Friday 19th, April 2024
canara news

ಮುಂಬಯಿ ವಿವಿ ಕನ್ನಡ ವಿಭಾಗ-ಮಿತ್ರವೃಂದ ಮುಲುಂಡ್ ಪ್ರಾಯೋಜಿತ ಕುವೆಂಪು ದತ್ತಿ ಉಪನ್ಯಾಸ

Published On : 18 Mar 2019   |  Reported By : Rons Bantwal


ಡಾ| ವಿಶ್ವನಾಥ್ ಕಾರ್ನಾಡ್ ಸಾಹಿತ್ಯ ಸಂಭ್ರಮ- ಏಕಕಾಲಕ್ಕೆ ಕಾರ್ನಾಡ್‍ರ 4 ಕೃತಿಗಳ ಬಿಡುಗಡೆ  ಕುವೆಂಪು ಅಪರೂಪದ ದಾರ್ಶನಿಕರು : ಡಾ| ಕಾಳೇಗೌಡ ನಾಗವಾರ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.16: ಕುವೆಂಪು ಅಪರೂಪದ ದಾರ್ಶನಿಕರು ಆದುದರಿಂದಲೇ ಅವರ ಒಳ್ಳೆತನದ ಬಗ್ಗೆ ಎಲ್ಲರೂ ಮಾತನಾಡಿ ವಿಮರ್ಶೆ ಮಾಡುತ್ತಾರೆ. ಕುವೆಂಪು ಅವರಂತಹ ಉಗ್ರ ರಾಷ್ಟ್ರಪ್ರೇಮಿ ಕವಿ ಮತ್ತೊಬ್ಬರಿಲ್ಲ. ವಂಚನೆ ಮಾಡಬಾರದು ಎಂಬುವುದಕ್ಕೆ ಬದ್ಧರಾಗಿದ್ದ ಕುವೆಂಪು ಧನಾತ್ಮಕ ಚಿಂತನೆಯುಳ್ಳವರಾಗಿದ್ದು, ಅವರ ಎಲ್ಲ ಕೃತಿಗಳಲ್ಲಿ ಪ್ರಜಾಪ್ರಭುತ್ವದ ಧ್ಯಾನವಿದೆ ಎಂದು ಮೈಸೂರು ಅಲ್ಲಿನ ಹಿರಿಯ ಸಾಹಿತಿ ಡಾ| ಕಾಳೇಗೌಡ ನಾಗವಾರ ತಿಳಿಸಿದರು.

ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದಲ್ಲಿನ ವಿದ್ಯಾನಗರಿಯ ಜೆ.ಪಿ ನಾಯಕ್ ಭವನದಲ್ಲಿ ಮುಂಬಯಿ ವಿವಿ ಕನ್ನಡ ವಿಭಾಗ ಮತ್ತು ಮಿತ್ರವೃಂದ ಮುಲುಂಡ್ ಸಂಸ್ಥೆಗಳು ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ದತ್ತಿ ಉಪನ್ಯಾಸ-2019 ಮತ್ತು ಸದಾನಂದ ಸುವರ್ಣ ಪ್ರಾಯೋಜಿತ ಶಿವರಾಮ ಕಾರಂತ ದತ್ತಿ ಉಪನ್ಯಾಸ ಮಾಲಿಕೆ-2019 ಕಾರ್ಯಕ್ರಮ ಉದ್ಘಾಟಿಸಿ ಕುವೆಂಪು ದತ್ತಿ ಉಪನ್ಯಾಸವನ್ನಿತ್ತು ಡಾ| ಕಾಳೇಗೌಡ ಮಾತನಾಡಿದರು.

ಹುಬ್ಬಳ್ಳಿ ಅಲ್ಲಿನ ವಿಮರ್ಶಕ, ಹಿರಿಯ ಸಾಹಿತಿ ಡಾ| ಶ್ಯಾಮಸುಂದರ ಬಿದರಕುಂದಿ ಅವರು ಶಿವರಾಮ ಕಾರಂತ ದತ್ತಿ ಉಪನ್ಯಾಸವನ್ನಿತ್ತು ಮುಂಬಯಿ ಮಹಾನಗರವನ್ನೇ ಮೆಚ್ಚಿದ ಕಾರಂತರ `ಅಳಿದ ಮೇಲೆ' ಕಾದಂಬರಿ ಮುಂಬಯಿ ಪ್ರಧಾನವಾದದು. ಕಾರಂತರ ಬರಹಗಳು ಸಂಸ್ಕೃತಿಯುತವುಳ್ಳವು ಆಗಿದ್ದು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಕಾರಂತರು ಶ್ರೇಷ್ಠ ಕೃತಿಕರರಾಗಿದ್ದಾರೆ. ಗಾಂಧಿವಾದಿ ಕಾರಂತರು ಸಿದ್ಧಾಂತವಾದಿಯೂ ಆಗಿದ್ದು ಅವರೋರ್ವ ಚಲನಶೀಲ ಚಟುವಟಿಕೆಗಳನ್ನು ಮೈಗೂಡಿಸಿದವರು. ತತ್ವವಾದಿಯಾಗಿದ್ದ ಅವರು ಸಮಾಜಕ್ಕೆ ಆದರ್ಶವಾದಿ. ಕಾರಂತರು ಕನ್ನಡಕ್ಕೆ ಆಧುನಿಕ ದೃಷ್ಠಿಕೋನವನಿತ್ತ ಮೇಧಾವಿ ಆಗಿದ್ದರು ಎಂದರು.

ಪ್ರಾಧ್ಯಾಪಕ ಕನ್ನಡ ವಿಭಾಗದ ಮುಖ್ಯಸ್ಥರು ಡಾ| ಜಿ.ಎನ್ ಉಪಾಧ್ಯ ಪ್ರಸ್ತಾವನೆಗೈದು ನಮ್ಮ ವಿಮರ್ಶಕರು ಕುವೆಂಪು ಮತ್ತು ಕಾರಂತರ ಅವರಿಬ್ಬರ ಬಗ್ಗೆ ಗುರುತಿಸಿದ್ದಾರೆ. ವಿಭಾಗದ ವಿದ್ಯಾಥಿರ್sಗಳು ಲೇಖಕರಾಗಿ ಉದಯಿಸುತ್ತಿರುವುದು ಅಭಿನಂದನೀಯ. ನಮ್ಮ ವಿದ್ಯಾಥಿರ್üಗಳು ಬರೇ ಪಿಎಚ್‍ಡಿ, ಎಂಫೀಲ್‍ಗೆ ಮಾತ್ರ ಮೀಸಲಾಗದೆ ಕನ್ನಡದ ಮುನ್ನಡೆ, ಭವಿಷ್ಯಕ್ಕೆ ಶ್ರಮಿಸುತ್ತಿದ್ದಾರೆ ಎಂದರು.

ಇದೇ ಶುಭಾಸರದಲ್ಲಿ ಮುಂಬಯಿ ಮಹಾನಗರದಲ್ಲಿನ ಪ್ರಾಧ್ಯಾಪಕ ವಿಮರ್ಶಕ, ಹಿರಿಯ ಸಾಹಿತಿ ಡಾ| ವಿಶ್ವನಾಥ್ ಕಾರ್ನಾಡ್ ಅವರ ಎಂಬತ್ತರ ಜನ್ಮೋತ್ಸವವನ್ನು ಕನ್ನಡ ವಿಭಾಗವು `ಸಾಹಿತ್ಯ ಸಂಭ್ರಮ'ದೊಂದಿಗೆ ಆಚರಿಸಿದ್ದು ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾಥಿರ್ü ವೃಂದವು 80 ದೀಪವನ್ನೊಳಗೊಂಡು ಪುಷ್ಪರ್ಚನೆ ನಡೆಸಿ ಸಂಭ್ರಮಿಸಿ ಸನ್ಮಾನಿಸಿ ಗೌರವಿಸಿದರು. ಡಾ| ದಾಕ್ಷಾಯಿಣಿ ಜಾನಪದ ಗೀತೆಗಳೊಂದಿಗೆ ಡಾ| ಕಾರ್ನಾಡ್‍ರನ್ನು ಅಭಿನಂದಿಸಿದರು.

ಇದೇ ಶುಭಾವಸರದಲ್ಲಿ ಡಾ| ವಿಶ್ವನಾಥ ಕಾರ್ನಾಡ್ ಅವರ ಗಾಯತ್ರಿ ಪ್ರಕಾಶನ ಕಿನ್ನಿಗೋಳಿ ಪ್ರಕಾಶಿತ `ಸಮಚಿಂತನ' ಕೃತಿಯನ್ನು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗಧ್ಯಕ್ಷೆ ಜಯಂತಿ ವಿ.ಉಳ್ಳಾಲ್, `ಸಮಗ್ರ ಕಥೆಗಳು' ಕೃತಿಯನ್ನು ಮೈಸೂರು ಅಲ್ಲಿನ ಹಿರಿಯ ಸಾಹಿತಿ ಡಾ| ಕಾಳೇಗೌಡ ನಾಗವಾರ, `ಮೌನ ಸೆಳೆತಗಳು' ಕೃತಿಯನ್ನು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೃಷ್ಣಕುಮಾರ್ ಎಲ್.ಬಂಗೇರ `ನಿರಂತರ' ಕವನ ಸಂಕಲನವನ್ನು ಹುಬ್ಬಳ್ಳಿ ಅಲ್ಲಿನ ವಿಮರ್ಶಕ, ಹಿರಿಯ ಸಾಹಿತಿ ಡಾ| ಶ್ಯಾಮಸುಂದರ ಬಿದರಕುಂದಿ ಏಕ್ಕಾಲಕ್ಕೆ ಬಿಡುಗಡೆ ಗೊಳಿಸಿದರು. ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು, ವಿಮರ್ಶಕಿ ಮತ್ತು ಲೇಖಕಿ ಡಾ| ಮಮತಾ ರಾವ್, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ, ಕವಿ ವಿ.ಎಸ್ ಶ್ಯಾನ್‍ಭಾಗ್ ಕ್ರಮವಾಗಿ ಕೃತಿಗಳನ್ನು ಪರಿಚಯಿಸಿದರು.

ಮಿತ್ರವೃಂದ ಮುಲುಂಡ್‍ನ ಎಸ್.ಕೆ ಸುಂದರ್, ಡಾ| ಕೆ.ರಘುನಾಥ್, ರತ್ನಾಕರ್ ಆರ್.ಶೆಟ್ಟಿ, ಸಾ.ದಯಾ, ಗೋಪಾಲ ತ್ರಾಸಿ, ಸುರೇಖಾ ಎಸ್.ದೇವಾಡಿಗ, ದಿನಕರ ಚಂದನ್ ಸೇರಿದಂತೆ ಅನೇಕ ಕನ್ನಡಾಭಿಮಾನಿಗಳಿದ್ದು, ಡಾ| ಜಿ.ಎನ್ ಉಪಾಧ್ಯ ಸ್ವಾಗತಿಸಿ ಗಣ್ಯರಿಗೆ ಶಾಲು ಹೊದಿಸಿ ಗ್ರಂಥಗೌರವ ನೀಡಿ ಗೌರವಿಸಿದರು ಹಾಗೂ ಕನ್ನಡ ವಿಭಾಗದ ಸಹಾಯಕರಾಗಿ ಶ್ರಮಿಸಿದ್ದ ರೂಪೇಶ್ ರೆವಾಳೆ ಅವರನ್ನು ಸತ್ಕರಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಹೆಸರಾಂತ ಚಿತ್ರಕಾರ ಜಯ ಸಿ.ಸಾಲ್ಯಾನ್ ಅವರ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿದ್ದು ಡಾ| ಕಾಳೇಗೌಡ ಉದ್ಘಾಟಿಸಿದರು. ಡಾ| ಪೂರ್ಣಿಮಾ ಎಸ್. ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಸಿದರು. ಕನ್ನಡ ವಿಭಾಗದ ಸಂಶೋಧನ ಸಹಾಯಕ ಶಿವರಾಜ್.ಎಂ.ಜಿ ಕೃತಜ್ಞತೆ ಸಮರ್ಪಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here