Saturday 20th, April 2024
canara news

ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಸಂಸ್ಥೆಯಿಂದ ವಾರ್ಷಿಕ ಪ್ರಶಸ್ತಿ ಪ್ರದಾನ

Published On : 12 Mar 2019   |  Reported By : Rons Bantwal


ಡಿಜಿಟಲೈಝೇಶನ್ ಆಯ್ಕೆಯಲ್ಲ ಪ್ರತಿಯೊಬ್ಬರ ಅವಶ್ಯಕತೆ : ಅಶೋಕ್ ಸುವರ್ಣ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.09: ಮಾಹಿತಿ ಕಾರ್ಯಗಾರಗಳು ಸಮಾಜದ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಲಾಭದಾಯಕವಾಗಿದೆ. ಇದರ ಲಾಭವನ್ನು ಸಮಾಜ ಮತ್ತು ಯುವ ಪೀಳಿಗೆ ಪಡೆದಾಗ ಇದು ರಾಷ್ಟ್ರದ ಅಭಿವೃದ್ಧಿಗೂ ಅನುಕೂಲವಾಗಲಿದೆ. ವ್ಯವಹಾರಿಕ ಅಂಕಿಗಳಿಗೆ ಸಂಬಂಧಿತ ಮತ್ತು ಸಂಖ್ಯಾ ಬಲಾಢ್ಯತೆಯು ರಾಷ್ಟ್ರ ಅಭಿವೃದ್ಧಿಯತ್ತ ಅತಿ ವೇಗದಿಂದ ಸಾಗುತ್ತಿದೆ. ಆದುದರಿಂದ ಡಿಜಿಟಲೈಝೇಶನ್ ಆಯ್ಕೆಯಲ್ಲ ಆದು ನಮ್ಮ ಅವಶ್ಯಕತೆ. ಇದು ನಮ್ಮ ಜೀವನದಲ್ಲಿ ಮಾತ್ರವಲ್ಲ ನಮ್ಮ ಉದ್ಯಮ ವ್ಯವಹಾರದಲ್ಲಿ ಪರಿಣಾಮಕಾರಿಯಾಗಿದೆ. ಪ್ರತೀಯೊಂದು ಸಮಾಜದ ಅಭಿವೃದ್ಧಿಗೆ ಬಿಸಿಸಿಐ ಉತ್ತೇಜನ ನೀಡುತ್ತಿರುವುದು ಅಭಿನಂದನೀಯ. ಸದ್ಯ ನಮ್ಮ ದೇಶವು ಆಥಿರ್sಕ ಮತ್ತು ರಾಷ್ಟ್ರದ ಅಭಿವೃದ್ಧಿ ಕಾಣುತ್ತದೆ. ಮಧ್ಯಮ ಉದ್ಯಮಗಳು ರಾಷ್ಟ್ರದ ಆಥಿರ್sಕತೆಯನ್ನು ಬಲಪಡಿಸುತ್ತಿದ್ದು, ಬದಲಾಗುತ್ತಿರುವ ಯುಗದತ್ತ ಯುವ ಜನತೆ ಉದ್ಯಮ ಸಕ್ತರಾಗಬೇಕು ಎಂದು ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಸೂರೆನ್ಸ್ ಕಂಪೆನಿ ಲಿಮಿಟೆಡ್ ಇದರ ಕಾರ್ಯನಿರ್ವಹಣಾ ಉಪಾಧ್ಯಕ್ಷ ಅಶೋಕ್ ಸುವರ್ಣ ತಿಳಿಸಿದರು.

ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಇಂದಿಲ್ಲಿ ಶನಿವಾರ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ 2019ನೇ ಸಾಲಿನ ವಾರ್ಷಿಕ ಬಿಸಿಸಿಐ-ಹೆಚ್‍ಡಿಎಫ್‍ಸಿ ಬ್ಯಾಂಕ್ ಬಿಝಿನೆಸ್ ಎಕ್ಸಲೆನ್ಸ್ ಅವಾರ್ಡ್‍ಸ್ ಪ್ರಶಸ್ತಿ ಪ್ರದಾನಿಸಿದ್ದು, ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ಅಶೋಕ್ ಸುವರ್ಣ ಮಾತನಾಡಿದರು.

ಬಿಸಿಸಿಐ ಅಧ್ಯಕ್ಷ ಎನ್.ಟಿ ಪೂಜಾರಿ ಅವರ ಘನಾಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಕೃಷ್ಣ ಪ್ಯಾಲೇಸ್ ಸಮೂಹದ ಆಡಳಿತ ನಿರ್ದೇಶಕ ಕೃಷ್ಣ ವೈ.ಶೆಟ್ಟಿ, ಫೆಡರೇಶನ್ ಆಫ್ ವರ್ಲ್ಡ್ ಬಂಟ್ಸ್‍ಸ್ ಅಸೋಸಿಯೇಶ ನ್'ಸ್ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸೆಂಟ್ರಲ್ ಬ್ಯಾಂಕ್ ಆಫ್ ಒಮಾನ್‍ನ ಉನ್ನತಾಧಿಕಾರಿ ಡಾ| ಕೆ.ರಾಜೇಶ್ ನಾಯಕ್, ಸಿಎ| ಲೋಕೇಶ್ ಪುತ್ರನ್ ದುಬಾಯಿ, ಡಾ| ನ್ಯಾಯವಾದಿ ಅಶೋಕ್ ಸಹನಿ ಅತಿಥಿü ಅಭ್ಯಾಗತರಾಗಿ ಉಪಸ್ಥಿತರಿದ್ದು, ಔದ್ಯೋಗಿಕ ಕ್ಷೇತ್ರದಲ್ಲಿ ಅನನ್ಯ ಸೇವೆಗೈದ ಬಿಲ್ಲವ ಸಮಾಜದಲ್ಲಿನ ಸಾಧಕರೂ, ಯಶಸ್ವಿ ಉದ್ಯಮಿಗಳಾದ ನವಿಮುಂಬಯಿನ ಫೈನ್ ಕೆಮಿಕಲ್ಸ್ ಇಂಡಸ್ಟ್ರೀನ ಸ್ಥಾಪಕ ನಿರ್ದೇಶಕ ಕೆ.ಭೋಜರಾಜ್ (ಪತ್ನಿ ಕೃಪಾ ಭೋಜರಾಜ್ ಕುಳಾಯಿ ಅವರನ್ನೊಳಗೊಂಡು), ಬ್ಲೂಸ್ಟ್ರೀಮ್ ಇನ್ವರ್ಟ್‍ಮೆಂಟಲ್ ಟೆಕ್ನಾಲಾಜಿ ದುಬಾಯಿ ಸಂಸ್ಥೆಯ ಜಿತೇಂದ್ರ ವೈ.ಸುವರ್ಣ (ಪತ್ನಿ ಪ್ರಮೀಳಾ ಜಿತೇಂದ್ರ ಅವರನ್ನೊಳಗೊಂಡು), ಕ್ಲಾಸ್‍ಪ್ಯಾಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಗಂಗಾಧರ್ ಕೆ.ಅವಿೂನ್ ನಾಸಿಕ್ (ಸುಪುತ್ರ ಪ್ರಶಾಂತ್ ಜಿ.ಅವಿೂನ್ ಜೊತೆಗೂಡಿ), ಫಾದರ್ ಮುಲ್ಲರ್'ಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ ಮಂಗಳೂರು ಇದರ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ, ಮೂತ್ರಶಾಸ್ತ್ರಜ್ಞ ಮತ್ತು ಕಸಿ ಮೂತ್ರಕೋಶ ಶಸ್ತ್ರಚಿಕಿತ್ಸಕ ಡಾ| ಮೋಹನ್‍ಚಂದ್ರ ಕುಮಾರ್ ಸುವರ್ಣ ಇವರಿಗೆ ಜೀವಾವಧಿ ಸಾಧಕ ಪುರಸ್ಕಾರವಾಗಿಸಿ ಬಿಸಿಸಿಐ-ಹೆಚ್‍ಡಿಎಫ್‍ಸಿ ಬ್ಯಾಂಕ್ ಬಿಝಿನೆಸ್ ಎಕ್ಸಲೆನ್ಸ್ ಅವಾರ್ಡ್‍ಸ್ ಪ್ರದಾನಿಸಿ ಅಭಿನಂದಿಸಿದರು.

ನ್ಯಾ| ರೋಹಿಣಿ ಜೆ.ಸಾಲ್ಯಾನ್, ಸಿ.ಆರ್ ಮೂಲ್ಕಿ, ಡಾ| ರಾಜೇಶ್ ನಾಯಕ್ ಓಮನ್, ಶಾರದಾ ಸೂರು ಕರ್ಕೇರ, ಜಯಂತಿ ವಿ.ಉಳ್ಳಾಲ್, ಸಿಎ| ಲೊಕೇಶ್ ಪುತ್ರನ್ ದುಬಾಯಿ, ನಿತ್ಯಾನಂದ ಡಿ.ಕೋಟ್ಯಾನ್, ಚಂದ್ರಶೇಖರ ಪಾಲೆತ್ತಾಡಿ, ನ್ಯಾ| ಅಶೋಕ್ ಸಹನಿ, ಭಾಸ್ಕರ ಎಂ.ಸಾಲ್ಯಾನ್, ಶ್ರೀನಿವಾಸ ಆರ್.ಕರ್ಕೇರ, ಲಕ್ಷ್ಮಣ್ ಅವಿೂನ್, ಡಾ| ಎ.ಪಿ ಆಚಾರ್ ಅತಿಥಿüಗಳಾಗಿದ್ದು ಶ್ರೀಮತಿ ಪ್ರೇಮಾ ಕೋಟ್ಯಾನ್ ಬಾಂದ್ರಾ, ಡಾ| ಸಿ.ಕೆ ಅಂಚನ್ ಒಮನ್, ಗುಣಪಾಲ ಶೆಟ್ಟಿ (ಸಾಯಿ ಪ್ಯಾಲೇಸ್ ಹೊಟೇಲ್ಸ್), ಸಿದ್ಧು ರಾಮ ಪುತ್ರನ್, ಅಶೋಕ್ ಕೋಟ್ಯಾನ್, ಗೋವಿಂದ ಪೂಜಾರಿ ಬಿಜೂರು, ಸುನೀಲ್ ಕುಮಾರ್ ಕುಂದಾಪುರ, ಸನತ್ ಬಂಗೇರ ನವ ದೆಹಲಿ, ಸತೀಶ್ ಸಾಲ್ಯಾನ್, ದಾಮೋದರ್ ಸಿ.ಕುಂದರ್, ಗಣೇಶ್ ಪೂಜಾರಿ, ಅನೀಷ್ ಇಸ್ಮಾಯಿಲ್, ಜಿತೇಶ್ ಕೋಟ್ಯಾನ್ ಗೋರೆಗಾಂಗ್, ಸಿಎ| ಲೊಕೇಶ್ ಪುತ್ರನ್ ದುಬಾಯಿ, ಸಿಎ| ಎಸ್.ಎಸ್ ನಾಯಕ್ ಇವರಿಗೆ ಕ್ರಮವಾಗಿ ಸಾಧಕ ಪುರಸ್ಕಾರ ಪ್ರದಾನಿಸಿ ಗೌರವಿಸಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಉಪಸ್ಥಿತರಿದ್ದು ಬಿಸಿಸಿಐ ಅಧ್ಯಕ್ಷ ಎನ್.ಟಿ ಪೂಜಾರಿ, ಉಪ ಕಾರ್ಯಾಧ್ಯಕ್ಷರಾದ ಡಿ.ಬಿ ಅವಿೂನ್, ಮಹೇಂದ್ರ ಸೂರು ಕರ್ಕೇರ, ನಿರ್ದೇಶಕರುಗಳಾದ ಚಂದಯ ಬಿ.ಕರ್ಕೇರ, ಹರೀಶ್ ಜಿ.ಅವಿೂನ್, ಪುರುಷೋತ್ತಮ ಎಸ್.ಕೋಟ್ಯಾನ್, ಗಂಗಾಧರ್ ಎನ್.ಅವಿೂನ್ ಕರ್ನಿರೆ, ಅಶ್ಮಿತ್ ಬಿ.ಕುಳಾಯಿ ಅವರನ್ನು ಗೌರವಿಸಿದರು.

ನಮ್ಮೂನವರು ತುಂಬಾ ಹುಷಾರು ಮತ್ತು ಬುದ್ಧಿವಂತರು. ಯಾವ ವಾತಾವರಣಕ್ಕೂ ಹೊಂದಿಕೊಳ್ಳುವ ವ್ಯಕ್ತಿತ್ವವುಳ್ಳವರು. ಇದು ಕರುನಾಡ ವೈಶಿಷ್ಟ್ಯ ಮತ್ತು ತುಳುನಾಡ ದೈವದೇವರ ಅಭಯವಾಗಿದೆ. ಮುಂಬಯಿನಲ್ಲಿ ಸಾಮರತ್ವದ, ಸಹೋದರತ್ವದ ಬಾಂಧವ್ಯವಿದ್ದು ಪರಸ್ಪರ ಅನ್ಯೋನ್ಯತೆಯಿಂದ ಬದುಕುತ್ತಿರುವುದು ಸ್ತುತ್ಯರ್ಹ. ಮುಂದೆಯು ಹಿರಿಯರು ಕಿರಿಯರಿಗೆ ಪೆÇ್ರೀತ್ಸಾಹ ನೀಡಬೇಕು. ಮನೆಯಲ್ಲಿ ಕೂತು ಸಲಹಿದರೆ ನಾಯಕರಾಗದು. ಬದಲಾಗಿ ಮೈದಾನಕ್ಕೆ ಬಂದು ನಾಯಕತ್ವ ತೋರಿದವರೇ ಯಶಸ್ವೀ ಧುರೀಣರಾಗಬಲ್ಲರು.ಇಂತವರ ನಾಯಕತ್ವದಿಂದ ಬಿಸಿಸಿಐ ವರ್ಷದಿಂದ ವರ್ಷ ಬೆಳಗಲಿ ಎಂದು ಐಕಳ ಹರೀಶ್ ಶುಭಾರೈಸಿದರು.

ಬಿಸಿಸಿಐಯನ್ನು ಸ್ಥಾಪಿಸಿದ ಎನ್.ಟಿ ಪೂಜಾರಿ ಅವರೋರ್ವ ದೂರದೃಷ್ಠಿತ್ವವುಳ್ಳವರು. ಅವರ ಚಿಂತನಾಶೀಲತೆಯ ಲಾಭವನ್ನು ನಮ್ಮ ಯುವಜನತೆ ಪಡೆಯಬೇಕು. ನಾನು ಸ್ವೀಕರಿಸಿದ ಈ ಗೌರವ ನನ್ನ ಪತ್ನಿ, ಮಕ್ಕಳು ಮತ್ತು ಸಂಸ್ಥೆಯ ಎಲ್ಲಾ ನೌಕರವೃಂದಕ್ಕೆ ಸಲ್ಲಿಸುತ್ತೇನೆ ಎಂದು ಪ್ರಶಸ್ತಿಗೆ ಉತ್ತರಿಸಿಬೋಜರಾಜ್ ನುಡಿದರು.

ಗಂಗಾಧರ ಅವಿೂನ್ ಮಾತನಾಡಿ ದೇವರ ಅನುಗ್ರಹ, ಗುರು ಹಿರಿಯರ ಆಶೀರ್ವಾದ ಸರ್ವರಿಗೂ ಅವಶ್ಯ. ಕಟೀಲು ಅಮ್ಮನಿಗೆ ನಮಿಸಿ ಮುಂಬಯಿ ಸೇರಿದ ನನಗೆ ಭ್ರಮರಾಂಭಿಕೆ ಹರಸಿ ಇಷ್ಟರಾ ಮಟ್ಟಿಗೆ ಬೆಳೆಸಿದ್ದಾರೆ. ನಾವೂ ಮಾಡಿದ ಪ್ರತಿಯೊಂದು ಕೆಲಸಕ್ಕೆ ದೇವರ ಕೃಪೆ ಇರಬೇಕು. ಆವಾಗಲೇ ಮಾನವ ಜನ್ಮ ಸಾರ್ಥಕವಾಗುವುದು. ನಾನು ಸ್ವಜಾತಿಯನ್ನು ಪ್ರೀತಿಸುವವ ಆದರೆ ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ತಿಳಿದ ಬಳಿಕ ಸ್ವಂತಿಕೆಯ ಬುದ್ಧಿವಂತಿಕೆ ಸದ್ಬಳಕೆ ಮಾಡಿ ಅಖಂಡ ಸಮಾಜಕ್ಕಾಗಿ ಶ್ರಮಿಸುತ್ತಿದ್ದೇನೆ ಎಂದರು.

ಡಾ| ಮೋಹನ್ ಕುಮಾರ್ ಮಾತನಾಡಿ ನಾನು ಮುಂಬಯಿಗೆ ಹತ್ತಿರದವನು. ಮಾನವೀಯ ಸಂಬಂಧ, ನಿರಂತರ ಸಮಾಜ ಸೇವೆಗೆ ಸಂದ ಗೌರವ ಇದಾಗಿದೆ ಎಂದರು.

ಜಿತೇಂದ್ರ ಮಾತನಾಡಿ ನಾನು ಬರೇ ಸಮಾಜದ ಋಣ ಪೂರೈಸುವ ಪ್ರಯತ್ನ ಮಾಡಿರುವೆ. ಪತ್ನಿ, ಪರಿವಾರದ ಸಹಯೋಗದಿಂದ ನಾನು ಉದ್ಯಮಶೀಲನಾಗಿರುವೆ. ಆದರ ಫಲವೇ ನಾನು ಸೇವಾಂಕ್ಷಿಯಾಗಿ ಸಮಾಜದ ಮಕ್ಕಳ ಕಾಳಜಿ ವಹಿಸುವಂತೆ ಮಾಡಿದೆ.

ಪ್ರಸಕ್ತ ಕಾಲದಲ್ಲಿ ಅನುಭವವುಳ್ಳ ಉದ್ಯಮಿಶೀಲ ವ್ಯಕ್ತಿಗಳು ಅತ್ಯಮೂಲ್ಯರು. ಎಷ್ಟು ತತ್ವ ಸಿದ್ಧಾಂತಗಳ ಮಾಹಿತಿಗಳನ್ನು ಪಡೆದೆವು ಅನ್ನುವುದು ಮುಖ್ಯವಲ್ಲ. ಆದರೆ ಸಾಧನಾಸಿದ್ಧಿ ಪ್ರಧಾನವಾದುದು. ಜೊತೆಗೆ ಪರಿಶ್ರಮದಿಂದ ಕಷ್ಟನಷ್ಟ, ಸೋಲು ಗೆಲುವು, ಸಾಧನೆಗಳ ಅನುಭವ ಗಳಿಕೆಯೂ ಅದು ಮುಖ್ಯವಾದುದು. ಯಾವನೂ ಕೂಡಾ ತನ್ನ ಅನುಭವಗ ಳನ್ನು ಬದಲಾಯಿಸಲು ಸಾಧ್ಯವಿಲ್ಲ. ಓರ್ವ ವ್ಯಕ್ತಿ ಕಠಿಣ ಪರಿಶ್ರಮದಿಂದ ಗೆಲುವನ್ನು ಸಾಧಿಸುತ್ತಿದ್ದು, ಆ ಪಯ್ಕಿ ಇಂದಿನ ಪುರಸ್ಕೃತರೋರ್ವರು ಗೆಲುವು ಸಾಧಿಸಿ ಚಾಂಪಿಯನ್ ಆಗಿದ್ದಾರೆ. ಇವರು ಕೇವಲ ನಮ್ಮ ಸಮಾಜಕ್ಕೆ ಮಾದರಿ ಮಾತ್ರವಲ್ಲ ಎಲ್ಲರ ಪ್ರೇರಣೆಯೂ ಹೌದು. ಪರಿಶ್ರಮದಿಂದ ಸಾಧನೆ ಮತ್ತು ಅದನ್ನು ಸಮಾಜಕ್ಕೆ ಯಾವ ರೀತಿಯಲ್ಲಿ ಹಿಂದಿರುಗಿಸಬೇಕು ಅನ್ನುವುದನ್ನು ಬಿಸಿಸಿಐ ಇಂತಹ ಸಾಧನಶೀಲ ಉದ್ಯಮಿಗಳನ್ನು ಗುರುತಿಸಿ ಸಮಾಜದ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಪ್ರೇರಕವನ್ನಾಗಿಸಿದೆ. ಇಂತಹ ಸಾಧಕ ಉದ್ಯಮಿಗಳನ್ನು ಸನ್ಮಾನಿಸುವುದು ಬಿಸಿಸಿಐಗೆ ಅಭಿಮಾನವಾಗಿದೆ ಎಂದು ಎನ್.ಟಿ ಪೂಜಾರಿ ಅಧ್ಯಕ್ಷೀಯ ಭಾಷಣಗೈದು ತಿಳಿಸಿದರು.

ದಿನವಿಡೀ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ವಿವಿಧ ಉದ್ಯಮ ಕ್ಷೇತ್ರದ ಮೇಧಾವಿಗಳು ಸಂಪನ್ಮೂಲ ವ್ಯಕ್ತಿಗಳಾಗಿದ್ದು ಮಾಹಿತಿ ಕಾರ್ಯಗಾರ ನಡೆಸಿ ಆಧುನಿಕ ಮತ್ತು ಭವಿಷ್ಯತ್ತಿನ ಉದ್ಯಮದ ಅರಿವು ಮೂಡಿಸಿದರು.ಜಿ.ಮಹೇಶ್ ದಳ್ವಿ ಹಾಸ್ಯ ಪ್ರಹಸನ ಪ್ರಸ್ತುತಪಡಿಸಿದರು. ಕು| ಶ್ವೇತಾ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಬಿಸಿಸಿಐ ಕಾರ್ಯದರ್ಶಿ ನ್ಯಾಯವಾದಿ ಆನಂದ್ ಎಂ.ಪೂಜಾರಿ ಕೃತಜ್ಞತೆ ಸಮರ್ಪಿಸಿದರು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here