Friday 19th, April 2024
canara news

ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಸಂಭ್ರಮಿಸಿದ ಸಾಂಸ್ಕೃತಿಕ ಕಲಾಮಹೋತ್ಸವ-2019

Published On : 11 Mar 2019   |  Reported By : Rons Bantwal


ವರ್ಷಗಳು ಹೆಚ್ಚಾದಂತೆ ಸಂಸ್ಥೆಗೆ ಗೌರವ ಹೆಚ್ಚಾಗುತ್ತದೆ.: ಡಾ| ರಾಮದಾಸ ಉಪಾಧ್ಯಾಯ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.09: ಹನ್ನೆರಡು ವರ್ಷದ ಪ್ರೌಢ ಕಲಾವಿದ. ಸಂಸ್ಥೆಗೆ ವರ್ಷ ಹೆಚ್ಚಾದಂತೆ ಗೌರವ ಹೆಚ್ಚು. ಇದು ಮೆಚ್ಚುವಂತದ್ದು. ಯೌವನಕ್ಕೆ ಕಾಲಿಡುವ ಸಂಭ್ರಮ. ರಾಷ್ಟ್ರವನ್ನು ನರೇಂದ್ರ, ಮಹಾರಾಷ್ಟ್ರವನ್ನು ದೇವೆಂದ್ರ, ಕಲಾ ಪರಿಷತ್ತನ್ನು ಸುರೇಂದ್ರ ನಡೆಸುತ್ತಿದ್ದಾರೆ. ಅಂತೆಯೇ ಇಂದ್ರನಿಲ್ಲದೆ ಯಾವುದು ಅಸಾಧ್ಯ ಎಂಬುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿ. ಬೆಳಗುವುದಕ್ಕೆ ಇಂದ್ರನಂತ ವರ ಅಗತ್ಯವಿದೆ. ಇಂತಹ ಗಣ್ಯರ ಮುನ್ನಡೆಯಿಂದ ಈ ಸಂಸ್ಥೆ ಕಾರ್ಯ ನೇರವೇರಿಸುತ್ತಿದೆ. ಶ್ರೀ ಕೃಷ್ಣನ ಅನುಗ್ರಹದಿಂದ ಸಂಸ್ಥೆ ಬೆಳೆದು ಶತಮಾನ ಕಾಣಲಿ ಎಂದು ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯ ಆಡಳಿತಾಧಿಕಾರಿ ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಸಂಭ್ರಮಿಸಿದ ಸಾಂಸ್ಕೃತಿಕ ಕಲಾಮಹೋತ್ಸವ-2019 ಸಮಾರಂಭ ಉದ್ಘಾಟಿಸಿ ಡಾ| ರಾಮದಾಸ ಉಪಾಧ್ಯಾಯ ಮಾತನಾಡಿದರು.

ಪರಿಷತ್ತುನ ಅಧ್ಯಕ್ಷ ಸುರೇಂದ್ರಕುಮಾರ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಫೆÇೀರ್‍ಕಾಸ್ಟ್ ಎಡ್ವರ್‍ಟೈಸಿಂಗ್ ಪ್ರೈ ಲಿ. ಕಾರ್ಯನಿರ್ದೇಶಕ ಗಣೇಶ್ ಶ್ಯಾನ್‍ಬಾಗ್, ಗೌರವ ಅತಿಥಿsಗಳಾಗಿ ಕನ್ನಡ ಸೇವಾ ಸಂಘ ಪೆÇವಾಯಿ ಅಧ್ಯಕ್ಷ ಕರುಣಾಕರ ವಿ.ಶೆಟ್ಟಿ, ಮುಲುಂಡ್ ಫ್ರೇಂಡ್ಸ್ ಅಧ್ಯಕ್ಷ್ ಸುರೇಶ್ ಶೆಟ್ಟಿ ಯೆಯ್ಯಾಡಿ, ಖಾರ್‍ಘರ್ ಕನ್ನಡ ಸಂಘ ಅಧ್ಯಕ್ಷೆ ನಳಿನಾ ಪ್ರಸಾದ್, ಉದ್ಯಮಿ ಹಾಗೂ ಸಮಾಜ ಸೇವಕ ಆರ್.ಕೆ ನಾಯರ್, ರಾಧಾಕೃಷ್ಣ ಆಕಾಡೆಮಿ ಸ್ಥಾಪಕ ನಿರ್ದೇಶಕಿ ಸುಕನ್ಯಾ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದು ಸಾಂದರ್ಭಿಕವಾಗಿ ಮಾತನಾಡಿ ಶುಭಾರೈಸಿದರು.

ಗಣೇಶ್ ಶ್ಯಾನ್‍ಬಾಗ್ ಮಾತನಾಡಿ ನನ್ನನ್ನು ನಿಮ್ಮಂತಹ ಕಲಾವಿದರೊಂದಿಗೆ ಸೇರಿಸಿಕೊಂಡು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವನ್ನು ನೀಡಿದ್ದು ಅತೀವ ಸಂತೋಷ ತಂದು ಕೊಟ್ಟಿದೆ. ಕಲೆಗೆ ಅಂತ್ಯವಿಲ್ಲ, ಆದರೆ ಯುವ ಜನಾಂಗವನ್ನು ಕಲೆಯತ್ತ ಸೇರಿಸಿಕೊಳ್ಳುವ ಕೆಲಸ ನಮ್ಮಿಂದ ಆಗಬೇಕು. ಇವತ್ತು ಮಾಧ್ಯಮ ಮತ್ತು ತಾಂತ್ರಿಕ ವ್ಯವಸ್ಥೆ ಅತೀವ ಮಟ್ಟಕ್ಕೆ ತಲುಪಿದ್ದು, ಆದರ ಸದುಪಯೋಗವನ್ನು ಇಂದಿನ ಕಲಾವಿದರು ಪಡೆದುಕೊಳ್ಳಬೇಕು. ವಿಶೇಷವಾಗಿ ಯುವ ಜನಾಂಗ ಪಡೆದು ಕೊಳ್ಳುವಂತೆ ನಾವೂ ಮಾರ್ಗದರ್ಶಕರಾಗಬೇಕೆಂದು ಹಿತನುಡಿಗಳನ್ನಾಡಿದರು.

ಕನ್ನಡಿಗ ಕಲಾವಿದರ ಪರಿಷತ್ತು ಕಲೆಗೆ ಮತ್ತು ಕಲಾವಿದರಿಗೆ ಪೆÇ್ರೀತ್ಸಾಹ ನೀಡುವುದರ ಜೊತೆಗೆ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಕಲಾವಿದರ ಆರೋಗ್ಯದ ಸಮಸ್ಯೆ, ಮಕ್ಕಳಿಗೆ ಶೈಕ್ಷಣಿಕ ನೆರವು ನೀಡುತ್ತಾ ಇದ್ದೇವೆ. ಇಂದಿನ ಸಮಾರೋಪ ಸಮಾರಂಭದಲ್ಲಿಯೂ ಕಲಾವಿದರಿಗೆ ಧನ ಸಹಾಯ ನೀಡಲಿದ್ದೇವೆ. ಓರ್ವ ವ್ಯಕ್ತಿಗೆ ಮನೆ ಇಲ್ಲದಿದ್ದರೆ ಸಮಾಧಾನದಿಂದ ಇರಲು ಸಾಧ್ಯವಿಲ್ಲ. ಯಾರ ಯಾರ ಮನೆಯಲ್ಲಿ ಅಲೆದಾಡಬೇಕಾಗುತ್ತದೆ. ಅವರ ಅಂಗಲ್ಲಿ ಇರಬೇಕಾಗುತ್ತದೆ. ಪರಿಷತ್ತು ಕೂಡ ವೃಕ್ಷವಾಗಿ ಬೆಳೆಯುತ್ತಾ ಇದೆ, ಆದರೆ ಗಿಡವನ್ನು ಇಲ್ಲಿಂದ ಅಲ್ಲಿಂದ ಕೊಂಡುಹೋಗಬೇಕಾಗುತ್ತದೆ. ಇದಕ್ಕಾಗಿ ಸ್ವಂತ ಕಛೇರಿಯ ಅಗತ್ಯವಿದೆ. ಅದಕ್ಕಾಗಿ ಎಲ್ಲರೂ ಒಂದೂಗೂಡಿ ಸ್ಪಂದಿಸಬೇಕು. ಕಲೆ ಮತ್ತು ಕಲಾವಿದರಿಗೆ ಪೆÇೀತ್ಸಾಹ ನೀಡಿ. ಕನ್ನಡಿಗ ಕಲಾವಿದರ ಪರಿಷತ್ತು ಎಲ್ಲಾ ಕಲೆ ಸಂಸ್ಥೆಗಳಿಗೆ ಮಾತೃ ಸಂಸ್ಥೆಯಾಗಿದೆ. ತಾಯಿಯನ್ನು ಉಳಿಸಿದರೆ ಮಕ್ಕಳು ಒಳ್ಳೆಯರಾಗಿರುತ್ತಾರೆ ಎಂದÀು ಅಧ್ಯಕ್ಷೀಯ ನುಡಿಗಳನ್ನಾಡಿ ಸುರೇಂದ್ರಕುಮಾರ್ ತಿಳಿಸಿದರು.

ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಆರ್.ಕೆ ಶೆಟ್ಟಿ ಪ್ರಾಯೋಜಿತ ಪರಿಷತ್ತು ಕೊಡಮಾಡುವ `ಕಲಾಶ್ರೀ' ಪ್ರಶಸ್ತಿಯನ್ನು ಹಿರಿಯ ಕಲಾವಿದ, ಸಾಹಿತಿ, ಹೆಚ್.ಬಿ ಎಲ್ ರಾವ್ ಅವರಿಗೆ ಉಪಸ್ಥಿತ ಅತಿಥಿüಗಳು ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು

ಅಪರ್ಣಾ ಭಟ್ ಪ್ರಾರ್ಥನೆಯನ್ನಾಡಿದರು. ಉಪಾಧ್ಯಕ್ಷ ಕಮಲಾಕ್ಷ ಜಿ.ಸರಾಫ್ ಸ್ವಾಗತಿಸಿ ಅತಿಥಿsಗಳನ್ನು ಪರಿಚಯಿಸಿ, ಪ್ರಸ್ತಾವನೆಗೈದರು. ಉಪಾಧ್ಯಕ್ಷ ಅರವಿಂದ ಶೆಟ್ಟಿ ಕೊಜಕೊಳಿ, ಗೌ| ಪ್ರ| ಕೋಶಾಧಿಕಾರಿ ಪಿ.ಬಿ ಚಂದ್ರಹಾಸ್, ಜೊತೆ ಕಾರ್ಯದರ್ಶಿ ಚಂದ್ರಾವತಿ ದೇವಾಡಿಗ, ಜೊತೆ ಕೋಶಾಧಿಕಾರಿ ನವೀನ್ ಶೆಟ್ಟಿ ಇನ್ನಬಾಳಿಕೆ, ಸಂಚಾಲಕ ರಮೇಶ್ ಶಿವಪುರ, ಸಂಚಾಲಕಿ ಕುಸುಮ ಸಿ.ಪೂಜಾರಿ, ಮಾಜಿ ಕಾರ್ಯದರ್ಶಿ ರಾಜು ಶ್ರೀಯಾನ್ ನಾವುಂದ ಅತಿಥಿüಗಳಿಗೆ ಪುಷ್ಫಗುಪ್ಚ, ಸ್ಮರಣಿಕೆಗಳನ್ನಿತ್ತು ಗೌರವಿಸಿದರು. ವಿಜಯ ಶೆಟ್ಟಿ ಕುತ್ತೆತ್ತೂರು ಸಭಾ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಬಾಬಾಪ್ರಸಾದ್ ಅರಸ ಕೃತಜ್ಞತೆ ಸಮರ್ಪಿಸಿದರು.

ಸಾಂಸ್ಕೃತಿಕ ಕಲಾಮಹೋತ್ಸವವಾಗಿ ವಿವಿಧ ಕಲಾ ಸಂಸ್ಥೆಗಳು `ನೃತ್ಯಸಂಗಮ' ಮತ್ತು ಕಲಾ ಸೌರಭ ತಂಡದ ನಿರ್ದೇಶಕ ಪದ್ಮನಾಭ ಸಸಿಹಿತ್ಲು ನಿರ್ದೇಶನದಲ್ಲಿ `ಗಾನ ಸಂಭ್ರಮ' ಕಾರ್ಯಕ್ರಮನ್ನು ಹಾಗೂ ಪರಿಷತ್ತುವಿನ ಸದಸ್ಯರು ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದ ರಮೇಶ್ ಶಿವಪುರ ನಿರ್ದೇಶನದಲ್ಲಿ `ತಾಳಮದ್ದಲೆ' ಕನ್ನಡ ನಾಟಕವನ್ನು ಪ್ರದರ್ಶಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಾರಾ ಬಂಗೇರ ನಿರ್ವಹಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here