Thursday 25th, April 2024
canara news

ಭಾರತ್ ಬ್ಯಾಂಕ್ ವಸಯಿ ರೋಡ್ ಸ್ಥಳಾಂತರಿತ ಶಾಖೆಯಿಂದ ಸೇವಾರÀಂಭ ಬಿಸಿಬಿ ಮಧ್ಯಮ ವರ್ಗದ ಜನತೆಯ ಜೀವಾಳ : ಪಾಂಡು ಎಲ್.ಶೆಟ್ಟಿ

Published On : 02 Mar 2019   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.28: ಭಾರತ್ ಬ್ಯಾಂಕ್‍ನ ಹಣಕಾಸು ಸೇವೆ ವಸಯಿ ಪ್ರದೇಶದ ನಾಗರೀಕರಿಗೆ ಬಹಳಷ್ಟು ಪ್ರಯೋಜನ ಆಗಿದೆ. ಇದರ ತ್ವರಿತ ಸೇವೆ ಶ್ಲಾಘನೀಯ. ಇದು ಬರೇ ಬ್ಯಾಂಕ್‍ವಲ್ಲ ಮಧ್ಯಸ್ಥ ವರ್ಗದ ಜನತೆಯ ಜೀವನಕ್ಕೆ ಪೆÇ್ರೀತ್ಸಾಹ ನೀಡಿ ಬದುಕು ಬೆಳಗಿಸಿದ ವಿಶ್ವಾಸನೀಯ ಸಹಕಾರಿ ಸಂಸ್ಥೆಯಾಗಿದೆ. ಇಂತಹ ಬ್ಯಾಂಕ್‍ನ ಶ್ರೇಯಸ್ಸು ಸಮಗ್ರ ಸಮಾಜದ ಶ್ರೇಯಸ್ಸಿಗೆ ಪೂರಕವಾಗಿದೆ ಎಂದು ವಸಯಿ ಕರ್ನಾಟಕ ಸಂಘದ ಅಧ್ಯಕ್ಷ ಪಾಂಡು ಎಲ್.ಶೆಟ್ಟಿ ತಿಳಿಸಿದರು.

ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ತನ್ನ ವಸಾಯಿ ಪಶ್ಚಿಮದ ಶಾಖೆಯನ್ನು ಸ್ಥಳಾಂತರಿತ ಸ್ಥಳಿಯ ಅಂಬಾಡಿ ದಿವಾನ್‍ಮನ್ ವಿಲೇಜ್ ಅಲ್ಲಿನ ವಸಾಯಿ ಒನ್ ಕಟ್ಟಡದಲ್ಲಿ ಇಂದಿಲ್ಲಿ ಗುರುವಾರ ಬೆಳಿಗ್ಗೆ ಶುಭಾರಂಭ ಗೊಳಿಸಲಾಗಿದ್ದು ಉದ್ಘಾಟನಾ ಸಮಾರಂಭದಲ್ಲಿ ಅತಿಥಿü ಅಭ್ಯಾಗತರಾಗಿದ್ದು ಪಾಂಡು ಶೆಟ್ಟಿ ಮಾತನಾಡಿದರು.

ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ರಿಬ್ಬನ್ ಬಿಡಿಸಿ ಶಾಖೆಯನ್ನು ಸೇವಾರ್ಪಣೆ ಗೊಳಿಸಿ ಶುಭೇಚ್ಛ ಕೋರಿದರು. ಬ್ಯಾಂಕ್‍ನ್ ಮಾತೃಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ (ಬ್ಯಾಂಕ್‍ನ ಮಾಜಿ ನಿರ್ದೇಶಕ) ದೀಪ ಬೆಳಸಿ ಶಾಖೆಗೆ ವಿಧ್ಯುಕ್ತವಾಗಿ ಚಾಲನೆ ಉದ್ಘಾಟಿಸಿದ್ದು, ಬ್ಯಾಂಕ್‍ನ ನಿರ್ದೇಶಕಿ ಶಾರದಾ ಸೂರು ಕರ್ಕೇರ ಭದ್ರತಾ ಖಜಾನೆಗೆ ಮತ್ತು ಬ್ಯಾಂಕ್‍ನ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ಕಂಪ್ಯೂಟರೀಕೃತ ಸೇವ್ಗಳಿಗೆ ಚಾಲನೆ ನೀಡಿ ಶುಭಾರೈಸಿದರು.

ಸಹಕಾರಿ ಬ್ಯಾಂಕ್‍ನಿಂದಲೇ ನಗರ ಹಾಗೂ ಗ್ರಾಮೀಣ ಜನತೆ, ವ್ಯಾಪಾರಿಗಳು ಜೀವಂತವಾಗಿದ್ದಾರೆ. ನಮ್ಮಂತಹ ಗ್ರಾಹಕರಿಂದಲೇ ಸಹಕಾರಿ ಕ್ಷೇತ್ರ ಸಾಗುತ್ತಿದ್ದು, ಇನ್ನಷ್ಟು ಸಹಯೋಗ ಅತ್ಯವಶ್ಯವಾಗಿದೆ ಎಂದು ಸ್ಥಾನೀಯ ನಗರ ಸೇವಕ ಉಮಾಕಾಂತ್ ಪಾಟೀಲ್ ಆಶಯ ವ್ಯಕ್ತಪಡಿಸಿದರು.


ಚಂದ್ರಶೇಖರ ಪೂಜಾರಿ ಮಾತನಾಡಿ ಒಂದು ಸಂಸ್ಥೆಯ ಸ್ಥಳಾಂತರ ಅಂದರೆ ಅದು ಸಮೃದ್ಧಿಯ ಸಂಕೇತ. ಅಧಿಕ ಲಾಭ ಹೊಂದಲಿ. ಕರ್ನಾಟಕ ಮೂಲತಃ ಜನತೆಯ ಸಹಕಾರಿ ಸಂಸ್ಥೆಯಾದರೂ ಮಹಾರಾಷ್ಟ್ರಕ್ಕೂ ಲಾಭದಾಯಕವಾಗಿದೆ. ಜಯ ಸುವರ್ಣ ಅವರ ನೇತೃತ್ವ ಮತ್ತು ಬ್ಯಾಂಕ್ ಮಂಡಳಿಯ ಶ್ರಮದಾಯಕ ಸೇವೆಯೊದಿಗೆ ಶೀಘ್ರತೆಯಲ್ಲಿ 102 ಶಾಖೆಗಳನ್ನು ಹೊಂದಿರುವ ಈ ಬ್ಯಾಂಕ್ ಸಾವಿರಾರು ಶಾಖೆಗಳನ್ನು ಹೊಂದುವಂತಾಗಿ ಗ್ರಾಹಕರ ಬಾಳು ಬೆಳಗಿಸÀಲಿ ಎಂದÀು ಹಾರೈಸಿದರು.


ಶೀಘ್ರಗತಿಯ ಮತ್ತು ಸ್ನೇಹಮಯಿ ಸೇವೆಗಾಗಿಯೇ ಗ್ರಾಹಾಕರು ಭಾರತ್ ಬ್ಯಾಂಕ್‍ನ್ನು ಆಯ್ಕೆ ಮಾಡುತ್ತಿದ್ದಾರೆ. ಜನಸಾಮಾನ್ಯರಲ್ಲೂ ಹಣಕಾಸು ಸುರಕ್ಷತೆಯ ಭರವಸೆ ಮೂಡಿಸಿದ ಈ ಬ್ಯಾಂಕ್ ಬಡ ಶ್ರೀಮಂತರ ಅಂತರ, ಭೇದಭಾವ ಕಾಣದೆ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಬಿಲ್ಲವ ಸಮುದಾಯದ ಧುರೀಣ ಓ.ಪಿ ಪೂಜಾರಿ ಅಭಿಪ್ರಾಯ ಪಟ್ಟರು.

ಉದ್ಯಮಿ ಶಶಿಧರ್ ಕೆ.ಶೆಟ್ಟಿ ಮಾತನಾಡಿ ಗ್ರಾಹಕರಿಗೆ ಒಳ್ಳೆಯ ಸೇವೆ ಒದಗಿಸುವ ಮೂಲಕ ಸ್ವಂತಿಕೆಯ ಪ್ರತಿಷ್ಠೆ ರೂಪಿಸಿ ಕೊಂಡಿದೆ. ಸಾವಿರಾರು ಮಂದಿಗೆ ವ್ಯವಹಾರ ಮಾಡಲು ಸಾಲ ನೀಡಿ ಸಹಕರಿಸುವುದರಿಂದ ಅನೇಕರ ಒಳಿಗೆ ಈ ಬ್ಯಾಂಕ್ ವರವಾಗಿದೆ.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ವಸಯಿ ಸ್ಥಳಿಯ ಕಚೇರಿ ಕಾರ್ಯಧ್ಯಕ್ಷ ಕರುಣಾಕರ್ ಜಿ.ಅವಿೂನ್, ಉದ್ಯಮಿ ಹಾಗೂ ಸಮಾಜ ಸೇವಕರಾದ ಸಾಯಿಪ್ರಸಾದ್ ಕುಲ್ಕರ್ಣಿ, ದೀಪಕ್ ವೊರಾ, ಮರಿಯನ್ ಡಿಕೋಸ್ಟಾ ಮಾತನಾಡಿ ಭಾರತ್ ಬ್ಯಾಂಕ್‍ನ ಸೇವಾ ವೈಖರಿ ಪ್ರಶಂಸಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಶನ್‍ನ ವಸಯಿ ಸ್ಥಳಿಯ ಕಚೇರಿ ಉಪ ಕಾರ್ಯಧ್ಯಕ್ಷ ಕೆ.ಟಿ ಬಂಗೇರ, ಗೌರವ ಕಾರ್ಯದರ್ಶಿ ರೋಹಿತಾಕ್ಷ ಎಸ್.ಅಂಚನ್, ಸಮಾಜ ಸೇವಕರಾದ ಜಯಂತ್ ಪಕ್ಕಳ, ರಮೇಶ್ ಶೆಟ್ಟಿ, ಕೋಡಿ ಗೋಪಾಲ್, ಸದಾಶಿವ ಎ.ಕರ್ಕೇರ, ಬ್ಯಾಂಕ್‍ನ ನಿರ್ದೇಶಕರಾದ ಕೆ.ಬಿ ಪೂಜಾರಿ, ಜ್ಯೋತಿ ಕೆ. ಸುವರ್ಣ, ಭಾಸ್ಕರ್ ಎಂ.ಸಾಲ್ಯಾನ್, ಪ್ರೇಮನಾಥ್ ಪಿ.ಕೋಟ್ಯಾನ್, ಎಂ.ಎನ್ ಕರ್ಕೇರ, ಮಾಜಿ ನಿರ್ದೇಶಕರಾದ ಎನ್.ಎಂ ಸನಿಲ್, ಬ್ಯಾಂಕ್‍ನ ಪ್ರಧಾನ ಪ್ರಬಂಧಕ ವಿದ್ಯಾನಂದ ಎಸ್.ಕರ್ಕೇರಾ, ಉಪ ಪ್ರಧಾನ ಪ್ರಬಂಧಕ ಜನಾರ್ದನ ಎಂ.ಪೂಜಾರಿ, ಸಾಂತಕ್ರೂಜ್ ಶಾಖೆಯ ಮುಖ್ಯಸ್ಥ ದಯಾನಂದ್ ಆರ್.ಅವಿೂನ್, ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಸುನೀಲ್ ಎ.ಗುಜರನ್, ವಿಜಯ್ ಪಾಲನ್, ದೀಪಕ್ ಪ್ರಭು ಸೇರಿದಂತೆ ಬ್ಯಾಂಕ್‍ನ ನೂರಾರು ಗ್ರಾಹಕರು ಉಪಸ್ಥಿತರಿದ್ದು ಶುಭಾರೈಸಿದರು.

ಶ್ರೀ ಶೇಖರ ಶಾಂತಿ ಉಳ್ಳೂರು ತಮ್ಮ ಪೌರೋಹಿತ್ಯದಲ್ಲಿ ಗಣಹೋಮ, ಸತ್ಯನಾರಾಯಣ ಮಹಾಪೂಜೆ, ವಾಸ್ತು ಹವನ, ವಾಸ್ತುಪೂಜೆ, ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ಗಂಗಾಧರ್ ಕಲ್ಲಾಡಿ, ಗೋಪಿನಾಥ್ ಜಿ.ಅವಿೂನ್ ಪೂಜಾಧಿಗಳಿಗೆ ಸಹಕರಿಸಿದ್ದು, ದಕ್ಷಾ ವಿಶಾಲ್ ಘಘಡ ಮತ್ತು ಕವಿತಾ ಲೋಹಿತಾಕ್ಷ ಅಂಚನ್ ದಂಪತಿಗಳು ಪೂಜೆಯ ಯಜಮಾನತ್ವ ವಹಿಸಿದ್ದರು.

ಬ್ಯಾಂಕ್‍ನ ಪ್ರಧಾನ ಪ್ರಬಂಧಕರೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ದಿನೇಶ್ ಬಿ.ಸಾಲ್ಯಾನ್ ಸ್ವಾಗತಿಸಿ ಪ್ರಸ್ತಾವನೆಗೈದರು. ಕು| ದೀಪಾಲಿ ಹೆಜ್ಮಾಡಿ ಅತಿಥಿüಗಳನ್ನು ಪರಿಚಯಿಸಿದರು. ಶೃತಿ ಅಂಕಿತ್ ಅಂಚನ್ ಮತ್ತು ದೀಪಾಲಿ ಅನಿಶ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಮುಖ್ಯಸ್ಥೆ ಪ್ರಭಾವತಿ ಜೆ.ಕೋಟ್ಯಾನ್ ಕೃತಜ್ಞತೆ ಸಮರ್ಪಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here