Saturday 20th, April 2024
canara news

ಅಂತರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾದ ಶುಭದಾ ಎಜ್ಯುಕೇಶನಲ್ ಟ್ರಸ್ಟ್ ನಾವುಂದ

Published On : 11 Feb 2019   |  Reported By : Rons Bantwal


 


ಡಾ| ಎನ್. ಕೆ. ಬಿಲ್ಲವ

ಇತ್ತಿಚೆಗಷ್ಟೇ ರಜತೋತ್ಸವ ಸಂಭ್ರಮಿಸಿದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ನಾವುಂದ ಅಲ್ಲಿನ ಕಿರಿಮಂಜೇಶ್ವರದಲ್ಲಿ ನರ್ಸರಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಂಚಾಲಕತ್ವದ ಶುಭದಾ ಶೈಕ್ಷಣಿಕ ಸಂಸ್ಥೆಗೆ (ಶುಭದಾ ಎಜ್ಯುಕೇಶನಲ್ ಟ್ರಸ್ಟ್ ನಾವುಂದ) ಈ ಶೈಕ್ಷಣಿಕ ವರ್ಷದಲ್ಲೇ ಗ್ರಾಮೀಣ ಮಕ್ಕಳಿಗೆ ಸರ್ವೋತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡಿರುವುದನ್ನು ಪರಿಗಣಿಸಿ ಅಂತರಾಷ್ಟ್ರೀಯ ಮಟ್ಟದ `ಡೈಮಂಡ್ ಆಫ್ ಏಷ್ಯಾ ಇಂಟರ್‍ನ್ಯಾಶನಲ್ ಅವಾರ್ಡ್ ಫಾರ್ ಕ್ವಾಲಿಟಿ ಏಜ್ಯುಕೇಶನ್' ಪ್ರಶಸ್ತಿಗೆ ಆಯ್ಕೆ ಗೊಳಿಸಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಫೆ.14ರ ಗುರುವಾರ ಥೈಲಾಂಡ್ ರಾಷ್ಟ್ರದ ರಾಜಧಾನಿ ಬ್ಯಾಂಕಾಕ್ ಇಲ್ಲಿನ ಹೋಲಿಡೇ ಇನ್ ಹೋಟೇಲ್ ಬ್ಯಾಂಕಾಕ್ ಸಭಾಗೃಹದಲ್ಲಿ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶುಭದಾ ಶಾಲೆಗಳ ಸಂಸ್ಥಾಪಕ ಡಾ| ಎನ್. ಕೆ. ಬಿಲ್ಲವ ಸ್ವೀಕರಿಸಲಿದ್ದಾರೆ.

ಮುಂಬಯಿನ ಹೆಸರಾಂತ ಯುವೋದ್ಯಮಿ ಆಗಿರುವ ಡಾ| ಎನ್.ಕೆ ಬಿಲ್ಲವ ಶೈಕ್ಷಣಿಕ, ಸಾಮಾಜಿಕ, ಸಹಕಾರಿ, ಧಾರ್ಮಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಸಮಾಜ ಸೇವೆಗೈಯುತ್ತಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here