Friday 19th, April 2024
canara news

ಬಿಲ್ಲವರ ಅಸೋಸಿಯೇಶನ್‍ನ ಮಹಿಳಾ ವಿಭಾಗ ಸಂಭ್ರಮಿಸಿದ ವಿಶ್ವ ಮಹಿಳಾ ದಿನಾಚರಣೆ

Published On : 09 Mar 2019   |  Reported By : Rons Bantwal


ಶ್ಲಾಘನೆಯಿಂದ ಬದುಕು ಬದಲಾವಣೆ ಸಾಧ್ಯ : ಡಾ| ಅಮೂಲ್ಯ ನಾಗರಾಜ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.05: ಮತ್ತೊಬ್ಬರನ್ನು ಶ್ಲಾಘನೆ ಮಾಡಿ ಅವರ ಬದುಕನ್ನೇ ಬದಲಾಯಿಸಬಹುದು. ಶ್ಲಾಘನೆಯಿಂದ ಪರಸ್ಪರ ಸಮೃದ್ಧಿ ಬದುಕು ಸಾಧ್ಯವಾಗುವುದು. ಪ್ರತೀಯೊಬ್ಬರು ಪರಸ್ಪರ ಗೌರವಿಸಿದಾಗ ಸಿಗುವ ಖುಷಿಯೇ ಒಂದು ಬೇರೆಯೇ ಆಗಿರುತ್ತದೆ. ನಾವು ಯಾವಾಗಲೂ ಮತ್ತೊಬ್ಬರಿಗೆ ಅಗತ್ಯವಿರುವುದನ್ನು ತಿಳಿದು ಅವರನ್ನು ಅರ್ಥ ಮಾಡಿ ಕೊಳ್ಳುವುದು ಇಂದಿನ ಅಗತ್ಯವಾಗಿದೆ. ಖಿನ್ನತೆಮುಕ್ತ ಮಾತುಗಳಿಂದ ದೂರವಿದ್ದು ಸದಾ ಧನಾತ್ಮಕ ಚಿಂತನೆಯನ್ನು ಮೈಗೂಡಿಸಿ ಬಾಳುವುದರಿಂದ ಎಲ್ಲರ ಬದುಕು ಕೂಡಾ ಸಂಮೃದ್ಧಿ, ನೆಮ್ಮದಿಯಿಂದ ಫಲಿತಗೊಳ್ಳುವುದು. ಮಹಿಳೆಯರು ಮಾನಸಿಕವಾಗಿ ಬಲಯುತರಾಗಿ ತಮ್ಮ ಪತಿ-ಮಕ್ಕಳನ್ನು ವಿಶ್ವಾಸಕ್ಕೆ ಪಡೆದು ಕೊಂಡಾಗಲೇ ಸಂಸಾರ ಸುಂದರವಾಗುವುದು ಎಂದು ಮಹಾನಗರದ ಹೆಸರಾಂತ ಮಹಿಳಾ, ಮಕ್ಕಳ ಮತ್ತು ಮನೋವೈಜ್ಞೆ ಡಾ| ಅಮೂಲ್ಯ ನಾಗರಾಜ್ ತಿಳಿಸಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗವು ಇಂದಿಲ್ಲಿ ಶುಕ್ರವಾರ ಸಂಜೆ ಸಾಂತಕ್ರೂಜ್‍ನ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಿದ್ದು ಡಾ| ಅಮೂಲ್ಯ ಮುಖ್ಯ ಅತಿಥಿüಯಾಗಿದ್ದು ದೀಪ ಪ್ರಜ್ವಲಿಸಿ ಸಮಾರಂಭ ಉದ್ಘಾಟಿಸಿ ಡಾ| ಅಮೂಲ್ಯ ಮಾತನಾಡಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅವರ ಅಧ್ಯಕ್ಷತೆ ಹಾಗೂ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಜಯಂತಿ ವಿ.ಉಳ್ಳಾಲ್ ಸಾರಥ್ಯದಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ಗೌರವ ಅತಿಥಿüಗಳಾಗಿ ಕಾಂತಿವರ್ಧಕ ತಜ್ಞೆ ಡಾ| ಅವನಿ ವಶಿಷ್ಠ ಮನಿಯಾರ್, ಸಮಾಜ ಸೇವಕಿ, ಪ್ರಾಣಿಪ್ರಿಯೆ ಸುಮಿತ್ರ ಮೂಡಬಿದ್ರಿ, ಸೆಸೆನ್ಸ್ ಕೋರ್ಟ್‍ನ ವಕೀಲೆ ನ್ಯಾ| ಸೌಮ್ಯ ಸಿ.ಪೂಜಾರಿ ವೇದಿಕೆಯಲ್ಲಿದ್ದರು.

ಸಮಾರಂಭದಲ್ಲಿ ಕೊಡುಗೈದಾನಿ ಮೋಹಿನಿ ವಿ.ಆರ್ ಕೋಟ್ಯಾನ್ ಇವರಿಗೆ ಕುಂಕುಮ, ತಿಲಕಹಚ್ಚಿ ಮಲ್ಲಿಗೆ, ಪೇಟ ತೊಡಿಸಿ, ಶಾಲು ಹೊದಿಸಿ, ಫಲಪುಷ್ಫ, ಸ್ಮರಣಿಕೆಯನ್ನಿತ್ತು ಸನ್ಮಾನಿಸಿದರು ಮತ್ತು ರಾಷ್ಟ್ರೀಯ ಕ್ರೀಡಾ ರಂಗದ ಮಹಿಳಾ ಸಾಧಕಿ ಸುರೇಖಾ ಎಸ್.ದೇವಾಡಿಗ ಇವರಿಗೆ ಸಾಧಕ ಗೌರವ ಪ್ರದಾನಿಸಿ, ಮಹಿಳಾ ವಿಭಾಗದ ಸ್ಥಾಪಕಾಧ್ಯಕ್ಷೆ ವಸಂತಿ ಸಾಲ್ಯಾಣ್ಕರ್, ಹಾಗೂ ಮಹಿಳಾ ವಿಭಾಗದ ಮಾಜಿ ಉಪ ಕಾರ್ಯಾಧ್ಯಕ್ಷೆ ಶ್ರೀಮಂತಿ ಎಸ್.ಪೂಜಾರಿ, ದೀಪ್ತಿ ದಿನೇಶ್ ಸುವರ್ಣ ಇವರನ್ನು ಅಂತೆಯೇ ಕೇರ್ ಫಂಡ್‍ಗೆ ದೇಣಿಗೆ ನೀಡಿದ ದಾನಿಗಳನ್ನೂ ಅತಿಥಿüಗಳು ಸತ್ಕರಿಸಿ ಅಭಿನಂದಿಸಿದರು.

ಸಾಧನೆಗಳೆಂಬುವುದು ಯಾವ ಮಹಿಳೆಗೂ ಕಷ್ಟಕರವಲ್ಲ. ಆದರೆ ಪೆÇ್ರೀತ್ಸಾಹ, ಅವಕಾಶ ವಂಚಿತ ಮಹಿಳೆ ಸಾಧನೆಯ ಗುರಿ ತಲುಪಲು ಅಸಾಧ್ಯವಾಗುವುದು. ಆದರೂ ಛಲವಾದಿ ಸ್ತ್ರೀಯರಿಗೆ ಎಲ್ಲವೂ ಸುಲಭವೇ ಸರಿ. ನಾರಿಯರು ಸದಾ ರೂಪದರ್ಶಿ, ಸುಂದರರೆಣಿಸುವುದು ಪ್ರಾಕೃತಿಕ ನಿಯಾಮ ಆದರೆ ಆ ನೆಪದದಲ್ಲಿ ಸೌಂದರ್ಯತೆ ಕಳೆದು ಕೊಳ್ಳುವಂತಾಗ ಬಾರದು. ಮನೆಮಂದಿಯ ಆರೋಗ್ಯದ ಕಾಳಜಿ ಜೊತೆ ತನ್ನ ಬದುಕನ್ನೂ ಸುಂದರವಾಗಿಸುವ ಜವಾಬ್ದಾರಿ ಮಹಿಳೆಯದ್ದಾಗಿದೆ ಎಂದು ಡಾ| ಮನಿಯಾರ್ ತಿಳಿಸಿದರು

ಸುಮಿತ್ರ ಮೂಡಬಿದ್ರಿ ಮಾತನಾಡಿ ಮಾನವ ಜೀವನ ಜೊತೆಜೊತೆಗೆ ಪ್ರಾಣಿಪಕ್ಷಿಗಳು, ಪರಿಸರದ ಬಗ್ಗೆಯೂ ಕಾಳಜಿ ವಹಿಸಬೇಕು. ಇವೆಲ್ಲವುಗಳ ಜಾಗೃತಿ ಮೂಡಿಸಿ ಸ್ವತಃ ಅನುಭವಿಸಿ ಬದುಕನ್ನು ಭವ್ಯವಾಗಿಸಿ ಎಂದರು.

ಪರಸ್ಪರ ಒಂದಾದಾಗ ಎಲ್ಲರೂ ಬಹಳಷ್ಟು ಕಲಿಯಲು ಸಿಗುತ್ತದೆ. ಇಂತಹ ಸಡಗರಗಳಲ್ಲಿ ವಯಸ್ಸಿನ ಅಂತರ, ಮೇಲುಕೀಳು ಎಂಬ ತಾರತಮ್ಯ ಕಾಣದೆ ಪರಸ್ಪರ ಜೊತೆಯಾಗಿ ಒಗ್ಗೂಡಬೇಕು. ಆವಾಗಲೇ ಸಭಿಕರು ಒಂದಲ್ಲ ಒಂದು ದಿನ ವೇದಿಕೆಯಲ್ಲಿ ಕಂಗೋಳಿಸಲು ಸಾಧ್ಯವಾಗುವುದು. ಅದಕ್ಕಾಗಿ ಪ್ರತೀಯೊಬ್ಬ ರೂ ಸಾಧನೆಯತ್ತ ಚಿಂತಿಸಿ ಮುನ್ನಡೆಯಬೇಕು. ನಮ್ಮ ಮಕ್ಕಳಲ್ಲಿ ನಮ್ಮ ತುಳುನಾಡ ಸಂಸ್ಕೃತಿ, ದೈವಾರಾಧನೆ ಇತ್ಯಾದಿಗಳನ್ನು ಕಲಿಸುವ ಜವಾಬ್ದಾರಿ ಮಹಿಳೆಯದ್ದು. ಆವಾಗಲೇ ನಮ್ಮ ಮಕ್ಕಳು ಪರವೂರಿನಲ್ಲಿ ಮೆರೆದರೂ ತವರೂರನ್ನು ಮರೆಯಲಾರರು ಎಂದು ಸೌಮ್ಯ ಪೂಜಾರಿ ನುಡಿದರು.

ಚಂದ್ರಶೇಖರ ಪೂಜಾರಿ ಅಧ್ಯಕ್ಷೀಯ ನುಡಿಗಳನ್ನಾಡಿ ಮಹಿಳೆಯರು ತ್ಯಾಗಮಯಿಯಾಗಿದ್ದಾರೆ. ಸಮಸ್ಯೆ ಕಷ್ಟಗಳು ಮಾನವನಿಗೆ ಇದ್ದದ್ದೇ ಆದರೆ ಮಹಿಳೆಯರು ಸದಾ ನಲಿದು ಕುಣಿದು ಇದ್ದಾಗ ಸಂತಸ, ಸಂಭ್ರಮ ಆವರಿಸಿ ಸಮಾಜವೇ ಆರೋಗ್ಯದಾಯವಾಗಿರುತ್ತದೆ. ಆದುದರಿಂದ ಸ್ತ್ರೀಯರನ್ನು ಗೌರವವಾಗಿ ಕಾಣುವುದು ಪ್ರತೀಯೊಬ್ಬರ ಪರಮ ಕರ್ತವ್ಯವಾಗಿದೆ ಎಂದರು.

ಕು| ಚಿತ್ರಾ ಕೋಟ್ಯಾನ್ ಪ್ರಾರ್ಥನೆಯನ್ನಾಡಿದರು. ಉಪಕಾರ್ಯಾಧ್ಯಕ್ಷೆ ಪ್ರಭಾ ಕೆ.ಬಂಗೇರ ಸ್ವಾಗತಿಸಿ ಪುರಸ್ಕೃತರನ್ನು ಪರಿಚಯಿಸಿದರು. ಯಶೋಧ ಎನ್.ಟಿ ಪೂಜಾರಿ, ವನಿತಾ ಎ.ಕುಕ್ಯಾನ್, ಸಬಿತಾ ಜಿ.ಪೂಜಾರಿ, ಬಬಿತಾ ಜೆ. ಕೋಟ್ಯಾನ್ ಅತಿಥಿüಗಳನ್ನು ಪರಿಚಯಿಸಿದರು. ಉಪಕಾರ್ಯಾಧ್ಯಕ್ಷೆ ಗಿರಿಜಾ ಚಂದ್ರಶೇಖರ್, ರೂಪಾಂಜಲಿ ಧನಂಜಯ್ ಕೋಟ್ಯಾನ್, ವೀಣಾ ದಯಾನಂದ್ ಪೂಜಾರಿ, ಕಮೋಲಿಕ ಹರೀಶ್ ಅವಿೂನ್ ಅತಿಥಿüಗಳನ್ನು ಗೌರವಿಸಿದರು. ಮಹಿಳಾ ಗೌರವ ಕಾರ್ಯದರ್ಶಿ ಸುಮಿತ್ರಾ ಎಸ್.ಬಂಗೇರ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದಲ್ಲಿ ಮಹಿಳಾ ವಿಭಾಗದ ಕಾರ್ಯಕಾರಿ ಸಮಿತಿ, ವಿಶೇಷ ಆಮಂತ್ರಿತ ಸದಸ್ಯೆಯರು ಸೇರಿದತೆ ನೂರಾರು ಮಹಿಳೆಯರು ಉಪಸ್ಥಿತರಿದ್ದು ಅಸೋಸಿಯೇಶನ್‍ನ ಕೇಂದ್ರ ಕಛೇರಿ ಮತ್ತು ಸ್ಥಳೀಯ ಕಛೇರಿಯ ಮಹಿಳೆಯರು ಮತ್ತು ಮಕ್ಕಳು ನೃತ್ಯ ವೈಭವ, ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಸಾಂಸ್ಕøತಿಕ ಕಾರ್ಯಕ್ರಮವಾಗಿ ಜೊತೆ ಕಾರ್ಯದರ್ಶಿಗಳಾದ ಜಯಂತಿ ಎಸ್.ಕೋಟ್ಯಾನ್ ಮತ್ತು ಕುಸುಮಾ ಸಿ.ಅವಿೂನ್ ಸಾಂಸ್ಕøತಿಕ ಕಾರ್ಯಕ್ರಮ ನಿರ್ವಹಿಸಿ ಧನ್ಯವದಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here