Tuesday 23rd, April 2024
canara news

ಶ್ರೀ ಗೋಪಾಲ ಶೆಟ್ಟಿ (ಸಂಸದ) ತುಳು-ಕನ್ನಡಿಗರ ಅಭಿಮಾನಿ ಬಳಗದ ಸಾರ್ವಜನಿಕ ಸಮಾವೇಶ ರಾಜಕಾರಣಕ್ಕೆ ಗೋಪಾಲ ಶೆಟ್ಟಿ ಆದರ್ಶಪುರುಷ : ಸಚಿವ ಚಂದ್ರಕಾಂತ್ ಪಾಟೀಲ್

Published On : 04 Mar 2019   |  Reported By : Rons Bantwal


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.02: ಮರಾಠಿಗರು ಮತ್ತು ತುಳು ಕನ್ನಡಿಗರದ್ದು ಸಾಮೀಪ್ಯದ ಸಂಬಂಧವಾಗಿದೆ. ಸೇವೆಗೆ ತುಳು ಕನ್ನಡಿಗರು ನಿಷ್ಠಾವಂತರಾಗಿದ್ದು, ಅಂತಹ ನಿಷ್ಠೆವುಳ್ಳ ಗೋಪಾಲ ಶೆಟ್ಟಿ ಅವರ ನಿಷ್ಕಲಂಕ ಸೇವೆಗೆ ಬೆಸ್ಟ್ ಎಂಪಿ ಗೌರವಕ್ಕೆ ಪಾತ್ರರಾಗಿದ್ದಾರೆ. ಸಂಸ್ಕೃತಿ ಪ್ರಿಯರಾದ ತುಳು ಕನ್ನಡಿಗರು ಬಾಳಿನಲ್ಲೂ, ವ್ಯವಹಾರದಲ್ಲೂ ಸಂಸ್ಕೃತಿ ಮೈಗೂಡಿಸಿದ್ದಾರೆ. ನಾವು ಮರಾಠಿಗರೂ ಅಷ್ಟೇ. ಆದುದರಿಂದ ನಾವು ಆಪ್ತ ಬಂಧುಗಳಂತೆ ಬಾಳುತ್ತಿದ್ದೇವೆ. ಗೋಪಾಲ ಶೆಟ್ಟಿ ಅವರ ಶಿಸ್ತಿನ ಜೀವನ, ಕಾರ್ಯ ತಾತ್ಪರ್ಯತೆ, ವ್ಯವಹಾರ ಜ್ಞಾನ, ಮಾತಿನ ಮೋಡಿ, ಪ್ರಾಮಾಣಿಕತೆ ಎಲ್ಲವೂ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ. ತನ್ನ ಸ್ಥಾನಮಾನಗಳ ದುರ್ಬಳಕೆ ಮಾಡಿದವರಲ್ಲ. ಯಾವೊತ್ತೂ ತನ್ನ ಖಾಸಾಗಿ ವಿಚಾರಕ್ಕೆ ಬಳಸಿ ಮಹಾರಾಷ್ಟ್ರದ ಸಚಿವಾಲಯಕ್ಕಾಗಲಿ, ಕೇಂದ್ರದ ಪಾರ್ಲಿಮೆಂಟ್‍ಗೂ ಕೊಂಡೊಯ್ದವÀರಲ್ಲ. ಅವರೋರ್ವ ಬೃಹನ್ಮುಂಬಯಿ ಮಹಾನಗರಕ್ಕೆ ಆಕಾರ ನೀಡಿದ ವ್ಯಕ್ತಿಯಗಿದ್ದಾರೆ. ಇಂತಹ ಗೋಪಾಲ ಶೆಟ್ಟಿ ರಾಜಕಾರಣಕ್ಕೆ ಆದರ್ಶ ಪುರುಷರೇ ಸರಿ ಎಂದು ಮಹಾರಾಷ್ಟ್ರ ಸರಕಾರದ ಸಹಕಾರಿ, ಜವಳಿ ಖಾತೆ ಸಚಿವ ಚಂದ್ರಕಾಂತ್ ಪಾಟೀಲ್ ನುಡಿದರು.

ರಾಷ್ಟ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ `ಸರ್ವೋತ್ಕೃಷ್ಟ ಸಂಸದ' ಎಂದು ಗೌರವಿಸಲ್ಪಟ್ಟ ಗೋಪಾಲ್ ಸಿ.ಶೆಟ್ಟಿ ಅವರಿಗೆ ಇಂದಿಲ್ಲಿ ಶನಿವಾರ ಸಂಜೆ ಬೋರಿವಿಲಿ ಪಶ್ಚಿಮದ ಪುಷ್ಪಾಂಜಲಿ ಗಾರ್ಡನ್‍ನಲ್ಲಿ ಶ್ರೀ ಗೋಪಾಲ ಶೆಟ್ಟಿ (ಸಂಸದ) ತುಳು-ಕನ್ನಡಿಗರ ಅಭಿಮಾನಿ ಬಳಗವು ನಾಡಿನ ಹೆಸರಾಂತ ಸಂಘಟಕ ಎರ್ಮಾಳ್ ಹರೀಶ್ ಶೆಟ್ಟಿ ಸಾರಥ್ಯ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿಸಲಾದ ಭವ್ಯ ಸಮಾರಂಭದಲ್ಲಿ ಪ್ರಧಾನ ಅಭ್ಯಾಗತರಾಗಿದ್ದು ಮುಂಬಯಿ ನಗರ ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಅವರಿಗೆ (ಪತ್ನಿ ಉಷಾ ಜಿ.ಶೆಟ್ಟಿ ಅವರನ್ನೊಳಗೊಂಡು) ತುಳುಕನ್ನಡಿಗರ ಅಭಿನಂದನಾ ಸನ್ಮಾನಗೈದು ಸಚಿವ ಚಂದ್ರಕಾಂತ್ ಪಾಟೀಲ್ ಮಾತನಾಡಿದರು.

ಗೋಪಾಲ ಶೆಟ್ಟಿ, ಉಷಾ ಗೋಪಾಲ ಶೆಟ್ಟಿ ದಂಪತಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದಹಿಸರ್ ವಿಧಾನಸಭಾ ಕ್ಷೇತ್ರದ (ಬಿಜೆಪಿ) ಶಾಸಕಿ ಮನೀಷಾ ಚೌಧರಿ, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಅವರು ಗೋಪಾಲ್ ಶೆಟ್ಟಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಶುಭೇಚ್ಛ ಕೋರಿದರು.

ವೇದಿಕೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷÀ ಕೃಷ್ಣಕುಮಾರ್ ಎಲ್.ಬಂಗೇರ, ಮಾಜಿ ಅಧ್ಯಕ್ಷ ಡಾ| ಪಿ.ವಿ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ದೇವಾಡಿಗರ ಸಂಘ ಮುಂಬಯಿ ಅಧ್ಯಕ್ಷ ರವಿ ಎಸ್.ದೇವಾಡಿಗ, ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾ| ಆರ್.ಎಂ ಭಂಡಾರಿ, ಕುಲಾಲ ಸುಧಾರಕ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್ ಎಲ್.ಕುಲಾಲ್, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಸದಾನಂದÀ ಆಚಾರ್ಯ ಕಲ್ಯಾಣ್ಪುರ, ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ, ರಜಕ ಸಂಘ ಮುಂಬಯಿ ಇದರ ಅಧ್ಯಕ್ಷ ಸತೀಶ್ ಎಸ್.ಸಾಲ್ಯಾನ್, ರಾಮರಾಜ ಕ್ಷತೀಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಾಜ್‍ಕುಮಾರ್ ಕಾರ್ನಾಡ್, ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಅಧ್ಯಕ್ಷ ಉತ್ತಮ್ ಶೆಟ್ಟಿಗಾರ್, ಬಾಂಬೇ ಬಂಟ್ಸ್ ಎಸೋಸಿಯೇಶನ್‍ನ ಮಜಿ ಅಧ್ಯಕ್ಷ ಜಯಂತ್ ಕೆ.ಶೆಟ್ಟಿ, ಹವ್ಯಕ ವೆಲ್ಫೇರ್ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ ಸಿಎ| ಸಂಜಯ್ ಭಟ್, ಸಮಾಜ ಸೇವಕರಾದ ರಮೇಶ್ ಬಂಗೇರ ಹೋಬಳಿ, ಜಯಕೃಷ್ಣ ಶೆಟ್ಟಿ, ಆಹಾರ್‍ನ ಅಧ್ಯಕ್ಷ ಸಂತೋಷ್ ಆರ್.ಶೆಟ್ಟಿ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಮಾಜಿ ನಗರ ಸೇವಕ ವಿನೋದ್ ಶೆಲಾರ್ ವೇದಿಕೆಯಲ್ಲಿದ್ದರು.

ಗೋಪಾಲ್ ಶೆಟ್ಟಿ ಸನ್ಮಾನಕ್ಕೆ ಉತ್ತರಿಸಿ ನನಗೆ ಯಾವ ಕೆಲಸವು ಕೂಡಾ ತ್ವರಿತವಾಗಿ ಆಗಬೇಕು. ನೋಡಿದವರಿಗೆ ಒಳ್ಳೆಯದಾಗಿ ಕಾಣಬೇಕು. ಯಾವುದೇ ಕಾರ್ಯಕ್ರಮ ಕನಿಷ್ಠಾವಧಿಯಲ್ಲಿ, ಚಿಕ್ಕ ಮತು ಚೊಕ್ಕವಾಗಿ ನಡೆದರೆನೇ ಚೆಂದ. ಇಲ್ಲವಾದರೆ ಅಂದ ಕೆಡುತ್ತ್ತದೆ. ನಾನು ರಾಜಕೀಯಕ್ಕೆ ಬಂದದ್ದು ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲೇ ಹೊರತು ಹುದ್ದೆಗಳನ್ನು ಅಲಂಕರಿಸಲಲ್ಲ. ಕಾರಣ ನಾನೋರ್ವ ಸೌಲಭ್ಯ ವಂಚಿತವನಾಗಿದ್ದು ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟು ಬಿಜೆಪಿ ಕಚೇರಿಗೆ ಹೋಗಿದ್ದೆ. ಅಲ್ಲಿ ನನ್ನ ಮಾತನಾಡುವ ಪರಿ, ಹಾವಭಾವ, ಸಂಭಾಷಣೆ ತಿಳಿದ ಧುರೀಣರು ನನ್ನನ್ನೇ ರಾಜಕೀಯದತ್ತ ಸೆಳೆದರು. ಹಾಗೇ ರಾಜಕೀಯಕ್ಕೆ ಬಂದ ನಾನು ನಗರ ಸೇವಕನಾಗಿ, ಶಾಸಕನಾಗಿ, ಸಂಸದನಾಗಿ ಬೆಳೆದೆನು. ಈಗ ಎಲ್ಲರೂ ನನಗೆ ಸಚಿವರಾಗಲು ಹೇಳುತ್ತಾರೆ ಆದರೆ ನನಗೆ ಮಂತ್ರಿ ಪದವಿಯಲ್ಲಿ 1% ಕೂಡಾ ಆಸೆಯಿಲ್ಲ. ಮತ್ತೊಮ್ಮೆ ಸಂಸದನಾಗುವ ಅವಕಾಶ ದೊರೆತರೆ ಅದನ್ನು ಸ್ವೀಕರಿಸುತ್ತಾ ಜನ ಸಾಮಾನ್ಯರ ಸೇವೆ ಮಾಡುತ್ತೇನೆ ಇದರಲ್ಲೇ ನನಗೆ ತುಂಬಾ ಖುಷಿ ದೊರಕುತ್ತದೆ. ಸಾಮಾನ್ಯ ಮನೆತನದ ನನಗೆ ಗಲ್ಲಿಯಿಂದ ಡೆಲ್ಲಿಯ ವರೆಗೆ ಮುನ್ನಡೆಸಿದ ನಿಮಗೆಲ್ಲರಿಗೂ ಧನ್ಯವಾದಗಳು. ಈ ಕಾರ್ಯಕ್ರಮವನ್ನು ಆಯೋಜಿಸಿದ ಎರ್ಮಾಳ್ ಹರೀಶ್ ಶೆಟ್ಟಿ ಮತ್ತು ಸಂಘಟಕರಿಗೆ, ತುಳು ಕನ್ನಡಿಗರಿಗೆ ನಾನು ಸದಾ ಅಭಾರಿಯಾಗಿರುವೆ ಎಂದರು.

ಈ ಸಂಭ್ರಮವು ಮುಂಬಯಿವಾಸಿ ತುಳುಕನ್ನಡಿಗರಿಗೆ ಹಬ್ಬವೇ ಸರಿ. ತುಳು ಕನ್ನಡಿಗರ ಒಗ್ಗಟ್ಟು ಪ್ರದರ್ಶನದ ಜೊತೆಗೆ ನಮ್ಮೆಲ್ಲರ ಅಭಿಮಾನದ ಸಂಸದ ಗೋಪಾಲ್ ಶೆಟ್ಟಿ ಅವರಿಗೆ ಹುಟ್ಟೂರ ಜನತೆಯ ಗೌರವಾರ್ಪಣಾ ಸಂಭ್ರಮವೂ ಹೌದು. ತಮ್ಮಂತಹ ಒಳ್ಳೆಯ ಸಂಸದ ತುಳು ಕನ್ನಡಿಗರ ಹಿರಿಮೆಯ ಕಿರೀಟವಾಗಿದೆ. ತಾವು ಯಾವೊತ್ತೂ ಅಭಿನಂದಾನೆಗಳನ್ನು ಆಸೆಪಟ್ಟವರಲ್ಲದಿದ್ದರೂ ಇದು ನಮ್ಮೆಲ್ಲರ ಕರ್ತವ್ಯದ, ಅಭಿಮಾನದ ಸನ್ಮಾನವಾಗಿದೆ. ನಿಮ್ಮ ಈ ಮಟ್ಟದ ಬೆಳವಣಿಗೆಗೆ ನಿಮ್ಮ ತಾಯಿ ಗುಲಾಬಿ, ಪತ್ನಿ ಉಷಾ ಅವರ ತ್ಯಾಗವೂ ಕೂಡಿದ್ದು, ಸಾಮಾನ್ಯ ಕುಟುಂಬದಿಂದ ಬಂದ ಯುವಕನೊಬ್ಬ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಈ ಮಟ್ಟಕ್ಕೆ ಬೆಳೆದದ್ದು ಶ್ಲಾಘನೀಯ. ಆತ್ಮಸ್ಥೈರ್ಯವುಳ್ಳ ಎದೆಗಾರಿಕೆಯ, ಎಂದಿಗೂ ಯಾರಿಗೂ ಸಲಾಂ ಹಾಕದ ಸ್ವಾಭಿಮಾನಿ ಗೋಪಾಲ ಶೆಟ್ಟಿ ಅವರ ಪರಿಶ್ರಮ, ನಿಷ್ಠೆ ಈ ಮಟ್ಟದ ಬೆಳವಣಿಗೆಗೆ ಪೂರಕವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರದ130 ಕೋಟಿ ಜನರಲ್ಲಿ ಒಂದನೇ ಸ್ಥಾನದ ಸಂಸದನಾಗಿ ಆಯ್ಕೆ ಮಾಡುವ ಕೆಲಸ ಮುಂಬಯಿವಾಸಿ ತುಳುಕನ್ನಡಿಗರದ್ದಾಗಲಿ ಹಾರೈಸುತ್ತ ಐಕಳ ಹರೀಶ್ ಅವರು ಗೋಪಾಲ್ ಸಿ.ಶೆಟ್ಟಿ ಅವರ ಸೇವಾ ವೈಖರಿಯನ್ನು ತಿಳಿಸಿ ಅಭಿನಂದನೆ ಅರ್ಪಿಸಿದರು.

ಮಾತೃಶ್ರೀ ಗುಲಾಬಿ ಸಿ.ಶೆಟ್ಟಿ, ಮಕ್ಕಳಾದ ರಾಕೇಶ್ ಜಿ.ಶೆಟ್ಟಿ, ಐಶ್ವರ್ಯ ಆರ್.ಶೆಟ್ಟಿ, ಜ್ಯೋತಿ ಎಸ್.ಶೆಟ್ಟಿ, ಸುದರ್ಶನ್ ಶೆಟ್ಟಿ, ರೈಲ್ವೇ ಯಾತ್ರಿ ಸಂಘ (ಬೊರಿವಲಿ), ಮುಂಬಯಿ ಇದರ ಗೌರವಾಧ್ಯಕ್ಷ ಡಾ| ಶಂಕರ್ ಬಿ.ಶೆಟ್ಟಿ ವಿರಾರ್, ಸುರೇಶ್ ಶೆಟ್ಟಿ ಗುರ್ಮೆ, ಕೆ.ರಘುರಾಮ ಶೆಟ್ಟಿ, ಕೃಷ್ಣ ವೈ.ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ, ಸಂಘಟಕರಾದ ರವೀಂದ್ರ ಎಸ್.ಶೆಟ್ಟಿ, ಭಾಸ್ಕರ ಎಂ.ಸಾಲ್ಯಾನ್, ಗಂಗಾಧರ ಜೆ.ಪೂಜಾರಿ, ರಜಿತ್ ಎಂ.ಸುವರ್ಣ, ಮಂಜುನಾಥ್ ಬನ್ನೂರು, ಪ್ರವೀಣ್ ಎ.ಶೆಟ್ಟಿ ಶಿಮಂತೂರು, ಪ್ರಕಾಶ್ ಎ.ಶೆಟ್ಟಿ, ವಿಜಯಕುಮಾರ್ ಶೆಟ್ಟಿ ತೋನ್ಸೆ, ಮುದ್ದು ಕೃಷ್ಣ ಶೆಟ್ಟಿ ಚಾರ್‍ಕೋಪ್, ದಿವಾಕರ ಶೆಟ್ಟಿ ಅಡ್ಯಾರ್, ವೇಣುಗೋಪಾಲ್ ಶೆಟ್ಟಿ ಸೇರಿದಂತೆ ಸಾವಿರಾರು ತುಳು ಕನ್ನಡಿಗರು ಭಾಗವಹಿಸಿದ್ದು, ಮಹಾನಗರದಲ್ಲಿನ ಹೊಟೇಲು ಉದ್ಯಮಿಗಳು, ನೂರಾರು ತುಳು ಕನ್ನಡಿಗ ಸಂಘ ಸಂಸ್ಥೆಗಳ ಮುಖ್ಯಸ್ಥರು ಸಂಸದರಿಗೆ ಪುಷ್ಪಗುಪ್ಛಗಳನ್ನಿತ್ತು ಅಭಿನಂದನಾ ಗೌರವ ಸಲ್ಲಿಸಿ ಶುಭಾರೈಸಿದರು.

ಬ್ರಾಹ್ಮಣ ಪುರೋಹಿತರ ವೇದಘೋಷದೊಂದಿಗೆ ಸಮಾರಂಭ ಆದಿಗೊಂಡಿತು. ಬ್ರಹ್ಮಕುಮಾರಿ ನೀತಾ ಭಹೆನ್ ಅನುಗ್ರ್ಹಿಸಿದರು. ಪುಲ್ವಾಮ ವಿಧ್ವಂಸಕ ದಾಳಿಗೆ ಬಲಿಯಾದ ರಾಷ್ಟ್ರದ ಸೈನಿಕರಿಗೆ ಮೇಣದ ಬತ್ತಿಗಳನ್ನು ಬೆಳಗಿಸಿ (ಕ್ಯಾಂಡಲ್ ಲೈಟ್) ಶ್ರದ್ಧಾಂಜಲಿ ಅರ್ಪಿಸಲಾಯಿತು. ನಂತರ ಸಾಕ್ಷಾ ್ಯಚಿತ್ರ ಪ್ರದರ್ಶನದ ಮೂಲಕ ಮುಖೇನ ಗೋಪಾಲ ಶೆಟ್ಟಿ ಅವರ ಸುಮಾರು ಮೂರು ದಶಕಗಳ ರಾಜಕೀಯ ನಡೆಯ ಸಿಂಹಾಲೋಕನದ ನಡೆಸಲಾಯಿತು.

ಕಾರ್ಯಕ್ರಮದ ಪ್ರಧಾನ ಸಂಯೋಜಕ ಎರ್ಮಾಳ್ ಹರೀಶ್ ಶೆಟ್ಟಿ ಸುಖಾಗಮನ ಬಯಸಿದರು. ಅಶೋಕ್ ಪಕ್ಕಳ, ಅಮೃತ ಶೆಟ್ಟಿ, ರಘುನಾಥ್ ಎನ್.ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕರುಣಾಕರ ಶೆಟ್ಟಿ ಪೆÇಯಿಸರ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿಸಿ ಸಂಗಮ್ ಉಪಾಧ್ಯಾಯ ನಿರ್ದೇಶನದಲ್ಲಿ ಸಂಗಮ್ ಸ್ವರ್ ಮುಂಬಯಿ ತಂಡವು ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.

ಸ್ಥಳಿಯ ಡೊನ್‍ಬೊಸ್ಕೊ ಸರ್ಕಲ್‍ನಿಂದ ಭವ್ಯ ಮೆರವಣಿಯಲ್ಲಿ ಚೆಂಡೆ, ವಾದ್ಯ, ಬ್ಯಾಂಡುಗಳ ನೀನಾದದಲ್ಲಿ ಕಲಾ ಪ್ರತಿಭೆ, ಸಾಂಸ್ಕೃತಿಕ ವೈಭವದೊಂದಿಗೆ, ಶ್ವೇತಅಶ್ವÀಗಳ ರಥದ ಚ್ಯಾರಿಯಟ್‍ನಲ್ಲಿ ಕೂರಲು ನಿರಾಕರಿಸಿದ ಸಂಸದ ಗೋಪಾಲ್ ಶೆಟ್ಟಿ, ಮಾತೆ ಭಾರತಾಂಬೆ ಮತ್ತು ಪಾಕಿಸ್ತಾನದಿಂದ ಮುಕ್ತನಾದರಾಷ್ಟ್ರದ ಯೋಧ ಅಭಿನಂದನ್ ವರ್ಧಮಾನ್ ಅವರ ಭಾವಚಿತ್ರಗಳನ್ನು ರಥದಲ್ಲಿರಿಸಿ ಜನಸ್ತೋಮದ ಮಧ್ಯ ನಡಿಗೆಯಲ್ಲೇ ಸಾಗಿದ ಗೋಪಾಲ್ ಶೆಟ್ಟಿ ಅವರನ್ನು ಸಾಂಪ್ರದಾಯಿಕವಾಗಿ ಮೈದಾನಕ್ಕೆ ಬರಮಾಡಿ ಕೊಳ್ಳಲಾಯಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here