್ರಮದ ನಿರ್ದೇಶಕ ಫಾ. ಒನಿಲ್ ಡಿ’ಸೋಜ, ಸಹಾಯಕ ನಿರ್ದೇಶಕ ಫಾ. ತ್ರಿಶಾನ್ ಡಿ’ಸೋಜ, ಮಾಧ್ಯಮ ಸಂಯೋಜಕ ಶ್ರೀ ವಿನ್ಸೆಂಟ್ ಮಸ್ಕರೆನಸ್ ಉಪಸ್ಥಿತರಿದ್ದರು.

 

 
More News

ಕುಕ್ಕಾಜೆ-ಮಂಚಿ ಗ್ರಾಮ ಪಂಚಾಯತ್ ವಠಾರದಲ್ಲಿ ರಕ್ತದಾನ ಶಿಬಿರ
ಕುಕ್ಕಾಜೆ-ಮಂಚಿ ಗ್ರಾಮ ಪಂಚಾಯತ್ ವಠಾರದಲ್ಲಿ ರಕ್ತದಾನ ಶಿಬಿರ
ಮಾ.8: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ
ಮಾ.8: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ
ಶ್ರೀ ಪುರಂದರದಾಸರ 456ನೇ ಆರಾಧನಾ ಮಹೋತ್ಸವಗೈದ ಮುಂಬಯಿ ಕನ್ನಡ ಸಂಘ
ಶ್ರೀ ಪುರಂದರದಾಸರ 456ನೇ ಆರಾಧನಾ ಮಹೋತ್ಸವಗೈದ ಮುಂಬಯಿ ಕನ್ನಡ ಸಂಘ

Comment Here