Wednesday 24th, April 2024
canara news

ಸ್ನೇಹ ಮಿಲನ ಸಂಭ್ರಮಿಸಿದ ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾಥಿರ್s ಸಂಘದ ಮುಂಬಯಿ ಘಟಕ

Published On : 28 Feb 2019   |  Reported By : Rons Bantwal


ಸಮರ್ಥ ಪ್ರಾಧ್ಯಾಪಕರ ಬೋಧನೆಯಿಂದ ಈ ಮಟ್ಟಕ್ಕೆ ಬೆಳೆದಿದ್ದೇವೆ : ಐಕಳ ಹರೀಶ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.23: ಸಮರ್ಥ ಪ್ರಾಧ್ಯಾಪಕರ ಬೋಧನೆಯಿಂದಲೇ ನಾವು ಈ ಮಟ್ಟಕ್ಕೆ ಬೆಳೆದಿದ್ದೇವೆ ಅನ್ನಲು ತುಂಬಾ ಅಭಿಮಾನ ಅಣಿಸುತ್ತಿದೆ. ವಿಜಯಾ ಕಾಲೇಜು ನಮ್ಮೆಲ್ಲರ ಸಾಧನೆ, ಪ್ರತಿಷ್ಠೆಗೆ ಬುನಾದಿಯಾಗಿದ್ದು ಇಲ್ಲಿ ಓದಿದ ಬಹುತೇಕರು ಬಹಳಷ್ಟು ಧನವಂತರೂ, ಧರ್ಮದ ಪರಿಪಾಲಕರಾಗಿ ಮಾದರಿಯಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧಕರೆಣಿಸಿ ನಾವು ವಿಜಯಾ ಕಾಲೇಜ್‍ನ ವಿದ್ಯಾಥಿರ್üಗಳೆಂದು ಹೆಮ್ಮೆಪಡುತ್ತಿರುವುದೇ ಸಂತೋಷಕರ. ಸದ್ಯ ಗುರುಶಿಷ್ಯರ ಸಂಬಧಗಳನ್ನು ಬಲಿಷ್ಠ ಪಡಿಸುವಲ್ಲಿ ಹಳೆ ವಿದ್ಯಾಥಿರ್sಗಳ ಈ ಸಂಸ್ಥೆಯ ಪಾತ್ರ ಮಹತ್ತರದ್ದಾಗಿದೆ ಎಂದು ವಿಜಯಾ ಕಾಲೇಜು ಮೂಲ್ಕಿ ಇದರ ಹಳೆ ವಿದ್ಯಾಥಿರ್sಯೂ ಮತ್ತು ಫೆಡರೇಶನ್ ಆಫ್ ವರ್ಲ್ಡ್ ಬಂಟ್'ಸ್ ಅಸೋಸಿಯೇಶನ್'ಸ್ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.

ವಿಸಿಎಂಎಎ ಮುಂಬಯಿ ಘಟಕವು 2019ನೇ ವಾರ್ಷಿಕ ಸ್ನೇಹ ಸಮ್ಮೀಲನವನ್ನು ಇಂದಿಲ್ಲಿ ಶನಿವಾರ ರಾತ್ರಿ ಸಾಕಿನಾಕ ಇಲ್ಲಿನ ಪೆನಿನ್ಸುಲಾ ಗ್ರ್ಯಾಂಡ್ ಹೊಟೇಲ್‍ನ ಕನ್‍ಕಾರ್ಡ್ ಸಭಾಗೃಹದಲ್ಲಿ ಸಂಭ್ರಮಿಸಿದ್ದು ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿದ್ದು ಐಕಳ ಹರೀಶ್ ಮಾತನಾಡಿದರು.

ಹಳೆ ವಿದ್ಯಾಥಿರ್s ಸಂಘದ ಮುಂಬಯಿ ಘಟಕದ ಅಧ್ಯಕ್ಷ ಆನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ನೇರವೇರಿದ ಸಮಾರಂಭವನ್ನು ವಿಸಿಎಂಎಎ ಮುಂಬಯಿ ಘಟಕದ ಗೌರವಾಧ್ಯಕ್ಷ ಸಿಎ| ಸೋಮನಾಥ ಕುಂದರ್ ದೀಪಹಚ್ಚಿ ಸಮಾರಂಭ ಉದ್ಘಾಟಿಸಿದರು. ಗೌರವ ಅತಿಥಿsಗಳಾಗಿ ಬಂಟರ ಸಂಘದ ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆಯ ಕಾರ್ಯಧ್ಯಕ್ಷ ಸಿಎ| ಶಂಕರ ಬಿ.ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆಯ ಉಪ ಕಾರ್ಯಧ್ಯಕ್ಷ ಶಿರ್ವಾ ನಿತ್ಯಾನಂದ ಹೆಗ್ಡೆ, ವಿಜಯ ಕಾಲೇಜು ಮೂಲ್ಕಿ ಗರ್ವನಿಂಗ್ ಕೌನ್ಸಿಲಿಂಗ್‍ನ ಕಾರ್ಯಾಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ ವೇದಿಕೆಯಲ್ಲಿ ಆಸೀನರಾಗಿದ್ದು ಸಂದರ್ಭೋಚಿತವಾಗಿ ಮಾತನಾಡಿ ಹಳೆ ವಿದ್ಯಾಥಿರ್s ಸಂಘದ ಮುಂಬಯಿ ಘಟಕದ ಕಾರ್ಯವೈಖರಿ ಪ್ರಶಂಸಿಸಿದರು.

ಭಾಸ್ಕರ್ ಶೆಟ್ಟಿ ಕಾಶಿವಿೂರಾ, ಸಿಎ| ಐ.ಆರ್ ಶೆಟ್ಟಿ, ಲಾರೇನ್ಸ್ ಡಿಸೋಜಾ, ಗುಣಪಾಲ್ ಶೆಟ್ಟಿ ಐಕಳ, ಜಯಂತ್ ಪ್ರಭು, ಸಿಎ| ಸುಂದರ್ ಜಿ.ಭಂಡಾರಿ, ಅರುಣ್ ಕುಮಾರ್ ಕೋಟ್ಯಾನ್, ಕಿಶೋರ್‍ಕುಮಾರ್ ಶೆಟ್ಟಿ ಕುತ್ಯಾರ್, ರಂಜನ್ ಶೆಟ್ಟಿ, ಲಿಗೋರಿ ಡಿಸೋಜಾ, ಪುಷ್ಪ ಶೆಟ್ಟಿ, ಸಿಎ| ಅಶ್ವಜಿತ್ ಹೆಜ್ಮಾಡಿ, ತಾರನಾಥ್ ಶೆಟ್ಟಿ ಮತ್ತಿತರರು ವೇದಿಕೆಯಲ್ಲಿದ್ದು ಕಾಲೇಜ್‍ನ ಪೆÇಲಿಟಿಕಲ್ ಸೈನ್ಸ್ ವಿಭಾಗದ ನಿವೃತ್ತ ಪ್ರಾಚಾರ್ಯ ಪೆÇ್ರ| (ಡಾ|) ಯು.ಕೆ ಶ್ಯಾಮ ಭಟ್ (ಪತ್ನಿ ರಾಜಶ್ರೀ ಭಟ್ ಜೊತೆಗೂಡಿ) ಹಾಗೂ ಇಂಗ್ಲೀಷ್ ವಿಭಾಗದ ವಿಶ್ರಾಂತ ಪ್ರಾಚಾರ್ಯ ಪೆÇ್ರ| ಡಾ| ರಘುರಾಮ್ ರಾವ್ (ಪತ್ನಿ ಹೇಮಲತಾ ರಾವ್ ಜೊತೆಗೂಡಿ) ಪದಾಧಿಕಾರಿಗಳು ಮತ್ತು ಹಳೆ ವಿದ್ಯಾಥಿರ್sಗಳು ಗುರುವಂದನೆ ಸಲ್ಲಿಸಿದರು.

ಅಂತೆಯೇ ಅತಿಥಿüಗಳು ಮಹಾನಗರದ ಉದ್ಯಮಿ, ರಮೇಶ್ ಶೆಟ್ಟಿ ಮತ್ತು ಹಸ್ಮತಿ ರಮೇಶ್, ಭಾರತ್ ಬ್ಯಾಂಕ್‍ನ ನಿರ್ದೇಶಕ ಭಾಸ್ಕರ್ ಎಂ.ಸಾಲ್ಯಾನ್ ಮತ್ತು ನಯನಾ ಭಾಸ್ಕರ್, ನಗರದ ಪ್ರತಿಷ್ಠಿತ ಲೆಕ್ಕ ಪರಿಶೋಧಕ ಸಿಎ| ವಿಶ್ವನಾಥ್ ಶೆಟ್ಟಿ ಮತ್ತು ಪುಷ್ಪ ವಿಶ್ವನಾಥ್ ದಂಪತಿಗಳನ್ನು ಸನ್ಮಾನಿಸಿ ಅಭಿನಂದಿಸಿದರು. ಹಾಗೂ ಮಿಸ್ ಬಂಟ್ ವಿಜೇತೆ ಮೇಘ ಜಿ.ಶೆಟ್ಟಿ ಅವರನ್ನು ಸತ್ಕರಿಸಿದ್ದು, ಸಂಘದ ಸದಸ್ಯರ ಪ್ರತಿಭಾವ್ವಾನಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿದರು. ಸನ್ಮಾನಿತರು ಕಲೇಜು ದಿನಗಳನ್ನು ಮೆಲುಕು ಹಾಕುತ್ತ ಗೌರವಕ್ಕಾಗಿ ಅಭಿವಂದಿಸಿದರು.

ಶ್ಯಾಮ ಭಟ್ ಮಾತನಾಡಿ ಮಾಯನಗರಿಯಲ್ಲಿ ಕನ್ನಡದಲ್ಲಿ ಮಾತನಾಡಲು ಸಿಕ್ಕಿದ್ದೇ ನನ್ನ ಭಾಗ್ಯವೆಣಿಸಿದೆ. ಮಾನವ ಜೀವನ ಎನ್ನುವುದು ಬಹಳ ಶ್ರೇಷ್ಠವಾದು. ನಮಗೆಲ್ಲರಿಗೂ ಒಂದೇ ಜನ್ಮವಾಗಿದ್ದು, ಆ ಜನ್ಮದಲ್ಲಿ ಏನಾದರೂ ಸಾಧಿಸಿ ಸಂತೃಪ್ತ ಬದುಕು ರೂಪಿಸಿಕೊಳ್ಳಬೇಕು. ನಮ್ಮ ಸೇವಾ ಫಲ ಕೊನೆಗಾದರೂ ಫಲಿಸುವುದು. ವಿದ್ಯೆ ಮತ್ತು ಸಮಾಜಕ್ಕೆ ನೀಡಿದ ಸೇವೆ ಎಂದಿಗೂ ವ್ಯರ್ಥವಾಗದು ಅನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ಗುರುವೃಂದಕ್ಕೆ ಶಿಷ್ಯವರ್ಗದ ಗೌರವಾರ್ಪಣೆ ನಿಜವಾಗಿಯೂ ನಮ್ಮ ಮನಸ್ಸಿಗೆ ಸಮಾಧಾನ ತಂದಿದೆ. ವಿಜಯಾ ಕಾಲೇಜು ಮೂಲಕ ಒಳ್ಳೆಯ ಮಕ್ಕಳನ್ನು ನೀಡಿದ ಅಭಿಮಾನವೂ ನಮಗಿದೆ. ಗುರು ಶಿಷ್ಯರ ಸಂಬಂಧ ಹಾಲ್ಜೇನಿನಂತೆ ಎನ್ನುತ್ತಾ ಗುರುಶಿಷ್ಯರ ಸಂಬಂಧ ಬಗ್ಗೆ ಸ್ವರಚಿತ ಕವನ ವಾಚಿಸಿದರು.

ವಿದ್ಯಾಥಿರ್ü ಶಿಷ್ಯರ ಸಾಧನೆಗಳನ್ನು ಕಂಡು ಖುಷಿ ಪಡುವುದೆ ಗುರುವರ್ಯರ ಬಲುದೊಡ್ಡ ಗುರುವಂದನೆ ಆಗಿದೆ. ಸಹಾಯ ಮಾಡುವುದು, ಓರ್ವ ಮನುಷ್ಯನನ್ನು ಒಳ್ಳೆಯ ಪ್ರಜೆಯನ್ನಾಗಿಸುವುದು ಗುರುಗಳ ಕರ್ತವ್ಯವೇ ಸರಿ. ಈ ಹಳೆ ವಿದ್ಯಾಥಿರ್sಗಳ ಸಂಘಟನೆಯಿಂದ ಹಳೆಯ ನೆನಪುಗಳನ್ನು ಹೊಸದಾಗಿಸಿ ಹಂಚಿಕೊಳ್ಳಲು ಸಾಧ್ಯವಾಯಿತು. ಗುರುಗಳಿಗೆ ವಿದ್ಯಾಥಿರ್sಗಳು ಸದಾ ಚಿಗುರುಲೆಗಳಂತೆ ಕಾಣುತ್ತಿರುವುದು ಪ್ರಕೃತಿಸಹಜವಾಗಿದೆ. ಇಂತಹ ಸನ್ಮಾನದಿಂದ ಜೀವನ ಸಾರ್ಥಕವೆಣಿಸಿದಂತಾಗಿದೆ ಎಂದು ರಘುರಾಮ್ ರಾವ್ ತಿಳಿಸಿದರು.

ನಮ್ಮ ಕಾಲದಲ್ಲಿ ಶೈಕ್ಷಣಿಕ ವ್ಯವಸ್ಥೆಗೆ ತಕ್ಕಂತೆ ವಿದ್ಯಾಥಿರ್üಗಳು ತಮಗೆ ಬೇಕಾದಂತೆ ಕಲಿಯುವ ಅವಕಾಶವಿತ್ತು. ಆದರೆ ಪ್ರಸ್ತುತ ಅನುಶಾಸನದಲ್ಲಿ ವಿದ್ಯಾಲಯಗಳು ವಿದ್ಯಾಥಿರ್üಗಳ ಇಪ್ಛೆಗೆ ತಕ್ಕಂತೆ ಆಧುನಿಕ ಶಿಕ್ಷಣಾವಸ್ಥೆಯನ್ನು ರೂಢಿಸಿಕೊಳ್ಳುವ ಕಾಲಘಟ್ಟವಾಗಿ ಪರಿಣಮಿಸಿದೆ. ಆದುದರಿಂದ ಶಿಕ್ಷಣ ವ್ಯವಸ್ಥೆಯ ನೀತಿ ತತ್ವದ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ. ಆದರೂ ನಮ್ಮ ಸಂಸ್ಥೆ ಇವೆಲ್ಲಕ್ಕೂ ಮೀರಿ ಗುಣಮಟ್ಟದ ವಿದ್ಯಾರ್ಜನೆ ನೀಡಿ ಸಮರ್ಥ ವಿದ್ಯಾಥಿರ್üಗಳನ್ನು ಬೆಳೆಸುತ್ತಿರುವು ಸ್ತುತ್ಯರ್ಹ. ಇಂತಹ ಸಂಸ್ಥೆಗೆ ಹಳೆ ವಿದ್ಯಾಥಿರ್sಗಳೂ ಸ್ಪಂದಿಸಿದರೆ ನಾವು ಕಲಿತ ವಿದ್ಯಾಲಯದ ಋಣಪೂರೈಸಿದ್ದಂತಾವುದು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಆನಂದ ಶೆಟ್ಟಿ ತಿಳಿಸಿದರು.

ಸಂಘದ ಕಾರ್ಯಕಾರಿ ಸಮಿತಿಯ ಲಕ್ಷ್ಮೀಶ್ ರಾವ್, ರತ್ನಾಕರ್ ಆರ್.ಸಾಲ್ಯಾನ್, ಸಲಹಾ ಸಮಿತಿ ಸದಸ್ಯರು, ಹಳೆ ವಿದ್ಯಾಥಿರ್üಗಳನೇಕರು ಉಪಸ್ಥಿತರಿದ್ದು, ಗತ ಸಾಲಿನಲ್ಲಿ ಅಗಲಿದ ಗುರು-ಶಿಷ್ಯರು, ಸಹಪಾಠಿಗಳಿಗೆ ಆರಂಭದಲ್ಲೇ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶಿರ್ವಾ ನಿತ್ಯಾನಂದ ಹೆಗ್ಡೆ ಮತ್ತು ರತ್ನಾ ಉಮಾನಾಥ ಶೆಟ್ಟಿ ಹಾಡುಗಳನ್ನಾಡಿದರು.ಅಮಿತಾ ಜತ್ತಿನ್ ಬಳಗವು ನೃತ್ಯಗಳನ್ನು ಪ್ರಸ್ತುತ ಪಡಿಸಿದರು. ಶಶಿಧರ್ ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಚಿತ್ರಾ ಗಣೇಶ್ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಸಿಎ| ಸೋಮನಾಥ ಕುಂದರ್ ಸ್ವಾಗತಿಸಿ ಪ್ರಸ್ತಾವನೆ ಗೈದರು. ಉಪಾಧ್ಯಕ್ಷ ವಾಸುದೇವ ಎಂ.ಸಾಲ್ಯಾನ್, ಸಿಎ| ಕಿಶೋರ್ ಕುಮಾರ್ ಸುವರ್ಣ, ದಿನೇಶ್ ಸಿ.ಸಾಲಿಯಾನ್, ಸಿಎ| ರೋಹಿತಾಕ್ಷ ದೇವಾಡಿಗ ಸನ್ಮಾನಿತರನ್ನು ಪರಿಚಯಿಸಿದರು. ಕೋಶಾಧಿಕಾರಿ ಅಶೋಕ್ ದೇವಾಡಿಗ ಗತ ವಾರ್ಷಿಕ ಹಣಕಾಸು ಮಾಹಿತಿ ನೀಡಿದರು. ಹರೀಶ್ ಹೆಜ್ಮಾಡಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನ್ಯಾ| ಶೇಖರ ಎಸ್.ಭಂಡಾರಿ ವಾರ್ಷಿಕ ವರದಿ ವಾಚಿಸಿ ವಂದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here