Friday 19th, April 2024
canara news

ಕನ್ನಡ ಸಂಘ ಮುಂಬಯಿ ಸಂಸ್ಥೆಯ ಮಹಿಳಾ ವಿಭಾಗದ ಸ್ನೇಹ ಸಮ್ಮಿಲನ-ನೃತ್ಯ ಸಂಭ್ರಮ

Published On : 08 Mar 2019


ಮಹಿಳೆ ಸುಶಿಕ್ಷಿತರಾದರೆ ಸಮಾಜವೇ ಸುರಕ್ಷಿತ: ಸವಿತಾ ನಾಯಕ್  

(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಮಾ.05: ಕನ್ನಡ ಸಂಘ ಮುಂಬಯಿ ಇದರ ಮಹಿಳಾ ವಿಭಾಗವು ತನ್ನ ವಾರ್ಷಿಕ ಸ್ನೇಹ ಸಮ್ಮಿಲನವನ್ನು ನೃತ್ಯ ಸಂಭ್ರಮದೊಂದಿಗೆ ಸಂಭ್ರಮ ಸಡಗರದಿಂದ ಆಚರಿಸಿತು.

ಮಾಟುಂಗ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್‍ನ ಸಭಾಗೃಹದಲ್ಲಿ ಸಂಘದ ಉಪಾಧ್ಯಕ್ಷ ಡಾ| ಎಸ್.ಕೆ ಭವಾನಿ ಅಧ್ಯಕ್ಷತೆಯಲ್ಲಿ ಜರುಗಿಸಲಾಗಿದ್ದು ಮುಖ್ಯ ಅತಿಥಿüಯಾಗಿ ಸಂಘಟಕಿ, ಸಮಾಜ ಸೇವಕಿ ಸವಿತಾ ನಾಯಕ್ ವಾಶಿ, ಗೌರವ ಅತಿಥಿüಗಳಾಗಿ ಸಂಘದ ಕಟ್ಟಡ ಸಮಿತಿ ಕಾಯಾಧ್ಯಕ್ಷ ಕಮಲಾಕ್ಷ ಸರಾಫ್ ಉಪಸ್ಥಿತರಿದ್ದರು.

ಸವಿತಾ ನಾಯಕ್ ಮಾತನಾಡಿ ಸಂಘದ ಬೆಳವಣಿಗೆಗೆ ಒಗ್ಗಟ್ಟು ಅಗತ್ಯ, ತಮ್ಮತಮ್ಮ ಸಮಯವನ್ನು ನೀಡಿ ಸಂಘವನ್ನು ಬೆಳೆಸಬೇಕು. ಮಹಿಳೆಯರು ಸುಶಿಕ್ಷಿತರಾದರೆ ವಿಶ್ವವೇ ಸುರಕ್ಷಿತ. ಆದುದರಿಂದ ನಾರಿಯರು ಮನೆಮಂದಿ ಜೊತೆಗೆ ಸಮಾಜದ ಸ್ವಸ್ಥ್ಯ ಕಡೆಗೂ ಗಮನ ಹರಿಸಬೇಕು.ತಾವು ಅಬಲೆಯರು ಎಂದೆಣಿಸದೆ ಸಾಧನೆ ಮೂಲಕ ಸಬಲೆಯರಾಗಬೇಕು ಎಂದು ಹಿತವಚನ ನುಡಿದರು.

ಡಾ| ಭವಾನಿ ಅಧ್ಯಕ್ಷೀಯ ಭಾಷಣಗೈದು ಕನ್ನಡ ಸಂಘದ ಇತಿಹಾಸವನ್ನು ಮತ್ತು ಇಂದಿನ ದೃಷ್ಟಾಂತವನ್ನು ವಿವರಿಸಿ Àಮಾಜವನ್ನು ಅರಿಯುವ ಅಗತ್ಯ ಸ್ತ್ರೀಯರಿಗಿದೆ. ಮಹಿಳೆ ತನ್ನನ್ನು ತಾನು ಗುರುತಿಸಿ ಕೊಂಡಾಗಲೇ ತನ್ನ ಸ್ಥಾನಮಾನವನ್ನು ಪಡೆಯಲು ಸಾಧ್ಯವಾಗುವುದು. ಸದ್ಯ ಸಮಾಜದಲ್ಲಿ ಮಹಿಳೆಯರು ಪುರುಷ ಪ್ರಧಾನರಾಗಿ ಮುನ್ನಡೆಯುತ್ತಿದ್ದು ಅದನ್ನು ಉಳಿಸಿ ಬೆಳೆಸಲು ಪೂರೈಸಲು ಮಹಿಳಾ ಶÀಕ್ತಿಯು ಶ್ರಮಿಸಬೇಕು ಎಂದರು.

ಕಮಲಾಕ್ಷ ಸರಾಫ್ ಮಾತನಾಡಿ ಸಂಘದ ನೂತನ ಕಟ್ಟಡದ ಯೋಜನೆ ಶೀಘ್ರವೇ ಸಿದ್ಧಿಗೊಳ್ಳುವಂತೆ ಎಲ್ಲರೂ ಶ್ರಮಿಸೋಣ ಎನ್ನುತ್ತಾ ತನುಮನಧನದಿಂದ ಸಹಕರಿಸುವಂತೆ ಕೋರಿದರು.

ಮಹಿಳಾ ವಿಭಾಗಧ್ಯಕ್ಷೆ ರಜನಿ ವಿ.ಪೈ ಸ್ವಾಗತಿಸಿ ಪ್ರಸ್ತಾವನೆಗೈದು ಸದ್ಯ ಸ್ತ್ರೀಯರ ಭಾವನೆ ಮನಸ್ಸು ಗಳನ್ನು ಅರ್ಥೈಸುವ ಜವಾಬ್ದಾರಿ ಪುರುಷರು ಮಾಡುತ್ತಿದ್ದು ಇದನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರವೂ ಮಹತ್ತರದ್ದಾಗಿದೆ. ಇಂತಹ ಸ್ನೇಹ ಮಿಲನಗಳಿಂದ ಮಹಿಳೆ-ಪುರುಷರಲ್ಲಿನ ಸಮಾನತೆ, ಮಹಿಳಾ ಪ್ರಧಾನ ಸಮಾಜ ನಿರ್ಮಾಣ ಸಾಧ್ಯ ಎಂದರು.


ಸಂಘದ ಪದಾಧಿರಿಗಳಾದ ಸತೀಶ್ ಎನ್.ಬಂಗೇರ, ಸೋಮನಾಥ್ ಕರ್ಕೇರ, ಸುಧಾಕರ್ ಸಿ.ಪೂಜಾರಿ, ವಾಚನಾಲಯದ ಮುಖ್ಯಸ್ಥ ಎಸ್.ಕೆ ಪದ್ಮನಾಭ, ಸಂಘದ ಕಾರ್ಯಕಾರಿ ಸಮಿತಿಯ ನಾರಾಯಣ್ ರಾವ್, ಸಂಧ್ಯಾ ಪ್ರಭು, ಮಾಲತಿ ಆಚಾರ್ಯ ಸೇರಿದಂತೆ ಸದಸ್ಯರನೇಕರು, ಕನ್ನಡ ಕಲಾಭಿಮಾನಿಗಳು, ದಾನಿಗಳು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಅಂಗವಾಗಿ ಆಯೋಜಿಸಿದ್ದ ನೂಪುರ ಅಕಾಡೆಮಿಯ ಕಲಾವಿದರು, ಸಂಧ್ಯಾ ಅಜಿತ್ ಕಾಮತ್ ಮತ್ತು ತಂಡದವರು ನೃತ್ಯ ಸಂಭ್ರಮ, ಸುಧಾ ಸಂಗೀತ ಸಂಸ್ಥೆಯ ಸಂಚಾಲಕಿ ಶ್ಯಾಮಲಾ ರಾಧೇಶ್ ತಂಡವು ಗೀತೆಗಳನ್ನು ಹಾಗೂ ಕವಿಯತ್ರಿ, ಹಾಸ್ಯ ಕವಿಗೋಷ್ಠಿ ಲಲಿತಾ ಅಂಗಡಿ ಪ್ರಸ್ತುತ ಪಡಿಸಿದರು. ಪ್ರಫುಲ್ಲಾ ರಾವ್ ಅತಿಥಿüಗಳ ಪರಿಚಯಿಸಿದರು. ಉಪ ಕಾರ್ಯಾಧ್ಯಕ್ಷೆ ನರ್ಮದಾ ಕಿಣಿ ಕಾರ್ಯಕ್ರಮ ನಿರೂಪಿಸಿದÀರು. ಕಾರ್ಯಕಾರಿ ಸಮಿತಿ ಸದಸ್ಯೆ ಸುಧಾ ಜಿ.ಪೈ ವಂದನಾರ್ಪಣೆ ಗೈದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here