Friday 28th, February 2020
canara news

ಕೆಬಿಎಎಸ್‍ಹೆಚ್&ಜೆಸಿ 57ನೇ ವಾರ್ಷಿಕೋತ್ಸವ-`ಮಧುರವಾಣಿ' ಸ್ವರ್ಣ ಸಂಭ್ರಮಕ್ಕೆ ಚಾಲನೆ

Published On : 07 Feb 2019   |  Reported By : Rons Bantwal


ವಿದ್ಯಾಥಿರ್üಗಳು ಭವಿಷ್ಯದ ಗುರಿ ನಿರ್ಧಾರಿಸಬೇಕು: ಪ್ರಹ್ಲಾದಾಚಾರ್ಯ ನಾಗರಹಳ್ಳಿ
(ಚಿತ್ರ / ವರದಿ: ರೊನಿಡಾ ಮುಂಬಯಿ)

ಮುಂಬಯಿ, ಫೆ.03: ಕನ್ನಡ ಭವನ ವಿದ್ಯಾ ಸಂಸ್ಥೆಯು ಹಲವಾರು ವೈಷಿಷ್ಠತೆಯಿಂದ ಕೂಡಿದ ಸಂಸ್ಥೆ. ಈ ಸಂಸ್ಥೆಗೆ ಹಿರಿಯ ಸಂಪೂರ್ಣ ಬೆಂಬಲವಿದೆ ಜತೆಂiÀಲ್ಲಿ ಹಳೆವಿದ್ಯಾಥಿರ್üಗಳು ಬೆನ್ನೆಲುಬಾಗಿ ನಿಂತಿದ್ದಾರೆ. ತಾನು 21ರ ನವ ತರುಣನಾಗಿ ಸೇರಿದ ತನ್ನನ್ನು ಕನ್ನಡ ಭವನ ಬೆಳೆಸಿತು. ಅಲ್ಲಿಂದಲೇ ತನ್ನ ಮುಂದಿನ ಉಚ್ಚ ವ್ಯಾಸಂಗ ಮಾಡಲು ಎಲ್ಲ ರೀತಿಯ ಸಹಕಾರ ಈ ಸಂಸ್ಥೆಯು ತನಗೆ ನೀಡಿದೆ. `ಮಧುರವಾಣಿ' ಪತ್ರಿಕೆಯ ಪ್ರಥಮ ಸಂಚಿಕೆಯು ತನ್ನ ಕೈಯಿಂದಲೇ ಮುದ್ರಿತವಾಗಿ ನಿವೃತ್ತಿ ತನಕ ಸತತ 28 ವರ್ಷ ಅದರ ಆರೈಕೆ ಮಾಡಿದ ನೆನಪು ತನಗೆ ಹೆಮ್ಮೆ ಎಣಿಸುತ್ತಿದೆ. ಶಾಲೆಯಲ್ಲಿ ಶಿಕ್ಷಕನಾಗಿ ಸೇರಿದ ನಬ್ನಗೆ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಲನಾಗಿ ನಿವೃತ್ತಿ ಹೊಂದುವ ಸೌಭಾಗ್ಯ ಆಡಳಿತ ಮಂಡಳಿಯು ಕರುಣಿಸಿದೆ. ವಿದ್ಯಾಥಿರ್üಗಳು ಮೊದಲು ತಮ್ಮ ಗುರಿಯನ್ನು ನಿರ್ಧಾರಿಸಬೇಕು. ಮುಂದೆ ಈ ಗುರಿಯನ್ನು ತಲುಪಲು ಕಠಿಣ ಪರಿಶ್ರಮ ಅತೀ ಅಗತ್ಯ. ಎಲ್ಲ ವಿದ್ಯಾಥಿರ್üಗಳಲ್ಲಿ ಒಂದೊಂದು ವಿಶಿಷ್ಟ ಪ್ರತಿಭೆ ಇರುತ್ತದೆ. ಬೀಜವು ಹೇಗೆ ನೆಲದಲ್ಲಿಯೇ ಮೊಳಕೆ ಬರುವಂತೆ ಅವಕಾಶ ಮುಖ್ಯ ಎಂದು ಶ್ರೀ ಸರ್ವಜ್ಞ ವಿದ್ಯಾಪೀಠ ವಿರಾರ್ ಇದರ ಕುಲಪತಿ ಹಾಗೂ ಕನ್ನಡ ಭವನದ ನಿವೃತ್ತ ಪ್ರಾಂಶುಪಾಲ ಆಚಾರ್ಯ ಪ್ರಹ್ಲಾದಾಚಾರ್ಯ ಆರ್.ನಾಗರಹಳ್ಳಿ ತಿಳಿಸಿದರು.

ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ ಮುಂಬಯಿ ಇಂದಿಲ್ಲಿ ಭಾನುವಾರ ಸಂಜೆ ವಿಟಿ ಅಲ್ಲಿನ ಅಲೆಗ್ಸಾಂಡ್ರೀಯ ಗಲ್ರ್ಸ್ ಹೈಸ್ಕೂಲ್ ಸಭಾಗೃಹದಲ್ಲಿ ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ ಹೈಸ್ಕೂಲು ಮತ್ತು ಕಿರಿಯ ಮಹಾವಿದ್ಯಾಲಯ ಇವುಗಳ 57ನೇ ವಾರ್ಷಿಕೋತ್ಸವ ಮತ್ತು ಉಭಯ ಸಂಸ್ಥೆಗಳ ವಾರ್ಷಿಕ ಸಂಚಿಕೆ (ಮುಖವಾಣಿ) `ಮಧುರವಾಣಿ'ಯ ಐವತ್ತರ ಸಂಭ್ರಮದ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ದೀಪ ಪ್ರಜ್ವಲಿಸಿ ಸಮಾರಂಭ ಉದ್ಘಾಟಿಸಿ ನಾಗರಹಳ್ಳಿ ಶುಭಾರೈಸಿ ಮಾತನಾಡಿದರು.

ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ ಕಾರ್ಯಾಧ್ಯಕ್ಷ ಎ.ಬಿ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ವಿಠ್ಠಲ ಪ್ರತಿಷ್ಠಾನ ಮುಂಬಯಿ ಸಂಸ್ಥಾಪಕ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಆಶೀರ್ವಚನ ನೀಡಿದ್ದು, ಗೌರವ ಅತಿಥಿüಗಳಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಣಕಾಸು ತಜ್ಞ , ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಹಾಗೂ ಎಜ್ಯುಕೇಶನ್ ಸೊಸೈಟಿಯ ಉಪ ಕಾರ್ಯಾಧ್ಯಕ್ಷರಾದ ದಯಾನಂದ ಬಿ.ಅಮೀನ್ ಮತ್ತು ಕೇಶವ ಕೆ.ಕೋಟ್ಯಾನ್, ಗೌ| ಪ್ರ| ಕೋಶಾಧಿಕಾರಿ ಪುರುಷೋತ್ತಮ ಎಂ.ಪೂಜಾರಿ ವೇದಿಕೆಯಲ್ಲಿ ಆಸೀನರಾಗಿದ್ದು ವಿದ್ಯಾಥಿರ್üಗಳಿಗೆ ವಾರ್ಷಿಕ ಶೈಕ್ಷಣಿಕ ಪಾರಿತೋಷಕಗ ಳನ್ನು ಪ್ರದಾನಿಸಿ ಶುಭಾರೈಸಿದರು.

ವಿಶ್ವನಾಥ ಭಟ್ ಅನುಗ್ರಹಿಸಿ ಪ್ರತಿಯೊಬ್ಬನು 3 ಭಾಷೆಗಳನ್ನು ಅವಶ್ಯವಾಗಿ ಕಲಿಯಬೇಕಾಗಿದೆ. ತನ್ನ ಮಾತೃ ಭಾಷೆ, ರಾಷ್ಟ್ರೀಯ ಭಾಷೆ ಹಾಗೂ ತನ್ನನ್ನು ಜಗತ್ತಿನಲ್ಲಿ ಗುರುತಿಸಿಕೊಳ್ಳಳು ಜಾಗತಿಕ ಭಾಷೆಯಾದ ಅಂಗ್ಲ ಭಾಷೆ. ಕನ್ನಡ ಭವನ ಶಾಲೆಯು ಮಾಸದ ಸೊತ್ತು. ಈ ಸಂಸ್ಥೆ ಬೆಳೆಯುತ್ತಾ ಹೊಗಬೇಕು. ವಾರ್ಷಿಕ ಪತ್ರಿಕೆ ಮಧುರವಾಣಿಯು ಅಮರವಾಣಿಯಾಗಿ ಬೆಳೆಯಲಿ ಎಂದು ಆಶೀರ್ವದಿಸಿದರು. ಸಧ್ಯ ಭಾರತ ಜಗತ್ತಿನಲ್ಲಿಉನ್ನತ ಸ್ಥಾನ ಗಳಿಸುತ್ತಾ ಇದೆ. ಇದು ಇಲ್ಲಿನ ಸಂಸ್ಕಾರಕ್ಕೆ ಸಿಕ್ಕ ಮಾನ್ಯತೆ. ಅತೀ ಕಠಿಣ ಪರಿಸ್ಥಿತಿಯಲ್ಲಿ ಕನ್ನಡ ಶಾಲೆಯನ್ನು ನಡೆಸುತ್ತಿರುವ ಈ ಸಂಸ್ಥೆಗೆ ಶ್ರೀಕೃಷ್ಣ ವಿಠಲ ಪ್ರತಿಷ್ಠಾನದ ವತಿಯಿಂದ ಮುಂದೆಯೂ ಸಹಕಾರ ನೀಡುವೆವು ಎಂದರು.

ಆರ್.ಕೆ ಶೆಟ್ಟಿ ಮಾತನಾಡಿ ಇಂದು ನನಗೆ ಕನ್ನಡ ಭವನದ ಹಳೆ ವಿದ್ಯಾಥಿರ್ü ಎಂದು ಹೇಳಲು ತನಗೆ ಹೆಮ್ಮೆ ಎನಿಸುತ್ತಿದೆ. ಈ ಸಂಸ್ಥೆಯ ಸಕಲ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಕ್ಕಾಗಿ ಕಾತರಿಸ್ಸುತ್ತಿದ್ದೇನೆ. ಕನ್ನಡ ಭವನವು ತನಗೆ ಪುನರ್ಜನ್ಮ ನೀಡಿದ ವಿದ್ಯಾ ಸಂಸ್ಥೆ. ಅಂದು ಮುಂದಿನ ದಾರಿ ಇಲ್ಲದೆ ಮುಂಬಯಿಗೆ ಬಂದ ಸಂದರ್ಭದಲ್ಲಿ ತನಗೆ ದಾರಿದೀಪವಾಗಿ ಲಭಿಸಿದ್ದು ಕನ್ನಡ ಭವನ. ಇಲ್ಲಿ ಸಂಜೆಯ ಕಾಲೇಜಿನಲ್ಲಿ ವಿದ್ಯಾಭಾಸ ಮುಗಿಸಿದ ತನಗೆ ಮುಂದಿನ ಉಚ್ಚ ಶಿಕ್ಷಣಕ್ಕೆ ಅನುವಾಯಿತು. ನನ್ನ ಜೀವನದಲ್ಲಿ ಶಿಸ್ತು, ಸಂಸ್ಕೃತಿ ಆಚಾರ ವಿಚಾರ ಎಲ್ಲವನ್ನೂ ಈ ವಿದ್ಯಾ ಸಂಸ್ಥೆಯಿಂದ ಕಲಿತಿದ್ದೇನೆ ಎಂದರು. ಕನ್ನಡ ಭವನದ ಜನಪ್ರೀಯತೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಆಗಿದೆ ಎನ್ನುವುದಕ್ಕೆ ಅಮೇರಿಕಾದಲ್ಲಿ ನಡೆದ ಘಟನೆಯನ್ನು ವಿವರಿಸಿದರು.

ವಿದ್ಯಾಥಿರ್üಯು ತನ್ನ ತಮ್ಮ ವಿದ್ಯಾರ್ಧಿ ಜೀವನದಲ್ಲಿ ಸಫಲತೆಯನ್ನು ಸಾಧಿಸಲು ವಿದ್ಯಾಭ್ಯಾಸದ ಜತೆ ಶಿಸ್ತು ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಅದಕ್ಕಾಗಿ ನಮ್ಮ ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ವಿದ್ಯಾಭ್ಯಾಸಕ್ಕೆ ಭಾಷೆ ಮುಖ್ಯವಲ್ಲ. ಪ್ರಾರಂಭಿಕ ವಿದ್ಯಾಭ್ಯಾಸ ಮಾತೃಭಾಷೆಯಲ್ಲಿ ಮಾಡುವುದು ಉತ್ತಮವಾಗಿದ್ದು, ಅಂತಹವರು ಉಚ್ಚ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಮಟ್ಟವನ್ನು ತಲುಪಿದ ನಿದರ್ಶನಗಳೇಷ್ಟೋ ನಮ್ಮಲ್ಲಿವೆ. ನಾವು ಕನ್ನಡವನ್ನು ಕಲಿಯಬೇಕು, ಹೊರನಾಡ ಕನ್ನಡಿಗರಾದ ನಾವು ಕನ್ನಡವನ್ನು ಉಳಿಸಬೇಕು, ಆದರೆ ಮುಂಬಯಿಯಲ್ಲಿ ಕನ್ನಡಾಭಿವೃದ್ಧಿಗೆ ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ ಕೊಡುಗೆ ಅಪಾರ. ಸಂಸ್ಥೆಯು ವಿದ್ಯಾರ್ಜನೆಗೆ ಸಲ್ಲಿಸಿದ ನಿರಂತರ 57 ವರ್ಷಗಳ ಸೇವೆ ಶ್ಲಾಘನೀಯ. ಇಂದು ಶಾಲೆ ಮತ್ತು ಕಿರಿಯ ಮಹಾವಿದ್ಯಾಲಯ ಸೇರಿ ಮೂರು ಸರತಿಯಲ್ಲಿ ವಿದ್ಯಾಲಯ ನಡೆಯುತ್ತಿದ್ದರೆ ಇದಕ್ಕೆ ಮುಖ್ಯವಾಗಿ ಕನ್ನಡ ಶಾಲೆಯ ಪಾಲಕರು, ಕನ್ನಡ ವಿದ್ಯಾಥಿರ್üಗಳು ಹಾಗೂ ಶಿಕ್ಷಕರು ಪ್ರಮುಖ ಕಾರಣರಾಗುತ್ತಾರೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಎ.ಬಿ ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಎಜ್ಯುಕೇಶನ್ ಸೊಸೈಟಿಯ ಉಪ ಕಾರ್ಯಾಧ್ಯಕ್ಷರಾದ ದಯಾನಂದ ಬಿ.ಅಮೀನ್ ಮತ್ತು ಕೇಶವ ಕೆ.ಕೋಟ್ಯಾನ್, ಗೌ| ಪ್ರ| ಕೋಶಾಧಿಕಾರಿ ಪುರುಷೋತ್ತಮ ಎಂ.ಪೂಜಾರಿ ಉಪಸ್ಥಿತರಿದ್ದು, ಮನೋರಂಜನೆ ಕಾರ್ಯಕ್ರಮವಾಗಿ ವಿದ್ಯಾಥಿರ್üಗಳು ವಿವಿಧ ನೃತ್ಯಾವಳಿಗಳನ್ನು ಸಾದರ ಪಡಿಸಿದರು. ಕಲಾ ಸೌರಭ ಮುಂಬಯಿ ತಂಡವು ಪದ್ಮನಾಭ ಸಸಿಹಿತ್ಲು ನಿರ್ದೇಶನದಲ್ಲಿ ಗಾಯನ ನರ್ತನದ ಅಪೂರ್ವ ಸಂಗಮ `ಸಂಗೀತ ಶೃಂಗಾರ' ಪ್ರಸ್ತುತಗೊಳಿಸಿತು.

ಕಲಾ ಸೌರಭದ ಕಲಾವಿದರು ಪ್ರಾರ್ಥನೆಯನ್ನಾಡಿದರು. ಪ್ರಾಂಶುಪಾಲ ಎಲ್.ರಾಧಾಕೃಷ್ಣನ್ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಶೇಖರ ಎ.ಅಮೀನ್ ಪ್ರಸ್ತಾವಿಕ ನುಡಿಗಳನ್ನಾಡಿದರು. ವಸಂತಿ ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿದರು. ಅಮೃತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿಠಲ್ ಮನೋರೆ ವಂದನಾರ್ಪಣೆಗೈದರು.

 
More News

ಕುಕ್ಕಾಜೆ-ಮಂಚಿ ಗ್ರಾಮ ಪಂಚಾಯತ್ ವಠಾರದಲ್ಲಿ ರಕ್ತದಾನ ಶಿಬಿರ
ಕುಕ್ಕಾಜೆ-ಮಂಚಿ ಗ್ರಾಮ ಪಂಚಾಯತ್ ವಠಾರದಲ್ಲಿ ರಕ್ತದಾನ ಶಿಬಿರ
ಮಾ.8: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ
ಮಾ.8: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ
ಶ್ರೀ ಪುರಂದರದಾಸರ 456ನೇ ಆರಾಧನಾ ಮಹೋತ್ಸವಗೈದ ಮುಂಬಯಿ ಕನ್ನಡ ಸಂಘ
ಶ್ರೀ ಪುರಂದರದಾಸರ 456ನೇ ಆರಾಧನಾ ಮಹೋತ್ಸವಗೈದ ಮುಂಬಯಿ ಕನ್ನಡ ಸಂಘ

Comment Here