Friday 19th, April 2024
canara news

ಎಲ್ಲರೊಳಗೊಂದಾಗು ಮಂಕುತಿಮ್ಮಗೋರೆಗಾಂವ್ ಕರ್ನಾಟಕ ಸಂಘದ ವಜ್ರಮಹೋತ್ಸವ ಸಮಾರೋಪ ಸಂಭ್ರಮ

Published On : 05 Mar 2019   |  Reported By : Rons Bantwal


ಸಂಸ್ಥೆಯನ್ನು ನಡೆಸುವುದು ತುಂಬಾ ಕಷ್ಟದ ಕೆಲಸ:ಬಾರ್ಕೂರು ಸುಧಾಕರ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.03: ನನ್ನ ಗೋರೆಗಾಂವ್ ಕರ್ನಾಟಕ ಸಂಘ ಸಂಬಂಧ 25 ವರ್ಷದ್ದು, ಇಂದು ಅರ್ವತ್ತರ ಸಮಾರಂಭವನ್ನು ಆಚರಿಸುತ್ತಿರುವುದು ಆಶ್ಚರ್ಯವೂ ಅಭಿಮಾನವೂ ಆಗುತ್ತಿದೆ. ಪ್ರಸಕ್ತ ಸನ್ನಿವೇಶದಲ್ಲಿ ಸಂಸ್ಥೆಯನ್ನು ನಡೆಸಿಕೊಂಡು ಹೋಗುವುದು ತುಂಬಾ ಕಷ್ಟದ ಕೆಲಸ. ಯಾಕೆಂದರೆ ಸಂಸ್ಥೆಯ ಬೆಳವಣಿಗೆ ಜನ ಮತ್ತು ಹಣ ಬೇಕು, ಹಣ ಬೇಕಾದರೆ ದಾನಿಗಳು ಬೇಕು. ದಾಣಿಗಳು ಸಿಗುವುದು ಕಡಿಮೆ. ಒಂದೆಡೆ ದಿನೇದಿನ ದಾನಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೆ ಮತ್ತೊಂದೆಡೆ ಸಂಘ ಸಂಸ್ಥೆಗಳೂ ಹೆಚ್ಚಾಗುತ್ತವೆ. ದೇವರು ಮತ್ತು ದೇವಸ್ಥಾನಕ್ಕೆ ಖರ್ಚು ಮಾಡುವುದಕ್ಕಿಂತ ಶಿಕ್ಷಣ ಕ್ಷೇತ್ರದಲ್ಲಿ ಖರ್ಚು ಮಾಡುವುದೇ ಸಮ ಶ್ರೇಷ್ಠ. ಮುಂಬಯಿ ಪ್ರಸಕ್ತ 700ಕ್ಕಿಂತ ಅಧಿಕ ಸಂಘ ಸಂಸ್ಥೆಗಳಿದ್ದು ಕನ್ನಡಾಂಭೆಯ ಸೇವೆಯಲ್ಲಿ ತೊಡಗಿಸಿರುವುದು ಅಭಿನಂದನೀಯ ಎಂದು ವಸುಧಾ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ, ಸಮಾಜ ಸೇವಕ ಬಾರ್ಕೂರು ಸುಧಾಕರ ಶೆಟ್ಟಿ ತಿಳಿಸಿದರು.

ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಮಲಾಡ್ ಪಶ್ಚಿಮ ಬಜಾಜ್ ಸಭಾಗೃಹದಲ್ಲಿ ಗೋರೆಗಾಂವ್ ಕರ್ನಾಟಕ ಸಂಘವು ತನ್ನ ವಜ್ರ ಮಹೋತ್ಸವ ಸಮಾರೋಪ ಸಂಭ್ರಮ ಆಯೋಜಿಸಿದ್ದು, ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭಕ್ಕೆ ದೀಪ ಪ್ರಜ್ವಲಿಸಿ ಚಾಲನೆಯನ್ನೀಡಿ ಸುಧಾಕರ ಶೆಟ್ಟಿ ಮಾತನಾಡಿದರು.

ಸಮಾರಂಭದಲ್ಲಿ ಅತಿಥಿü ಅಭ್ಯಾಗತರುಗಳಾಗಿ ಮುಂಡ್ಕೂರು ವಿದ್ಯಾವರ್ಧಕ ಹಳೆ ವಿದ್ಯಾಥಿರ್ü ಸಂಘದ ಅಧ್ಯಕ್ಷ ಬಾಲಕೃಷ್ಣ ಸಿ.ಶೆಟ್ಟಿ, ಟ್ಯಾಕ್ಸ್ ಎಂಡ್ ಲೀಗಲ್ ಕನ್ಸಲ್ಟೆಂಟ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಶಾಂತ್ ಶೆಟ್ಟಿ, ಜಿ.ಎಸ್ ಶೆಟ್ಟಿ ಇಂಟರ್‍ನೇಶನಲ್ ಶೈಕ್ಷಣಿಕ ಸಂಸ್ಥೆ ಭಾಂಡೂಪ್ ಇದರ ಕಾರ್ಯಾಧ್ಯಕ್ಷ ಶಂಕರ್ ಎ.ಶೆಟ್ಟಿ ಉಪಸ್ಥಿತರಿದ್ದರು.

ಸಮಾಜ ಮತ್ತು ಸಂಗ ಸಂಸ್ಥೆಗಳು ಒಂದಾಗಿ ಕೆಲಸ ಮಾಡುವುದರಿಂದ ಉತ್ತಮ ಫಲ ಸಿಗುತ್ತದೆ ಎಂದು ಬಾಲಕೃಷ್ಣ ಶೆಟ್ಟಿ ಹಾರೈಸಿದರು.

ಪ್ರಶಾಂತ್ ಶೆಟ್ಟಿ ಮಾತನಾಡಿ ಸಂಘವನ್ನು ಹುಟ್ಟು ಹಾಕುವುದು ಸುಲಭದ ಕೆಲಸ. ಅದನ್ನು 60 ವರ್ಷದವರೆಗೆ ಬೆಳೆಸುವುದು ತುಂಬಾ ಕಷ್ಟ ಎಂದರು.

ಸಾಮಾಜಿಕವಾಗಿ ಮುಂದುವರೆಯ ಬೇಕಾದರೆ ಸಂಘ ಸಂಸ್ಥೆಯಲ್ಲಿ ಸಂಘಟಿಕರಾಗಬೇಕಾಗುತ್ತದೆ ಎಂದು ಶಂಕರ್ ಶೆಟ್ಟಿ ನುಡಿದರು.

ಮಹಿಳಾ ವಿಭಾಗದ ಸದಸ್ಯೆಯರು ಉದ್ಘಾಟನಾ ಗೀತೆ ಮತ್ತು ಸ್ವಾಗತ ಗೀತೆಯನ್ನಾಡಿದರು. ಸಂಘದ ಮಾಜಿ ಅಧ್ಯಕ್ಷ, ವಜ್ರ ಮಹೋತ್ಸವ ಸಮಿತಿ ಕಾರ್ಯಧ್ಯಕ್ಷ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಗೌರವ ಕೋಶಾಧಿಕಾರಿ ವಿಶಾಲಾಕ್ಷಿ ಉಳುವಾರ, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಮೀನಾ ಬಿ.ಕಾಳಾವರ್, ವಾಣಿ ಶೆಟ್ಟಿ, ವನಿತಾ ಪಾಲನ್ ಅತಿಥಿüಗಳನ್ನು ಪರಿಚಯಿಸಿದರು. ಸಂಘದ ಮಾಜಿ ಅಧ್ಯಕ್ಷರುಗಳಾದ ಜಿ.ಟಿ ಆಚಾರ್ಯ, ಪಯ್ಯಾರು ರಮೇಶ್ ಶೆಟ್ಟಿ ಅತಿಥಿüಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಸುಮಿತ್ರ ಆರ್.ಕುಂದರ್ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಜಯಕರ್ ಡಿ.ಪೂಜಾರಿ ಕೃತಜ್ಞತೆ ಸಮರ್ಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಮಿತಾ ಕಲಾಮಂದಿರ ವಿೂರಾರೋಡ್ ಇದರ ಕಲಾವಿದರು ನೃತ್ಯ ವೈಭವವನ್ನು ಮತ್ತು ಗೋರೆಗಾಂವ್ ಕರ್ನಾಟಕ ಸಂಘ ಹಾಗೂ ಮಹಾನಗರದ ವಿವಿಧ ಸಂಸ್ಥೆಗಳ ಕಲಾವಿದರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಸುಗುಣಾ ಎಸ್.ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here