Saturday 20th, April 2024
canara news

ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಸಂಸ್ಥೆಯಿಂದ ನಡೆಸಲ್ಪಟ್ಟ ಮಾಹಿತಿ ಕಾರ್ಯಗಾರ

Published On : 11 Mar 2019   |  Reported By : Rons Bantwal


ಮಧ್ಯಮ ಉದ್ಯಮಗಳಿಂದಲೇ ರಾಷ್ಟ್ರ ಸದೃಢವಾಗಿದೆ : ಅಡ್ವೊಕೇಟ್ ಎಂ.ವಿ ಕಿಣಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.09: ಪ್ರಸ್ತುತ ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗವಕಾಶಗಳು ವಿಪುಲವಾಗಿದ್ದು ರಾಷ್ಟ್ರದ ಹಣಕಾಸು ವ್ಯವಸ್ಥೆಗೆ ಪೂರಕವಾಗಿವೆ. ಜಾಗತಿಕವಾಗಿ ಬೆಳೆಸಿಕೊಂಡ ರಾಷ್ಟ್ರವು ಆಥಿರ್sಕ ಮತ್ತು ಇತರ ಸೌಲತ್ತುಗಳನ್ನು ನೀಡಿ ಉದ್ಯಮಿಗಳನ್ನು ಪೆÇ್ರೀತ್ಸಹಿಸುತ್ತಿರುವುದು ಸ್ತುತ್ಯರ್ಹ. ಸದ್ಯ ಮೂಲ ಬಂಡವಾಳ ಇಲ್ಲದೇ ವ್ಯವಹಾರ ನಡೆಸುವುದೂ ಸರಳವಾಗಿದ್ದು ಆಧುನಿಕ ತಾಂತ್ರಿಕತೆಯಿಂದಲೂ ಸೇವಾ ಸೌಲತ್ತುಗಳು ಸುಲಭವಾಗಿ ಲಭ್ಯವಿದೆ. ರಾಷ್ಟ್ರದ 70% ಶೇಕಡಾ ಜನತೆ ಕೃಷಿದ್ಯೋಮವನ್ನು ಹೊಂದಿರುವ ಕಾರಣ ಕಿರು ಉದ್ಯಮಗಳನ್ನೇ ಹೊಂದಿ ಜನತೆ ಜೀವನ ಸಾಗಿಸುತ್ತಿದ್ದಾರೆ. ಇದು ರಾಷ್ಟ್ರದ ಆಥಿರ್üಕ ಉನ್ನತಿಗೂ ಆಧಾರವಾಗಿದೆ. ಆದುದರಿಂದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಂದಲೇ ರಾಷ್ಟ್ರ ಸದೃಢವಾಗಿದೆ. ಒಟ್ಟಾರೆ ರಾಷ್ಟ್ರದ ಸರ್ವೋನ್ನತ್ತಿಗೆ ಸಣ್ಣ ಸಣ್ಣ ಕೈಗೋರಿಕೋದ್ಯಮ ಪೂರಕವಾಗಿದ್ದು ಇದನ್ನು ಉನ್ನತಿಯತ್ತ ಮುನ್ನಡೆಸಲು ಯುವ ಜನಾಂಗಕ್ಕೆ ಉದ್ಯಮದ ಸೂಕ್ತ ಪೆÇ್ರೀತ್ಸಾಹದ ಅಗತ್ಯವಿದೆ. ಎಂದು ಎಂ.ವಿ ಕಿಣಿ ಕಂಪೆನಿ ಅಡ್ವೊಕೇಟ್ಸ್ ಎಂಡ್ ಸೊಲಿಸಿಟರ್ಸ್ ಸಂಸ್ಥೆಯ ಮುಖ್ಯಸ್ಥ, ಹಿರಿಯ ವಕೀಲ ನ್ಯಾಯವಾದಿ ಎಂ.ವಿ ಕಿಣಿ ತಿಳಿಸಿದರು.

ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಇಂದಿಲ್ಲಿ ಶನಿವಾರ ಬೆಳಿಗ್ಗೆ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ (ಬಿಸಿಸಿಐ) ಸಂಸ್ಥೆಯು ಹೆಚ್‍ಡಿಎಫ್‍ಸಿ ಬ್ಯಾಂಕ್ ಸಹಯೋಗದಲ್ಲಿ ಬಿಸಿಸಿಐ ಅಧ್ಯಕ್ಷ ಎನ್.ಟಿ ಪೂಜಾರಿ ಘನಾಧ್ಯಕ್ಷತೆಯಲ್ಲಿ ಸಂಸ್ಥೆಯು ದಿನಪೂರ್ತಿಯಾಗಿ ಆಯೋಜಿಸಿದ್ದ ಎಂಎಸ್‍ಎಂಇ (ಮೈಕ್ರೊ ಸ್ಮಾಲ್ ಎಂಡ್ ವಿೂಡಿಯಂ ಎಂಟರ್‍ಪ್ರೈಸಸ್ ಕಾಂಕ್ಲೇವ್) ಮಾಹಿತಿ ಕಾರ್ಯಗಾರ ಹಾಗೂ ಸಮಾರಂಭ ಉದ್ಘಾಟಿಸಿ ನ್ಯಾಯವಾದಿ ಕಿಣಿ ಮಾತನಾಡಿದರು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಹಿರಿಯ ಉದ್ಯಮಿ, ಭಾರತ್ ಬ್ಯಾಂಕ್‍ನ ನಿರ್ದೇಶಕ ಎಲ್.ವಿ ಅವಿೂನ್, ಅತಿಥಿü ಅಭ್ಯಾಗತರಾಗಿ ಡಿಎಕ್ಸ್‍ಸಿ ಟೆಕ್ನಾಲಜಿ ಸಂಸ್ಥೆಯ ಆಡಳಿತ ನಿರ್ದೇಶಕ ಡಾ| ಶ್ರೀಕಾಂತ್ ಕೆ. ಅರಿಮನಿಂತ್ತಾಯ, ಸೆಂಟ್ರಲ್ ಬ್ಯಾಂಕ್ ಆಫ್ ಒಮಾನ್ ಇದರ ಉನ್ನತಾಧಿಕಾರಿ ಡಾ| ಕೆ.ರಾಜೇಶ್ ನಾಯಕ್, ಮಂಗಳೂರುನ ಲೆಕ್ಕ ಪರಿಶೋಧಕ ಸಿಎ| ಎಸ್.ಎಸ್ ನಾಯಕ್, ಹೆಚ್‍ಡಿಎಫ್‍ಸಿ ಬ್ಯಾಂಕ್‍ನ ಉನ್ನತಾಧಿಕಾರಿ ಆದಿಲೆ ಸುಮರಿವಾಲಾ ಉಪಸ್ಥಿತರಿದ್ದರು.

ಸದ್ಯ ಉದ್ಯಮಗಳು ಯುವ ಜನತೆಗೆ ಸನ್ನಿಹಿತವಾಗಿದೆ. ಯುವಜನತೆಯಲ್ಲಿ ಆತ್ಮಸ್ಥೈರ್ಯ ತುಂಬಿ ಸೂಕ್ತ ಮಾರ್ಗದರ್ಶನ ನೀಡಿದರೆ ಭಾವೀ ಯುವಜನತೆ ಇನ್ನಷ್ಟು ಉದ್ಯಮಶೀಲರಾಗಲು ಸಾಧ್ಯ. ವಿದ್ಯಾವಂತರಿಗೆ ಸರಕಾರಿ, ಹಣಕಾಸು ವ್ಯವಸ್ಥೆಯಂತಹ ಯೋಗದಾನದ ಜೊತೆ ಉದ್ಯಮದತ್ತ ಆಕರ್ಷಿಸುವ ಕಾಯಕ ಬಿಸಿಸಿಐ ಅಂತಹ ಸಂಸ್ಥೆಗಳು ಮಾಡಬೇಕು. ಆ ಮೂಲಕ ಭವಿಷ್ಯತ್ತಿನಲ್ಲಿ ಯುವಜನತೆ ಪಗಾರ ಪಡೆಯುವ ಬದಲು ಸಂಬಳ ನೀಡುವಂತವರನ್ನಾಗಿಸಲು ಶ್ರಮಿಸಬೇಕು ಎಂದು ಎಲ್.ವಿ ಅಮೀನ್ ಸಲಹಿದರು.

ಡಾ| ಶ್ರೀಕಾಂತ್ ಮಾತನಾಡಿ ವ್ಯವಹಾರ ಜ್ಞಾನವುಳ್ಳವರಿಂದ ಉದ್ಯಮ ಶೀಲತೆ ಸಾಧ್ಯಗಿದ್ದು, ಆಧುನಿಕ ಉದ್ಯಮಕ್ಕೆ ಸೂಕ್ಷ್ಮತೆ ಮತ್ತು ಚುರುಕುತನ ಮತ್ತು ಅರಿವಿನ ಕೀಲಿಕೈ ಅತ್ಯವಶ್ಯವಾಗಿದೆ. ಸುಶಿಕ್ಷಿತ ಜನತೆ ಸ್ವಉದ್ಯಮಿಗಳಾಗುವುದ ನ್ನೇ ಬಯಸ್ತುತ್ತಾ ಭವಿಷ್ಯತ್ತಿನ ರಚನೆಯ ಬಗ್ಗೆ ಯೋಚಿಸುತ್ತಿದೆ. ಅವರಲ್ಲಿ ಚುರುಕುತನದ ಉದ್ಯೋಗ ವ್ಯವಸ್ಥೆ ಮತ್ತು ಆಧುನಿಕ ಬದಲಾವಣೆಗಳ ಉದ್ಯಮವನ್ನು ಮೂಡಿಸಬೇಕು. ಅವೆಲ್ಲವೂ ಇಂತಹ ಮಾಹಿತಿ ಕಾರ್ಯಗಾರದಿಂದ ಸಾಧ್ಯ ಎಂದರು.

ಪಿಡಬ್ಲೂ ್ಯಸಿ ಇಂಡಿಯಾ ಸಂಸ್ಥೆಯ ಅಮಿತ್ ಖನ್ನಾ, ವರ್ಲ್ಡ್‍ವೈಡ್ ಬಿಸ್ನೆಸ್ ಹೌಸ್ ಒಮನ್ ಇದರ ಆಡಳಿತ ನಿರ್ದೇಶಕ ಡಾ| ಸಿ.ಕೆ ಅಂಚನ್, ಜಸ್ಟೀಸ್ ಕೆ.ಎಸ್ ಹೆಗ್ಡೆ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥ ಡಾ| ಎ.ಪಿ ಆಚಾರ್, ಡಿಜಿಟಲ್ ಟಾಟಾ ಕ್ಯಾಪಿಟಲ್‍ನ ಉಪಾಧ್ಯಕ್ಷ ಕೌಶಿಕ್ ಚಕ್ರಬೊರ್ತಿ ಸಂಪನ್ಮೂಲ ವ್ಯಕ್ತಿಗಳಾಗಿದ್ದು ತಮ ಕ್ಷೇತ್ರದ ಬಗ್ಗೆ ಅರಿವು ಮೂಡಿಸಿದರು. ಮಧ್ಯಂತರದಲ್ಲಿ ಎನ್‍ಎಸ್‍ಐಸಿ ಮತ್ತು ಎಂಎಸ್‍ಎಂಇ ವಿಭಾಗವು ಉದ್ಯಮ ಸಂಬಂಧಿತ ಸಂರಕ್ಷಣಾ ಅಭಿವೃದ್ಧಿ ಬಗ್ಗೆ ಅರಿವು ಮೂಡಿಸಿತು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಯಶೋಧಾ ಎನ್.ಟಿ ಪೂಜಾರಿ, ಪೂಜಾ ಪುರುಷೋತ್ತಮ್, ಬಿಸಿಸಿಐನ ಉಪ ಕಾರ್ಯಾಧ್ಯಕ್ಷ ಡಿ.ಬಿ ಅವಿೂನ್, ಮಹೇಂದ್ರ ಸೂರು ಕರ್ಕೇರ, ನಿರ್ದೇಶಕರುಗಳಾದ ಚಂದಯ ಬಿ.ಕರ್ಕೇರ, ಹರೀಶ್ ಜಿ.ಅವಿೂನ್, ಪುರುಷೋತ್ತಮ ಎಸ್.ಕೋಟ್ಯಾನ್, ಅಶ್ಮಿತ್ ಬಿ.ಕುಳಾಯಿ, ಗಂಗಾಧರ್ ಎನ್.ಅವಿೂನ್ ಕರ್ನಿರೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದು, ಕು| ನಿಖಿತಾ ಎನ್.ಟಿ ಪೂಜಾರಿ ಮತ್ತು ಕು| ಅಂಕಿತಾ ಎನ್.ಟಿ ಪೂಜಾರಿ ಪ್ರಾರ್ಥನೆಯನ್ನಾಡಿದರು. ಹರೀಶ್ ಜಿ.ಅವಿೂನ್ ಕಾರ್ಯಗಾರದ ಮಾಹಿತಿಯನ್ನಿತ್ತರು. ಕು| ದೀಪಾ ರೈ ಕಾರ್ಯಕ್ರಮ ನಿರೂಪಿಸಿದರು. ಬಿಸಿಸಿಐ ಕಾರ್ಯದರ್ಶಿ ನ್ಯಾಯವಾದಿ ಆನಂದ್ ಎಂ. ಪೂಜಾರಿ ಸ್ವಾಗತಿಸಿ ಪ್ರಸ್ತಾವನೆಗೈದÀÀು ವಂದಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here