Friday 28th, February 2020
canara news

ರೇಮಂಡ್ ಡ್ರಿಫ್ಟ್ ಟ್ರಾ ್ಯಕ್‍ನಲ್ಲಿ ಆಯೋಜಿಸಲಾದ ಐಎಆರ್‍ಸಿ ಓಪನ್ ಆಟೋಕ್ರಾಸ್-2019

Published On : 09 Feb 2019   |  Reported By : Rons Bantwal


ರ್ಯಾಲಿ ಟ್ರಾ ್ಯಕ್‍ನಲ್ಲಿ ಸೂಪರ್ ವಿಜೇತರೆಣಿಸಿದ ಮಾರ್‍ಕ್ಲೀಸ್-ಹರ್ಷಿತಾ ಗೌಡ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)


ಮುಂಬಯಿ, ಫೆ 03: ಇಂಡಿಯಾನ್ ಆಟೋಮೋಟಿವ್ ರೇಸಿಂಗ್ ಕ್ಲಬ್ (ಐಎಆರ್‍ಸಿ) ಆಯೋಜಿಸಿದ್ದ ಓಪನ್ ಆಟೋಕ್ರಾಸ್-2019 ಇಂದಿಲ್ಲಿ ಭಾನುವಾರ ಸಮಾಪ್ತಿಗೊಂಡಿದ್ದು, ಕಾರ್ ರೇಸಿಂಗ್ ರ್ಯಾಲಿ ಟ್ರ್ಯಾಕ್‍ನಲ್ಲಿ ಸೂಪರ್ ಫಾಸ್ಟ್‍ನ ಮಹಿಳಾ ವಿಭಾಗದಲ್ಲಿ ಕನ್ನಡತಿ, ಬೆಂಗಳೂರು ಬೆಡಗಿ ಹರ್ಷಿತಾ ರಾಜಶೇಖರ್ ಗೌಡ ಮತ್ತು ಪುರುಷರ ವಿಭಾಗದ ಟೀಕ್ ಚಾಂಪಿಯನ್‍ನಲ್ಲಿ ಡೆನ್ ಮಾರ್‍ಕ್ಲೀಸ್ ಮಂಗಳೂರು (ಬೆಂದೂರ್) ವಿಜೇತರೆಣಿಸಿದ್ದಾರೆ.

ಕಳೆದ ಫೆ.01-03ರ ತನಕ ಥಾಣೆ ಇಲ್ಲಿನ ರೇಮಂಡ್ ಡ್ರಿಫ್ಟ್ ಟ್ರಾ ್ಯಕ್‍ನಲ್ಲಿ ನಡೆಸಲ್ಪಟ್ಟ ಸ್ಪರ್ಧೆಯು ಇಂದಿಲ್ಲಿ ಸಂಜೆ ಸಮಾಪ್ತಿ ಕಂಡಿದ್ದು ಪಾರಿತೋಷಕ ಪ್ರದಾನ ಸಮಾರಂಭದಲ್ಲಿ ಅತಿಥಿü ಅಭ್ಯಾಗತರಾಗಿ ರೇಮಾಂಡ್ಸ್ ಸಂಸ್ಥೆಯ ಮಾಲೀಕ ಗೌತಮ್ ಸಿಂಘನೀಯ ಮತ್ತು ವಿಶ್ವ ಚಾಂಪಿಯನ್ ಡಬ್ಲ್ಯೂಆರ್‍ಸಿ ಡ್ರೈವರ್ ಗೌರವ್ ಗಿಲ್, ಟೀಮ್ ಚಾಂಪಿಯನ್ ಓನರ್ಸ್‍ಗಳಾದ ಸುಧಾಕರ್ ರಾವ್ ಮತ್ತು ಎಸ್.ವಂಶಿ ಉಪಸ್ಥಿತರಿದ್ದು ವಿಜೇತ ಬೆಂಗಳೂರುನ ಹರ್ಷಿತಾ ಆರ್. ಗೌಡ ಮತ್ತು ಧ್ರುವ್ ಚಂದ್ರಶೇಖರ್ ಹಾಗೂ ಮಂಗಳೂರುನ ಡೆನ್ ಮಾರ್‍ಕ್ಲೀಸ್ ಮತ್ತಿತರ ವಿಜೇತರಿಗೆ ಫಲಕಗಳನ್ನು ಪ್ರದಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕ್ರೀಡಾ ಪೆÇ್ರೀತ್ಸಹಕ, ಸಮಾಜ ಸೇವಕ ಡಾ| ಶಿವ ಮೂಡಿಗೆರೆ ಉಪಸ್ಥಿತರಿದ್ದು ಹರ್ಷಿತಾ ಗೌಡ ಅವರಿಗೆ ಅಭಿನಂದಿಸಿ ಶುಭಾರೈಸಿದರು.

ಹರ್ಷಿತಾ ರಾಜಶೇಖರ್ ಗೌಡ:
ಮಾಜಿ ರಾಷ್ಟ್ರೀಯ ಚಾಂಪಿಯನ್, ಮೋಟಾರ್ ರ್ಯಾಲಿಯಲ್ಲಿ ಹಲವಾರು ಬಾರಿ ಪ್ರಶಸ್ತಿ ಗೆದ್ದ ತಂದೆ ರಾಜಶೇಖರ್ ಗೌಡ ಅವರ ಸುಪುತ್ರಿ ಹರ್ಷಿತಾ ಎಂ.ಎಸ್ ರಾಮಯ್ಯ ಕಾಲೇಜ್ ಬೆಂಗಳೂರು ಇಲ್ಲಿ ಹೋಟೆಲ್ ಮ್ಯಾನೇಜ್‍ಮೆಂಟ್ ಪದವಿ ಅಭ್ಯಾಸ ನಡೆಸುತ್ತಿದ್ದು ಈಗಾಗಲೇ ಹಲವಾರು ರಾಷ್ಟ್ರೀಯ ಚಾಂಪಿಯನ್‍ಶಿಪ್‍ನಲ್ಲಿ ಸ್ಪರ್ಧಿಸಿ, ಮಹಿಳಾ ವಿಭಾಗದ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಮತ್ರವಲ್ಲದೆ ರಾಷ್ಟ್ರೀಯ ಚಾಂಪಿಯನ್‍ಶಿಪ್‍ನಲ್ಲಿ ಪಾಲ್ಗೊಂಡು ದೇಶದ ಕಿರಿಯ ಮಹಿಳಾ ರೇಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕರ್ನಾಟಕದ ಹೆಮ್ಮೆಯ ರ್ಯಾಲಿಪಟು. ಕೊಯಮುತ್ತೂರ್‍ನÀಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‍ಶಿಪ್ ರ್ಯಾಲಿಯಲ್ಲಿ ಭಾಗವಹಿಸಿ ಪುರುಷರಿಗೇ ಸವಾಲನ್ನೊಡ್ಡಿದ್ದ ಈ ದಿಟ್ಟ ಯುವತಿ ಪ್ರಸ್ತುತ ರಾಷ್ಟ್ರದ ಅತ್ಯಂತ ಕಿರಿಯ ರ್ಯಾಲಿಪಟು ಪ್ರಸಿದ್ಧಿಗೆ ಭಾಜನರಾಗಿದ್ದಾರೆ.

1600 ಸಿಸಿ ಮಾರುತಿ ಬಲೆನೊ ಕಾರ್‍ನಲ್ಲಿ ಹರ್ಷಿತಾ ಸ್ಪರ್ಧೆಗೆ ಸಜ್ಜಾಗಿದ್ದು, ವಿಶೇಷವೆಂದರೆ ಹರ್ಷಿತಾ ಪುರುಷ ಸ್ಪರ್ಧಿಗಳ ಜತೆಯಲ್ಲೂ ಸವಾಲನ್ನು ಸ್ವೀಕರಿಸಿ ಯಶಸ್ಸು ಕಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕೆ1000, ನಾಸಿಕ್, ಕೊಯಮುತ್ತೂರು, ಚೆನೈ ಹಾಗೂ ಚಿಕ್ಕಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ ಶಿಪ್‍ನಲ್ಲಿ ಪಾಲ್ಗೊಂಡು ಯಶಸ್ಸು ಸಾಧಿಸಿದ ಭಾರತ ದೇಶದ ಉತ್ತಮ ಮಹಿಳಾ ರ್ಯಾಲಿಪಟು ಎಂದೆನಿಸಿದ್ದಾರೆ. ಚಿಕ್ಕಮಂಗಳೂರುನಲ್ಲಿ ನಡೆದ ರಾಷ್ಟ್ರೀಯ ರ್ಯಾಲಿ ಚಾಂಪಿಯನ್‍ಶಿಪ್‍ನಲ್ಲಿ ಸಮಯ, ವೇಗ ಹಾಗೂ ಅಂತರ ವಿಭಾಗದಲ್ಲಿ ಸ್ಪರ್ದಿಸಿದ ಹರ್ಷಿತಾ ಅವರ ಈ ಸಾಧನೆ ಉತ್ತಮ ರ್ಯಾಲಿಪಟು ಎಂಬ ಗೌರವ ಹುಡುಕಿ ಬಂದಿರುವುದನ್ನು ಹರ್ಷಿತಾ ನೆನಪಿಸಿ ಕೊಂಡರು.

ಲಿಮ್ಕಾ ದಾಖಲೆ ರ್ಯಾಲಿಯಲ್ಲಿ ಚಾಲಕರ ಜತೆಯಲ್ಲಿ ಒಬ್ಬರು ಮಾರ್ಗದರ್ಶಿ ಇರುತ್ತಾರೆ. ಹರ್ಷಿತಾ ಜತೆಯಲ್ಲಿ ಕಳೆದ ಬಾರಿ ಅವರ ತಂದೆಯೇ ಮಾರ್ಗದರ್ಶಿಯಾಗಿ ಕಾರ್ಯನಿರ್ವಾಹಿಸಿದರು. ಮಗಳಿಗೆ ತಂದೆಯೇ ರ್ಯಾಲಿಯಲ್ಲಿ ಮಾರ್ಗದರ್ಶಕರಾಗಿ ನೆರವು ಮಾಡಿದ್ದು ದೇಶದಲ್ಲೇ ಇದು ಮೊದಲು, ಕೇರಳದಲ್ಲಿ ನಡೆದ ರ್ಯಾಲಿಯಲ್ಲೂ ಈ ತಂದೆ ಮಗಳಜೋಡಿ ಗಮನ ಸೆಳೆದಿತ್ತು. ಮಗಳು ಡ್ರೈವರ್ ಹಾಗೂ ತಂದೆ ನೇವಿಗೇಟರ್ ಈ ಅಪೂರ್ವ ಜೋಡಿ ಈಗ ಲಿಮ್ಕಾ ಬುಕ್ ಆಫ್ ರೆಕಾರ್ಡ್‍ನಲ್ಲಿ ಸೇರಿದೆ.

ಅಪಘಾತದಲ್ಲಿ ಬೆನ್ನು ಮೂಳೆ ಮುರಿದುಕೊಂಡು ಚಿಕಿತ್ಸೆಗೊಳಗಾದ ನಂತರ ತಂದೆ ರಾಜಶೇಖರ್ ರ್ಯಾಲಿಯಿಂದ ದೂರ ಸರಿದರೂ, ತಾಯಿಯ ವಿರೋಧದ ಮಧ್ಯೆಯೂ ಬಳುವಳಿಕೆ ಎಂಬಂತೆ ಕುಟುಂಬದಲ್ಲಿ ಬಂದ ರ್ಯಾಲಿಓಟ ಮಾತ್ರ ಹರ್ಷಿತಾ ನಿಲ್ಲಿಸದೆ ತಂದೆಯ ಜವಾಬ್ದಾರಿ ನಿಭಾಯಿಸಿ ಇಂದೂ ಸ್ಪರ್ಧೆಯಲ್ಲಿ ಮಿಂಚುತ್ತಿದ್ದಾರೆ.

ವೋಕ್ಸ್ ವ್ಯಾಗನ್ ಮತ್ತು ಟೊಯೊಟಾ ಕಂಪೆನಿಗಳು ತಮ್ಮ ಕಾರನ್ನು ಚಲಾಯಿಸಿ ಸ್ಪರ್ಧೆಗಳನ್ನು ಎದುರಿಸುವಂತೆ ಹರ್ಷಿತಾಗೆ ಒತ್ತಾಯಿಸಿದ್ದರೂ, ಕಂಪೆನಿಯವರು ಉಚಿತವಾಗಿ ನೀಡುವ ಕಾರಿನಲ್ಲಿ ಸ್ಪರ್ಧಿಸಬೇಕಾದರೆ ಅಥವಾ ಅವರ ಪ್ರಾಯೋಜಕತ್ವದಲ್ಲಿ ಕಾರನ್ನು ಚಲಾಯಿಸಬೇಕಾದರೆ ಅವರು ನೀಡುವ ತರಬೇತಿಗಳಲ್ಲಿ ಪಾಲ್ಗೊಳ್ಳುವುದು ಅನಿವಾರ್ಯ ಮತ್ತು ತನ್ನ ಭವಿಷ್ಯದ ಓದಿಗೆ ಅಡ್ಡಿಯಾಗುವ ನೆಪಒಡ್ಡಿ ತನ್ನದೇ ಕಾರಿನಲ್ಲಿ ಸ್ಪರ್ಧಿಸುತ್ತಿದ್ದಾರೆ.

 
More News

ಕುಕ್ಕಾಜೆ-ಮಂಚಿ ಗ್ರಾಮ ಪಂಚಾಯತ್ ವಠಾರದಲ್ಲಿ ರಕ್ತದಾನ ಶಿಬಿರ
ಕುಕ್ಕಾಜೆ-ಮಂಚಿ ಗ್ರಾಮ ಪಂಚಾಯತ್ ವಠಾರದಲ್ಲಿ ರಕ್ತದಾನ ಶಿಬಿರ
ಮಾ.8: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ
ಮಾ.8: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ
ಶ್ರೀ ಪುರಂದರದಾಸರ 456ನೇ ಆರಾಧನಾ ಮಹೋತ್ಸವಗೈದ ಮುಂಬಯಿ ಕನ್ನಡ ಸಂಘ
ಶ್ರೀ ಪುರಂದರದಾಸರ 456ನೇ ಆರಾಧನಾ ಮಹೋತ್ಸವಗೈದ ಮುಂಬಯಿ ಕನ್ನಡ ಸಂಘ

Comment Here