Wednesday 20th, February 2019
canara news

ಚೆಲ್ಲಡ್ಕ ಕೆ.ಡಿ ಶೆಟ್ಟಿ ಸೇವಾಸ್ತದ ಭವಾನಿ ಫೌಂಡೇಶನ್‍ನಿಂದ ಸಮಾಜ ಭವನ ಸೇವಾರ್ಪಣೆ

Published On : 12 Feb 2019   |  Reported By : Rons Bantwal


ನಗರವಾಸಿಕ್ಕಿಂತ ಗ್ರಾಮಸ್ಥರೇ ಜೀವನಶ್ರೀಮಂತರು : ರಾಹುಲ್ ಗಡ್ಪಾಲೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.09: ಪ್ರಸ್ತುತ ಆಧುನಿಕ ಸೌಲಭ್ಯವುಳ್ಳ ನಗರವಾಸಿ ನಾಗರಿಕರೇ ಆದಿವಾಸಿಗಳಂತಿದ್ದು, ಮಾನವೀಯತೆ ಮತ್ತು ಆರೋಗ್ಯಕರ ಜೀವನದಲ್ಲಿ ನಗರ ಪ್ರದೇಶದ ಜನತೆಕ್ಕಿಂತ ಗ್ರಾಮಸ್ಥರೇ ಶ್ರೀಮಂತರು. ಕಾರಣ ಇಲ್ಲಿನ ಸ್ವಚ್ಛತಾ ಪರಿಸರ, ಮಾನವೀಯತೆ ಕೂಡಿದ ಮೌಲ್ಯಯುತ ಸಾಮರಸ್ಯದ ಬಾಳು, ಸಾಮಾಜಿಕ ಸ್ವಸ್ಥತೆ ಇವುಗಳಿಂದ ಇಲ್ಲಿನ ಜನತಾ ಜೀವನ ಕೂಡಿದೆ. ಆದುದರಿಂದ ಇಲ್ಲಿನ ಜನತೆಯನ್ನು ಆದಿವಾಸಿಕ್ಕಿಂತ ಅನಿವಾಸಿಯರೆಂದು ಹೇಳಲು ಅಭಿಮಾನ ಆಗುತ್ತದೆ. ಇದ್ದಕೆ ನೀವೆಲ್ಲರೂ ಅರ್ಹರು. ಬಡಶ್ರೀಮಂತ ಎನ್ನುವ ಭಾವನೆ ಮನಸ್ಸಿನಿಂದ ಹೊರಗಿಟ್ಟು ಮನೋಭಾವಿಗಳಾದಾಗಲೇ ಮಾನವ ಜನ್ಮ ಸಾರ್ಥಕವಾಗುವುದು. ಆವಾಗಲೇ ಸಮೃದ್ಧ ರಾಷ್ಟ್ರದ ಕನಸು ನಾನಸಾಗಲು ಸಾಧ್ಯ. ಸಂಬಂಧಗಳ ಬೆಳವಣಿಗೆಗೆ ಭಾಷೆ, ಪ್ರಾಂತ್ಯಗಳ ಅಗತ್ಯವಿಲ್ಲ ನಿಷ್ಕಲಂಕ ಮನಸ್ಸುಗಳ ಅಗತ್ಯವಿದೆ ಎನ್ನುವುದನ್ನು ಭವಾನಿ ಫೌಂಡೇಶನ್ ನುಡಿದಂತೆ ನಡೆದು ತೋರಿಸಿದೆ. ಇಂತಹ ಸೇವೆ ನಮ್ಮ ಮತ್ತು ನಿಮ್ಮ ಬಾಂಧ್ಯವ್ಯವನ್ನು ಪುಷ್ಟೀಕರಿಸಿದೆ. ತೀರಾ ಗ್ರಾಮೀಣ ಪ್ರದೇಶದ ನಿಮ್ಮ ಬದುಕನ್ನು ನಾವೂ ಮಾಧ್ಯಮ ಮೂಲಕ ಮಹಾರಾಷ್ಟ್ರದ ಮಂತ್ರಲಯಕ್ಕೆ ತಲುಪಿಸಿ ನಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸೋಣ ಸಕಾಳ್ ಮರಾಠಿ ದೈನಿಕದ ಮುಂಬಯಿ ಆವೃತ್ತಿಯ ಪ್ರಧಾನ ಸಂಪಾದಕ ರಾಹುಲ್ ಗÀಡ್ಪಾಲೆ ತಿಳಿಸಿದರು.

 

ರಾಯಗಾಢ ಜಿಲ್ಲೆಯ ಪನ್ವೇಲ್ ಸನಿಹದ ಪಿರ್‍ಕಟ್‍ವಾಡಿಯಲ್ಲಿನ ಮೂರು ಗ್ರಾಮಸ್ಥರಿಗೆ ಭವಾನಿ ಫೌಂಡೇಶನ್ ನವಿ ಮುಂಬಯಿ ನಿರ್ಮಿತ ಭವಾನಿ ಭವನವನ್ನು ಫೌಂಡೇಶನ್‍ನ ಸಂಸ್ಥಾಪಕ ಅಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕೆ.ಡಿ ಶೆಟ್ಟಿ ಅವರನ್ನೊಳಗೊಂಡು ಉದ್ಘಾಟಿಸಿ ಸಮಾರಂಭದ ಅಧಕ್ಷತೆ ವಹಿಸಿ ಗÀಡ್ಪಾಲೆ ಮಾತನಾಡಿದರು.

ಸಮಾರಂಭದಲ್ಲಿ ಅತಿಥಿ ಅಭ್ಯಾಗತರಾಗಿ ಖಾಲಾಪುರ್ ಪಂಚಾಯತ್‍ನ ಸಭಾಪತಿ ಕಾಂಚನ ಪಾರಂತೆ, ಸರ್‍ಪಂಚ್‍ಗಳಾದ ಚಂಗು ಚೌಧರಿ ಮತ್ತು ಜಯೇಶ್ ಸುತಾರ್, ರಾಜಕೀಯ ನೇತಾರರಾದ ಸುಧೀರ್ ಠೊಂಬರೆ, ಕೆ. ದೇಶ್‍ಮುಖ್, ನಿವೃತ್ತ ಶಿಕ್ಷಕ ಸುನೀಲ್ ಫರ್ವೇಕರ್, ಅನಂತ್ ಠಾಕೂರ್ ವಿಶೇಷ ಅತಿಥಿüಗಳಾಗಿ ಫೌಂಡೇಶನ್‍ನ ವಿಶ್ವಸ್ಥ ಸದಸ್ಯರಾದ ಸರಿತಾ ಕುಸುಮೋದರ್ ಶೆಟ್ಟಿ, ಜೀಕ್ಷಿತ್ ಕುಸುಮೋದರ್ ಶೆಟ್ಟಿ (ಉಪಾಧ್ಯಕ್ಷ), ಆಡಳಿತ ಮಂಡಳಿ ಸದಸ್ಯರಾದ ನ್ಯಾಯವಾದಿ ಬಿ.ಮೊಯಿದ್ಧೀನ್ ಮುಂಡ್ಕೂರು, ಧರ್ಮಪಾಲ್ ಯು.ದೇವಾಡಿಗ, ಚೆಲ್ಲಡ್ಕ ಪ್ರಕಾಶ್ ಡಿ.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಸೀಮಾ ಪವಾರ್, ಕೋಶಾಧಿಕಾರಿ ಚೈತಾಲಿ ಪೂಜಾರಿ, ಜೊತೆ ಕಾರ್ಯದರ್ಶಿ ನವೀನ್ ಎಸ್.ಶೆಟ್ಟಿ, ಜಗದೀಶ್ ಶೆಟ್ಟಿ ನಂದಿಕೂರು ವೇದಿಕೆಯಲ್ಲಿ ಆಸೀನರಾಗಿದ್ದರು. ಅತಿಥಿü ಗಣ್ಯರು ಮತ್ತು ಗ್ರಾಮಸ್ಥ ಮುಖ್ಯಸ್ಥರು ಫೌಂಡೇಶನ್‍ನ ಗ್ರಾಮಾಭಿವೃದ್ಧಿ ಚಿಂತನೆ, ಅನುಪಮ ಸೇವೆ, ಕಾರ್ಯನಿಷ್ಠೆ ಮತ್ತು ಸೇವಾ ವೈಖರಿ ಪ್ರಶಂಸಿ ಕೆ.ಡಿ ಶೆಟ್ಟಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ನ್ಯಾಯವಾದಿ ಮೊಯಿದ್ಧೀನ ಮಾತನಾಡಿ ಈ ಗ್ರಾಮಸ್ಥರು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಬದುಕುತ್ತಿದೆ ಅಂದರೆ ನಮ್ಮ ರಾಷ್ಟ್ರದ ಧುರೀಣರು, ಸ್ಥಾನೀಯ ಜನಪ್ರತಿನಿಧಿಗಳು ಇಲ್ಲಿಗೆ ಬಂದು ನಾಚಿಗೆಪಡಬೇಕು. ಈ ವಿಚಾರ ಕೇವಲ ರಾಜ್ಯ ಸರಕಾರದ ಮಂತ್ರಾಲಯಕ್ಕೆ ಮಾತ್ರವಲ್ಲ ದೆಹಲಿಯಲ್ಲಿನ ಕೇಂದ್ರ ಸರಕಾರ ತನಕ ಹೋಗಬೇಕಾಗಿದೆ. ಸ್ವಾತಂತ್ರ್ಯ ದೊರಕಿ 70 ವರ್ಷ ಸಂದರೂ ಭಾರತ ದೇಶದಲ್ಲಿ ಇಂತಹ ಆದಿವಾಸಿ ಗ್ರಾಮ ಇರುವಂತಹದ್ದು ಮತ್ತು ಇಲ್ಲಿನ ಜನತೆಯ ಕಡು ಬದುಕುತನ ನಾವು ಕಾಣುತ್ತಿರುವುದು ರಾಷ್ಟ್ರದ ದುರದೃಷ್ಟ. ಬಹುಶಃ ಇಂದು ಭವಾನಿ ಫೌಂಡೇಶನ್‍ನ ಸೇವೆಯಿಂದ ಭಗವಂತನ ಆಗಮನ ಆದಂತಿದೆ. ಇನ್ನಾದರೂ ಈ ಊರು ಮಾದರಿ ಗ್ರಾಮವಾಗಲಿ ಎಂದು ಹಾರೈಸಿದರು.

ಮುಖ್ಯರಸ್ತೆಯಿಂದ ಸುಮಾರು 14 ಕಿ.ಮೀ ದೂರದ ಅರಣ್ಯದೊಳಗಿನ ನಿಸರ್ಗ ಪ್ರದೇಶವನ್ನು ಕಂಡಿಡಿದ ಭವಾನಿ ಫೌಂಡೇಶನ್‍ನ ಪ್ರಯತ್ನವೇ ಸಾಧನೀಯವಾದುದು. ಅದೂ ಆದಿವಾಸಿ ಜನಾಂಗದ ನಿಮ್ಮ ಸೇವೆ ಶ್ಲಾಘನೀಯ. ನಾವೂ ಗ್ರಾಮಸ್ಥರನ್ನು ಕುಟುಂಬದಂತೆ ಕಂಡು ಸೇವಾ ನಿರತರಾಗಿದ್ದೇವೆ. ಆದರೆ ಶಾಸನದ ಹಿನ್ನಡೆಯಿಂದ ಗ್ರಾಮದ ಜನತೆ ವಂಚಿತರಾಗುವುದು ಶೋಚನೀಯ ಎಂದು ಸುಧೀರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಭವನ ನಿರ್ಮಾಣದಿಂದ ಹೊಸ ಸಂಬಂಧ ಬೆಳೆದಿದೆ. ಜನಾನಿದಾತೆ ಭವಾನಿ ಅಮ್ಮನ ಪುಣ್ಯದ ಫಲವೇ ಈ ಭವನವಾಗಿದೆ. ನಗರ ಪ್ರದೇಶದಿಂದ ಒಂದಿಷ್ಟು ದೂರ ಇರುವ ಈ ಗ್ರಾಮಗಳು ವಿದ್ಯುತ್, ರಸ್ತೆ, ನೀರು ಇಂತಹ ಮೂಲ ಸೌಲತ್ತು, ಸೇವೆಗಳಿಂದ ವಂಚಿತವಾಗಿರುವುದು ನಾಚಿಗೆಗೇಡು. ಭವಾನಿ ಸಂಸ್ಥೆಯ ಸಿಬ್ಬಂದಿಗಳ ಸಂಬಳದ ಒಂದು ಭಾಗವೂ ಇಂತಹ ಪುಣ್ಯಾಧಿ ಸೇವೆಗೆ ಸಲ್ಲುತ್ತಿದ್ದು ಇಂದು ಭವನ ನಿರ್ಮಾಣದ ಮೂಲಕ ಸಂಸ್ಥೆಯ ಉದ್ಯೋಗಿಗಳ ಮತ್ತು ನಮ್ಮ ಪರಿವಾರದ ಪರಿಶ್ರಮ ಸಾರ್ಥಕ ಗೊಂಡಂತಾಗಿದೆ. ಇಲ್ಲಿನ ಮೂರು ಗ್ರಾಮಗಳ ಏಕತೆ ಮತ್ತು ಸಾಂಘಿಕತೆ ಹಾಗೂ ಇಲ್ಲಿನ ಜನತೆಯ ನೆಮ್ಮದಿಯೇ ನಮ್ಮ ಸಮೃದ್ಧಿ ಆಗಿದೆ ಎಂದು ಕೆ.ಡಿ ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಫೌಂಡೇಶನ್‍ನ ಆಡಳಿತ ಮಂಡಳಿ ಸದಸ್ಯರಾದ ಅಂಕಿತಾ ಜೆ.ಶೆಟ್ಟಿ, ಪಂಡಿತ್ ನÀವೀನ್‍ಚÀಂದ್ರ ಆರ್.ಸನೀಲ್, ಪ್ರೇಮನಾಥ ಬಿ.ಶೆಟ್ಟಿ ಮುಂಡ್ಕೂರು, ಕರ್ನೂರು ಮೋಹನ್ ರೈ, ಶಶಿಕಾಂತ್ ಠಾಕ್ರೆ, ಸಂಜೀವ ಎನ್.ಶೆಟ್ಟಿ (ಆಶ್ವಿತ್), ದಿನೇಶ್ ಎಸ್.ಶೆಟ್ಟಿ ಪಡುಬಿದ್ರೆ (ಸಕಾಳ್), ಧನಂಜಯ ಶೆಟ್ಟಿ ಕೊಲ್ಪೆ, ಸಂತೋಷ್ ಜಿ.ಶೆಟ್ಟಿ ಪನ್ವೇಲ್, ಸಂಜೀವ ಟಿ.ಶೆಟ್ಟಿ ಉಳೆಪಾಡಿ, ಭಾಸ್ಕರ್ ಎಂ.ಶೆಟ್ಟಿ ತಾಳಿಪಾಡಿಗುತ್ತು, ಸುಜತಾ ಧರ್ಮಪಾಲ್ ದೇವಾಡಿಗ, ಸುಜಾತಾ ಶೆಟ್ಟಿ, ಪೂರ್ಣಿಮಾ ಪಿ.ಶೆಟ್ಟಿ, ಹೇಮಲತಾ ಎಸ್.ಶೆಟ್ಟಿ, ಸುಮನಾ ಕೆ.ಶೆಟ್ಟಿ, ಪ್ರಭಾ ವಿ.ಶೆಟ್ಟಿ, ಗುಣವತಿ ವೈ.ಶೆಟ್ಟಿ, ವೀಣಾ ಎ.ಶೆಟ್ಟಿ, ಯಶೋದಾ ಡಿ.ಶೆಟ್ಟಿ, ಗೀತಾ ಎಸ್.ಶೆಟ್ಟಿ, ಜಯಂತಿ ಸಿ.ಶೆಟ್ಟಿ, ಇಂದಿರಾ ಎಸ್.ಶೆಟ್ಟಿ, ಸಂಜೀವಿನಿ ಶೆಟ್ಟಿ, ಪ್ರೇರಣಾ ಗುರವ್ ಸೇರಿದಂತೆ ಖಾಲಾಪುರ್ ತಾಲೂಕು ಶಿಕ್ಷಕ ವೃಂದ, ಪಿರ್‍ಕಟ್‍ವಾಡಿ, ಆರ್‍ಕಟ್‍ವಾಡಿ ಮತ್ತು ಉಂಬರ್‍ಣೆವಾಡಿ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 


ಸ್ವರ್ಗೀಯ ಚೆಲ್ಲಡ್ಕ ದೇರಣ್ಣ ಶೆಟ್ಟಿ ಮತ್ತು ಭವಾನಿ ಡಿ.ಶೆಟ್ಟಿ ಅವರನ್ನು ಸ್ಮರಿಸಿ, ಮಾತೆ ಸರಸ್ವತಿ, ಶಿವಾಜಿ ಮಹಾರಾಜ್, ಬಾಬಾ ಸಾಹೇಬ್ ಅಂಬೇಡ್ಕರ್ ಇವರ ಭಾವಚಿತ್ರಕ್ಕೆ ಪುಷ್ಪಾಂಜಲಿಗೈದು, ಶ್ರೀಫಲ ಹೊಡೆದು, ನಾಮಫಲಕ ಅನಾವರಣಗೊಳಿಸಿ ಕೆ.ಡಿ ಶೆಟ್ಟಿ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆಯನ್ನಿತ್ತರು.

ಗ್ರಾಮಸ್ಥರು ಬ್ಯಾಂಡುವಾದ್ಯಗಳೊಂದಿಗೆ ಅತಿಥಿüಗಳನ್ನು ಸಾಂಪ್ರದಾಯಿಕವಾಗಿ ಸಮಾಜ ಭವನಕ್ಕೆ ಬರಮಾಡಿ ಕೊಂಡರು. ಪುರೋಹಿತ ದಿಲೀಪ್ ಜೋಶಿ ಪೂಜೆ ನೆರವೇರಿಸಿದರು. ಬಿಲವಲೆ ಮತ್ತು ಠಾಕೂರ್‍ವಾಡಿ ಶಾಲಾ ವಿದ್ಯಾಥಿರ್üಗಳು ಸ್ವಾಗತ ಗೀತೆಯನ್ನಾಡಿ ಸಂತ ತುಕರಾಮನನ್ನು ನೆನಸಿದÀರು. ಶಿಕ್ಷಕ ಜೀತೂ ಠಾಕೂರ್ ಸ್ವಾಗತಿಸಿದರು. ಮುರಳೀಧರ್ ವಿಠಲ್ ಪಾಲ್ವೆ ಪ್ರಸ್ತವನೆಗೈದÀರು. ರಾಜೀವ ಉಗ್ಡೆ, ಗಣಪತ್ ವೀರ್, ವಾಮನ ಪಿರ್‍ಕಟ್, ಸಂಜಯ್ ಉಗ್ಡೆ, ವಾನ್ಕೂರ್ ವೀರ್, ಪಾರು ವಾಫ್, ಪಾರ್ವತಿ ಉಗ್ಡಾ, ಶೈಲಾ ಪಾಲ್ವೆ, ಬಾಳ ಸೋಮ ಬಾಳ್ಶಿ ಗಣ್ಯರನ್ನು ಪುಷ್ಫಗುಪ್ಚ ನೀಡಿ ಗೌರವಿಸಿದರು. ಉಮೇಶ್ ವಿಚಾರೆ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಪರ್ಶುರಾಮ್ ಪುಂಡಲಿಕ್ ತಸ್ಸೋಡೆ ಧನ್ಯವದಿಸಿದರು.

ಮರೆಯಾಗಿದ್ದ ಜನಪ್ರತಿನಿಧಿಗಳು:
ಅರಣ್ಯ ಪ್ರದೇಶದ ಮಧ್ಯೆಯಲ್ಲಿ ಡಾಮಾರು ಕಾಣದ ಸುಮಾರು ಒಂದು ತಾಸಿನ ಪ್ರಯಾಣದ ಕೊನೆಯಲ್ಲಿರುವ ಈ ತಾಣ ಒಂದು ವಿಚಿತ್ರ ಪ್ರದೇಶವೇ ಸರಿ. ಆಮಂತ್ರಣ ಪತ್ರಿಕೆಯಲ್ಲಿ ಸೂಚಿಸಲಾಗಿದ್ದ ಜವಾಬ್ದಾರಿ ವಹಿಸಬೇಕಿದ್ದ ಸ್ಥಾನೀಯ ಜನಪ್ರತಿನಿಧಿಗಳು ಮಾತ್ರ ಮರೆಯಾಗಿದ್ದರು.

 
More News

  ಚಾರ್‍ಕೋಪ್ ಕನ್ನಡಿಗರ ಬಳಗದ ಕಾರಂತೋತ್ಸವ-ಸದಾನಂದ ಸುವರ್ಣ ದತ್ತಿ ಕಾರ್ಯಕ್ರಮ
ಚಾರ್‍ಕೋಪ್ ಕನ್ನಡಿಗರ ಬಳಗದ ಕಾರಂತೋತ್ಸವ-ಸದಾನಂದ ಸುವರ್ಣ ದತ್ತಿ ಕಾರ್ಯಕ್ರಮ
ಹವ್ಯಕ ವೆಲ್ಫೇರ್ ಟ್ರಸ್ಟ್‍ನಿಂದ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-2019' ಪ್ರದಾನ
ಹವ್ಯಕ ವೆಲ್ಫೇರ್ ಟ್ರಸ್ಟ್‍ನಿಂದ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-2019' ಪ್ರದಾನ
ಬಿಎಸ್‍ಕೆಬಿಎ ಸಂಸ್ಥೆಯಿಂದ ರಂಗೇರಿದ ಶಂಕರ್ ಮಹಾದೇವನ್ ಸಂಗೀತ ರಸಮಂಜರಿ
ಬಿಎಸ್‍ಕೆಬಿಎ ಸಂಸ್ಥೆಯಿಂದ ರಂಗೇರಿದ ಶಂಕರ್ ಮಹಾದೇವನ್ ಸಂಗೀತ ರಸಮಂಜರಿ

Comment Here