Friday 19th, April 2024
canara news

`ಮುಂಬಯಿ ತುಳು ಕನ್ನಡಿಗರ ರಾಯಬಾರಿ-ಎಂ.ಡಿ.ಶೆಟ್ಟಿ' ಕೃತಿ ಬಿಡುಗಡೆ

Published On : 19 Mar 2019   |  Reported By : Rons Bantwal


ಎಂಡಿಶೆಟ್ಟಿ ಸಂಘಟನೆಗಳ ಸರದಾರ : ರೋನಿ ಹೆಚ್.ಮೆಂಡೋನ್ಸಾ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.16: ನಾನು ಈ ಮಹಾನಗರಿಯನ್ನು ಸೇರಿ ಆರು ದಶಕಗಳೇ ಕಳೆದಿವೆ. ಆದ್ದರಿಂದ ಸ್ಪಷ್ಟತೆಯ ತುಳು ಕನ್ನಡ ಭಾಷೆ ನನಗೆ ಕಷ್ಟವಾದರೂ ಭಾಷಾಭಿಮಾನ ನನ್ನಲ್ಲಿ ಜೀವಂತವಾಗಿದೆ. ಈ ಭಾಷಾಭಿಮಾನವೇ ಎಂ.ಡಿ ಶೆಟ್ಟಿ ಅವರೊಂದಿಗೆ ಸುಮಾರು 40 ವರ್ಷಗಳ ಸ್ನೇಹತ್ವ ಬಲಪಡಿಸಿದೆ. ಅವರ ಸಾಮಾಜಿಕ ಕಳಕಳಿ, ತುಳುನಾಡ ಅಭಿಮಾನ, ಸ್ವಸಮಾಜದ ಸ್ವಾಭಿಮಾನ ಅನನ್ಯವಾದುದು. ಎಲ್ಲರಲ್ಲೂ ಧೈರ್ಯ ತುಂಬಿ ಆತ್ಮಸ್ಥೈರ್ಯ ತುಂಬಿಸಿ ಮುಂಬಯಿ ಹೊಟೇಲು ಉದ್ಯಮಕ್ಕೆ ಇವರು ಮೇಲ್ಪಂಕ್ತಿಯಾಗಿದ್ದಾರೆ. ಇವರ ಸರ್ವೋತ್ಕೃಷ್ಟ ಸೇವೆಯ ಗೌರವವೇ ಈ ಕೃತಿಯಾಗಿದೆ ಎಂದು ಬೃಹನ್ಮುಂಬಯಿ ಪೆÇೀಲಿಸ್‍ನ ನಿವೃತ್ತ ಪೆÇೀಲಿಸ್ ಆಯುಕ್ತ ರೋನಿ ಹೆಚ್.ಮೆಂಡೋನ್ಸಾ ಆಶಯ ವ್ಯಕ್ತ ಪಡಿಸಿದರು.

 

ಇಂದಿಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ವಿದ್ಯಾನಗರಿಯ ಜೆ.ಪಿ ನಾಯಕ್ ಭವನದಲ್ಲಿ ಮುಂಬಯಿ ವಿವಿ ಕನ್ನಡ ವಿಭಾಗವು ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಕನ್ನಡ ವಿಭಾಗದ ವಿದ್ಯಾಥಿರ್üನಿ ಸುರೇಖಾ ಹರಿಪ್ರಸಾದ್ ಶೆಟ್ಟಿ ರಚಿತ `ಮುಂಬಯಿ ತುಳು ಕನ್ನಡಿಗರ ರಾಯಬಾರಿ-ಎಂ.ಡಿ.ಶೆಟ್ಟಿ' ಕೃತಿ ಬಿಡುಗಡೆ ಗೊಳಿಸಿ ಮೆಂಡೋನ್ಸಾ ಮಾತನಾಡಿ ಮಹಾನಗರದಲ್ಲಿ ಡಾ| ಅಡ್ಯಂತ್ತ್ತಾಯ, ಡಾ| ಕೆ.ಆರ್ ಶೆಟ್ಟಿ, ಫೆÇೀರ್‍ಎಸ್ ಸದಾನಂದ ಶೆಟ್ಟಿ ಇವರು ಸಮಾಜಕ್ಕೆ ನೀಡಿದ ಸೇವೆಯೂ ದೊಡ್ಡದು. ಸಂಘಟನೆಗಳ ಸರದಾರ ಎಂದೆಣಿಸಿದ ಎಂ.ಡಿ ಶೆಟ್ಟಿ ಅಂತಹ ವ್ಯಕ್ತಿ ಪರಿಚಿತ ಕೃತಿ ತುಳುನಾಡ ಭಾವೀ ಯುವ ಜನತೆಗೆ ಒಂದು ಆದರ್ಶವಾಗಲಿ ಎಂದು ಹಾರೈಸಿದರು.

ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ, ಪ್ರಾಧ್ಯಾಪಕ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರಾಗಿ ಮೈಸೂರು ಅಲ್ಲಿನ ಹಿರಿಯ ಸಾಹಿತಿ ಡಾ| ಕಾಳೇಗೌಡ ನಾಗವಾರ, ಹುಬ್ಬಳ್ಳಿ ಅಲ್ಲಿನ ವಿಮರ್ಶಕ, ಹಿರಿಯ ಸಾಹಿತಿ ಡಾ| ಶ್ಯಾಮಸುಂದರ ಬಿದರಕುಂದಿ, ಹಿರಿಯ ಸಾಹಿತಿ ಡಾ| ವಿಶ್ವನಾಥ್ ಕಾರ್ನಾಡ್, ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಮಹಾರಾಷ್ಟ್ರ ಸರಕಾರದ ರಾಷ್ಟ್ರೀಯ ತನಿಖಾ ಕರ್ತೃತ್ವ (ಎನ್‍ಐಎ)ನ ವಿಶೇಷ ವ್ಯಾಜ್ಯದಾರ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ (ಕೃತಿಗೆ ಮುನ್ನುಡಿ ಬರೆದ ಎಂಡಿ ಅಭಿಮಾನಿ), ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಬಂಟರವಾಣಿ ಮಾಸಿಕದ ಮಾಜಿ ಸಂಪಾದಕ ರತ್ನಾಕರ ಆರ್.ಶೆಟ್ಟಿ ಉಪಸ್ಥಿತರಿದ್ದರು.

ಪಯ್ಯಡೆ ಮಾತನಾಡಿ ನಾವಿಬ್ಬರು ಬಹುಕಾಲದ ಗುರುಶಿಷ್ಯರಂತಹ ಸಂಬಂಧಿಗಳಾಗಿದ್ದು ಒಳಿತು ಕೆಡುಕುಗಳನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆದ ಸಂಗಾತಿಗಳು. ಪುಸ್ತಕ ಬರೆಯುವವರು ಸುಳ್ಳು ಬರೆಯುವಂತಿಲ್ಲ. ಅದರಂತೆ ಎಂಡಿ ಬಗ್ಗೆ ಬರೆದವರೂ ಸತ್ಯವನ್ನೇ ಬರೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಾಯಕತ್ವಕೆ ಎಂ.ಡಿ ಶೆಟ್ಟಿ ಮೇರು ವ್ಯಕ್ತಿವುಳ್ಳವರಾಗಿದ್ದು ಇಂತಹ ಯುಗಪುರುಷರು ಶತಮಾನ ಮೀರಿ ಬಾಳಲೇ ಬೇಕು ಎಂದು ಹಾರೈಸಿದರು.

ಎಂ.ಡಿ ಶೆಟ್ಟಿ ಮಾತನಾಡಿ ನಾನು ಉದ್ಯೋಗವನ್ನರಸಿ ಹಣ ಮಾಡಲು ಮುಂಬಯಿ ಸೇರಿದವನಲ್ಲ. ಸಾಮಾಜಿಕ ಕಳಕಳಿ, ಸೇವಾ ತುಡಿತ ನನ್ನನ್ನು ಇಲ್ಲಿಗೆ ಆಹ್ವಾನಿದಂತಿದೆ. ಅದೇ ನನ್ನನ್ನು ಇಷ್ಟರ ಮಟ್ಟಿಗೆ ಬೆಳೆಸಿ ಇಂತಹ ಕೃತಿಗೆ ಪಾತ್ರವಾಗಿಸಿದೆ. ಬಹುಶಃ ಮುಂಬಯಿ ಮಹಾನಗರದಲ್ಲಿ ನೆಲೆಯಾಗಿ 75 ವರ್ಷಗಳಿಂತ ನಿರಂತರ ಸಂಸ್ಥೆಯೊಂದರ ಮೂಲಕ ಸೇವೆಗೈಯುವ ಭಾಗ್ಯ ನನಗೆ ಸಂತಸ ತಂದಿದೆ. ಈ ಕಾರ್ಯಕ್ರಮದಿಂದ ಅನೇಕರ ಹೊಗಳುವಿಕೆಯಿಂದ ಇನ್ನೂ ಐದಾರು ವರ್ಷಗಳ ಆಯುಷ್ಯ ಹೆಚ್ಚಿಸಿ ಕೊಂಡಂತಾಗಿದೆ. ಬದುಕಿನಲ್ಲಿ ಕಷ್ಟ ಸುಖ ಅನುಭವಿಸಿದರೂ, ವದ್ಧಾಪ್ಯ ಜೀವನದಲ್ಲಿ ನೆಮ್ಮದಿ ಅನುಭವಿಸುತ್ತಿರುವುದೇ ನನ್ನ ಯಶಸ್ವಿನ ಬದುಕು ಆಗಿದೆ ಎಂದರು.

ಡಾ| ಉಪಾಧ್ಯ ಮಾತನಾಡಿ ಮುಂಬಯಿ ಕನ್ನಡಿಗರ ಅಭಿಮಾನದ ಮೂರ್ತಿ ಎಂ.ಡಿ ಶೆಟ್ಟಿ. ಘನ ವ್ಯಕ್ತಿತ್ವ ಪಡೆದ ಎಂ.ಡಿ ಶೆಟ್ಟಿ. ಮಾನ್ನಾಡಿ ನ್ಯಾ| ಪ್ರಕಾಶ್ ಎಲ್.ಶೆಟ್ಟಿ, ಆತ್ಮವಿಶ್ವಾಸ ತುಂಬಬಲ್ಲ ವ್ಯಕ್ತಿ. ಇವರ ಜೀವನ ಸಾಧನೆ ದಾಖಲಾಗುತ್ತಿರುವುದು ಸ್ತುತ್ಯರ್ಹ. ಹೊಸ ತಲೆಮಾರಿಗೆ ಈ ಕೃತಿ ಮಾದರಿ. ನಮ್ಮವರನ್ನು ನಾವೂ ಗೌರವಿಸಿ ಆಧಾರಿಸಬೇಕು ಎಂದರು

ಕಾರ್ಯಕ್ರಮದಲ್ಲಿ ಎನ್.ಸಿ ಶೆಟ್ಟಿ, ಸಿಎ| ಐ.ಆರ್ ಶೆಟ್ಟಿ, ಕವಿತಾ ಐ.ಆರ್ ಶೆಟ್ಟಿ, ಸರಿತಾ ಆರ್.ಶೆಟ್ಟಿ, ಅಶೋಕ್ ಶೆಟ್ಟಿ, ಸಿಮಂತೂರು ಚಂದ್ರಹಾಸ ಶೆಟ್ಟಿ, ಸರಿತಾ ರಮೇಶ್ ಶೆಟ್ಟಿ, ವೇಣು ಆರ್.ಶೆಟ್ಟಿ, ಅಶ್ವಿನ್ ಶೆಟ್ಟಿ, ರವೀಂದ್ರ ಎಂ.ಅರಸ, ಸಂಜೀವ ಶೆಟ್ಟಿ, ಪಾಂಡು ಶೆಟ್ಟಿ, ಶಿವರಾಮ ಜಿ.ಶೆಟ್ಟಿ ಅಜೆಕಾರು, ನ್ಯಾ| ಅಶೋಕ್ ಶೆಟ್ಟಿ, ಸಿಎ| ಸಂಜೀವ ಶೆಟ್ಟಿ, ಡಾ| ವಿಜೇತ ಶೆಟ್ಟಿ, ಸುಜಯಾ ಆರ್.ಶೆಟ್ಟಿ, ಲತಾ ಪಿ.ಭಂಡಾರಿ, ಮಮತಾ ಶೆಟ್ಟಿ, ಜಯರಾಮ ಎನ್.ಶೆಟ್ಟಿ, ಶಿವರಾಮ ಜಿ.ಶೆಟ್ಟಿ, ಪಿ.ಡಿ ಶೆಟ್ಟಿ, ರತ್ನಾಕರ ವಿ.ಶೆಟ್ಟಿ, ನ್ಯಾ| ಬಿ.ಸುಭಾಷ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಎಂ.ಡಿ.ಶೆಟ್ಟಿ ಅವರಿಗೆ ಪುಷ್ಫಗುಪ್ಚವನ್ನಿತ್ತು ಅಭಿನಂದಿಸಿದರು. ಸುರೇಖಾ ಹರಿಪ್ರಸಾದ್ ಶೆಟ್ಟಿ ಪರಿವಾರವು ಡಾ| ಜಿ.ಎನ್ ಉಪಾಧ್ಯ ಅವರಿಗೆ ಗುರುಕಾಣಿಕೆಯನ್ನಿತ್ತು ಅಭಿವಂದಿಸಿದರು ಹಾಗೂ ಅತಿಥಿüವರ್ಯರಿಗೆ ಶಾಲು ಹೊದಿಸಿ, ಪುಷ್ಫಗುಪ್ಚ, ಕೃತಿ ಅರ್ಪಿಸಿ ಗೌರವಿಸಿದರು.

ಡಾ| ಜಿ.ಎನ್ ಉಪಾಧ್ಯ ಸ್ವಾಗತಿಸಿದರು. ಕವಿ, ಸಂಘಟಕ ಪೇತ್ರಿ ವಿಶ್ವನಾಥ ಶೆಟ್ಟಿ ಕ್ರಮವಾಗಿ ಕೃತಿಗಳನ್ನು ಪರಿಚಯಿಸಿ ದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಸಿದರು. ಸುರೇಖಾ ಹರಿಪ್ರಸಾದ್ ಅಭಾರ ಮನ್ನಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here