Thursday 28th, March 2024
canara news

`ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ವಸ್ತಸಿರಿ ರಾಜ್ಯ ಪ್ರಶಸ್ತಿ-2019' ಪ್ರಕಟ

Published On : 11 Feb 2019   |  Reported By : Rons Bantwal


ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಆಯ್ಕೆ

ಮುಂಬಯಿ, ಫೆ.07: ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಕಲೆ, ಸಾಹಿತ್ಯ, ಕ್ರೀಡೆ, ಆರೋಗ್ಯ, ಸಾಂಸ್ಕೃತಿಕ ಇತ್ಯಾದಿ ಕ್ಷೇತ್ರಗಳಲ್ಲಿ ಸಕ್ರೀಯವಾಗಿ ಸೇವಾ ನಿರತ ಬಂಟ್ವಾಳ ತಾಲೂಕು ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವರ್ಷಂಪ್ರತಿ ಕೊಡಮಾಡುವ, ಈ ಬಾರಿಯ 2019ನೇ ಸಾಲಿನ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿಯನ್ನು ವಿವಿಧ ಕ್ಷೇತ್ರದಲ್ಲಿ ಅನನ್ಯ ಸೇವೆಗೈದ ನಾಲ್ಕು ಮಂದಿ ಸಾಧಕರಿಗೆ ಮತ್ತು ಹಾಗೂ ಒಂದು ಸಾಂಸ್ಕೃತಿಕ ಸಂಸ್ಥೆಯನ್ನು ಆಯ್ಕೆ ಮಾಡಿದೆ.

  

 Shrinivasa P.Saphalya                   Shrinivasa P.Saphalya 

  

Tungappa Bangera.             Tungappa Bangera

ಆ ಪಯ್ಕಿ ಇತ್ತೀಚೆಗಷ್ಟೇ ತನ್ನ ಸಾರಥ್ಯದಲ್ಲಿ ಅಮೃತಹೋತ್ಸವ ಸಂಭ್ರಮಿಸಿ ಸಾಮಾಜಿಕ ಸಾಮರ್ಥ್ಯವನ್ನು ಪ್ರದರ್ಶಿಸಿದ ಮುಂಬಯಿ ಅಲ್ಲಿನ ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಅವರ ಉದ್ಯಮ ಹಾಗೂ ಸಾಮಾಜಿಕ ಕ್ಷೇತ್ರದ ಅನನ್ಯ ಸೇವೆ ಪರಿಗಣಿಸಿ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ-2019ನ್ನು ಪ್ರದಾನಿಸಿ ಗೌರವಿಸಲಾಗುವುದು ಎಂದು ಕ್ಲಬ್‍ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ತಿಳಿಸಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದ ಇತರ ಸಾಧಕರು:
ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ: ಸುಂದರ್ ಹೆಗ್ಡೆ (ಚಲನಚಿತ್ರ), ಅಶೋಕ್ ಚೊಂತಾರು (ಕೃಷಿ), ಲ| ಎನ್.ಸದಾಶಿವ ಆಚಾರ್ಯ (ಸಾಅಜ ಸೇವೆ), ಅತ್ಯುತ್ತಮ ಯುವ ಸಂಘಟನೆ: ಕಲಾ ಕುಂಭ ಸಾಂಸ್ಕೃತಿ ವೇದಿಕೆ ಕುಲಾಯಿ ಸುರತ್ಕಲ್ (ಸಂಸ್ಥೆ), ಸ್ವಸ್ತಿಸಿರಿ ಸಂಭ್ರಮ ಪ್ರಶಸ್ತಿ: ರವಿ ರೈ ಕಳಸ (ಚಲನ ಚಿತ್ರ), ಹೊನ್ನಪ್ಪ ಎಂ.ಪೂಜಾರಿ (ಅತ್ಯುತ್ತಮ ಸಂಘಟಕ), ಡಾ| ರಾಮಕೃಷ್ಣ (ಸಮಾಜ ಸೇವೆ), ಎಸ್.ಪಿ ಸರಪಾಡಿ (ಕಲಾ ಕ್ಷೇತ್ರ), ಕು| ಅನ್ವಿಷಾ ವಾಮಂಜೂರು (ಸಾಂಸ್ಕೃತಿಕ), ಕು| ಕಾವ್ಯಶ್ರೀ ಜೋಡುಕಲ್ಲು ಉಪ್ಪಳ (ಯೋಗ) ಇವರನ್ನು ಆಯ್ಕೆ ಗೊಳಿಸಿದೆ.

ಸ್ವಸ್ತಿಕ್ ಫ್ರೆಂಡ್ಸ್ ಸಂಸ್ಥೆಯ 35ನೇ ಸಂಭ್ರಮಾಚರಣೆ ಇದೇ ಫೆ.10ನೇ ಆದಿತ್ಯವಾರ ಪುಂಜಾಲಕಟ್ಟೆಯ ಅಲ್ಲಿನ ಬಂಗ್ಲೆ ಮೈದಾನದಲ್ಲಿ ಆಚರಿಸÀಲಿದ್ದು, ಇದೇ ಶುಭಾವಸರದಲ್ಲಿ 11ನೇ ವಾರ್ಷಿಕ ಉಚಿತ ಸಾಮೂಹಿಕ ವಿವಾಹ ಮತ್ತು ಭವ್ಯ ಸಮಾರಂಭದಲ್ಲಿ ಆಯ್ಕೆಯಾದ ಸಾಧಕರಿಗೆ ಅತಿಥಿüಗಣ್ಯರ ಹಸ್ತದಲ್ಲಿ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸ¯ದೆ ಎಂದು ಕ್ಲಬ್‍ನ ಅಧ್ಯಕ್ಷ ಪ್ರಶಂತ್ ಪುಂಜಲಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶ್ರೀನಿವಾಸ ಪಿ.ಸಾಫಲ್ಯ: ಕ್ರಿಯಾಶೀಲ ಜನಸೇವಕ, ಕಲಾತಪಸ್ವಿ ಎಂದೇ ಬಿಂಬಿತ ಶ್ರೀನಿವಾಸ ಸಾಫಲ್ಯ ಇವರು 1967ರಲ್ಲಿ ಬಂಟ್ವಾಳದ ರಾಯಿ ಇಲ್ಲಿ ಶ್ರೀ ಪದ್ಮನಾಭ ಸಾಫಲ್ಯ (ಪ್ರಸ್ತುತ ದಿವಂಗತರು) ಮತ್ತು ಶ್ರೀಮತಿ ಕುಸುಮ ಬಂಗೇರ ದಂಪತಿ ಸುಪುತ್ರರಾಗಿ ಜನಿಸಿದರು. ಮೂಲತಃ ಕೃಷಿಮೂಲ ಕುಟುಂಬದ ಸಾಫಲ್ಯರು ಸರಕಾರಿ ಪ್ರಾಥಮಿಕ ಶಾಲೆ ರಾಯಿ ಇಲ್ಲಿ ಐದನೆಯ ತರಗತಿ, ಕೊೈಲಾ, ಸಿದ್ಧಕಟ್ಟೆ ಇಲ್ಲಿನ ಶಾಲೆಯಲ್ಲಿ ಏಳನೇ ತರಗತಿಯವರೆಗಿನ ಓದಿದ್ದು, ಬಳಿಕ ಆಥಿರ್üಕ ಹಿನ್ನೆಡೆಯಿಂದ ಶಿಕ್ಷಣ ಅರ್ಧದಲ್ಲೇ ಸ್ಥಗಿತಗೊಳಿಸಿ 1979ರಲ್ಲಿ ಉದ್ಯೋಗಕಾಶಿ ಮುಂಬಯಿ ಸೇರಿದ್ದರು.

ಹೊಸ ನಗರ, ಹೊಸ ಜನಜೀವನ, ಹೊಸ ಭಾಷೆ, ಹೊಸ ಸಂಸ್ಕøತಿಗಳನ್ನು ಕಂಡ ಸಾಫಲ್ಯರು ಕನಸುಗಳಿಗೆ ರೆಕ್ಕೆ ಬಂದಂತೆ ಅತ್ಯಂತ ಖುಷಿಯಿಂದಲೇ ಮುಂಬಯಿನಲ್ಲಿ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆ ಸೇರಿ ಪ್ರೌಢಶಾಲಾಭ್ಯಾಸ ನಡೆಸಿದರು. ಹಗಲಿನಲ್ಲಿ ಫೆÇೀರ್ಟ್ ಮಿಲಿಟರಿ ಕ್ಯಾಂಟೀನ್‍ನಲ್ಲಿ ದುಡಿಯುತ್ತಾ ಮೆಟ್ರಿಕ್ ಮುಗಿಸಿ ನಂತರ ಕನ್ನಡ ಭವನಜ್ಯೂನಿಯರ್ ಕಾಲೇಜ್‍ನಲ್ಲಿ ಪದವಿಪೂರ್ವ ಶಿಕ್ಷಣ, ಸೈಂಟ್ ಜಿವಿಎಸ್ ಕಾಲೇಜ್‍ನಲ್ಲಿ ವಾಣಿಜ್ಯ ಪದವಿಧರರಾಗಿರುವರು.

ಅವಾಗಲೇ ಅರ್ಹತೆಗೆ ತಕ್ಕಂತೆ ಪ್ರತಿಷ್ಠಿತ ಸಂಸ್ಥೆ ಎ.ವಿ ಪಂಡಿತ್ ಎಂಡ್ ಕಂಪೆನಿಯಲ್ಲಿ ವೃತ್ತಿ ಗಳಿಸಿ ತೀಕ್ಷ್ಣಮತಿಯವರು. ಬಳಿಕ ಎಡೊರ್ ವೆಲ್ಡಿಂಗ್ ಸಂಸ್ಥೆಗೆ ಸೇರಿದರೂ ಮತ್ತೆ ಮೂಲ ಸಂಸ್ಥೆಯಾದ ಪ್ರತಿಷ್ಠಿತ ಔದ್ಯೋಗಿಕ ಸಂಸ್ಥೆ ಅಡ್ವಾನಿ ಗ್ರೂಪ್ ಲಿಮಿಟೆಡ್‍ಗೆ ವ್ಯವಸ್ಥಾಪಕ (ಮ್ಯಾನೇಜರ್) ಆಗಿ ನಿಯುಕ್ತಿಗೊಂಡು ಕಳೆದ ಸುಮಾರು ಎರಡುವರೆ ದಶಕಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಹೈದರಾಬಾದ್‍ನ ಐಬಿಎಸ್ ಕಾಲೇಜ್‍ನಿಂದ ವ್ಯವಹಾರಾಡಳಿತದಲ್ಲಿ ಸ್ನಾತಕೋತ್ತರ (ಎಂ.ಬಿ.ಎ) ಪದವಿಧರಾಗಿದ್ದು ಇದೀಗ ಸೀನಿಯರ್ ಜನರಲ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರದಲ್ಲಿ ಸಾಕಷ್ಟು ಕುಶಲಮತಿಯಾಗಿದ್ದ ಶ್ರೀನಿವಾಸರಿಗೆ ಸಂಸ್ಥೆಯ ವತಿಯಿಂದ ಅನೇಕ ಪದವಿ ಮತ್ತು ಪ್ರಶಸ್ತಿಗಳೂ ದೊರಕಿವೆ.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಪ್ರಾಯೋಜಕತ್ವದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯಲ್ಲಿ ತಮ್ಮ ವೇಷಧಾರಿಯಾಗಿಯೂ ಅಭಿನಯಿಸಿದ್ದಾರೆ. ಓರ್ವ ಪ್ರಬುದ್ಧ ಕಲಾವಿದರಾಗಿರುವ ಇವರು ಹಿರಣ್ಯಾಕ್ಷ, ಮಹಿಷಾಸುರ, ಕುಂಭಕರ್ಣ, `ದೇವಿಮಹಾತ್ಮೆ'ಯ ಮಧುಕೈಟಭ, ಬಪ್ಪನಾಡುನ ಗುಳಿಗ ಇತ್ಯಾದಿ ಪಾತ್ರಗಳ ಮೂಲಕ ಜನಮನ ಸೂರೆಗೊಂಡಿದ್ದಾರೆ.ಯಕ್ಷರಂಗದ ಸವ್ಯಸಾಚಿ ಎಂದೇ ಖ್ಯಾತರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಂದ ಭಾಗವತಿಕೆ ಕಲಿತು, ಅನೇಕ sÁರಿ ಶನಿಕಥೆ, ತಾಳಮದ್ದಳೆಗಳಲ್ಲಿ ಭಾಗವತಿಕೆ ಮಾಡಿದ ವಿಶಿಷ್ಟಾನುಭವವನ್ನೂ ಹೊಂದಿರುವ ಸಾಫಲ್ಯರು ಓರ್ವ ಅಪ್ರತಿಮ ಕಲಾವಿದರೂ ಹೌದು. ನಾಡಿನ ಹೆಸರಾಂತ ಭಾಗವತ ಪೆÇಲ್ಯ ಶ್ರೀ ಲಕ್ಷ್ಮೀನಾರಾಯಣಭಟ್ಟರೊಂದಿಗೂ ಭಾಗವತಿಕೆ ಮಾಡಿದ ಕೀರ್ತಿಯನ್ನೂ ಹೊಂದಿದ್ದಾರೆ.

ಧಾರ್ಮಿಕ ಕಾರ್ಯಕಲಾಪಗಳಲ್ಲಿ ಸದಾ ಮುಂಚೂಣಿಯ್ಲಲಿರುವ ಶ್ರೀನಿವಾಸ ಸಾಫಲ್ಯರು ಓರ್ವ ಅನನ್ಯ ದೈವಭಕ್ತರು. ಅದರಲ್ಲೂ ಶನೈಶ್ಚರನ ಅಪ್ರತಿಮ ಭಕ್ತರಾಗಿರುವ ಇವರು ಪ್ರಸ್ತುತ ಮಲಾಡ್ ಇಲ್ಲಿನ ಶನಿಮಹಾತ್ಮ ಪೂಜಾ ಸಮಿತಿ ಅಧ್ಯಕ್ಷರಾಗಿ ತಮ್ಮ ಅತ್ಯಮೂಲ್ಯ ಸೇವೆ ನೀಡಿದ್ದಾರೆ. ಉಳ್ಳಾಲದ ಉಳಿಯ ದೇವಾಲಯಕ್ಕೆ ರಝತ ಪಲ್ಲಕ್ಕಿ, ಮಂಗಳೂರಿನ ಮಹಾಲಿಂಗೇಶ್ವರ ದೇವಾಲಯದ ಧ್ವಜಸ್ಥಂಭಕ್ಕೆ ರಝತ ಕಮಲ ದೇಣಿಗೆ ನೀಡಿದ್ದಾರೆ.

ದೀನದಲಿತರ ಬಗ್ಗೆ, ಬಡವಿದ್ಯಾಥಿರ್üಗಳ ಬಗ್ಗೆ ಅಪಾರ ಕಾಳಜಿಯಿರುವ ಶ್ರೀನಿವಾಸ ಸಾಫಲ್ಯರು ಸಮಾಜದ ದುರ್ಬಲ ವರ್ಗದವರಿಗೆ ಸಹಾಯ ಮಾಡಲೋಸುಗವೇ ಮಲಾಡ್‍ನ ಶನಿಮಹಾತ್ಮ ಚಾರಿಟೇಬಲ್ ಟ್ರಸ್ಟ್ ನಿರ್ಮಿಸಿ ಈ ಮೂಲಕ ಆರೋಗ್ಯಶಿಬಿರ, ಬಡ ವಿದ್ಯಾಥಿರ್üಗಳಿಗೆ ವಿದ್ಯಾರ್ಥಿವೇತನ, ಆಧ್ಯಾತ್ಮಿಕ ಶಿಬಿರ ಮುಂತಾದವುಗಳನ್ನು ಏರ್ಪಡಿಸಿ ಜನರಲ್ಲಿ ಆಧ್ಯಾತ್ಮಿಕ ಒಲವನ್ನು ಪ್ರಚುರಪಡಿಸಲೂ ಶ್ರಮಿಸುತ್ತಿದ್ದಾರೆ.

ಅದ್ವಿತೀಯ ವಾಗ್ಮಿ ಮತ್ತು ಶಿಕ್ಷಣ ಪ್ರೇಮಿಯಾದ ಸಾಫಲ್ಯರು ಮಹಾನಾಡಿನಲ್ಲಿ ಮತ್ತು ಕರುನಾಡಿನಲ್ಲಿಯೂ ವಿದ್ಯಾಥಿರ್üಗಳನ್ನು ದತ್ತು ತೆಗೆದುಕೊಂಡು ಅವರ ಸಂಪೂರ್ಣ ಶಿಕ್ಷಣವೆಚ್ಚ ಭರಿಸುತ್ತಾ ವಿದ್ಯಾಥಿರ್üಗಳ ಬಾಳಿಗೆ ನಂದಾದೀಪ ಆಗಿದ್ದಾರೆ.

ಶ್ರೀಯುತರು ಎಂದೂ ಪ್ರಚಾರ, ಪ್ರಶಸ್ತಿಗಳಿಗೆ ಮುಗಿಬಿದ್ದವರಲ್ಲ. ಪ್ರಶಸ್ತಿಗಳು ನಮ್ಮ ಕೆಲಸವನ್ನು ನೋಡಿ ಒಲಿದು ಬರಬೇಕೇ ವಿನಃ ಪ್ರಚಾರದಿಂದ ಬರಬಾರದು ಎಂಬುದು ಅವರ ಅಭಿಮತ. ಆದರೂ ಶ್ರೀಯುತರು ಎಲೆಮರೆಯ ಕಾಯಿಯಾಗಿಯೇ ನಿಸ್ವಾರ್ಥವಾಗಿ ಸಲ್ಲಿಸಿದ ಸೇವೆಗಳು ಸಮಾಜದಲ್ಲಿ ವ್ಯಾಪಿಸಲು ಬಹಳ ದಿನ ಬೇಕಾಗಲಿಲ್ಲ. ಹಾಗಾಗಿಯೇ ಅನೇಕ ಪ್ರಶಸ್ತಿಗಳು, ಸನ್ಮಾನಗಳು ಈಗಾಗಲೇ ಅವರ ಮುಡಿಗೇರಿವೆ.

ತಮ್ಮ ವೃತ್ತಿಯಲ್ಲಿ ಅಗಾಧ ಜಾಣ್ಮೆಯಿರುವ ಸಾಫಲ್ಯರು ಸುಮಾರು 20-25 ದೇಶಗಳಿಗೆ ಈಗಾಗಲೇ ಭೇಟಿ ನೀಡಿದ್ದಾರೆ. ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸಿಂಗಾಪೂರ್, ಥೈಲ್ಯಾಂಡ್, ರಷ್ಯಾ ಮುಂತಾದ ವಿಶ್ವದ ಬಲಾಢ್ಯ ರಾಷ್ಟ್ರಗಳಿಗೆ ಸಾಫಲ್ಯರು ತಮ್ಮ ವೃತ್ತಿಯ ಮೂಲಕ ಭೇಟಿ ನೀಡಿದ್ದಾರೆ. ಬದುಕಿನ ಎರಡೂ ಮುಖಗಳನ್ನು ಕಂಡ ಶ್ರೀಯುತರು ಬಡತನವನ್ನೂ ಅನುಭವಿಸಿ , ಭಗವಂತನ ಆಶೀರ್ವಾದದಿಂದ ಪ್ರಸಕ್ತದಲ್ಲಿ ಶ್ರೀಮಂತಿಕೆಯನ್ನು ಅನುಭವಿಸುತ್ತಿರುವರು.

ಶ್ರೀಮತಿ ರತಿಕಾ ಅವರೊಂದಿಗೆ ದಾಂಪತ್ಯದ ಹೊಸ್ತಿಲು ತುಳಿದ ಈ ದಂಪತಿಗೆ ಕು| ಮಾರಿ ದಿವ್ಯಾ ಸಾಫಲ್ಯ ಎಂಬ ಏಕೈಕ ಕುವರಿಯಿದ್ದಾಳೆ. ಸಾಮಾಜಿಕ ಸೇವೆಗಳಲ್ಲಿ ಪಳಗಿ, ಹೋರಾಡಿ ಮಹಾರಾಷ್ಟ್ರದಲ್ಲಿ ಸಾಫಲ್ಯ ವರ್ಗಕ್ಕೆ ಅದರದೇ ಆದ ಮನ್ನಣೆ ತಂದುಕೊಟ್ಟವರಲ್ಲಿ ಶ್ರೀನಿವಾಸ ಸಾಫಲ್ಯರು ಮೊದಲಿಗರುಮತ್ತು ಅಗ್ರಗಣ್ಯರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here