Thursday 28th, March 2024
canara news

ವಿಕ್ರೋಲಿ ಪೂರ್ವದ ಜೆ.ಕೆ ಟವರ್‍ನಲ್ಲಿ ಮೊಡೇಲ್ ಬ್ಯಾಂಕ್‍ನ 22ನೇ ಶಾಖೆ ಸೇವಾರ್ಪಣೆ

Published On : 13 Mar 2019   |  Reported By : Rons Bantwal


ಸಹಕಾರಿ ಸಂಸ್ಥೆಗಳಿಂದ ಸಮುದಾಯಗಳ ಸಮೃದ್ಧಿ: ಜಿ.ವಿ ಬಿಲೊಲಿಕರ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.10: ಜನಸಾಮಾನ್ಯರು ಸಂತಸದ ಬದುಕು ಕಟ್ಟಿಕೊಳ್ಳಲು ಸಹಕಾರಿ ಸಂಸ್ಥೆಗಳ ಪಾತ್ರ ಮಹತ್ತರವಾದು. ಇಂತಹ ಸಹಕಾರಿ ಸಂಸ್ಥೆಗಳಿಂದ ಸಮುದಾಯಗಳ ಸಮೃದ್ಧಿಯೂ ಸಾಧ್ಯವಾಗಿದೆ. ಒಂದು ಕಾಲದಲ್ಲಿ ರಾಷ್ಟ್ರದಲ್ಲಿ ಸಾಲ ಕೊಡುವ ಸಾಹುಕಾರರು (ಲೆಂಡಿಂಗ್) ಇದ್ದು, ಅವರನ್ನೇ ನಂಬಿ ಜೀವನ ನಡೆಸಿದವರೂ, ಸಾಲಬಾಧೆಯಿಂದ ಬದುಕು ಕಳಕೊಂಡವರೂ ಇದ್ದರು. ಕಾಲಕ್ರಮೇಣ ಸಹಕಾರಿ ಸಂಸ್ಥೆಗಳ ಆದಿಯಿಂದ ಮಧ್ಯಮ ವರ್ಗದ ಜನತೆಗೆ ಇಂತಹ ಸೊಸೈಟಿಗಳು ವರದಾನವಾದವು. ಆದ್ದುದರಿಂದ ಕೋ.ಆಪರೇಟಿವ್ ಬ್ಯಾಂಕ್‍ಗಳು ಹಣಕಾಸು ವ್ಯವಸ್ಥೆಗೆ ಬದ್ಧರಾಗಿ ಸೇವೆ ಸಲ್ಲಿಸುವುದು ಅತ್ಯವಶ್ಯ. ಇಂತಹ ಸೇವೆಯಲ್ಲಿ ಮೊಡೇಲ್ ಬ್ಯಾಂಕ್‍ನ ಗುಣಮಟ್ಟದ ಸೇವೆ ಶ್ಲಾಘನೀಯ. ಬ್ಯಾಂಕ್‍ಗಳ ಯಶಸ್ಸಿಗೆ ಗ್ರಾಹಕರ ಸಹಯೋಗವೂ ಅತ್ಯವಶ್ಯ ಎಂದು ಜಿಎಸ್‍ಟಿ ಮುಂಬಯಿ ಇದರ ಜಂಟಿ ಆಯುಕ್ತ ಜಿ.ವಿ ಬಿಲೊಲಿಕರ್ ತಿಳಿಸಿದರು.

ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ವಿಕ್ರೋಲಿ ಪೂರ್ವದ ಜೆ.ಕೆ ಟವರ್‍ನಲ್ಲಿ ಮೊಡೇಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ 22ನೇ ನೂತನ ಶಾಖಾ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ಶಾಖೆಯನ್ನು ರಿಬ್ಬನ್ ಕತ್ತರಿಸಿ ನಂತರ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಬಿಲೋಲಿಕರ್ ಮಾತನಾಡಿದರು.

ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲು ್ಯ.ಡಿಸೋಜಾ ಅಧ್ಯಕ್ಷತೆಯಲ್ಲಿ ನೆರವೇರಿದ ಉದ್ಘಾಟನಾ ಸಮಾರಂಭದಲ್ಲಿ ವಿಕ್ರೋಲಿ ಪಶ್ಚಿಮದ ಸೈಂಟ್ ಜೋಸೆಫ್'ಸ್ ಚರ್ಚ್‍ನ ಪ್ರಧಾನ ಧರ್ಮಗುರು ರೆ| ಫಾ| ರೋಕಿ ಬಾನ್ಝ್ ಆಶೀರ್ವದಿಸಿ ಶಾಖೆಯನ್ನು ವಿಧ್ಯುಕ್ತವಾಗಿ ಸೇವಾರ್ಪಣೆಗೈದರು.


ಹಣಕಾಸು ವ್ಯವಹಾರ ಒಂದು ವಿಶ್ವಸನೀಯ ಸೇವೆಯಾಗಿದೆ. ಇದೊಂದು ಇತರರಿಗೆ ಉಪಕಾರವಾಗುವ ಸೇವೆ. ಪರಿಶ್ರಮದಿಂದ ಗಳಿಸಿದ ಹಣವನ್ನು ನೆಮ್ಮದಿಯ ಜೀವನಕ್ಕೆ ಮತ್ತು ನಿವೃತ್ತ ಬಾಳಿಗೆ ರಕ್ಷಿಸಿಡಲ್ಪಡುವ ಯೋಚನೆ ಪ್ರತಿಯೊಬ್ಬರಲ್ಲಿದ್ದು ಅನೇಕರು ಉದ್ಯಮ ವೃದ್ಧಿಗಾಗಿ ಹಣದ ಜಾಗರುಕತೆ ಮಾಡುತ್ತಾರೆ. ಇವರಿಗೆ ಬ್ಯಾಂಕ್‍ಗಳು ಸೂಕ್ತವಾದ ಸಲಹೆ ಮತ್ತು ಸುರಕ್ಷೆ ನೀಡಬೇಕು. ಯುವ ಪೀಳಿಗೆಯನ್ನು ಪೆÇ್ರತ್ಸಹಿಸುವ ನಿಟ್ಟಿನಲ್ಲಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಪೆÇ್ರೀತ್ಸಹಿಸಬೇಕು. ಜನತೆಯೂ ಹಣಕಾಸು ವಿಷಯದಲ್ಲಿ ಸುಶಿಕ್ಷಿತರಾಬೇಕು. ಗಳಿಕೆಯ ಭದ್ರತೆಯೊಂದಿಗೆ ಸಮಾಜಕ್ಕೂ ವಿನಿಯೋಗಿಸಿ ಪುಣ್ಯಗಳಿಸಿ ಎಂದು ಫಾ| ಬಾನ್ಝ್ ಸಲಹಿ ಹರಸಿದರು.

ಬ್ಯಾಂಕ್‍ನ ಸಂಸ್ಥಾಪಕಾಧ್ಯಕ್ಷ ಜೋನ್ ಡಿ'ಸಿಲ್ವಾ ಮಾತನಾಡಿ ಇದೊಂದು ದೊಡ್ಡ ಸಹಕಾರಿ ಬ್ಯಾಂಕ್. 1994ರಲ್ಲಿ ಒಂದೇ ತಿಂಗಳಲ್ಲಿ ನಾಲ್ಕು ಶಾಖೆಗಳನ್ನು ಸ್ಥಾಪಿಸಿತ್ತು. ಶೀಘ್ರವೇ ಇಪ್ಪತ್ತೈದು ಶಾಖೆಗಳನ್ನು ಹೊಂದುತ್ತ ದೊಡ್ಡ ಬ್ಯಾಂಕ್ ಆಗಿ ಪರಿವರ್ತನೆ ಆಗಲಿದೆ. ವರ್ಷಗಳು ಕಳೆದಂತೆ ಸಾರ್ವಜನಿಕ ಬ್ಯಾಂಕ್‍ನಲ್ಲಿ ಬದಲಾವಣೆಗಳು ಹೆಚ್ಚುತ್ತವೆ. ಅದರ ಸದುಪಯೋಗ ಸ್ಥಾನಿಯ ಜನತೆ ಪಡೆಯಬೇಕು. ಮತ್ತು ಉದ್ಯಮಶೀಲರಾಗುವ ಪ್ರಯತ್ನ ನಡೆಸಬೇಕು ಎಂದರು.

ಬ್ಯಾಂಕ್‍ನ ನಿರ್ದೇಶಕ, ಶಾಖಾ ಉಸ್ತುವರಿ ಲಾರೇನ್ಸ್ ಡಿ'ಸೋಜಾ ಮಾತನಾಡಿ ನಿಮ್ಮ ವ್ಯವಹಾರ ಪಾಲುದಾರ ಎಂಬ ಧ್ಯೇಯದಂತೆ ನಮ್ಮ ಬ್ಯಾಂಕ್‍ನ ಲಾಂಛನವೇ ಹೇಳುವಂತೆ ಗ್ರಾಹಕರ ಸಂತೃಪ್ತಿಕರ ಸೇವೆಯಲ್ಲಿ ಈ ಬ್ಯಾಂಕ್ ಸಾಧನೆಗೈದಿದೆ. ವರ್ಷದಿಂದ ವರ್ಷ ವ್ಯವಹಾರದಲ್ಲಿ ಅಭಿವೃದ್ಧಿ ಕಂಡಿದೆ. ನಗುಮುಖದಲ್ಲೇ ಸೇವಾ ನಿರತವಾಗಿ ಗ್ರಹಕರ ವಿಶ್ವಾಸಕ್ಕೆ ಬದ್ಧರೆಣಿಸಿದ್ದೇವೆ. ನೆರೆದ ಸರ್ವರೂ ಗಳಿಕೆಯನ್ನು ಉಳಿತಾಯವನ್ನಾಗಿ ಈ ಬ್ಯಾಂಕ್‍ನೊಂದಿಗೆ ವ್ಯವಹರಿಸಿ ಸಹಕರಿಸಿ ಎಂದರು.

ಆಲ್ಬರ್ಟ್ ಡಿ'ಸೋಜಾ ಅಧ್ಯಕ್ಷೀಯ ನುಡಿಗಳನ್ನಾಡಿ ಹಣಕಾಸು ವ್ಯವಹಾರದಲ್ಲಿ ಹಿಡಿತವಿದ್ದು ಬಲಾಢ್ಯ ಬ್ಯಾಂಕ್ ಆಗಿ ಮುನ್ನಡೆಯುತ್ತಿರುವ ಮೋಡೆಲ್ ಬ್ಯಾಂಕ್ ಇದೀಗಲೇ ಸಾವಿರ ಕೋಟಿ ಠೇವಣಿ ಹೊಂದಿದ್ದು ಇಪ್ಪತ್ತು ಸಾವಿಕರಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು ಸಾವಿಕ ಕೋಟಿ ಠೇವಣಿ ದಾಟಿದೆ ಈ ಮೂಲಕ ವ್ಯವಹಾರ ಸಾಧನೆಯ ಕಿರೀಟಕ್ಕೊಂದು ಹೊಸ ಗರಿ ಮೂಡಿಸಿಕೊಂಡಿದೆ. ಆ ಮೂಲಕ ಶೀಘ್ರವೇ ಶೆಡ್ಯೂಲ್ಡ್ ಬ್ಯಾಂಕ್ ಆಗಲಿದೆ. ಸೇವೆಯೊಂದಿಗೆ ಮುಗುಳುನಗೆ ಎನ್ನುವ ಧ್ಯೇಯದೊಂದಿಗೆ ಸಂಸ್ಥೆಯನ್ನು ಮುನ್ನಡೆಸುವ ನಾವು ಗ್ರಾಹಕರ ಭರವಸೆಯನ್ನು ಪೂರೈಸಲು ಸಮರ್ಥರೆಣಿದ್ದೇವೆ. ಇವೆಲ್ಲವುಗಳ ಫಲವೇ ಈ ಶಾಖೆಯ ಸೇವಾರ್ಪಣೆ. ಅಂತೆಯೇ ಶೀಘವೇ ಪನ್ವೇಲ್, ಗೋರೆಗಾಂ ಪಶ್ಚಿಮ, ಸಾಕಿನಾಕ ಶಾಖೆಗಳನ್ನು ತೆರೆಯಲಿದ್ದೇವೆ ಎಂದರು.

ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ ಮತ್ತು ಬ್ಯಾಂಕ್‍ನ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್.ಡಿ'ಸೋಜಾ ವೇದಿಕೆಯಲ್ಲಿ ಅಸೀನರಾಗಿ ಅತಿಥಿüಗಳಿಗೆ ಪುಷ್ಫಗುಪ್ಚವನ್ನೀಡಿ ಅಭಿವಂದಿಸಿದರು.

ಕಾರ್ಯಕ್ರಮದಲ್ಲಿ ಮಹಾನೀಯರುಗಳಾಗಿ ಹೆಸರಾಂತ ಸಂಗೀತಕಾರ ವಿಲ್ಫ್ರೇಡ್ ಫೆರ್ನಾಂಡಿಸ್, ಬಾಂಬೇ ಕಾಥೋಲಿಕ್ ಸಭಾ ಇದರ ಉಪಾಧ್ಯಕ್ಷ ರೋಬರ್ಟ್ ಡಿಸೋಜಾ, ಮಾರಿಯೋ ರೋಡ್ರಿಗಸ್, ನ್ಯಾಯವಾದಿ ವಿನ್ಸೆಂಟ್ ಪಿರೇರಾ, ಸ್ಥಾನೀಯ ಸಮಾಜ ಸೇವಕರಾದ ಎಸ್.ಮಿನೇಜಸ್, ವಿಕಾಸ್ ರಾವ್, ಶೇಖರ್ ಪಿ.ತಾವ್ಡೆ, ಕಟ್ಟಡದ ಮಾಲೀಕ ಸಿ,ಬಿ ಸಿಂಗ್, ಜಯಂತ್ ರೆಡೇಕರ್, ಬ್ಯಾಂಕ್‍ನ ನಿರ್ದೇಶಕರುಗಳಾದ ಸಿಎ| ಪೌಲ್ ನಝರೆತ್, ಪೆÇ್ರ| ಎ.ಪಿ ಡಿ'ಸೋಜಾ, ಲಾಜರಸ್ ಮಿನೇಜಸ್, ಫಿಲಿಪ್ ಎಲ್.ಎಸ್ ಪಿಂಟೋ, ತೋಮಸ್ ಡಿ.ಲೋಬೊ, ಅಬ್ರಹಾಂ ಕ್ಲೇಮೆಂಟ್ ಲೊಬೋ, ಸಂಜಯ್ ಶಿಂಧೆ, ನ್ಯಾಯವಾದಿ ಪಿಯುಸ್ ವಾಸ್, ಬೆನೆಡಿಕ್ಟಾ ರೆಬೆಲ್ಲೋ, ಮರಿಟಾ ಡಿ'ಮೆಲ್ಲೋ, ಜೆರಾಲ್ಡ್ ಕರ್ಡೋಜಾ, ಆ್ಯನ್ಸಿ ಡಿ'ಸೋಜಾ, ಹಿರಿಯ ಪ್ರಬಂಧಕರುಗಳಾದ ಝೆನೆರ್ ಡಿ'ಕ್ರೂಜ್ ಸೇರಿದಂತೆ ನೂತನ ಗ್ರಾಹಕರು, ಷೇರುದಾರರು ಉಪಸ್ಥಿತರಿದ್ದು ಶಾಖೆಯ ಉನ್ನತಿಗೆ ಶುಭಕೋರಿದರು.

ಆಲ್ಬರ್ಟ್ ಡಿ'ಸೋಜಾ ಸ್ವಾಗತಿಸಿದರು. ಎಡ್ವರ್ಡ್ ರಸ್ಕೀನ್ಹಾ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಖಾ ಪ್ರಬಂಧಕ ಮೆರ್ವಿನ್ ಲೊಬೋ ಕೃತಜ್ಞತೆ ಸಮರ್ಪಿಸಿದರು.

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here